ಬೆಂಗಳೂರು | ಜಗಳ ಮಾಡುವಾಗ ಪತ್ನಿಯ ಬೆರಳನ್ನೆ ಕಚ್ಚಿ ತಿಂದ ಪತಿರಾಯ

Date:

ಜಗಳ ಮಾಡುವ ವೇಳೆ, ಪತ್ನಿಯ ಬೆರಳನ್ನೇ ಪತಿರಾಯ ಕಚ್ಚಿ ಕಚ್ಚಿ ತಿಂದ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪುಷ್ಪ ಎಂಬ ಸಂತ್ರಸ್ತ ಮಹಿಳೆ, ಪತಿ ವಿಜಯಕುಮಾರ್ ಕಾಟಕ್ಕೆ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಆರೋಪಿ ಪತಿ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಪುಷ್ಪ ಮತ್ತು ವಿಜಯ್​ಕುಮಾರ್ ಇಬ್ಬರು 23 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಓರ್ವ ಮಗನಿದ್ದಾನೆ. ಪತಿಯು ದಿನನಿತ್ಯ ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು. ಇದರಿಂದ ಬೇಸತ್ತ ಪತ್ನಿ ಗಂಡನಿಂದ ದೂರವಾಗಿ ಬೇರೆ ಮನೆ ಮಾಡಿ ತನ್ನ ಮಗನೊಂದಿಗೆ ಜೀವನ ನಡೆಸುತ್ತಿದ್ದಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮ್ಯಾಟ್ರೀಮೋನಿಯಲ್ಲಿ ಪರಿಚಯವಾದ ಯುವತಿಯಿಂದ ಟೆಕ್ಕಿಗೆ ₹1.14 ಕೋಟಿ ವಂಚನೆ

ಇಷ್ಟಾದರೂ ಸುಮ್ಮನೆ ಆಗದ ಪತಿ ಅಲ್ಲಿಗೂ ಬಂದು ಪುಷ್ಪಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು. ಜುಲೈ 28ರಂದು ದಂಪತಿ ಜಗಳ ಮಾಡುವ ವೇಳೆ ಏಕಾಏಕಿ ಪತಿ ವಿಜಯಕುಮಾರ್ ಪತ್ನಿಯ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ನಂತರ ನಿನ್ನನ್ನೂ ಕೂಡ ಇದೇ ರೀತಿ ಕೊಂದು ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ. ರೌಡಿಶೀಟರ್​ಗಳನ್ನು ಬಿಟ್ಟು ಕೊಲೆ ಬೆದರಿಕೆ ಹಾಕಿದ್ದಾನೆ” ಎಂದು ಪತ್ನಿ ಪುಷ್ಪ ಆರೋಪಿಸಿದ್ದಾಳೆ.  

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಬೆಂಕಿ ಅವಘಡ: ಸುಟ್ಟು ಕರಕಲಾದ 40ಕ್ಕೂ ಹೆಚ್ಚು ವಾಹನಗಳು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ನಗರದ ನಾಯಂಡಹಳ್ಳಿ...

ಬೆಂಗಳೂರು | ಸಿಎಂ ಮನೆ‌ ಕೂಗಳತೆ ದೂರದಲ್ಲಿ ಕೆಜಿಗಟ್ಟಲೇ ಚಿನ್ನ ಕದ್ದ ಆರೋಪಿ ಬಂಧನ

ಮುಖ್ಯಮಂತ್ರಿ ಮನೆ‌ ಕೂಗಳತೆ ದೂರದಲ್ಲಿ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ಕಳ್ಳನೊಬ್ಬನನ್ನು...

ಬೆಂಗಳೂರು | ಬಾಲಕನನ್ನು ಕಂಬಕ್ಕೆ ಕಟ್ಟಿ ಹಲ್ಲೆ; ಬಾಲಕನ ವಿರುದ್ಧವೂ ಪ್ರಕರಣ ದಾಖಲು

17 ವರ್ಷದ ಬಾಲಕನನ್ನು ಎಂಟು ಮಂದಿ ಕೂಲಿ ಕಾರ್ಮಿಕರು ಕಂಬಕ್ಕೆ ಕಟ್ಟಿ...

ಕನ್ನಡಿಗರಿಗೆ ನೀಡಿದ ಉದ್ಯೋಗದ ಮಾಹಿತಿ ನೋಟೀಸ್ ಬೋರ್ಡ್‌ನಲ್ಲಿ ಪ್ರದರ್ಶಿಸುವುದು ಕಡ್ಡಾಯ: ಶಿವರಾಜ್ ತಂಗಡಗಿ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ಎಮ್‌ಎನ್‌ಸಿ (ಬಹುರಾಷ್ಟ್ರೀಯ)...