ಗದಗ ಸೀಮೆಯ ಕನ್ನಡ | ‘ಯಾಕ್‌ ಬಡಕೋತಿ ಪೇಡೆ-ಪೇಡೆ ಅಂತ… ಶುಗರ್‌ ಪ್ಯಾಕ್ಟರಿದಾಗ ಬಿಟ್‌ ಬರ್ತೇನಿ ಬಾ’

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)

“ಯವ್ವಾ… ಎರಡೂ ಭಾರಿ ಸಿಹಿ ಆದ್ವ ಪಾ. ಒಂದ ಕಡಮಿ ಸಿಹಿ ಇರೋದ ಆಗಿದ್ರ ಚಲೋ ಇತ್ತು. ನೀ ಚೆಂಜ್‌ ಮಾಡ್ಸು – ಅಣ್ಣಗ ಹೇಳು ಬಾ,” ಅಂದೆ. “ನಾ ಒಲ್ಲವಾ… ಇಲ್ಲಿ ಆಗಲೇ ಪಾಕ್‌ ಮಾಡಾಕ ತಯಾರ ಆಗ್ಯಾರ. ಅಷ್ಟಕ್ಕೋ ನಂದ ಮದವಿ; ನಾನು-ಸ್ವಾಮಿ ಅಂತೂ ಸ್ಟೇಜ್‌ ಮ್ಯಾಲ ಇರತೇವಿ. ಮದವಿಗ ಬಂದೋರ್‌ ಏನ್‌ ಲೇ ಬುಂದೆ ಜೊತಿ ಜಿಲೇಬಿ ಇಟ್ಟಿಯಲ್ಲಾ ಅಂತ ನನ್ನ ಅಂತೂ ಕೇಳಂಗಿಲ್ಲಾ! ನಾ ಸೇಫ್‌…” ಅಂದಾ.

ಯಪ್ಪಾ ಏನ್‌ ತಂಡಿ ಬಿಟ್ಟದ ರೀ… ‘ಬೆಳಕ ಯಾಕ ಹರಿತೇತಿ!’ ಅನಕಂತ ರಗ್ಗ ಹೊಚಕೊಂಡ ಹೊಳ್ಳಿ ಮಕ್ಕೊಬೇಕ ಅನಸ್ತೇತಿ ಜೀವಾ ಅನಕೊಳೋದ್ರಾಗ ಮನಿಯಲ್ಲಾ ಏನೋ ಭಾರಿ ಘಮಾ ಹಿಡದಿತ್ತು. ಅವಾಗ ನೆನಪ ಆತು; ಹೋ ಅಣ್ಣನ ಮದವಿ ಇನ್ನ ಒಂದ ವಾರ ಉಳಿತಪಾ, ಅದಕ ಏನೋ ಭಾರಿ ಜೋರ ಅಡಗಿ ನಡಸ್ಯಾರ… ಅಡಗಿ ಮನಿಗ ಹ್ವಾದೆ. ನೋಡಿದ್ರ ಅಲ್ಲೇನೂ ಇಲ್ಲಾ!

ಏನೂ ಇಲ್ಲ… ಅಲ್ಲ ಇಲ್ಲೇ ಮತ್ತ ಎಲ್ಲಿಂದ ಬರಾಕತ್ತೇತಿ ಈ ಘಮಾ ಅಂತ ಹೊರಗ ವ್ಹಾದ್ರ, ಸಿಸ್ತ ಒಂದ ಕುರ್ಚೆ ಹಕ್ಕೊಂಡ ಒಬ್ಬ ಮನಷ್ಯಾ ಕುಂತಿದ್ದ. ದೊಡ್ಡ ಒಲಿ ಹಚ್ಚಿ, ಅದರ ಮ್ಯಾಲೆ ಒಂದು ದೊಡ್ಡ ಬಾಳಗಿ ಇಟ್ಟು ಬುಂದೆ ಕಾಳ ಕರ್ಯಾಕತ್ತಿದ್ದ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಹೋ… ಏನ್‌ ಮಾಡಾಕತ್ತೀರ್ರೀ ಅಂಕಲ್‌?” ಅಂದ್ಯಾ.

“ಬಾವಾ ತಂಗಿ… ನಿಮ್ಮ ಅಣ‍್ಣಾರ ಮದವೀಗೆ ಬುಂದೆ ಮಾಡಬೇಕಂತ. ಅದಕ ಮುಂಜಲೇ ಈ ಬುಂದೆ ಕಾಳ ತಯಾರ ಮಾಡಾಕತ್ತೀನಿ ನೋಡವಾ,” ಅಂದ್ರು.

