ದೇಶ

ವಿದ್ಯಾರ್ಥಿಗಳ ಪ್ರತಿಭಟನಾ ಹಕ್ಕಿನಲ್ಲಿ BCI ಹಸ್ತಕ್ಷೇಪ ಬೇಡ: CJI ಸೂರ್ಯಕಾಂತ್‌

ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌ (NALSAR) ವಿಶ್ವವಿದ್ಯಾಲಯದ 2026ನೇ ಬ್ಯಾಚ್‌ ಕಾನೂನು ವಿದ್ಯಾರ್ಥಿಗಳನ್ನು ನೋಂದಾಯಿಸದಂತೆ ರಾಜ್ಯ ಬಾರ್‌ ಕೌನ್ಸಿಲ್‌ಗಳಿಗೆ ಸೂಚಿಸಿದ್ದ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ (BCI) ಕ್ರಮಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ತೀವ್ರ...

ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆಯ ಗಸ್ತು ತಡೆದ ಚೀನಾ: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಭಾರತೀಯ ಸೇನೆ ಗಸ್ತು ತಿರುಗುವುದನ್ನು ಚೀನಾ ತಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಇದೊಂದು ಆತಂಕಕಾರಿ ಬೆಳವಣಿಗೆ ಎಂದಿರುವ...

ಕರೂರ್ ಕಾಲ್ತುಳಿತ ಸಂತ್ರಸ್ತರಿಗೆ ನೌಕರಿ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಕಳೆದ ವರ್ಷ ತಮಿಳುನಾಡಿನ ಕರೂರ್‌ನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಅರ್ಹ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವ ತಮಿಳುನಾಡು ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ...

ಪರಿಸರ ರಕ್ಷಣೆಯಲ್ಲಿ ಬದಲಾಗುತ್ತಿದೆಯೇ ಸುಪ್ರೀಂ ನಿಲುವು? ನ್ಯಾಯಮೂರ್ತಿ ಭುಯಾನ್‌ ಕಳವಳ

ಭಾರತದಲ್ಲಿ ಪರಿಸರ ಕಾನೂನು ಬೆಳೆದು ಬಲಿಷ್ಠವಾಗುವಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ಪಾತ್ರ ವಹಿಸಿದೆ. ಆದರೆ ಇತ್ತೀಚಿನ ಕೆಲವು ತೀರ್ಪುಗಳನ್ನು ಗಮನಿಸಿದರೆ, ನ್ಯಾಯಾಲಯ ತನ್ನದೇ ಪರಿಸರ ನ್ಯಾಯಶಾಸ್ತ್ರದ ಪರಂಪರೆಯಿಂದ ದೂರ ಸರಿಯುತ್ತಿದೆಯೇ ಎಂಬ ಪ್ರಶ್ನೆ...

ಒಕ್ಕೂಟ ತತ್ವಕ್ಕೆ ಮೋದಿ ಸರ್ಕಾರದ ಕೊಡಲಿಪೆಟ್ಟು; ರಾಜ್ಯಗಳ ಗಣಿ ತೆರಿಗೆ ಕಸಿದುಕೊಳ್ಳುವ ಕರಾಳ ಕಾಯ್ದೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳ ಆರ್ಥಿಕ ಹಕ್ಕುಗಳನ್ನು ಹತ್ತಿಕ್ಕುವ ಮತ್ತೊಂದು ಸರ್ವಾಧಿಕಾರಿ ಹೆಜ್ಜೆಯನ್ನಿಟ್ಟಿದೆ. ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅಂಗೀಕರಿಸಲಾದ 'ಎಂಎಂಡಿಆರ್' (MMDR-2026) ತಿದ್ದುಪಡಿ ಮಸೂದೆಯು, ರಾಜ್ಯಗಳು ತಮ್ಮ ನೆಲದ ಖನಿಜ ಸಂಪನ್ಮೂಲಗಳ...

ಯುಪಿಯಲ್ಲಿ ಮಹಿಳಾ ಮತಬೇಟೆಗೆ ಬಿಜೆಪಿ-ಎಸ್‌ಪಿ ಸಜ್ಜು: ಅಖಿಲೇಶ್‌ ₹40 ಸಾವಿರದ ಆಫರ್

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಇನ್ನೂ ಹಲವು ತಿಂಗಳು ದೂರವಿದ್ದರೂ, ಮಹಿಳಾ ಮತದಾರರನ್ನು ಸೆಳೆಯುವ ರಾಜಕೀಯ ಪೈಪೋಟಿ ಈಗಾಗಲೇ ತೀವ್ರಗೊಂಡಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ನಗದು ನೆರವು ನೀಡುವ ಯೋಜನೆಯನ್ನು...

