ಕುಮಟಾ ಸೀಮೆಯ ಕನ್ನಡ | ‘ನನ್ನ ನಸೀಬ ಚಲೋ ಇತ್ತು; ಬಸ್‌ಲ್ಲಿ ಕಾಲೇಜ್ ಅಟೆಂಡರ್ ಮಂಜು ಕಾಣಿಸ್ದಾ’

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)  

ನಂಗ ಒಂದು ಸಲ ಎದಿ ಧಸಕ್ ಅಂತು. ನಾನು ಯಲ್ಲಾಪುರ ಹೋಗೊವ್ಳು ನಂಗೆ ಎಂಬತ್ತೈದು ರೂಪಾಯಿ ಟಿಕೇಟು, ಅದ್ ಹೋಗುದು ಹುಬ್ಬಳ್ಳಿಗೆ ಅದ್ಕೆ ನೂರಾ ಐವತ್ತು… ಎಷ್ಟು ಸಲ ಲೆಕ್ಕ ಮಾಡಿದ್ರೂ ನನ್ ಬ್ಯಾಗಲ್ಲಿ ಹೆಚ್ಚೆಚ್ಚೂ ಅಂದ್ರೆ ನೂರಾ ಎಂಬತ್ ರೂಪಾಯಿ ಇರುದು!

“ಸಂಧ್ಯಕ್ಕಾ ನಿಂದ ಯಲ್ಲಾಪುರಲಾ?” ನಮ್ಮ ಸಂಬಂಧಿಕರ ಹುಡ್ಗಿ ಒಬ್ಳು ರಷ್ ಬಸ್ ನಲ್ಲಿ ಕರೀತು ನಂಗೆ. ಕಂಡಕ್ಟರ್ ಅದ್ರ ಹತ್ರನೇ ಇದ್ದ. ನಾನು, “ಕಲ್ಪನಾ, ಬ್ಯಾಡ್ವೆ… ನಾನೇ ತೆಗಿತಿ,” ಅಂದೆ. ಅಷ್ಟ ಹೇಳಿದ್ದೇ ತಡ, ಅದು ತನ್ನ ಟಿಕೇಟನ್ನೂ ತೆಗೀದೇಯಾ ಅಷ್ಟೂ ದುಡ್ಡೂ ಬ್ಯಾಗ್‌ನಲ್ಲಿ ಹಾಕಂತು. “ಅವ್ರ ಕೊಡ್ತಾರೆ…” ಹೇಳಿ ಕಂಡಕ್ಟರ್‌ಗೆ ನನ್ನ ಕಡೆ ಬೆಳ್ ತೋರಸ್ತು.

ನಂಗ ಒಂದು ಸಲ ಎದಿ ಧಸಕ್ ಅಂತು. ನಾನು ಯಲ್ಲಾಪುರ ಹೋಗೊವ್ಳು ನಂಗೆ ಎಂಬತ್ತೈದು ರೂಪಾಯಿ ಟಿಕೇಟು, ಅದ್ ಹೋಗುದು ಹುಬ್ಬಳ್ಳಿಗೆ ಅದ್ಕೆ ನೂರಾ ಐವತ್ತು… ಎಷ್ಟು ಸಲ ಲೆಕ್ಕ ಮಾಡಿದ್ರೂ ನನ್ ಬ್ಯಾಗಲ್ಲಿ ಹೆಚ್ಚೆಚ್ಚೂ ಅಂದ್ರೆ ನೂರಾ ಎಂಬತ್ ರೂಪಾಯಿ ಇರುದು! ಈಗ ಅದ್ರದ್ದೂ ಟಿಕೇಟ್ ತೆಗುದಾದ್ರೆ ಹೆಂಗ ಮಾಡುದ ನಾ? ಆಚೀಚಿ ಇಡೀ ಬಸ್ಸೂ ಪಿಳಿಪಿಳಿ ನೋಡ್ತೆ ನಿತ್ಕಂಡೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪುಣ್ಯ… ನನ್ನ ನಸೀಬ ಚಲೋ ಇತ್ತು. ಕಂಡಕ್ಟರ್ ನನ್ನ ಹತ್ರ ಬರುತಂಕ ನಮ್ಮ ಕಾಲೇಜ್ ಅಟೆಂಡರ್ ಮಂಜು ಅಲ್ಲೇ ಕೂತಂವ ಕಾಣಿಸ್ದಾ ನಂಗೆ. ಅವ್ನ ಹತ್ರ ಹೋಗಿ, “ಯೇ ಮಂಜು ಎರಡನೂರುಪಾಯ ಇದ್ರೆ ಕೊಡಾ… ಕಡಿಗ ಕಾಲೇಜಿಗ ಬಂದ್ಕುಡ್ಲೆ ಕೊಡ್ತಿ,” ಅಂದೆ. “ತಕಣ್ರಿ ಕೊಡ್ಲಕಿ,” ಅಂದಿ ಅಂವಾ ತಂಕೈಲಿದ್ದ ಎರಡನೂರುಪಾಯ ತೆಕ್ಕೊಟ್ಟ. ಬಸ್‌ನಲ್ಲಿ ಅಂತೂ ನನ್ ಮರ್ಯಾದಿ ಉಳಿತು.

