ಬಿಬಿಎಂಪಿ| ವಾರ್ಡ್‌ ಕರಡು ಪಟ್ಟಿ ಪ್ರಕಟ, ಆಕ್ಷೇಪಣೆ ಸಲ್ಲಿಕೆಗೆ ಅವಕಾಶ; ಡಿಸೆಂಬರ್ ವೇಳೆಗೆ ಚುನಾವಣೆ ಸಾಧ್ಯತೆ

Date:

  • 2011ರ ಜನಗಣತಿ ಆಧಾರದ ಮೇಲೆ 225 ವಾರ್ಡ್‌ಗಳ ಗಡಿ ನಿಗದಿ
  • ಕಳೆದ ಮೂರು ವರ್ಷಗಳಿಂದ ನಡೆಯದ ಬಿಬಿಎಂಪಿ ಚುನಾವಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಸಂಖ್ಯೆಯನ್ನು 243 ರಿಂದ 225ಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರ ಮರುವಿಂಗಡಣೆಯ ಕರಡು ಪಟ್ಟಿಯನ್ನು ಪ್ರಕಟಿಸಿದೆ. ಇದೀಗ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.

ಈ ಬಗ್ಗೆ ಶುಕ್ರವಾರ ರಾತ್ರಿ ಸರ್ಕಾರ ರಾಜ್ಯ ಪತ್ರ ಹೊರಡಿಸಿದೆ. ಬಿಬಿಎಂಪಿ ವಾರ್ಡ್‌ ಮರುವಿಂಗಡಣೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಸಾರ್ವಜನಿಕರು ಅಂಚೆ ಮೂಲಕ ಆಕ್ಷೇಪಣೆಗಳನ್ನು ಕಳುಹಿಸಬಹುದು ಎಂದು ವಿಕಾಸ ಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದ ಲಕೋಟೆಯಲ್ಲಿ ಇಲಾಖೆ ತಿಳಿಸಿದೆ.

ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಕರಡು ಪಟ್ಟಿಯನ್ನು ಕರ್ನಾಟಕ ರಾಜ್ಯಪತ್ರದ ಅಧಿಕೃತ ಜಾಲತಾಣ erajyapatra.karnataka.gov.in ದಲ್ಲಿ ವೀಕ್ಷಿಸಬಹುದಾಗಿದೆ. 2011 ರ ಜನಗಣತಿ ಆಧಾರದ ಮೇಲೆ ಎಲ್ಲ 225 ವಾರ್ಡ್‌ಗಳ ಗಡಿಯನ್ನು ನಿಗದಿಪಡಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ ಮೂರು ವರ್ಷದಿಂದ ನಡೆಯದ ಬಿಬಿಎಂಪಿ ಚುನಾವಣೆ

2015ರ ಜುಲೈ 16ರಂದು ಕರ್ನಾಟಕ ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆಯ ಪ್ರಕಟಣೆ ಹೊರಡಿಸಿತ್ತು. ಅದರಂತೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಬಿಬಿಎಂಪಿಯ ಎಲ್ಲ ಕ್ಷೇತ್ರಗಳಲ್ಲಿ 2015ರ ಆಗಸ್ಟ್‌ 22 ರಂದು ಮತ ಎಣಿಕೆ ನಡೆದು 2015ರ ಆಗಸ್ಟ್‌ 25 ರಂದು ಫಲಿತಾಂಶ ಹೊರಬಿದ್ದಿತ್ತು. ಈ ಚುನಾವಣೆ ನಡೆದು ಐದು ವರ್ಷಗಳ ಆಡಳಿತ ನಡೆದ ಬಳಿಕ ಇಲ್ಲಿಯವರೆಗೂ ಬಿಬಿಎಂಪಿ ಚುನಾವಣೆ ನಡೆದಿಲ್ಲ. 2020ರ ಸೆಪ್ಟಂಬರ್‌ನಲ್ಲಿ ಬಿಬಿಎಂಪಿ ಸದಸ್ಯರ (ಕಾರ್ಪೋರೇಟರ್‌ಗಳ) ಅಧಿಕಾರವಧಿ ಪೂರ್ಣಗೊಂಡಿದೆ.