ಉತ್ತರಾಖಂಡದಲ್ಲಿ ಸುರಂಗ ಕುಸಿತ: 7 ಕಾರ್ಮಿಕರ ಸಾವು, 14 ಮಂದಿಗೆ ಗಾಯ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಯಾಪುರ (ಪಿಪಲ್ಕೋಟಿ) ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗಕ್ಕೆ ಏಕಾಏಕಿ ಭಾರಿ ಪ್ರಮಾಣದ ನೀರು ಮತ್ತು ಅವಶೇಷಗಳು ನುಗ್ಗಿದ ಪರಿಣಾಮ 7 ಕಾರ್ಮಿಕರು ಮೃತಪಟ್ಟಿದ್ದು, 14 ಮಂದಿ...

ಸ್ನಾತಕೋತ್ತರ ಇತಿಹಾಸ ಪಠ್ಯದಿಂದ ‘ದೆಹಲಿ ಸುಲ್ತಾನ’ರ ಪಠ್ಯ ಕೈಬಿಟ್ಟ ದೆಹಲಿ ವಿವಿ; ಬೋಧಕರ ಕಳವಳ

ದೆಹಲಿ ವಿಶ್ವವಿದ್ಯಾಲಯವು (DU) ತನ್ನ ಸ್ನಾತಕೋತ್ತರ (MA) ಇತಿಹಾಸ ವಿಭಾಗದ ಮೂರನೇ ಸೆಮಿಸ್ಟರ್ ಪಠ್ಯಕ್ರಮದಿಂದ 'ದೆಹಲಿ ಸುಲ್ತಾನ'ರ ಕುರಿತ ಮುಖ್ಯ ಪಠ್ಯ ಸೇರಿದಂತೆ ಹಲವು ದಶಕಗಳಿಂದ ಬೋಧಿಸಲಾಗುತ್ತಿದ್ದ ಪ್ರಮುಖ ವಿಷಯಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ಪಠ್ಯಕ್ರಮದಲ್ಲಿದ್ದ...

​ನೇತಾಜಿಗೆ ಅವಮಾನ: ಬಿಜೆಪಿ ಸಂಸದನಿಗೆ ನೀಡಿದ್ದ ‘ಬಂಗ ವಿಭೂಷಣ’ ಪ್ರಶಸ್ತಿ ವಾಪಸ್

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಸಭಾ ಸದಸ್ಯ ಅನಂತ ಮಹಾರಾಜ್ ಅವರಿಗೆ ನೀಡಲಾಗಿದ್ದ 'ಬಂಗ ವಿಭೂಷಣ' ಪ್ರಶಸ್ತಿಯನ್ನು ಪಶ್ಚಿಮ ಬಂಗಾಳ ಸರ್ಕಾರ...

VB-G RAM G | MYTHS vs REALITY; ಉದ್ಯೋಗ ಖಾತ್ರಿಯ ಕುರಿತು ಕಥೆ ಕಟ್ಟುತ್ತಿದೆಯೇ ಸರ್ಕಾರ?

TIE ವರದಿಯ ಪ್ರಕಾರ, ವ್ಯಕ್ತಿ-ದಿನಗಳ ಉದ್ಯೋಗ ಮಾತ್ರವಲ್ಲದೆ ಕೆಲಸಕ್ಕಾಗಿ ಮುಂದೆ ಬಂದ ಕುಟುಂಬಗಳ ಸಂಖ್ಯೆಯೂ ಸುಮಾರು ಶೇ.50ರಷ್ಟು ಕಡಿಮೆಯಾಗಿದೆ. ಈ ಬೆಳವಣಿಗೆ ನಡೆಯುತ್ತಿರುವುದು ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿರುವ ಮತ್ತು ಹಲವು ಗ್ರಾಮೀಣ ಪ್ರದೇಶಗಳು...

ಕೊಲ್ಕತ್ತಾದ ಆಸ್ಪತ್ರೆಯ ಶೌಚಾಲಯದಲ್ಲಿ ನರ್ಸ್ ಶವ ಪತ್ತೆ; ಅರಿವಳಿಕೆ ಮದ್ದು, ಸಿರಿಂಜ್ ವಶ

ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಎನ್.ಆರ್.ಎಸ್ ಆಸ್ಪತ್ರೆಯ ಶೌಚಾಲಯವೊಂದರಲ್ಲಿ 30 ವರ್ಷದ ನರ್ಸ್ ಶವವಾಗಿ ಪತ್ತೆಯಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸರು...

ಅಮೆರಿಕ-ಇರಾನ್ ಸಂಘರ್ಷದಲ್ಲಿ ಪಾಕ್‌ ಮಧ್ಯಸ್ಥಿಕೆ ವಹಿಸಿದರೆ, ಮೋದಿ ಮೂಕಪ್ರೇಕ್ಷಕರಾಗಿದ್ದರು: ರಾಹುಲ್ ಗಾಂಧಿ ವಾಗ್ದಾಳಿ

ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಹಾಗೂ ಗಡಿ ಭದ್ರತೆಯ ವಿಚಾರವಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವು ಮಧ್ಯಸ್ಥಿಕೆ...

ಈ ಹೊತ್ತಿನ ಪ್ರಮುಖ ಸುದ್ದಿ