“ಹೌದ್ರೀ, ನನಗ ಗೊತ್ತ ಇಲ್ಲಾ ನೋಡು ಬುಂದೆ ಮಾಡಸಾಕತ್ತಾರಾ! ಯಪ್ಪಾ… ಇವರ ಇನ್ನಾ ಹಳೆ ಕಾಲದಾಗ ಅದಾರಪಾ,” ಅನಕಂತ ಮೆಟಗಟ್ಟಿ ಹತ್ತಾಕತ್ತಿದ್ದೆ. ಇನ್ನ ಒಂದ ವಾರದಾಗ ಮದವಿ ಇಟಕೊಂಡ ನಮ್ಮ ಅಣ್ಣ ಕರದಿಂದ ಬುಂದೆನಾ ಕೈಯಿಂದ ಜಿನಗ ಮಾಡಾಕತ್ತಿದ್ದ.

“ಶಿವು ಏನ್‌ ಮಾಡಾಕತ್ತಿ ಆ ಬುಂದೆಕಾಳಿಗೆ?” ಅಂತ ಕೇಳಿದ್ನಿ. ಅದಕ ಅವ್ಹಾ, “ಇದರಾಗ ಅಲ್ಲೊಂದು ಇಲ್ಲೊಂದ ಕಾಳ ದೊಡ್ಡವು ಬಿದ್ದಾವ ಬೇ… ಅವ್ವಕ್ಕಾ ಅವನ್ನ ಪುಡಿ ಮಾಡಾಕತ್ತೇನಿ. ನೀನು ಟ್ರೈ ಮಾಡಬಾ,” ಅಂತ ಕರದಾ.

“ಈ ಕಾಳ ನೋಡಿದ್ರ ನನಗೂ ಇದರಾಗ ಆಟಾ ಆಡಬೇಕ ಅನಸಾಕತ್ತೇತಿ. ಆದ್ರ, ಈ ಕಾಳ ಮುಟ್ಟಿದ್ರ ಕೈ ಎಣ್ಣಿ ಅಕ್ಕಾವಲ್ಲಾ ಅಂತ ವಿಚಾರ ಮಾಡಾಕತ್ತೇನಿ,” ಅಂತ ನಕ್ಕೆ. “ಹಂಗಾದ್ರ ನೀ ಮುಟ್ಟ ಬ್ಯಾಡ ಬಿಡು,” ಅಂದಾ.

“ಅಲ್ಲ ಶಿವು, ಬುಂದೆ ಯಾಕ ಮಾಡಸಾಕತ್ತೀರಿ ನೀವು? ಸ್ವಾಮಿ ಅಂದಾ – ‘ಯಕ್ಕಾ ನಮ್ಮ ಕೆಎಮ್‌ಎಫ್‌ದಾಗಿಂದ ಪೇಡೆ ತರಸುನು ಅನಕೊಂಡೇವಿ. ಅದರ ಜೊತಿಗೆ ಮತ್ತೊಂಡ ಯಾದರ ಸ್ವೀಟ್‌ ಇಡುನು’ ಅಂತ…” ಅಂದೆ.

“ಹೌದ… ಬಾವಾ-ನಾನು ಲಡಗಿ ಪಾಕ್‌ ಮಾಡಸೂನು, ಜೊತಿಗೆ ಒಂದಯಾವದರ ಬ್ಯಾರೆ ಸ್ವೀಟ್‌ ಇಡುನು; ಜಿಲೇಬಿಯರ, ಮೈಸೂರು ಪಾಕ್‌ ಅರೆ ಅಂದೇ. ಆದ್ರ ಎಲ್ಲಾ ಬಜೆಟ್‌ ಬಿಟ್‌ ಹೊರಗ ಹೊಂಟಿದ್ವು. ಮತ್‌ ದೊಡ್ಡ ಅಣ್ಣ ಅಂದಾ, ‘ಲೇ ಮದವಿಗ ಬಂದೋರು ಹೊಟ್ಟಿ ತುಂಬ ಉಂಡಹೋಗಬೇಕಲೇ. ಹಂಗ ಆಗಬೇಕಂದ್ರ ಒಂದು ಬುಂದೆ ಇರಬೇಕ, ಇಲ್ಲಾ ಅಂದ್ರ ಗೋದಿ ಹುಗ್ಗಿ ಇರಬೇಕು.’ ಗೋದಿ ಹುಗ್ಗಿ ಅವಾಗವಾಗ ಮಾಡೇ ಮಾಡೇತಿ. ಅವ್ವಕ್ಕನ ಮದವ್ಯಾಗ ಮಾಡಸಿತ್ತಲ್ಲ… ಅದಕ ಈ ಸಲ ಬುಂದೆ, ಅದರ ಜೊತಿ ಜಿಲೇಬಿ ಅಂತ ಅಂದಾನ ಅಣ್ಣ,” ಅಂದಾ.