ಬಸ್‌ನಲ್ಲಿ ಸಂಬಂಧಿಕ್ರದ್ದು, ಫ್ರೆಂಡ್ಸಿಂದು, ಗುತ್ತಿದ್ದವ್ರದ್ದು ಟಿಕೇಟ್ ತೆಗ್ಯುದು ಇದ್ಯಲಾ ಅದು ಒಂದೊಂದು ಸಲ  ಖುಷಿ ಹೌದು, ಅದ್ರೆ ನಮ್ಮ ಪರ್ಸಿನ ಲೆಕ್ಕ ಮೀರದ್ರ ಮಾತ್ರ ಬಾಳ ಡೇಂಜರೇಯಾ.

ನಮ್ ಅತ್ತಿ ಮಗ ಒಬ್ಬಂವ ಇದ್ದಾ. ಒಂದೆರಡ ವರ್ಷ ಅಂವ ಬೈಕ್ ಬಿಟ್ಕಂಡಿ ಬಸ್ಸಲ್ಲೇ ಡ್ಯೂಟಿಗೆಗೆ ಓಡಾಡುದಾಯ್ತು. ಯಾರ್ಯಾರ ಗುರ್ತದವರು, ಪರಿಚಯದವ್ರು ಇದ್ರುವಾ ಎಲ್ರನ್ನೂ ಹುಡ್ಕಿ-ಹುಡ್ಕಿ ಟಿಕೇಟ್ ತೆಗಿಯುದ ಅವ್ನ ಅಭ್ಯಾಸ. ಊರಿನ ಬಸ್ ಅಂದ್ಮೇಲೆ ಕೇಳ್ಬೇಕಾ? ದಿನಾ ಅರ್ಧ ಬಸ್ ಅವಂದೇಯ! ಪಾಪ… ಪಗಾರರೂ ಎಂತಕ ಸಾಕಾಗುದೆ ಅವಂಗೇ ಅಂದಿ ಎಲ್ಲರೂ ಮಾತಾಡ್ತಿದ್ರು. ಹಿಂಗೂ ಇರ್ತಾರೆ ಬಿಡಿ ಒಬ್ಬೊಬ್ರು.

ಮತ್ತೊಂದು ಮಜಾ ಕೇಳಿ… ಒಂದಿವ್ಸ ನಾ ಕುಮಟಿಗೆ ಹೋಗ್ಬೇಕಾಗಿತ್ತು. ನನ್ ಮಗನ ನೆಕ್ಕಂಡಿ ಬಸ್ಟಾಪ್‌ನಲ್ಲಿ ನಿತ್ಕಂಡ ಇದ್ದೆ. ಮತ್ಯಾರೋ ಇಬ್ರ ಹೆಂಗಸ್ರು ಅಲ್ಲೇ ನಿಂತವ್ರು ನಂಗೆ ಮಾತಾಡಸ್ತಿದ್ರು. ಇನ್ನೊಂದು ಸ್ವಲ್ಪ ಹೊತ್ತಿಗೆ ನಮ್ಮ ಸಂಬಂದಿಕರವ್ಳೊಬ್ಳು ಅಲ್ಲಿಗ ಬಂದ ನಿಂತ್ಕಂತು. ಅಟ್ಟೊತ್ತಿಗೆ ಬಸ್ ಬರುಕೂ ಸರೀಯಾಯ್ತು. ನಾವ ಎಲ್ರೂ ಸೇರಿ ಬಸ್ ಹತ್ಕಂಡ್ರು. ನಮ್ಮ ಸಂಬಂಧಿಕರವ್ಳು ಅವ್ರಿಬ್ರು ನನ್ನ ಸಂತಿಗೆ ಬಂದವ್ರು ಹೇಳಿ ತಿಳ್ಕತೇನ ಪಾಪ… ನಮ್ಮ ಸಂತಿಗೆ ಅವ್ರಿಬ್ರದ್ದೂ ಟಿಕೇಟ್ ತೆಗಿತು! ಇದೆಂತಕ ಹೇಳಿ ನಾ ಕಣ್ ಕಣ್ಬಿಟ್ಕಂಡಿ ಅದ್ರನ್ನೇ ನೋಡ್ತಿದ್ದೆ. ಕಾಗಲಿ ಬಂದ್ಕುಡ್ಲೆ ನಂಕೈಲಿ, “ಇವರ್ಯಾರು ಸಂಧ್ಯಾ… ನಿಮ್ಮ ಅತ್ತಿಗಿ?” ಅಂದ ಕೇಳ್ತು. ನಾನು, “ನಂಗುತ್ತೆಲ್ವೇ ಮಾರೆತಿ… ಯಾರೇನ ಅವ್ರು..‌. ಅಲ್ಲಿ ನಿಂತಿದ್ರು ಮಾತಾಡಸ್ದೆ,” ಅಂದೆ. ಪಾಪ… ಅದ್ರ ಮುಖ ನೋಡ್ಬೆಕಾಗಿತ್ತು ಆವಾಗೆ.