ಕಳೆದ ಮೂರು ವರ್ಷದಿಂದ ಬೆಂಗಳೂರಿಗೆ ಸಮರ್ಥ ಆಡಳಿತಾಗಾರರು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಜನಪ್ರತಿನಿಧಿಗಳು ಇಲ್ಲದೆ ನಗರದ ವಾರ್ಡ್‌ಗಳು ಹದಗೆಟ್ಟಿವೆ.

243 ವಾರ್ಡ್‌ ಮರುವಿಂಗಡಣೆ ಮಾಡಿದ್ದ ಹಿಂದಿನ ಬಿಜೆಪಿ ಸರ್ಕಾರ

ಈ ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ವಾರ್ಡ್‌ ಮರುವಿಂಗಡಣೆ ಮಾಡಲು ಮುಂದಾಗಿತ್ತು. ಅದರಂತೆಯೇ, ಬಿಬಿಎಂಪಿಯ 198 ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಈ ವೇಳೆ, ಬಿಬಿಎಂಪಿ-2020 ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸಹ ಸ್ವೀಕರಿಸಲಾಗಿತ್ತು. ನಗರದ ಬಹುತೇಕ ನೂತನ ಹಾಗೂ ಹಳೆಯ ವಾರ್ಡ್‌ಗಳಿಗೆ ಹೆಸರು ಸೂಚಿಸಿತ್ತು.

ಚುನಾವಣೆ

ಬಿಬಿಎಂಪಿಯ ಮಾಜಿ ವಾರ್ಡ್‌ ಸದಸ್ಯರು ಸೇರಿದಂತೆ ಹಲವರು ಈ ವಾರ್ಡ್‌ ಮರುವಿಂಗಡಣೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ವಾರ್ಡ್‌ಗಳ ವಿಂಗಡಣೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ 12 ವಾರಗಳಲ್ಲಿ ಹೊಸದಾಗಿ ವಾರ್ಡ್‌ ಮರುವಿಂಗಡಣೆ ಮಾಡುವಂತೆ ಆದೇಶ ನೀಡಿತ್ತು. ಅದರಂತೆಯೇ ಕಾಂಗ್ರೆಸ್‌ ಸರ್ಕಾರ ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಿಸಲು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನೇತೃತ್ವದ ಆಯೋಗವನ್ನು ಜೂನ್‌ 23ರಂದು ಸರ್ಕಾರ ಪುನರ್‌ ರಚಿಸಿತ್ತು.

ವಾರ್ಡ್‌ಗಳ ಸಂಖ್ಯೆಯನ್ನು 243ರಿಂದ 225ಕ್ಕೆ ಇಳಿಸಿ ಸರ್ಕಾರ ಆ.4ರಂದು ಅಧಿಸೂಚನೆ ಹೊರಡಿಸಿತ್ತು. ಇದಾದ ಮೇಲೆ ಆಯೋಗ ವಾರ್ಡ್‌ಗಳ ಪುನರ್‌ ರಚಿಸಿ, ಗಡಿ ಗುರುತಿಸಿ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿತ್ತು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಉದ್ಯಾನ್‌ ಎಕ್ಸ್‌ಪ್ರೆಸ್‌ ರೈಲಿನ 2 ಬೋಗಿಗಳಲ್ಲಿ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರೀ ಅನಾಹುತ

ಕಾಂಗ್ರೆಸ್‌ ಸರ್ಕಾರದಿಂದ ವಾರ್ಡ್‌ ಮರುವಿಂಗಡಣೆ

ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ವಾದಿಸಿದ್ದ ಕಾಂಗ್ರೆಸ್‌ ಸರ್ಕಾರ. ಇದೀಗ ವಾರ್ಡ್‌ ಮರುವಿಂಗಡಣೆಯನ್ನು ಮಾಡಿದೆ. 243 ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಇಳಿಕೆ ಮಾಡಿದೆ. ಈಗ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಇನ್ನೂ ಈ ಹಿಂದಿನ ಬಿಜೆಪಿ ಸರ್ಕಾರ ವಾರ್ಡ್‌ಗಳಿಗೆ ಸೂಚಿಸಿದ್ದ ನೂತನ ಹೆಸರುಗಳನ್ನು ಕೈಬಿಟ್ಟಿದೆ ಎನ್ನಲಾಗಿದೆ.

