2026ರ ವಿಶ್ವದ ಟಾಪ್ 10 ಶ್ರೀಮಂತ ವ್ಯಕ್ತಿಗಳು ಇವರು!

Date:

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲೋನ್ ಮಸ್ಕ್ ಅವರ ಸಂಪತ್ತು ಕಳೆದ ತಿಂಗಳು 64 ಬಿಲಿಯನ್ ಡಾಲರ್‌ಗಳಷ್ಟು ಏರಿಕೆಯಾಗಿದೆ. 2026ರ ಆರಂಭದಲ್ಲಿ ವಿಶ್ವದ ಹತ್ತು ಶ್ರೀಮಂತ ವ್ಯಕ್ತಿಗಳ ಪೈಕಿ ಆರು ಮಂದಿಯ ನಿವ್ವಳ ಆಸ್ತಿ ಮೌಲ್ಯವು ತೀವ್ರವಾಗಿ ಕುಸಿದಿದ್ದರೂ ಸಹ ಮಸ್ಕ್ ಅವರ ಸಂಪತ್ತು ವೃದ್ಧಿಯಾಗಿದೆ ಎಂದುಅ ಅಮೆರಿಕದ ಮಾಧ್ಯಮ ಸಂಸ್ಥೆ ‘ಫೋರ್ಬ್ಸ್‌’ ವರದಿ ಹೇಳಿದೆ.

- Advertisement -

ಮಾರ್ಚ್ 1ರಂದು ಫೋರ್ಬ್ಸ್‌ ಬಿಡುಗಡೆ ಮಾಡಿದ ”ರಿಯಲ್-ಟೈಮ್ ಬಿಲಿಯನೇರ್ಸ್ ಲಿಸ್ಟ್’ ಪ್ರಕಾರ, ಮಸ್ಕ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಗೂಗಲ್ ಸಹ-ಸ್ಥಾಪಕ ಲ್ಯಾರಿ ಪೇಜ್ ಅವರಿಗಿಂತ ಅರ್ಧ ಟ್ರಿಲಿಯನ್ ಡಾಲರ್‌ಗಿಂತಲೂ ಅಧಿಕ ಸಂಪತ್ತು ಹೊಂದಿದ್ದಾರೆ. ಮಸ್ಕ್ ಅವರ ಒಟ್ಟು ಸಂಪತ್ತು 800 ಬಿಲಿಯನ್ ಡಾಲರ್‌ಗಳ ಗಡಿಯನ್ನು ದಾಟಿದೆ. ಆದ್ದರಿಂದ, ಅವರು 1 ಟ್ರಿಲಿಯನ್ ಡಾಲರ್ ಆಸ್ತಿ ಹೊಂದಲಿರುವ ಮೊದಲ ವ್ಯಕ್ತಿಯಾಗಲಿದ್ದಾರೆ ಎಂದು ಅಂದಾಜಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಎರಡನೇ ಸ್ಥಾನದಲ್ಲಿರುವ ಲ್ಯಾರಿ ಪೇಜ್ ಅವರ ಅಂದಾಜು ಆಸ್ತಿ 250.5 ಬಿಲಿಯನ್ ಡಾಲರ್ ಆಗಿದೆ. ಅವರು 2025ರ ನವೆಂಬರ್‌ನಲ್ಲಿ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಒರಾಕಲ್ ಸಹ-ಸ್ಥಾಪಕ ಲ್ಯಾರಿ ಎಲಿಸನ್ ಅವರನ್ನು ಹಿಂದಿಕ್ಕಿದ್ದಾರೆ. ಎಲಿಸನ್ ಈಗ 6ನೇ ಸ್ಥಾನದಲ್ಲಿದ್ದಾರೆ.