“ಯವ್ವಾ… ಎರಡೂ ಭಾರಿ ಸಿಹಿ ಆದ್ವ ಪಾ. ಒಂದ ಕಡಮಿ ಸಿಹಿ ಇರೋದ ಆಗಿದ್ರ ಚಲೋ ಇತ್ತು. ನೀ ಚೆಂಜ್‌ ಮಾಡ್ಸು – ಅಣ್ಣಗ ಹೇಳು ಬಾ,” ಅಂದೆ. “ನಾ ಒಲ್ಲವಾ… ಇಲ್ಲಿ ಆಗಲೇ ಪಾಕ್‌ ಮಾಡಾಕ ತಯಾರ ಆಗ್ಯಾರ. ಅಷ್ಟಕ್ಕೋ ನಂದ ಮದವಿ; ನಾನು-ಸ್ವಾಮಿ ಅಂತೂ ಸ್ಟೇಜ್‌ ಮ್ಯಾಲ ಇರತೇವಿ. ಮದವಿಗ ಬಂದೋರ್‌ ಏನ್‌ ಲೇ ಬುಂದೆ ಜೊತಿ ಜಿಲೇಬಿ ಇಟ್ಟಿಯಲ್ಲಾ ಅಂತ ನನ್ನ ಅಂತೂ ಕೇಳಂಗಿಲ್ಲಾ! ನಾ ಸೇಫ್‌… ನೀವ ನೋಡು ಉಣ್ಣೋರು,” ಅಂದಾ.

ಪೇಡೆ ಗದಗ ಸೀಮೆಯ ಕನ್ನಡ ಅಶ್ವಿನಿ ಮ ಮೇಲಿನಮನಿ

“ಬಿಡಪಾ… ನಾನು ಒಲ್ಯಾ ಅಣ್ಣಗ ಹೇಳಾಕ. ಅವರು ಏನ ಅನಕಂಡ ತಯಾರಿ ಮಾಡಿರ್ತಾರ ನಮಗೇನ್‌ ಗೊತ್ತ ಅಕ್ಕೇತಿ ಸಣ್ಣೋರಿಗೆ? ಈಗ ಈ ಬುಂದೆ ಕಾಳನ್ಯಾಗ ಲಡಗಿ ಪಾಕ್‌ ಮಾಡಾಕ ಬರಂಗಿಲ್ಲ ಏನು?” ಅಂದೆ.

“ಹ್ಞೂಂ, ಬರಂಗಿಲ್ಲಾ… ಲಡಗಿ ಪಾಕ್‌ ಮಾಡಿದ್ರ ಬೆಲ್ಲಾ ಬೇಕ್‌. ನಾವ್‌ ಆಗ್ಲೆ ಕ್ವಿಂಟಲ್‌ ಸಕ್ಕರಿ ತಂದಬಿಟ್ಟೇವಿ. ಬುಂದೆನಾ ಮೆತ್ತಗ ಮಾಡಾಕ ಹೇಳೇತಿ ಚಲೋ ಇರತೇತ ತಗೋ, ಭಾಳ ಸಿಹಿ ಆಗಂಗಿಲ್ಲಾ. ನೀ ಏನ್ವ ಬರೀ ಅದನ್ನ ಉಣ್ಣಕಿ ಅದಿಯನು?” ಅಂದ್ ನಕ್ಕಾ.

ನಮ್ಮ ಮಾತ್ ಕೇಳಕಂತ ಇನ್ನೂ ಬುಂದಿ ಕಾಳ ಕರ್ಯಾಕತ್ತಿದ್ದ ಅಂಕಲ್‌, “ಯಾಕವಾ ನಿನಗ ಬುಂದೆ ಬ್ಯಾಡ ಆಗೇತನು? ಒಂದ ಕಾಲದಾಗ ಮದವ್ಯಾಗ ಬುಂದೆ ಮಾಡಸ್ಯಾರ ಅಂದ್ರ ಅವರು ಭಾರಿ ಶ್ರೀಮಂತ್ರು ಅನಕೊಂತಿದ್ರ ಮಂದಿ,” ಅಂದ್ರು.

“ಹೌದಾ… ಮತ್‌ ಉಳದೋರ್‌ ಏನ್‌ ಮಾಡಸ್ತಿದ್ರು?” ಅಂದೆ ನಾ.

