ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟದೇ ಇರುವವರು, ದಂಡ ಪಾವತಿಸಲು ಶೇ.50ರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರ ಮತ್ತೆ ಘೋಷಿಸಿದೆ. ಈ ಹಿಂದೆಯೂ ಎರಡು ಬಾರಿ ರಿಯಾಯಿತಿ ನೀಡಿ, ಭಾರೀ ಮೊತ್ತದ ದಂಡ ವಸೂಲಿ ಮಾಡಿದ್ದ ಸರ್ಕಾರ, ಇದೀಗ ಮತ್ತೆ ರಿಯಾಯಿತಿ ಘೋಷಿಸಿದೆ.
2023ರ ಫೆಬ್ರವರಿ 11ನೇ ತಾರೀಖಿಗಿಂತ ಹಿಂದೆ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದು, ಇನ್ನೂ ದಂಡ ಪಾವತಿಸದೇ ಇರುವವರಿಗೆ ಈ ರಿಯಾಯಿತಿ ಅನ್ವಯವಾಗಲಿದೆ. ಫೆಬ್ರವರಿ 12ರ ಬಳಿಕದ ಉಲ್ಲಂಘನೆಗಳಿಗೆ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದೂ ಆದೇಶದಲ್ಲಿ ತಿಳಿಸಿದೆ.
ಈ ವರ್ಷದ ಸೆಪ್ಟೆಂಬರ್ 9ರವರೆಗೆ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶವಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಈ ಹಿಂದೆ, 2023ರ ಜನವರಿ-ಫೆಬ್ರವರಿಯಲ್ಲಿ ದಿನಗಳ ಕಾಲ ಶೇ.50ರ ರಿಯಾಯಿತಿಯಲ್ಲಿ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು. ನಂತರ ಮಾರ್ಚ್ 4ರಿಂದ 15 ದಿನಗಳ ಕಾಲಾವಕಾಶ ನೀಡಿತ್ತು. ಆಗ 120 ಕೋಟಿ ರೂ. ದಂಡ ವಸೂಲಿಯಾಗಿತ್ತು ಎಂದು ಅಂಕಿಅಂಶಗಳು ಹೇಳಿದ್ದವು.