243 ವಾರ್ಡ್‌ಗಳಿದ್ದಾಗ ಜನಸಂಖ್ಯೆ ಆಧಾರದಲ್ಲಿ ಹಲವು ವಾರ್ಡ್‌ಗಳಲ್ಲಿ ಸಂಖ್ಯೆ ಕಡಿಮೆ ಇತ್ತು. 20 ಸಾವಿರ ಜನಸಂಖ್ಯೆಗೂ ವಾರ್ಡ್‌ ರಚಿಸಲಾಗಿತ್ತು. ಆದರೆ, ಇದೀಗ 2011ರ ಜನಗಣತಿಗೆ ಅನುಗುಣವಾಗಿ ಸರಾಸರಿ 37,527 ಜನಸಂಖ್ಯೆಗೆ ಒಂದು ವಾರ್ಡ್‌ ರಚಿಸಲಾಗಿದೆ.

ವಾರ್ಡ್ ಪುನರ್ ವಿಂಗಡಣೆ ಕೆಲಸ ಪೂರ್ಣಗೊಂಡ ಬಳಿಕ ವಾರ್ಡ್‌ವಾರು ಮೀಸಲಾತಿ ಪ್ರಕಟವಾಗಲಿದೆ. ಡಿಸೆಂಬರ್ ವೇಳೆಗೆ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.

