ಬೆಂಗಳೂರು | ಸಹಾಯ ಕೇಳುವ ನೆಪದಲ್ಲಿ ಮಕ್ಕಳ ಅಪಹರಣ; ಆರೋಪಿ ಮಹಿಳೆ ಬಂಧನ

Date:

  • ರಾತ್ರಿ ವೇಳೆ ಚಾಕು, ಚೂರಿ ತೋರಿಸಿ ದರೋಡೆ ಮಾಡುತ್ತಿದ್ದ ಆರೋಪಿ
  • ಮಾ. 29ರಂದು ಸ್ಕ್ರಾಪ್​ ಕಾರೊಂದರಲ್ಲಿ ಅನುಮಾನಸ್ಪಾದ ವ್ಯಕ್ತಿಯ ಮೃತದೇಹ ಪತ್ತೆ

ಮನೆಯಲ್ಲಿದ್ದ ಮಕ್ಕಳನ್ನು ಕದ್ದೊಯುತ್ತಿದ್ದ ಆರೋಪಿ ನಂದಿನಿ ಅಲಿಯಾಸ್ ಆಯೇಷಾಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಂದಿನಿ ಯಾವುದೋ ಒಂದು ಸಂಸ್ಥೆಯ ಬ್ರೋಷರ್ ಹಿಡಿದುಕೊಂಡು ಈ ಸಂಸ್ಥೆಗೆ ಧನ ಸಹಾಯ ಮಾಡಿ ಎಂದು ಜನರ ಮನೆ ಬಾಗಿಲಿಗೆ ತೆರಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳು. ಈ ವೇಳೆ, ಮನೆಯವರು ಹಣ ತೆಗೆದುಕೊಂಡು ಬರಲು ಮನೆ ಒಳಗೆ ಹೋದಾಗ, ಮಗು ಅಥವಾ ಮನೆಯಲ್ಲಿರುವ ವಸ್ತುಗಳನ್ನು ಎತ್ತಿಕೊಂಡು ಪರಾರಿಯಾಗುತ್ತಿದ್ದಳು.

ಈ ಹಿಂದೆ, ಸಣ್ಣ ಪುಟ್ಟ ಪ್ರಕರಣಗಳಲ್ಲಿ ನಂದಿನಿ ಅಲಿಯಾಸ್ ಆಯೇಷಾ ಪೊಲೀಸರ ಅತಿಥಿಯಾಗಿದ್ದಳು. ಈಕೆ ಹೆಚ್ಚಾಗಿ ಬುರ್ಖಾ ಧರಿಸಿ ಮನೆಗಳಿಗೆ ತೆರಳುತ್ತಿದ್ದರಿಂದ ಸಿಸಿಟಿವಿಯಲ್ಲೂ ಈಕೆ ಯಾರು ಎಂಬ ಗುರುತುಗಳೂ ಸರಿಯಾಗಿ ಪತ್ತೆಯಾಗುತ್ತಿರಲಿಲ್ಲ ಎನ್ನಲಾಗಿದೆ.

ಮೊಬೈಲ್, ಹಣ ಕದಿಯುತ್ತಿದ್ದ ಈಕೆ, ಇತ್ತೀಚೆಗೆ ರಾತ್ರಿ ವೇಳೆ ಚಾಕು, ಚೂರಿ ತೋರಿಸಿ ದರೋಡೆ ಕೂಡ ಮಾಡುತ್ತಿದ್ದಳು. ಮಕ್ಕಳನ್ನೂ ಕದಿಯುತ್ತಿದ್ದಳು ಎಂದು ಆರೋಪಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಶಿವರಾಮ ಕಾರಂತರ ಆಪ್ತ ಸಹಾಯಕಿ ಮಾಲಿನಿ ಮಲ್ಯ ಇನ್ನಿಲ್ಲ

