ಬೆಂಗಳೂರು | ಹೊಟ್ಟೆಯಲ್ಲಿಟ್ಟುಕೊಂಡು ₹11 ಕೋಟಿ ಮೌಲ್ಯದ ಕೊಕೇನ್ ಕ್ಯಾಪ್ಸೂಲ್ ಸಾಗಿಸುತ್ತಿದ್ದ ನೈಜೀರಿಯನ್‌ ಬಂಧನ

Date:

  • ಇಥಿಯೋಪಿಯಾದಿಂದ ವಿಮಾನ ನಿಲ್ದಾಣಕ್ಕೆ ಬಂದ 40 ವರ್ಷದ ಆರೋಪಿ
  • ಆಹಾರವನ್ನು ಸೇವಿಸಲು ಹಿಂಜರಿದಾಗ ಪೊಲೀಸರಿಗೆ ಶಂಕಿತ ನೈಜೀರಿಯನ್ ವ್ಯಕ್ತಿ

ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹11 ಕೋಟಿ ಮೌಲ್ಯದ 1 ಕೆಜಿ ಕೊಕೇನ್ ಅನ್ನು ಕ್ಯಾಪ್ಸೂಲ್‌ಗಳ ಮೂಲಕ ನುಂಗಿ ಹೊಟ್ಟೆಯಲ್ಲಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ನೈಜೀರಿಯನ್ ವ್ಯಕ್ತಿಯನ್ನು ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

40 ವರ್ಷದ ಬಂಧಿತ ವ್ಯಕ್ತಿ ಇಥಿಯೋಪಿಯಾದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಏ. 28ರಂದು ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ವೀಸಾ ಪಡೆದುಕೊಂಡಿದ್ದ.

ವಿಮಾನ ನಿಲ್ದಾಣದ ತನಿಖಾಧಿಕಾರಿಗಳು ವಿದೇಶಿ ಪ್ರಯಾಣಿಕರ ಪ್ರೊಫೈಲ್ ಅನ್ನು ಪರಿಶೀಲನೆ ನಡೆಸುವ ವೇಳೆ, ಆತ ತನ್ನ ದೇಹವನ್ನು ಬಳಸಿಕೊಂಡು ಮಾದಕವಸ್ತು ಕಳ್ಳ ಸಾಗಿಸುತ್ತಿರಬಹುದು ಎಂದು ಆ ಆಫ್ರಿಕನ್ ವ್ಯಕ್ತಿಯ ಮೇಲೆ ಅನುಮಾನಗೊಂಡು, ತಡೆದು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ. ತನಿಖಾಧಿಕಾರಿಗಳು ಅವನಿಗೆ ನೀರು ಮತ್ತು ಆಹಾರವನ್ನು ಸೇವಿಸಲು ನೀಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಶಂಕಿತ ವ್ಯಕ್ತಿ ನೀರು ಮತ್ತು ಆಹಾರವನ್ನು ಸೇವಿಸಲು ನಿರಾಕರಿಸಿದ. ಆಹಾರ ಸೇವಿಸಿದರೆ ತನ್ನ ದೇಹದೊಳಗಿನ ಡ್ರಗ್ ಕ್ಯಾಪ್ಸೂಲ್‌ಗಳು ಸಿಡಿದು ಮಾರಣಾಂತಿಕ ಪರಿಣಾಮ ಉಂಟುಮಾಡಬಹುದು ಎಂದು ಭಯಪಟ್ಟು ಆತ ಊಟ ಮಾಡಲು ನಿರಾಕರಿಸಿದ್ದ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್; ಮುಂದಿನ ‘ಡಿಜಿ-ಐಜಿಪಿ’ ಯಾರು?

ಶಂಕಿತನ ಗಾಬರಿ ಕಂಡು ಡಿಆರ್‌ಐ ತಂಡವು ವ್ಯಕ್ತಿ ಮಾದಕ ದ್ರವ್ಯವನ್ನು ಹೊಂದಿರಬಹುದು ಎಂದು ಖಚಿತಪಡಿಸಿಕೊಂಡಿತು. ಅವರು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ಎಕ್ಸ್-ರೇ ಮಾಡಿಸಿದರು. ಬಳಿಕ ಅವನ ಹೊಟ್ಟೆಯಲ್ಲಿ 64 ಕ್ಯಾಪ್ಸೂಲ್‌ಗಳು ಇರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಡಿಆರ್‌ಐ ನೈಜೀರಿಯನ್‌ ವ್ಯಕ್ತಿಯನ್ನು ಬಂಧಿಸಿ ರಿಮಾಂಡ್‌ಗೆ ಒಪ್ಪಿಸಿದ್ದು, ಇದೀಗ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ ಎನ್ನಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಮೆಟ್ರೋ | ‘ಚಾಲಕ ರಹಿತ ರೈಲು’ ಸಂಚಾರಕ್ಕೆ ಶೀಘ್ರದಲ್ಲೇ ಸಿಗ್ನಲಿಂಗ್ ಟೆಸ್ಟ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಚಾಲಕ ರಹಿತ ರೈಲು ಶೀಘ್ರದಲ್ಲಿಯೇ...

ಬೆಂಗಳೂರು | ಕೊಲೆ ಆರೋಪ; ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಇತರೆ ಆರೋಪಿಗಳು 5 ದಿನ ಪೋಲೀಸ್ ವಶಕ್ಕೆ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶೆಡ್ ಒಂದರಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ...

ನಟ ದರ್ಶನ್ ಬಂಧನ | ಸಾಮಾಜಿಕ ಜಾಲತಾಣ, ನಾಗರಿಕ ಸಮಾಜ ಮತ್ತು ಕಾನೂನು ವೈಫಲ್ಯ

ಸದ್ಯ ರಾಜ್ಯದಲ್ಲಿ ನಟ ದರ್ಶನ್ ಅವರ ಬಂಧನ ಸುದ್ದಿಯಲ್ಲಿದೆ. ತಮ್ಮ ಆಪ್ತೆ...

ಆದೇಶ ಪಾಲಿಸದ ಕಲ್ಯಾಣ ಮಂಡಳಿ; ಹೈಕೋರ್ಟ್‌ ಅಸಮಾಧಾನ

ಬಡ ಕಟ್ಟಡ ಕಾರ್ಮಿಕ‌ರ ಮಕ್ಕಳಿಗೆ‌ ಧನಸಹಾಯ ನೀಡಲು ಹೈಕೋರ್ಟ್ ನೀಡಿದ್ದ ‌ಮಧ್ಯಂತರ...