ವಾರ್ಡ್‌ಗಳು

1. ಕೆಂಪೇಗೌಡ ವಾರ್ಡ್‌

2. ಚೌಡೇಶ್ವರ ವಾರ್ಡ್

3. ಅಟ್ಟೂರು

4. ಯಲಹಂಕ ಸ್ಯಾಟಲೈಟ್‌ ಟೌನ್‌

5. ಕೋಗಿಲು

6. ಜಕ್ಕೂರು

7. ಥಣಿಸಂದ್ರ

8. ಅಮೃತಹಳ್ಳಿ

9. ಹೆಬ್ಬಾಳ ಕೆಂಪಾಪುರ

10. ಬ್ಯಾಟರಾಯನಪುರ

11. ಕೊಡಿಗೇಹಳ್ಳಿ

12. ದೊಡ್ಡ ಬೊಮ್ಮಸಂದ್ರ

13. ವಿದ್ಯಾರಣ್ಯಪುರ

14. ಕುವೆಂಪುನಗರ

15. ಕಮ್ಮಗೊಂಡನಹಳ್ಳಿ

16. ಮಲ್ಲಸಂದ್ರ

17. ಚಿಕ್ಕಸಂದ್ರ

18. ಬಾಗಲಕುಂಟೆ

19. ಟಿ. ದಾಸರಹಳ್ಳಿ

20. ನೆಲಗೆದರನಹಳ್ಳಿ

21. ಚೊಕ್ಕಸಂದ್ರ

22. ಪೀಣ್ಯ ಕೈಗಾರಿಕೆ ಪ್ರದೇಶ

23. ರಾಜಗೋಪಾಲ್‌ ನಗರ

24. ಹೆಗ್ಗನಹಳ್ಳಿ

25. ಸುಂಕದಕಟ್ಟೆ

26. ದೊಡ್ಡಬಿದರಕಲ್ಲು

27. ಬ್ಯಾಡರಹಳ್ಳಿ

28. ಹೇರೋಹಳ್ಳಿ

29. ಉಲ್ಲಾಳು

30. ನಾಗದೇವನಹಳ್ಳಿ

31. ಬಂಡೆ ಮಠ

32. ಕೆಂಗೇರಿ

33. ಹೆಮ್ಮಿಗೆಪುರ

34. ಜೆ.ಪಿ. ಪಾರ್ಕ್‌

35. ಯಶವಂತಪುರ

36. ಜಾಲಹಳ್ಳಿ

37. ಪೀಣ್ಯ

38. ಲಕ್ಷ್ಮೀದೇವಿ ನಗರ

39. ಲಗ್ಗೆರೆ

40. ಚೌಡೇಶ್ವರಿನಗರ

41. ಕೊಟ್ಟಿಗೆಪಾಳ್ಯ

42. ಶ್ರೀಗಂಧದ ಕಾವಲ್‌

43. ಮಲ್ಲತಹಳ್ಳಿ

44. ಜ್ಞಾನಭಾರತಿ

45. ರಾಜರಾಜೇಶ್ವರಿನಗರ

46. ಮಾರಪ್ಪನಪಾಳ್ಯ

47. ನಂದಿನಿ ಲೇಔಟ್‌

48. ಮಹಾಲಕ್ಷ್ಮೀಪುರಂ

49. ನಾಗಾಪುರ

50. ಡಾ.ಪುನೀತ್‌ ರಾಜ್‌ ಕುಮಾರ್‌

51. ಶಂಕರಮಠ

52. ಶಕ್ತಿ ಗಣಪತಿ ನಗರ

53. ವೃಷಭಾವತಿ ನಗರ

54. ಮತ್ತಿಕೆರೆ

55. ಮಲ್ಲೇಶ್ವರ

56. ಅರಮನೆ ನಗರ

57. ರಾಜಮಹಲ್‌ ಗುಟ್ಟಹಳ್ಳಿ

58. ಕಾಡು ಮಲ್ಲೇಶ್ವರ

59. ಸುಬ್ರಹ್ಮಣ್ಯ ನಗರ

60. ಗಾಯಿತ್ರಿ ನಗರ

61. ರಾಧಾಕೃಷ್ಣ ದೇವಸ್ಥಾನ

62. ಸಂಜಯನಗರ

63. ಹೆಬ್ಬಾಳ

64. ವಿಶ್ವನಾಥ ನಾಗೇನಹಳ್ಳಿ

65. ಮನೋರಾಯನಪಾಳ್ಯ

66. ಚಾಮುಂಡಿ ನಗರ

67. ಗಂಗಾನಗರ

68. ಜಯಚಾಮರಾಜೇಂದ್ರ ನಗರ

69. ಕಾವಲ್‌ ಬೈರಸಂದ್ರ

70. ಕುಶಾಲ್‌ ನಗರ

71. ಮುನೇಶ್ವರ ನಗರ

72. ದೇವರ ಜೀವನಹಳ್ಳಿ

73. ಎಸ್‌.ಕೆ. ಗಾರ್ಡನ್‌

74. ಸಗಾಯರಪುರಂ

75. ಪುಲಕೇಶಿನಗರ

76. ಹೆಣ್ಣೂರು

77. ನಾಗವಾರ

78. ಎಚ್‌ಬಿಆರ್‌ ಲೇಔಟ್‌

79. ಕಾಡುಗೊಂಡನಹಳ್ಳಿ

80. ಕಾಚರಕನಹಳ್ಳಿ

81. ಕಮ್ಮನಹಳ್ಳಿ

82. ಬಾಣಸವಾಡಿ

83. ಕೆಎಸ್‌ಎಫ್‌ಸಿ ಲೇಔಟ್‌

84. ಲಿಂಗರಾಜಪುರ

85. ಮಾರುತಿ ಸೇವಾನಗರ

86. ಚಳ್ಳಕೆರೆ

87. ಹೊರಮಾವು