ಒಂದೊಂದು ಸಲ ರಾಶಿ ಜನ ಬಸ್‌ನಲ್ಲಿ ಸಿಕ್ಕದ್ರೆ ಯಾರ ಟಿಕೇಟ್ ತೆಗುದು ಹೇಳೇ ಟೆನ್ಷನ್ನು. ಕೆಲವೊಂದ ಸಲ ಬಸ್‌ಲ್ಲಿ ಯಾರಾದ್ರೂ ಗುರ್ತದವರು ಇದ್ರೆ ಅವ್ರು ಟಿಕೇಟ್ ತೆಗದು ಮುಗಿಯೂ ತನ್ಕನೂವಾ ನಾವು ನೋಡ್ಲಿಲ್ಲ ಹೇಳಿ ಕೂತ್ಕಂಬುದೇಯ.

ನಾವ್ ಹೈಸ್ಕೂಲಿಗೆಲ್ಲ ಹೋಗ್ವಾಗ ನಮ್ಮ ಅಣ್ಣ-ತಮ್ಮ ಯಾರಾದ್ರೂ ಒಬ್ರು ಬಸ್ಸಲ್ಲಿ ಒಟ್ಟಿಗೆ ಹೋಗುದಾದ್ರೆ, ‘ನಿನ್ನ ಟಿಕೇಟ್ ನೀ ತೆಕ್ಕಾ- ನನ್ ಟಿಕೇಟ್ ನಾನೇ ತೆಕ್ಕಂತಿ’ ಅಂದಿ ಮನೀಲೇ ಒಪ್ಪಂದ ಮಾಡ್ಕಂಡಿ ಹೋಗುದಾಗಿತ್ತು. ಬಸ್‌ನಲ್ಲೂ ಒಂದೇ ಕಡೆ ಕೂತ್ಕಳು ಯಾಪಾರಿಲ್ಲ..

ನಮ್ಮ ಕುಟುಂಬದಲ್ಲಿ ದೊಡ್ಡೊವ್ರು ಕೆಲವ್ರು  ಇದಾರೆ ಅಣ್ಣಂದಿರು. ಅವ್ರು ಬಸ್‌ಲ್ಲಿ ಹತ್ತಿದ್ರೆ ನಾವ ಟಿಕೇಟ್ ತೆಗಿಯುದಿಲ್ಲ. ಅದೆಂತಕಂದ್ರೆ ಅದು ಅವ್ರಿಗೆ ಕೊಡು ಗೌರವ.

ನಾವ್ ಸಣ್ಣೋರಿದ್ದಾಗ ಹತ್ವರ್ಷ ಆದ್ರೂ, ದೊಡ್ಡವರು “ಬಾಲ್ವಾಡಿ…” ಹೇಳಿ ಟಿಕೇಟ್ ತೆಗಿದೇ ಬಸ್ಸಲ್ಲಿ ಕರ್ಕಂಡೋತಿದ್ರು. ಟಿಕೇಟ್ ತಪ್ಸುಕೆ ದೊಡ್ಡ ಮಕ್ಕಳನ್ನ ಎತ್ಕಂಡಿ ಸಣ್ಮಕ್ಳನ್ನು ನಡೆಸಿಕೊಂಡು ಹೋಗುದೂ ಇರ್ತಿತ್ತು. ಅಷ್ಟು ದುಡ್ಡಿನ ಬರಗಾಲ ಆವಾಗ. ಈಗ ನನ್ ಮಗ ಕಂಡಕ್ಟರ್ ಹತ್ರ ಒನ್ನತೆ ಹೇಳಿ, ಐದ ವರ್ಷಕೆ ಟಿಕೇಟ್ ತೆಗಸ್ಕಂಡನೆ.

