ಧಾರವಾಡ 

ಧಾರವಾಡ | ದ.ರಾ. ಬೇಂದ್ರೆ ಅವರಿಗೆ ಸರ್ಕಾರ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಬೇಕು: ಡಾ. ಸರಜು ಕಾಟಕರ್

ಸರ್ಕಾರವು ವರಕವಿ ದ.ರಾ. ಬೇಂದ್ರೆ ಅವರಿಗೆ 'ಕರ್ನಾಟಕ ರತ್ನ ಪ್ರಶಸ್ತಿ' ನೀಡಬೇಕು ಎಂದು ಬೇಂದ್ರೆ ಟ್ರಸ್ಟನ ಅಧ್ಯಕ್ಷ ಡಾ. ಸರಜು ಕಾಟಕರ್ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಆಯೋಜಿಸಿದ್ದ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ...

ಧಾರವಾಡ | ವಿಶೇಷ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಂದ ಬಾಲಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ 2024-25 ಹಾಗೂ 2025-26 ನೇ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರ್‍ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಂದ...

ಧಾರವಾಡ | ಜಿಲ್ಲೆಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನ ಖರೀದಿ ಕೇಂದ್ರಗಳು ಆರಂಭ

2025-26 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‍ಗೆ ರೂ. 5,875 ರಂತೆ ಧಾರವಾಡ ಜಿಲ್ಲೆಯಲ್ಲಿ ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯ...

ಧಾರವಾಡ |  ಲಕ್ಷ್ಮೀಬಾಯಿ ಕೊಟಗುಣಸಿ ಅವರಿಗೆ ಪಿಎಚ್.ಡಿ ಪದವಿ ಘೋಷಣೆ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಡಾ. ಆರ್. ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದಿಂದ ಲಕ್ಷ್ಮೀಬಾಯಿ ಕೊಟಗುಣಸಿ ಅವರಿಗೆ ಪಿಎಚ್.ಡಿ ಪದವಿ ಘೋಷಣೆ ಮಾಡಿದೆ. ಸಹಾಯಕ ಪ್ರಧ್ಯಾಪಕರು ಡಾ. ಅನಿತಾ ಕೆ. ಗುಡಿ ಅವರ ಮಾರ್ಗದರ್ಶನದಲ್ಲಿ...

ಧಾರವಾಡ | ಗಜಾನನ ಮಹಾಲೆ ಬಡತನದಲ್ಲಿಯೂ ಬಾಳಿ ಬದುಕಿದರು: ಡಾ. ವೀರಣ್ಣ ರಾಜೂರ

ಗಜಾನನ ಮಹಾಲೆಯವರು ಪ್ರಸಾದನದಲ್ಲಿ ಪ್ರಾವಿಣ್ಯತೆಯನ್ನು ಪಡೆದವರಾಗಿದ್ದು, ಅನೇಕ ನಾಟಕ, ಸಂಗೀತ ಮತ್ತು ಚಿತ್ರಕಲೆಗಳಲ್ಲಿಯೂ ಪರಿಣತೆಯನ್ನು ಪಡೆದವರಾಗಿದ್ದು ಸರಕಾರಿ ಅನುದಾನಿತ ಟ್ರಸ್ಟ್ಗಿಂತ, ಈ ಪ್ರತಿಷ್ಠಾನ ಗಜಾನನ ಮಹಾಲೆಯವರ ವ್ಯಕ್ತಿತ್ವದಿಂದ ಅವರ ಅಭಿಮಾನಗಳಿಂದ ರಚಿತವಾಗಿದ್ದು ಇದಕ್ಕೆ...

ಧಾರವಾಡ | ಮತದಾನ ನಮ್ಮ ಹಕ್ಕು, ಹೆಮ್ಮೆ, ಗೌರವದ ಸಂಕೇತ; ಅದು ಮಾರಾಟಕ್ಕಲ್ಲ: ಸಿಇಓ ಭುವನೇಶ ಪಾಟೀಲ

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಹಕ್ಕು ದೊರೆತಿರುವುದು ನಮ್ಮ ಹೆಮ್ಮೆ ಮತ್ತು ಗೌರವದ ಸಂಕೇತವಾಗಿದೆ. ಮತಗಳು ಮಾರಾಟಕ್ಕಲ್ಲ; ಮತದಾನದಲ್ಲಿ ಮುತ್ಸದ್ದಿತನ ತೋರಬೇಕು ಎಂದು ಜ. 25ರಂದು ನಗರದ ಆಲೂರು ವೆಂಕಟರಾವ ಸಭಾಭವನದಲ್ಲಿ ಜಿಲ್ಲಾಡಳಿತ,...