ಕಳೆದ ತಿಂಗಳು 9ನೇ ಸ್ಥಾನದೊಂದಿಗೆ ಟಾಪ್ 10 ಪಟ್ಟಿಗೆ ಪ್ರವೇಶಿಸಿದ್ದ ಝಾರಾ (Zara) ಸಹ-ಸ್ಥಾಪಕ ಅಮಾನ್ಸಿಯೊ ಒರ್ಟೆಗಾ, ಈಗ 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಾಲ್ಮಾರ್ಟ್ ವಾರಸುದಾರ ರಾಬ್ ವಾಲ್ಟನ್ ಮತ್ತು ಕುಟುಂಬವು ಒರ್ಟೆಗಾ ಅವರನ್ನು ಹಿಂದಿಕ್ಕಿ 145.9 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ 9ನೇ ಸ್ಥಾನವನ್ನು ಪಡೆದುಕೊಂಡಿದೆ.

ಕ್ರ. ಸಂ.ಹೆಸರುಸಂಪತ್ತು (ಡಾಲರ್‌)ಉದ್ದಿಮೆವಯಸ್ಸುದೇಶ
1ಎಲೋನ್ ಮಸ್ಕ್$841.4Bಟೆಸ್ಲಾ, ಸ್ಪೇಸ್‌ಎಕ್ಸ್54ಅಮೆರಿಕ
2ಲ್ಯಾರಿ ಪೇಜ್$250.5Bಗೂಗಲ್52ಅಮೆರಿಕ
3ಸೆರ್ಗೆ ಬ್ರಿನ್$231.2Bಗೂಗಲ್52ಅಮೆರಿಕ
4ಜೆಫ್ ಬೆಜೋಸ್$229.7Bಅಮೆಜಾನ್62ಅಮೆರಿಕ
5ಮಾರ್ಕ್ ಜುಕರ್‌ಬರ್ಗ್$228.9Bಫೇಸ್‌ಬುಕ್ (ಮೆಟಾ)41ಅಮೆರಿಕ
6ಲ್ಯಾರಿ ಎಲಿಸನ್$197.1Bಒರಾಕಲ್81ಅಮೆರಿಕ
7ಜೆನ್ಸನ್ ಹುವಾಂಗ್$158.5Bಸೆಮಿಕಂಡಕ್ಟರ್‌63ಅಮೆರಿಕ
8ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ$157.1BLVMH77ಫ್ರಾನ್ಸ್
9ರಾಬ್ ವಾಲ್ಟನ್ ಮತ್ತು ಕುಟುಂಬ$145.9Bವಾಲ್ಮಾರ್ಟ್81ಅಮೆರಿಕ
10ವಾರೆನ್ ಬಫೆಟ್$144.1Bಬರ್ಕ್ಷೈರ್ ಹ್ಯಾಥ್‌ವೇ95ಅಮೆರಿಕ

1 ಬಿಲಿಯನ್ ಡಾಲರ್ = 92,120 ಕೋಟಿ ರೂ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿಬೆಟ್‌ನಲ್ಲಿ ಭೀಕರ ಭೂಕಂಪ: 16 ಸಾವು, ನೂರಾರು ಮನೆಗಳು ನೆಲಸಮ

ಟಿಬೆಟ್‌ನ ಉತ್ತರದ ಪರ್ವತ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಭೂಕಂಪ ಸಂಭವಿಸಿದೆ.‌...

ಟಿಬೆಟ್‌ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: ಜಲಪ್ರಳಯದ ಬೆನ್ನಲ್ಲೇ ಚೀನಾಗೆ ಮತ್ತೊಂದು ಆಘಾತ

ಚೀನಾದ ಟಿಬೆಟ್ ಭಾಗದಲ್ಲಿ ಗುರುವಾರ ರಾತ್ರಿ 7.0 ತೀವ್ರತೆಯ ಭಾರಿ ಭೂಕಂಪ...

ಗಾಜಾ ಯುದ್ಧದ ನೆರಳಲ್ಲಿ ನಿರ್ಣಾಯಕ ಸಮರ; ಹೇಗಿರಲಿದೆ ಗೊತ್ತೇ ಇಸ್ರೇಲ್ ಚುನಾವಣೆ?

ಇಸ್ರೇಲ್‌ನಲ್ಲಿ ಇದೇ ಅಕ್ಟೋಬರ್ 27ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ದೇಶದ 26ನೇ...