ಬೇಸಿಗೆಗೆ ಮತ್ತಷ್ಟು ಹುಳಿಯಾದ ನಿಂಬೆಹಣ್ಣು

Date:

  • ₹4 ರಿಂದ ₹5 ದರ ಇದ್ದ ನಿಂಬೆಹಣ್ಣು ಬೆಲೆ ಇದೀಗ ₹10
  • ಸಣ್ಣ ಗಾತ್ರದ ನಿಂಬೆ ಹಣ್ಣು ಪ್ರತಿ ಕಾಯಿಗೆ ₹5-6

ಚಳಿಯ ಕೊರೆ ಮುಗಿದು, ಬೇಸಿಗೆಯ ಬಿಸಿ ಏರುತ್ತಿದೆ. ಮಾರ್ಚ್‌ ತಿಂಗಳಿನಲ್ಲಿಯೇ ಬೇಸಿಗೆ ಸುಡುಬಿಸಿಲಿಗೆ ಜನರಿಗೆ ಸಾಕಪ್ಪ ಎನಿಸುವಂತೆ ಮಾಡಿದೆ. ಇನ್ನು ಏಪ್ರಿಲ್-ಮೇ ತಿಂಗಳಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಾಗಲಿದೆ. ಜನರು ಕುಳಿತಲ್ಲಿಯೇ ದಣಿಯುವಂತಹ ವಾತಾವರಣ ಆವರಿಸಿದೆ. ದಣಿವು ನೀಗಿಸಿಕೊಳ್ಳಲು ತುಂಪು ಪಾನೀಯ, ಶರಬತ್‌ನ ಮೊರೆಹೋಗುತ್ತಿದ್ದಾರೆ. ಆದರೆ, ಶರಬತ್ ಮಾಡುವುದು ಬೇಸಿಗೆಗಿಂತಲೂ ಹೆಚ್ಚು ಕೈಸುಡುತ್ತಿದೆ. ₹4 ರಿಂದ ₹5 ದರ ಇದ್ದ ನಿಂಬೆಹಣ್ಣು ಬೆಲೆ ಇದೀಗ ₹10 ಆಗಿದೆ.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ, “ನಗರದಾದ್ಯಂತ ಏರುತ್ತಿರುವ ತಾಪಮಾನವು ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ನಿಂಬೆಹಣ್ಣು ಇಳುವರಿ ಚೆನ್ನಾಗಿರುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಇಳುವರಿ ತುಂಬಾ ಕಡಿಮೆಯಿರುತ್ತದೆ. ಈ ಅವಧಿಯಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಜಾಸ್ತಿ ಇರುತ್ತದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮಾರ್ಚ್‌ 31ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

“ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿಂಬೆಹಣ್ಣು ದುಬಾರಿಯಾಗಿರುತ್ತದೆ. ಈ ವರ್ಷ ಸಾಮಾನ್ಯಕ್ಕಿಂತ ಮುಂಚಿತವಾಗಿಯೇ ಫಸಲು ಬಂದಿದೆ. ಸಾಮಾನ್ಯವಾಗಿ ಏಪ್ರಿಲ್ ಮಧ್ಯದಲ್ಲಿ ಹಣ್ಣಿನ ಬೆಲೆಗಳು ಹೆಚ್ಚಾಗುತ್ತವೆ. ಆದರೆ, ಈ ಬಾರಿ ತಾಪಮಾನ ಏರಿಕೆಯಿಂದಾಗಿ ಮಾರ್ಚ್ ಮಧ್ಯದಿಂದಲೇ ಏರಿಕೆಯಾಗಿದೆ. ಸೋಮವಾರ ಸಗಟು ದರದಲ್ಲಿ 40 ಕೆಜಿ ನಿಂಬೆಹಣ್ಣಿನ ಪ್ರತಿ ಚೀಲಕ್ಕೆ ₹3,700 ಮುಂದಿನ ದಿನಗಳಲ್ಲಿ ಪ್ರತಿ ಚೀಲಕ್ಕೆ ₹4,000 ಏರಿಕೆ ಕಾಣಬಹುದು” ಎಂದು ಸಂತೋಷ್ ಹೇಳಿದರು.

ಸಣ್ಣ ಗಾತ್ರದ ನಿಂಬೆ ಹಣ್ಣು ಪ್ರತಿ ಕಾಯಿಗೆ ₹5-6 ಮಾರಾಟವಾಗುತ್ತಿದೆ. ಮಧ್ಯಮ ಗಾತ್ರದ ನಿಂಬೆಹಣ್ಣು ಅಂಗಡಿಗಳಲ್ಲಿ ₹8-10ಗೆ ಮಾರಾಟವಾಗುತ್ತಿದೆ. ವಿಜಯಪುರ ಹಾಗೂ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ನಿಂಬೆಹಣ್ಣುಗಳು ಆಮದು ಆಗುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್​ ಪ್ರಕರಣ​ ರದ್ದುಪಡಿಸಿದ ಹೈಕೋರ್ಟ್

ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್​...

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟ ಗಾಯಕ್ಕೆ ಚಿಕಿತ್ಸೆ; ಪರಿಹಾರ ಪಡೆಯದ ಸಂತ್ರಸ್ತರು

ಭಯ, ಸಾಮಾಜಿಕ ಒತ್ತಡದಿಂದ ಸಂತ್ರಸ್ತರು ಪೊಲೀಸ್ ಪ್ರಕರಣ ದಾಖಲಿಸಿಲ್ಲ ಸರ್ಕಾರದ ಯೋಜನೆಯಡಿ ₹2...

ಮುರುಘಾ ಪ್ರಕರಣ: ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಆರೋಪಿ ಅರ್ಜಿ

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧನದಲ್ಲಿರುವ...

‘ಗೃಹಜ್ಯೋತಿ’ ವಿರುದ್ಧ ಚೆಂಡು ಹೂವು ಮುಡಿದುಕೊಂಡು ವಿನೂತನ ಪ್ರತಿಭಟನೆ: ಆಪ್

ಜನ ವಿರೋಧಿ ನೀತಿಯನ್ನು ವಿರೋಧಿಸಿ ಜೂನ್ 9ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಕಾಂಗ್ರೆಸ್‌ಗೆ...