88. ಕಲ್ಕೆರೆ

89. ವಿಜಿನಾಪುರ

90. ರಾಮಮೂರ್ತಿ ನಗರ

91. ಕೆ.ಆರ್‌. ಪುರ

92. ಬಸವನಪುರ

93. ದೇವಸಂದ್ರ

94. ಎ. ನಾರಾಯಣಪುರ

95. ವಿಜ್ಞಾನನಗರ

96. ಎಚ್‌ಎಎಲ್‌ ವಿಮಾನ ನಿಲ್ದಾಣ

97. ಕಾಡುಗೋಡಿ

98. ಬೆಳತ್ತೂರು

99. ಹೂಡಿ

100. ಗರುಡಾಚಾರ್‌ ಪಾಳ್ಯ

101. ದೊಡ್ಡನೆಕ್ಕುಂದಿ

102. ಎಇಸಿಎಸ್‌ ಲೇಔಟ್‌

103. ವೈಟ್‌ಫೀಲ್ಡ್‌

104. ವರ್ತೂರು

105. ಮುನ್ನೆಕೊಳಲು

106. ಮಾರತ್ತಹಳ್ಳಿ

107. ಬೆಳ್ಳಂದೂರು

108. ಕಾಕ್ಸ್‌ ಟೌನ್‌

109. ಬೆನ್ನಿಗಾನಹಳ್ಳಿ

110. ಸಿ.ವಿ. ರಾಮನ್‌ ನಗರ

111. ಕಗ್ಗದಾಸಪುರ

112. ಹೊಸ ತಿಪ್ಪಸಂದ್ರ

113. ಹೊಯ್ಸಳ ನಗರ

114. ಜೀವನಬಿಮಾನಗರ

115. ಕೋನೇನ ಅಗ್ರಹಾರ

116. ರಾಮಸ್ವಾಮಿ ಪಾಳ್ಯ

117. ವಸಂತನಗರ

118. ಎಸ್‌.ಆರ್‌. ನಗರ

119. ಶಿವಾಜಿನಗರ‌

120. ಭಾರತಿನಗರ

121. ಹಲಸೂರು

122. ದತ್ತಾತ್ರೇಯ ದೇವಸ್ಥಾನ

123. ಗಾಂಧಿನಗರ

124. ಸುಭಾಷ್‌ ನಗರ

125. ಓಕಳಿಪುರ

126. ಬಿನ್ನಿಪೇಟೆ

127. ಕಾಟನ್‌ಪೇಟೆ

128. ಚಿಕ್ಕಪೇಟೆ

129. ದಯಾನಂದ ನಗರ

130. ಪ್ರಕಾಶ್ ನಗರ

131. ಶ್ರೀರಾಮಮಂದಿರ

132. ಶಿವನಗರ

133. ಬಸವೇಶ್ವರನಗರ

134. ಕಾಮಾಕ್ಷಿಪಾಳ್ಯ

135. ಡಾ. ರಾಜ್‌ಕುಮಾರ್‌ ಅಗ್ರಹಾರ ದಾಸರಹಳ್ಳಿ

136. ಗೋವಿಂದರಾಜನಗರ

137. ಮಾರೇನಹಳ್ಳಿ

138. ಕಾವೇರಿಪುರ

139. ಮೂಡಲಪಾಳ್ಯ

140. ಮಾರುತಿ ಮಂದಿರ

141. ನಾಗರಭಾವಿ

142. ಚಂದ್ರಾ ಲೇಔಟ್‌

143. ನಾಯಂಡಹಳ್ಳಿ

144. ಕೆಂಪಾಪುರ ಅಗ್ರಹಾರ

145. ವಿಜಯನಗರ

146. ಹೊಸಹಳ್ಳಿ

147. ಹಂಪಿನಗರ

148. ಹೊಸ ಗುಡ್ಡದಹಳ್ಳಿ

149. ಗಾಳಿ ಆಂಜನೇಯ ದೇವಸ್ಥಾನ

150. ಅತ್ತಿಗುಪ್ಪೆ

151. ದೀಪಾಂಜಲಿನಗರ

152. ಆವಲಹಳ್ಳಿ

153. ಪಾದರಾಯನಪುರ

154. ರಾಯಪುರಂ

155. ದೇವರಾಜ ಅರಸ್‌ ನಗರ

156. ಚಲವಾದಿಪಾಳ್ಯ

157. ಕೆ.ಆರ್‌. ಮಾರುಕಟ್ಟೆ

158. ಚಾಮರಾಜಪೇಟೆ

159. ಆಜಾದ್‌ ನಗರ

160. ಧರ್ಮರಾಯಸ್ವಾಮಿ ದೇವಸ್ಥಾನ

161. ಸಿಲ್ವರ್‌ ಜೂಬ್ಲಿ ಪಾರ್ಕ್‌

162. ಸುಂಕೇನಹಳ್ಳಿ

163. ವಿಶ್ವೇಶ್ವರಪುರ

164. ಹೊಂಬೇಗೌಡ ನಗರ

165. ಸೋಮೇಶ್ವರ ನಗರ

166. ಶಾಂತಿನಗರ

167. ಶಾಂತಲಾ ನಗರ

168. ನೀಲಸಂದ್ರ

169. ವನ್ನಾರ್‌ ಪೇಟೆ

170. ಜೋಗುಪಾಳ್ಯ