ಈಗೆಲ್ಲ ಬಿಡಿ, ನಮ್ ಸಂತಿಗೆ ಹತ್ ಮಂದಿ ಹೆಣ್ಮಕ್ಳ ಬಸ್ ಹತ್ತಿದ್ರೂ ಏನ್ ಟೆನ್ಷನ್ನು ಆಗುದೆಲಾ. ಎಲ್ರೂ ಆಧಾರ್ ಕಾರ್ಡ್ ತಕಂಡಿ ಆರಾಮ್ ಧೈರ್ಯವಾಗಿ ಕೂತ್ಕಂತ್ರು; ನಾವೂ ಧೈರ್ಯವಾಗಿ ಮಾತಾಡ್ಸುಕಡ್ಡಿಲ್ಲ… ಏನಂತ್ರೀ?

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಸಂಧ್ಯಾ ನಾಯ್ಕ ಅಘನಾಶಿನಿ
ಸಂಧ್ಯಾ ನಾಯ್ಕ ಅಘನಾಶಿನಿ
ಜೀವನದಿ ಅಘನಾಶಿನಿಯ ತಟದವರು. ಅದೇ ನದಿಯ ಹೆಸರಿನ ಊರಿನವರು ಕೂಡ. ಚಿಕ್ಕ ಮಕ್ಕಳಿಗೆ ಪಾಠ ಹೇಳುವ ಮೇಷ್ಟ್ರು. ಹೊಳೆ, ಮೀನು, ನದಿ, ಶಾಲೆ ಜೊತೆಗೇ ತಮ್ಮ ಪರಿಸರದ ಜನಜೀವನದ ಬಗ್ಗೆಯೂ ವಿಪರೀತ ಅಕ್ಕರೆ.

4 COMMENTS

  1. ,,ನಮಗೇ ಆದ ಅನುಭವ ಮರುಕಳಿಸಿತು ಮೇಡಂ ತಮ್ಮ ಲೇಖನ ಓದಿದ ಮೇಲೆ ತುಂಬಾ ಚೆನ್ನಾಗಿ ಪದಗಳನ್ನು ಹೆಣೆದುಕೊಂಡು ಹೋಗಿದ್ದೀರಿ ತುಂಬಾ ಹಿಡಿಸಿತು…….. ಮತ್ತೆ ಎಲ್ಲೂ ನೀರಸವಾಗಿ ಮೂಡಿ ಬಂದಿಲ್ಲ…. ಏನೋ ಇದೆ ಮಂದೆ ಓದ ಬೇಕು ಅನ್ನುವ ರೀತಿಯಲ್ಲಿ ತಾವು ಬರೆದಿದ್ದೀರಿ….. ಓದುಗರ ಹಿಡಿದು ಓಡಿಸುವ ಶಕ್ತಿ ಸಾಮರ್ಥ್ಯ ತಮ್ಮ ಬರವಣಿಗೆಯಲ್ಲಿ ಕಂಡಿತು…..
    ಒಂದಿಷ್ಟು ಕಾಲ ಕಾರಾವಳಿಯಲ್ಲಿ ಓದಿದ್ದಕ್ಕೆ ಏನೋ ಗೊತ್ತಿಲ್ಲಾ ಅಘನಾಶಿನಿ ಅಂದಮೇಲೆ ಒಂದಿಷ್ಟೂ ಆಸಕ್ತಿ ಯಿಂದ ಓದಲಿಕ್ಕೆ ಹಚ್ಚಿತು.

    • ಒಂದು ಭಾಷೆಯ ಅಭಿಮಾನಿಗಳೇ ಆ ಭಾಷೆಗೆ ನಿಜವಾದ ಸಂಪತ್ತು.. ಥ್ಯಾಂಕ್ಯೂ

  2. ಸೂಪರ್ ಸಂದ್ಯ ಮೇಡಂ ಚೇನಾಗಿ ಬರಿತಿರ.
    ನಮ್ಮ ಕುಮಟಾ ದವ್ರು ಅಂದ್ಮೇಲೆ ಕುಶಿ ಆಗ್ತದೆ

  3. ಮೆಸೇಜ್ ಚೆನ್ನಾಗಿತ್ತು
    ನಮ್ ಕಡೆ ಜನ ,ಭಾಷೆ ಅಂದ್ರೆ ಕೇಳೋಕ್ಕೆ , ಮಾತಾಡೋಕೆ 1 ರೀತಿ ಚಂದ
    ಹೀಗೆ ನಮ್ ಊರಿನ ಕಡೆ ಕವನ ಬರಿತ್ತ ಇರಿ ಅಕ್ಕ
    ನಮ್ಗೂ ಓದ್ಬೇಕು ಅನ್ಸುತ್ತೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ಈ ಪದ್ದತಿಗಳು ಹೆಂಗಸರಿಗಿ ಜೀವಾ ತಿಂತಾವ ನೋಡ್ರೀ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...