- 10 ದ್ವಿಚಕ್ರ ವಾಹನಗಳೊಂದಿಗೆ ಜೂ. 3ರಂದು ಆರೋಪಿಗಳ ಬಂಧನ
- ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಗಳು
ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರಿಂದ 7 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ಕೆಂಪೇಗೌಡನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೈಸೂರು ರಸ್ತೆ ನಿವಾಸಿಗಳಾದ ಇರ್ಫಾನ್ ಪಾಷಾ ಮತ್ತು ಜೊಹೇಬ್ ಪಾಷಾ ಎಂದು ಗುರುತಿಸಲಾಗಿದೆ. ಇವರಿಬ್ಬರು 2022ರ ಜೂನ್ 14 ರಂದು KA-05-EJ-1965 ನೋಂದಣಿ ಸಂಖ್ಯೆ ಹೊಂದಿರುವ Yamaha RX 100 ಬೈಕ್ ಅನ್ನು ಕಳವು ಮಾಡಿದ್ದರು. ಬಳಿಕ 2023ರ ಜೂನ್ 3 ರಂದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಆರೋಪಿಗಳ ಬಂಧನದಿಂದ ಕೆ.ಜಿ.ನಗರ, ಚಾಮರಾಜಪೇಟೆ, ಸುದ್ದಗುಂಟೆಪಾಳ್ಯ, ಹೆಬ್ಬಗೋಡಿ, ಎಸ್.ಜೆ.ಪಾರ್ಕ್, ಕೆಂಗೇರಿ, ವಿಜಯನಗರ, ಬ್ಯಾಟರಾಯನಪುರ, ಸಿ.ಕೆ.ಅಚ್ಚುಕಟ್ಟು, ಕೊತ್ತನೂರು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ವಾಹನ ಕಳವು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಐಎ ಒಂದನೇ ಟರ್ಮಿನಲ್ ಶೀಘ್ರ ನವೀಕರಣ
ಈ ಹಿಂದೆ, ರಾಜಾಜಿನಗರ, ಚಂದ್ರಾ ಲೇಔಟ್, ಅಶೋಕ್ ನಗರ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಮತ್ತು ಸ್ಕೂಟರ್ ಕಳ್ಳತನ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.
ಈ ವಾಹನಗಳು ಸಾಮಾನ್ಯವಾಗಿ ದಾಖಲೆಗಳನ್ನು ಹೊಂದಿರುವುದಿಲ್ಲ. ರಸ್ತೆ ಬದಿ ನಿಲ್ಲಿಸಿರುವ ವಾಹನಗಳ ಕೈ ಬೀಗ ಮುರಿದು ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ನಂತರ, ಅವರು ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆ ಹಣದಲ್ಲಿ ಇವರಿಬ್ಬರು ಐಷಾರಾಮಿ ಜೀವನ ನಡೆಸುತ್ತಿದ್ದರು.