ಅಳಿವಿನಂಚಿನಲ್ಲಿ ಗರಗ ಖಾದಿ ಕೇಂದ್ರ; ಸಂಪೂರ್ಣ ಮುಚ್ಚಿಹೋದ ಉಪ್ಪಿನಬೆಟಗೇರಿ ಖಾದಿ ಕೇಂದ್ರ

ನಮ್ಮ ದೇಶದ ಹೆಮ್ಮೆಯ ರಾಷ್ಟ್ರಧ್ವಜವನ್ನು ತಯಾರಿಸುವ ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಮುಚ್ಚುತ್ತ ಹೋದರೆ; ಕೊನೆಗೆ ಕೈಗಾರಿಕೋದ್ಯಮವೇ ಅನಿವಾರ್ಯವಾಗುತ್ತದೆ. ಬಡವರು ಮತ್ತೆ ಊರು ಬಿಟ್ಟು ಅನ್ಯ ಪ್ರದೇಶಗಳಿಗೆ ವಲಸೆ ಹೋಗಿ, ಉದ್ಯಮಿಗಳ ಕೈಗಳಲ್ಲಿ ಆಳುಗಳಾಗಿ...

ಧಾರವಾಡ | ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಗೆ ಪ್ರೊ.‌ಮಾಲತಿ ಪಟ್ಟಣಶೆಟ್ಟಿ, ಸತೀಶ್ ಕುಲಕರ್ಣಿ ಆಯ್ಕೆ

ಸಾಹಿತಿಗಳಾದ ಧಾರವಾಡದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮತ್ತು ಹಾವೇರಿಯ ಸತೀಶ ಕುಲಕರ್ಣಿ ಅವರು ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು, ತಲಾ ₹50 ಸಾವಿರ ನಗದು, ಸ್ಮರಣಿಕೆಯನ್ನು ಪ್ರಶಸ್ತಿಯು ಒಳಗೊಂಡಿದೆ. ಪ್ರೊ. ಮಾಲತಿ...

ಹುಬ್ಬಳ್ಳಿ | ಮನೆಗಳ ಹಂಚಿಕೆ ಕಾರ್ಯಕ್ರಮ; ಕಟೌಟ್ ಬಿದ್ದು ನಾಲ್ವರಿಗೆ ಗಾಯ

ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ 42,345 ಮನೆಗಳ ಹಂಚಿಕೆ ಕಾರ್ಯಕ್ರಮಕ್ಕೂ ಮುನ್ನ ವೇದಿಕೆ ಮುಂಭಾಗದ ಕಟೌಟ್‌ ಬಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ...

ಧಾರವಾಡ | ಯುವತಿಯ ಶವ ಪತ್ತೆ ಪ್ರಕರಣ; ಆರೋಪಿ ಬಂಧನ

ಜ. 20ರಂದು ಧಾರವಾಡದ ಹೊರವಲಯದಲ್ಲಿ ಝಕೀಯಾ ಮುಲ್ಲಾ ಎಂಬ ಯುವತಿಯೋರ್ವಳ ಶವ ಪತ್ತೆಯಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಅದು ಕೊಲೆಯೆಂದು ಸಾಬೀತಾಗಿದ್ದು, ಮೃತ ಝಕೀಯಾ ಜತೆಗೆ ಸಂಪರ್ಕದಲ್ಲಿದ್ದ ಯುವಕನೇ ಕೊಲೆ ಮಾಡಿರುವುದು ತಿಳಿದು ಬಂದಿದೆ. ಸಾಧಿಕ್...

ಧಾರವಾಡ | ಯುವತಿ ಮೃತದೇಹ ಪತ್ತೆ : ಕೊಲೆ ಶಂಕೆ

ಪ್ಯಾರಾಮೆಡಿಕಲ್ ಪೂರೈಸಿ, ಕೆಲಸ ಹುಡುಕುತ್ತಿದ್ದ ಯುವತಿಯು ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡದ ಹೊರಹೊಲಯದಲ್ಲಿ ಮಂಗಳವಾರ ನಡೆದಿದ್ದು, ನಗರವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ನಗರದ ಗಾಂಧಿ ಚೌಕ ನಿವಾಸಿ ಝಕಿಯಾ ಮುಲ್ಲಾ (19) ಮೃತ ಯುವತಿ ಎನ್ನಲಾಗಿದೆ....

ಧಾರವಾಡ | ಹಾಸ್ಟೆಲ್‌ ಮೇಲಿಂದ ಬಿದ್ದು ಕೊಪ್ಪಳ ಮೂಲದ ವಿದ್ಯಾರ್ಥಿ ಸಾವು

ಕೊಪ್ಪಳ ಮೂಲದ ವಿದ್ಯಾರ್ಥಿಯೊರ್ವ ಹಾಸ್ಟೆಲ್ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮದ ನಿವಾಸಿಯಾದ ಅಯಾನ್ ಸುಂಕದ (17) ಮೃತ ವಿದ್ಯಾರ್ಥಿ. ನವನಗರದ ಸನಾ...

ಈ ಹೊತ್ತಿನ ಪ್ರಮುಖ ಸುದ್ದಿ