ಬೆಂಗಳೂರು | ಧಮ್ಕಿ ಹಾಕಿದ್ದಕ್ಕೆ ರೌಡಿಶೀಟರ್‌ನನ್ನು 26 ಬಾರಿ ಕೊಚ್ಚಿ ಕೊಂದ ಸಹಚರರು

Date:

  • ಪ್ರಶಾಂತ್, ಶ್ರೀಕಾಂತ್ ಹಾಗೂ ವಸಂತ್​ನನ್ನು​ ಬಂಧಿಸಿದ ಮಹದೇವಪುರ ಪೊಲೀಸರು
  • ಮೇ 25 ರಂದು ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆ ಮಾಡಿದ ಸಹಚರರು

ಸಹಚರರಿಗೆ ಧಮ್ಕಿ ಹಾಕಿದ ಹಿನ್ನೆಲೆ, ರೌಡಿಶೀಟರ್‌ನನ್ನು 40 ಸೆಕೆಂಡ್‌ನಲ್ಲಿ 26 ಬಾರಿ ಕೊಚ್ಚಿ ಕೊಲೆ ಮಾಡಿದ ಘಟನೆ ಮಹದೇವಪುರದಲ್ಲಿ ನಡೆದಿದೆ.

ಮೇ 25 ರಂದು ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಕೊಲೆ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ರೌಡಿಶೀಟರ್‌ ರೇಣುಕುಮಾರ್ ಕೊಲೆಯಾದ ವ್ಯಕ್ತಿ. ಈತನ ಸಹಚರರಾದ ​ಶ್ರೀಕಾಂತ್ ಹಾಗೂ ಪ್ರಶಾಂತ್ ಇಬ್ಬರು ಸೇರಿಕೊಂಡು ರೌಡಿಶೀಟರ್‌ನನ್ನು ಕೊಲೆ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರೌಡಿಶೀಟರ್‌ ರೇಣುಕುಮಾರ್ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ನಾನಾ ಪ್ರಕರಣಗಳಡಿ ಇತನು ಜೈಲು ಪಾಲಾಗಿದ್ದನು. ಕಳೆದ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನು.

ರೌಡಿಶೀಟರ್​ ರೇಣುಕುಮಾರ್ ಜೈಲಿನಿಂದ ಹೊರಬಂದು ತನ್ನ ಸಹಚರರಿಗೆ ‘ನಾನು ಜೈಲಿನಲ್ಲಿದ್ದಾಗ ಏರಿಯಾದಲ್ಲಿ ನಿಮ್ಮ ಹವಾ ಜಾಸ್ತಿಯಾಗಿದೆ. ನೀವು ನನ್ನ ಶಿಷ್ಯಂದಿರು, ಇನ್ಮುಂದೆ ಏನು ಮಾಡಬೇಕಾದರೂ ನನ್ನ ಅನುಮತಿ ಪಡೆಯಬೇಕು ಎಂದು ಪ್ರಶಾಂತ್ ಮತ್ತು ಶ್ರೀಕಾಂತ್​ಗೆ ಧಮ್ಕಿ ಹಾಕಿದ್ದನು’ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಗಳನ್ನು ತಡವಾಗಿ ಮನೆಗೆ ಬಿಟ್ಟ ಶಾಲಾ ವಾಹನ; ಶಾಲೆಯ ವಿರುದ್ಧ ಮಕ್ಕಳ ಆಯೋಗಕ್ಕೆ ದೂರು

ಇದರಿಂದ ಕೋಪಗೊಂಡ ಪ್ರಶಾಂತ್ ಮತ್ತು ಶ್ರೀಕಾಂತ್ ಪ್ಲ್ಯಾನ್ ಮಾಡಿ, ಮೇ 25ರ ರಾತ್ರಿ ಅವನ ಮೇಲೆ ಅಟ್ಯಾಕ್‌ ಮಾಡಿ ಕೇವಲ 40 ಸೆಕೆಂಡ್​ನಲ್ಲಿ 26 ಬಾರಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಸದ್ಯ ಮಹದೇವಪುರ ಪೊಲೀಸರು ಪ್ರಶಾಂತ್, ಶ್ರೀಕಾಂತ್, ವಸಂತ್​ರನ್ನು​ ಬಂಧಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂ. ಗ್ರಾ | ಸಾರ್ವಜನಿಕವಾಗಿ ಧೂಮಪಾನ ತಡೆಗೆ ಸ್ಟಾಪ್ ಟ್ಯೊಬ್ಯಾಕೋ ಮೊಬೈಲ್ ಆಪ್‌ನಲ್ಲಿ ದೂರು ನೀಡಿ:ಜಿಲ್ಲಾಧಿಕಾರಿ ಶಿವಶಂಕರ

ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಭಿತ್ತಿ ಪತ್ರಗಳು, ನಾಮಫಲಕಗಳನ್ನು ಶಾಲೆ-ಕಾಲೇಜು,...

ಮಳೆಗಾಲ ಶುರು: ಹಾವುಗಳ ಬಗ್ಗೆ ಎಚ್ಚರಿಕೆ ವಹಿಸಲು ಬಿಬಿಎಂಪಿ ಮನವಿ

ಪೂರ್ವ ಮುಂಗಾರು ಮಳೆ ಶುರುವಾದ ಬೆನ್ನಲ್ಲೇ ಈಗ ಬೆಂಗಳೂರಿನ ಜನ ವಸತಿ...

ಬೆಂಗಳೂರು | ಐಸಿಯುನಲ್ಲಿದ್ದ ರೋಗಿಗೆ ರಕ್ತ ಬರುವ ಹಾಗೆ ಥಳಿಸಿದ ಕೆ.ಸಿ.ಜನರಲ್ ಆಸ್ಪತ್ರೆ ಸಿಬ್ಬಂದಿ

ರಾಜ್ಯ ರಾಜಧಾನಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ...

ಬೆಂಗಳೂರನ್ನು ಅವಹೇಳನ‌ ಮಾಡುತ್ತಿರುವುದು ನಮ್ಮವರೇ: ಬಿಜೆಪಿ ವಿರುದ್ಧ ಸಚಿವ ಪರಮೇಶ್ವರ್‌ ವಾಗ್ದಾಳಿ

ನಮ್ಮವರೇ ಬೆಂಗಳೂರನ್ನು ಅವಹೇಳನ‌ ಮಾಡುತ್ತಿದ್ದಾರೆ. ಹೊರ ದೇಶದವರಿಗೆ, ಹೊರ ಜನರಿಗೆ ಬೆಂಗಳೂರಿನ...