“ಉಳದ ಮಂದಿ ಮದವ್ಯಾಗ ಬರೀ ಶಿರಾ ಮಾಡಸೋರು. ಆಗಿನ ಮಂದಿ ಈಗಿನೋರ್‌ ಗತೆ ಎರಡ-ಮೂರ ಚಮಚೆ ಹಾಕಸ್ಕೊಳೋ ಮಂದಿ ಇದ್ದಿದ್ದಿಲ್ಲಾ; ಒಮ್ಮೆ ಹಕ್ಕೊಂಡ್ರ ಗಂಗಾಳ ಗಂಗಾಳ ಹುಗ್ಗಿ ಉಣ್ಣೋರು. ಬದವ್ರ ಮನಿ ಮದವ್ಯಾಗ ಇವರು ಗಂಗಾಳ-ಗಂಗಾಳ ಬುಂದೆ ತಿಂದ್ರ ಪಾಪ್‌ ಅವರ ಏನ್‌ ಮಾಡಬೇಕಾಗಿತ್ತ್! ಅದಕ ಶಿರಾ ಮಾಡಸೋರು. ಎಷ್ಟರ ಮಂದಿ ಬರ್ಲಿ ಎಷ್ಟರ ಶೀರಾ ತಿನ್ನಲಿ…” ಅಂತ ಅಂದ್ರು.

“ಮತ್‌ ಗೋದಿ ಹುಗ್ಗಿ?” ಅಂದೆ ನಾ.

“ಅವಾಗೆಲ್ಲಾ ಗೋದಿ ನಮ್ಯಾಗ ಬೆಳಿತಿದ್ರು. ಭಾಳ ಗೋದಿ ಬೆಳದೋರು ಮಾಡಸ್ತಿದ್ರು. ಈಗಿನ ಮಂದಿ ಮಾಡಂಗಿಲ್ಲಾ, ಉಣ್ಣಂಗಿಲ್ಲಾ. ಆಗಿನ ಮಂದಿ ಮಾಡಾಕೂ ಹಿರ್ದ್ ಇದ್ರು, ತಿನ್ನಾಕೂ ಹಂಗ ಹಿರ್ದ್ ಇದ್ರ. ಇತ್ತಿಚಿಗೆ ಸಿಹಿ ತಿನ್ನು ಮಂದಿ ಕಡಮಿ ಆಗಿ ಈ ಪೇಡೆ-ಗೀಡೆ ಬಂದಾವು. ಅವೇನ ಹೊಟ್ಟಿ ತುಂಬತಾವು? ಮದವ್ಯಾಗ ಊಟಾ ಹಾಕಸೋದ ಯಾಕವಾ ಅಂದ್ರ ಬಂದ ಮಂದಿ ಚಲೋತಗಿ ಉಂಡ, ಗಂಡು-ಹೆಣ್ಣಿಗೆ ಆಶಿರ್ವಾದ ಮಾಡ್ಲಿ,” ಅಂತ ಅಂದ್ರು.

“ಹೌದ ಬಿಡ್ರಿ… ಅಂದ್ರು, ಪೇಡೆ ಇರಬೇಕಿತ್‌; ಎರಡ ಮದವಿ ಒಂದ ನಾಕ್‌ ತರದ್ವ ಬ್ಯಾಡ ಏನ್‌ ಸ್ವೀಟ್‌? ಶಿವು, ಒಂದ ಪೇಡೆ ಮಾಡಸ…” ಅಂತ ಹೇಳುದ್ರಾಗ, ನನ್ನ ಮಾತ್‌ ಕೇಳಸಕ್ಕೊಳ್ಳಾಕತ್ತಿದ್ ನನ್ನ ತಮ್ಮ, “ಯವ್ವಾ… ಇಕಿ ಏನ್‌ ಸ್ವಿಟನ್ಯಾಗಿನ ಇರಬಿ ಆಗ್ಯಾಳೋ… ಮೂರ ಹೊತ್ತು ಸ್ವೀಟ್‌ ಅಂತಾಳ. ಫೋನ್ಯಾಗೂ ಜಾಮೂನ್‌, ರಸಗುಲ್ಲಾ, ಅಂತಾ ಪೇಡೆ ಇಂತಾ ಪೇಡೆ ಬರೀ ಇವನ್ನ ನೋಡತಾಳ. ‌ಹೋಗ ನಿನ್ನ ಸತ್ತಿ ಶುಗರ್‌ ಬಂದ್… ಯಾಕ್‌ ಬಡಕೋತಿ ಪೇಡೆ-ಪೇಡೆ ಅಂತ. ಶುಗರ್‌ ಪ್ಯಾಕ್ಟರಿದಾಗ ಬಿಟ್‌ ಬರ್ತೇನಿ ಬಾ ನಿನ್ನ… ಎಷ್ಟರ್‌ ಸಕ್ಕರಿ ತಿಂತಿ ನೋಡುಣು! ಕೇಜಿ ಪೇಡೆ ಒಬ್ಬಕಿನ ತಿಂತಿ ಮದವ್ಯಾಗ ಪೇಡೆ ಮಾಡಸೀದ್ರ ಬಂದ ಬೀಗರಿಗೆ ನೀಡೊಕಿಂತ್‌ ಮದ್ಲ ನೀ ಎಲ್ಲೆ ಎಲ್ಲಾ ಮುಕ್ಕತಿ ಅಂದ ಪೇಡೆ ಬಿಟ್ಟಾರ,” ಅಂದ. ಇದನ್‌ ಕೇಳಿ ಎಲ್ಲಾರೂ ನನ್ನ ನೋಡಿ ನಕ್ರು.