171. ದೊಮ್ಮಲೂರು

172. ಅಗರಂ

173. ಈಜಿಪುರ

174. ಕೋರಮಂಗಲ

175. ಜಕ್ಕಸಂದ್ರ

176. ಆಡುಗೋಡಿ

177. ಲಕ್ಕಸಂದ್ರ

178. ಸುದ್ದಗುಂಟೆ ಪಾಳ್ಯ

179. ಮಡಿವಾಳ

180. ಸೋಮೇಶ್ವರ ದೇವಸ್ಥಾನ

181. ಬಿಟಿಎಂ ಲೇಔಟ್‌

182. ಬೈರಸಂದ್ರ

183. ಗುರಪ್ಪನಪಾಳ್ಯ

184. ಜಯನಗರ ಪೂರ್ವ

185. ಜೆ.ಪಿ. ನಗರ

186. ಶಾಕಾಂಬರಿ ನಗರ

187. ಸಾರಕ್ಕಿ

188. ಯಡಿಯೂರು

189. ಗಣೇಶ ಮಂದಿರ

190. ದೇವಗಿರಿ ದೇವಸ್ಥಾನ

191. ಬನಶಂಕರಿ ದೇವಸ್ಥಾನ

192. ಕುಮಾರಸ್ವಾಮಿ ಲೇಔಟ್‌

193. ಪದ್ಮನಾಭನಗರ

194. ಚಿಕ್ಕಲಸಂದ್ರ

195. ಹೊಸಕೆರೆಹಳ್ಳಿ

196. ಹನುಮಂತನಗರ

197. ಶ್ರೀನಗರ

198. ಬಸವನಗುಡಿ

199. ವಿದ್ಯಾಪೀಠ

200. ಗಿರಿನಗರ

201. ಕತ್ರಿಗುಪ್ಪೆ

202. ಉತ್ತರಹಳ್ಳಿ

203. ಸುಬ್ರಹ್ಮಣ್ಯಪುರ

204. ವಸಂತಪುರ

205. ಯಲಚೇನಹಳ್ಳಿ

206. ಕೋಣನಕುಂಟೆ

207. ಆರ್‌ಬಿಐ ಲೇಔಟ್‌

208. ಅಂಜನಾಪುರ

209. ಗೊಟ್ಟಿಗೆರೆ

210. ಕಾಳೇನ ಅಗ್ರಹಾರ

211. ಬೇಗೂರು

212. ನಾಗನಾಥಪುರ

213. ಜರಗನಹಳ್ಳಿ

214. ಪುಟ್ಟೇನಹಳ್ಳಿ

215. ಬಿಳೇಕಹಳ್ಳಿ

216. ಹುಳಿಮಾವು

217. ಕೋಡಿಚಿಕ್ಕನಹಳ್ಳಿ

218. ಬೊಮ್ಮನಹಳ್ಳಿ

219. ಹೊಂಗಸಂದ್ರ

220. ಗಾರೆಭಾವಿಪಾಳ್ಯ

221. ಎಚ್ಎಸ್‌ಆರ್‌ ಲೇಔಟ್‌

222. ಇಬ್ಲೂರು

223. ಮಂಗಮ್ಮನಪಾಳ್ಯ

224. ಹೊಸ ರಸ್ತೆ

225. ಕೂಡ್ಲು

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಲಾಲ್‌ಬಾಗ್‌ನಲ್ಲಿ ಮಾವು ಮೇಳ ಆರಂಭ

ರಾಜ್ಯ ಮಾವು ಅಭಿವೃದ್ಧಿ ನಿಗಮದ ವತಿಯಿಂದ ಮೇ 24ರಿಂದ ‘ಮಾವು ಮತ್ತು...

ಬೆಂಗಳೂರಿನ ಜನರಿಗೆ ಕುಡಿಯುವ ನೀರಿನಿಂದ ಆರೋಗ್ಯ ಸಮಸ್ಯೆ ಉಂಟಾದರೆ ಶಿಸ್ತು ಕ್ರಮ: ಡಿ ಕೆ ಶಿವಕುಮಾರ್ ಎಚ್ಚರಿಕೆ

ಬೆಂಗಳೂರಿನ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಒಂದು...

ಸೌಂದರ್ಯ ಜಗದೀಶ್ ಆತ್ಮಹತ್ಯೆ | ಬಿಸಿನೆಸ್ ಪಾಲುದಾರರ ವಿರುದ್ಧ ಎಫ್‌ಐಆರ್‌ ದಾಖಲು

ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಬೆಂಗಳೂರು ಅಭಿವೃದ್ಧಿಗೆ ನಯಾಪೈಸೆ ಬಿಡುಗಡೆ ಮಾಡದ ಸರ್ಕಾರ: ಆರ್.ಅಶೋಕ್

ಬೆಂಗಳೂರು ನಗರದ ಅಭಿವೃದ್ಧಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಒಂದು ನಯಾಪೈಸೆಯನ್ನೂ ಬಿಡುಗಡೆ...