ಬೆಂಗಳೂರು | ಈಜಿಪುರ ಮೇಲ್ಸೇತುವೆಯ ಸ್ಥಳ ಇದೀಗ ‘ಸ್ಮಾರಕ’; ನೆಟ್ಟಿಗರ ಅಪಹಾಸ್ಯ

Date:

  • ಈಜಿಪುರ ಮೇಲ್ಸೇತುವೆ ನೀವು ನೋಡಲೇಬೇಕಾದ ಸ್ಮಾರಕವೆಂದು ನೆಟ್ಟಿಗರು ಅಪಹಾಸ್ಯ
  • ಕಳೆದ 6 ವರ್ಷಗಳಿಂದ ನಿಂತಲ್ಲೇ ನಿಂತಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿ

ರಾಜ್ಯ ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ಆರು ವರ್ಷಗಳಿಂದ ನಿರ್ಮಾಣ ಹಂತದಲ್ಲಿಯೇ ಉಳಿದಿರುವ ಈಜಿಪುರ ಮೇಲ್ಸೇತುವೆಯ ಸ್ಥಳವನ್ನು ಗೂಗಲ್ ಲೊಕೇಶನ್​ನಲ್ಲಿ ಹುಡುಕಿದಾಗ ‘ಸ್ಟೋನ್‌ಹೆಂಜ್’ ಎಂದು ತೋರಿಸುತ್ತಿದೆ. ಇದೀಗ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳಾಗುತ್ತಿವೆ.

ಕ್ಯಾಲೆಬ್ ಫ್ರೈಸೆನ್ ಎಂಬ ಟ್ವಿಟ್ಟರ್ ಬಳಕೆದಾರವೊಬ್ಬರು ‘ಸ್ಟೋನ್‌ಹೆಂಜ್’ ಎಂಬ ಟೈಟಲ್​ನಡಿ ಸರ್ಚ್ ಮಾಡಲಾದ ಗೂಗಲ್ ಲ್ಯಾಂಡ್ ಮಾರ್ಕ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅಪೂರ್ಣವಾಗಿರುವ ಈಜಿಪುರ ಮೇಲ್ಸೇತುವೆ ಕೂಡ ಲಿಸ್ಟ್ ಆಗಿದೆ. ಈ ಬಗ್ಗೆ ಹಲವರು ನೀವು ನೋಡಲೇಬೇಕಾದ ಸ್ಮಾರಕವೆಂದು ನೆಟ್ಟಿಗರು ಅಪಹಾಸ್ಯ ಮಾಡಿದ್ದಾರೆ.

ಈಜಿಪುರ ಮೇಲ್ಸೇತುವೆ ಬಗ್ಗೆ ರಾಮ್‌ಕುಮಾರ್ ಎಂಬುವವರು, “ಈ ಮೇಲ್ಸೇತುವೆಯನ್ನು ನನ್ನ ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರಾರಂಭಿಸಲಾಯಿತು. ಈಗ ನನ್ನ ಮಗು 5 ವರ್ಷಕ್ಕೆ ಬೆಳೆದಿದೆ. ಶಾಲೆಗೆ ಹೋಗುತ್ತಿದೆ. ನಾನು ನನ್ನ ಮಗುವಿನೊಂದಿಗೆ ಈ ಸ್ಥಳದಲ್ಲಿ ಹಾದುಹೋಗುವಾಗ ಪ್ರತಿ ಬಾರಿ ಈ ಮೇಲ್ಸೇತುವೆ ಬಗ್ಗೆ ಉತ್ತಮ ಕಥೆಯನ್ನು ಹೇಳುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
ಈ ಸುದ್ದಿ ಓದಿದ್ದೀರಾ? ಇನ್ಸ್‌ಪೆಕ್ಟರ್ ವಿರುದ್ಧ ಸುಳ್ಳು ಆರೋಪ; ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದಿದ್ದ ಪೇದೆಗಳು ಅಮಾನತು

“ಮೇಲ್ಸೇತುವೆ ಬಳಿಯ ಸೋನಿ ಸಿಗ್ನಲ್ ಪಕ್ಕದಲ್ಲಿಯೇ ವಾಸಿಸುತ್ತಿದ್ದೇನೆ. ಇಲ್ಲಿ ಉದ್ದನೆಯ ಪಿಲ್ಲರ್‌ಗಳನ್ನು ನಿರ್ಮಿಸಿ ಹಾಗೆಯೇ ಕೈ ಬಿಟ್ಟಿದ್ದಾರೆ. ಈ ಮೇಲ್ಸೇತುವೆ ಈಜಿಪುರ ಮತ್ತು ಮಡಿವಾಳಕ್ಕೆ ಸಂಪರ್ಕ ಕಲ್ಪಿಸಬೇಕಿತ್ತು. ಕಳೆದ 5 ವರ್ಷಗಳಿಂದ ಪ್ರತಿದಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇನ್ನೂ ಯೋಜನೆಯನ್ನು ಪೂರ್ಣಗೊಳಿಸಲು ಯಾವುದೇ ಯೋಜನೆಗಳಿಲ್ಲ. ಇದು ನಿಜವಾಗಿಯೂ ಕರುಣಾಜನಕ” ಎಂದು ಅಶ್ವತ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಚುನಾವಣೆ ಹಿನ್ನಲೆ, ಹಲವು ರಸ್ತೆ, ಹೆದ್ದಾರಿ ಹಾಗೂ ಮೇಲ್ಸೇತುವೆಗಳನ್ನು ಉದ್ಘಾಟನೆ ಮಾಡಲಾಗಿದೆ. ಆದರೆ, ಕಳೆದ 6 ವರ್ಷಗಳಿಂದ ನಿಂತಲ್ಲೇ ನಿಂತಿರುವ ಕಾಮಗಾರಿ ಬಗ್ಗೆ ಸರ್ಕಾರ ಇನ್ನೂ ಗಮನ ಹರಿಸುತ್ತಿಲ್ಲ, ಈ ಬಗ್ಗೆ ಹಲವು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ‘ಸ್ಟೋನ್‌ಹೆಂಜ್’ನಲ್ಲಿ ಈಜಿಪುರ ಮೇಲ್ಸೇತುವೆಯನ್ನು ಗೂಗಲ್​ನಿಂದ ತೆಗೆದು ಹಾಕಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಜೋಡಿ ಕೊಲೆ | ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ?

ಬೆಂಗಳೂರಿನ ಸಾರಕ್ಕಿ ಪಾರ್ಕ್‌ನಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧ ಕೆಲವು ಮಾಹಿತಿಗಳು...

ಬೆಂಗಳೂರು | ಹಾಡಹಗಲೇ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರ ಬರ್ಬರ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನ ಸಾರಕ್ಕಿ ಮಾರ್ಕೆಟ್ ಬಳಿಯ ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರನ್ನು...

ಬೆಂಗಳೂರು |ತಲಾ ₹1 ಲಕ್ಷ ದಂಡ ಬಾಕಿ ಉಳಿಸಿಕೊಂಡಿವೆ 123 ವಾಹನಗಳು

ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು...

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಡೀ ದಿನ ಕಳೆದೆ ಎಂದು ಸುಳ್ಳು ಹೇಳಿದ ಯೂಟ್ಯೂಬರ್‌ ಬಂಧನ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿ ವಿಡಿಯೋ ರೆಕಾರ್ಡ್ ಮಾಡಿ...