ಕೆಲವು ದಿನಗಳ ಹಿಂದೆ, ಈಕೆ ಒಂದು ಮಗುವನ್ನು ಕಳ್ಳತನ ಮಾಡಿದ್ದಳು. ಆ ಮಗುವನ್ನು ತನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದಳು. ಒಂದು ತಿಂಗಳ ಮಗುವಿಗೆ ಹಾಲು ಉಣಿಸದೇ ಮಗುವಿಗೆ ಉಪ್ಪಿಟ್ಟು ಕೊಟ್ಟಿದ್ದಳು. ಈ ವೇಳೆ, ಮಗು ಅಳುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದವರು ಅನುಮಾನಗೊಂಡು ಮನೆಗೆ ನುಗ್ಗಿ ಮಗುವನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕದ್ದ ಮಕ್ಕಳನ್ನು ಯಾರಿಗೆ ಕೊಡುತ್ತಿದ್ದಳು ಅಥವಾ ಏನು ಮಾಡುತ್ತಿದ್ದಳು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಕ್ರಾಪ್​ ಕಾರಿನಲ್ಲಿ ಅನುಮಾನಾಸ್ಪದ ವ್ಯಕ್ತಿಯ ಮೃತದೇಹ ಪತ್ತೆ

ಮಾರ್ಚ್‌ 29ರಂದು ಬೆಳಗ್ಗೆ ಸ್ಕ್ರಾಪ್​ ಕಾರೊಂದರಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಸ್ಥಳೀಯರು ಸುಟ್ಟು ಕರಕಲಾಗಿರುವ ಕಾರೊಂದರಲ್ಲಿ ವ್ಯಕ್ತಿಯ ಶವ ಇರುವುದು ತಿಳಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಕೊಡಿಗೇಹಳ್ಳಿ ​ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರಿಗೆ ಅಗತ್ಯವಿದೆ 658 ಕಿ.ಮೀ ಒಳಚರಂಡಿ

ಕಾರ್ಯನಿರ್ವಾಹಕ ನಿರ್ದೇಶಕ ಶಾಂತನು ಮಜುಂದಾರ್ ಅವರಿಂದ ವರದಿ ಬಿಡುಗಡೆ ಬಿಬಿಎಂಪಿ ಮಿತಿಯಲ್ಲಿ 633...

ನೀರುಗಾಲುವೆ ಕಾಮಗಾರಿ ಸ್ಥಳದಲ್ಲಿ ಅನಾಹುತ ಜರುಗದಂತೆ ಎಚ್ಚರ ವಹಿಸಿ: ಜಯರಾಮ್ ರಾಯ್‌ಪುರ

ಮುಂದಿನ 15 ದಿನಗಳಲ್ಲಿ ಎಸ್‌ಡಬ್ಲೂಡಿ ಲಿಂಕಿಂಗ್ ಡ್ರೈನ್ ಕಾಮಗಾರಿ ಪೂರ್ಣಗೊಳಿಸಿ ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿಯನ್ನು...

ಜನರಿಗೆ ನ್ಯಾಯ ಒದಗಿಸಲು ಮನುಷ್ಯನ ಕಷ್ಟಕ್ಕೆ ಸ್ಪಂದಿಸುವ ಗುಣ ಮುಖ್ಯ; ಸಿಎಂ ಸಿದ್ದರಾಮಯ್ಯ

ʻನಮಗೆ ಉನ್ನತ ಅವಕಾಶಗಳು ಸಿಕ್ಕಾಗ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡಾಗ ಮಾತ್ರ ಬದುಕು...

ವಕೀಲ ರಕ್ಷಣಾ ಕಾಯ್ದೆ ಜಾರಿಗೆ ಕ್ರಮ ವಹಿಸಲು ಸಿದ್ದ; ಸಿಎಂ ಸಿದ್ದರಾಮಯ್ಯ ಭರವಸೆ

ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ನಾವು ಬದ್ದವಾಗಿದ್ದೇವೆ ಎಂದು ಮುಖ್ಯಮಂತ್ರಿ...