ನಾನು, “ಆತ್‌ ಬಿಡಪಾ… ನಾ ಏನ್‌ ಕೇಳಬಾರ್ದ್‌ ಕೇಳಿನಿ? ಮದವಿಗೆ ಅಕ್ಕ-ತಂಗ್ಯಾರನ ಕರಸಿ, ಕೇಳಿದ ಸ್ವೀಟ್‌ ಮಾಡಂಗಿಲ್ಲಾ ಅಂತೀರಿ! ಬಿಡ… ನೀವ್‌ ಏನ್‌ ಮಾಡಸ್ತೀರಿ ಅದನ್ನ ತಿಂತೇನಿ,” ಅಂದೆ ಮುನಸ್ಕೊಂಡು.

ನನ್ನ ಸಣ್ಣ ತಮ್ಮ ನನ್ನ ಸಮಾಧಾನಾ ಮಾಡಾಕ ಬಂದ, “ಬೇ ಯಕ್ಕ… ಎಷ್ಟ ಬೇಕ್‌ ನಿನಗ ಪೇಡೆ ಹೇಳ…? ನಾನ್‌ ನಮ್ಮ ಕೆಎಂಎಫ್‌ಯಿಂದ ತರಸಿ ಕೊಡತೇನಿ ನಿನಗ. ಆದ್ರ ರೊಕ್ಕಾ ನೀನ ಕೊಡಬೇಕ್‌ ನೋಡು,” ಅಂತ ಮತ್‌ ನನಗ ನಕಲಿ ಮಾಡಿದ.

“ಹೋಗರಿ ಪಾ ಯಪ್ಪಾ… ನನಗ ನಿಮ್ಮ ಪೇಡೆನೂ ಬ್ಯಾಡಾ, ಬುಂದೆ ನೂ ಬ್ಯಾಡ. ನಾ ಏನೂ ತಿನ್ನಂಗೇ ಇಲ್ಲ ಬಿಡ್ರೀ,” ಅಂತ ಮುನಸ್ಕೊಂಡ ಹೊಂಟೆ. ಆದ್ರೂ ಅವರ ನನ್ನ ಬಿಡ್ಲಿಲ್ಲ. “ಹಂಗಾ ಅಂತೀ ತಗೋ… ಚೂರು ತಿನ್ನುವಂತಿ ಬುಂದೆ,” ಅಂತ ಇನ್ನೂ ಜೋರ್‌ ಕಾಡಸಾಕತ್ರು. ನಾ ಅಲ್ಲಿಂದ ಜಾಗ ಕಾಲಿ ಮಾಡಿದೆ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಅಶ್ವಿನಿ ಮ ಮೇಲಿನಮನಿ
ಅಶ್ವಿನಿ ಮ ಮೇಲಿನಮನಿ
ಪತ್ರಕರ್ತೆ. ಕರ್ನಾಟಕದ ಯಾವ ಸೀಮೆಯಲ್ಲಿದ್ದರೂ ಸ್ವಾಭಾವಿಕವಾಗಿ ತನ್ನ ಸೀಮೆಯ ಕನ್ನಡವನ್ನಷ್ಟೇ ಮಾತಾಡುವ ಅಪ್ಪಟ ಕನ್ನಡತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ಈ ಪದ್ದತಿಗಳು ಹೆಂಗಸರಿಗಿ ಜೀವಾ ತಿಂತಾವ ನೋಡ್ರೀ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...