ಔರಾದ್ ಸೀಮೆಯ ಕನ್ನಡ | ‘ಮಳಿ ಹೆಚ್ಚ್ ಬಿದ್ದುರ್ ಬಿ ಹೈರಾಣ್, ಕಮ್ಮಿ ಆದುರ್ ಬೀ ಕಠಿಣೇ…’

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

"ಬಿತ್ತಾ ಟೈಮಿಗ್ ಮಳಿ ಬರಲ್ದ್ ಸಲೇಕ್ ಹಿಂಚುಟ್ ಆಯ್ತ್. ಅದುರ್ ಬಾದ್ ಜರಾ ಮೊಳಕಿ ಮ್ಯಾಲ್ ಬರ್ತಿಕಿ ಎಂಟ್ ದಿನಾ ಮಳಿ ಹತ್ತಿ ಅರ್ಧ್ ಬೆಳಿ ನೀರಾಗ್ ಹೋದುವ್. ಹಿನ್ ಉಳ್ದಿಂದ್ ಬೆಳಿಗ್ ಈಗ ಮಳಿ ಇಲ್ದೆ ಒಣಗಲತಾವ್... ಏನ್ ಆದುರ್ ಬಿ ಒಕ್ಕಲಿಗ್ಯಾಂದೇ ಮಣ್ಪಾಲ್ ಅದಾ ನೋಡ್ರೀ..."

“ಏನ್ ಈರಪ್ಪಾ… ಎಲ್ಲಿಗಿ ನಡ್ದೀ? ಮತ್ತೇನ್ ನಡ್ದುದ್ ಧಂದ್ಯಾ? ಮಳೀ-ಬೆಳೀ ಎಲ್ಲಾ ಹ್ಯಾಂಗವಾ? ಈ ವರ್ಷ್ ಏನೇನ್ ಹಾಕಿದಿ ಹೊಲ್ದಾಗ್?” ಅಂತ ಚೌಕ್ಡಿ ಕಟ್ಟಿ ಮ್ಯಾಲ್ ಕುಂತಿಂದ್ ಮೊಗಲಪ್ಪ ನಕ್ಕೋತಾ ಕೇಳ್ದಾ.

“ನಮಸ್ಕಾರ್ ಧೋರಿ… ಅಯೀ… ಆ ಹೊಲ್ದ್ ಕತೀ ಏನ್ ಕೇಳ್ತೀರೀ! ಧೋರಿ, ಆ ಮಡ್ಡಿಗ್ ಎಡ್ಡ ಎಕ್ಕರ್ ಸೋಯಾ ಅದಾ. ಸಿವಾರದಾಗ್ ಒಂದೆಕ್ಕರದಾಗೇ ಬ್ಯಾಳಿಗಂತ ಥೊಡೆ ಹೆಸ್ರು, ಉದ್ದು ಹಾಕಿದಾ. ಇನ್ ಸೀಮಿಗ್ ಇದ್ದಿಂದ್ ನಾಕ್ ಎಕ್ಕರ್ ಹೊಲಾ ಅಣ್ತುಮ್ಮರ್ ಝಗ್ಡಾ ಇದ್ದಿಂದ್ ಸಲ್ಯಾಕ್ ಬಿತ್ಗೊಟ್ಟಿಲ್ಲ. ಅದರಸಲೇಕ್ ಇಬ್ಬರ್ ನಡಬರ್ಕ್ ಅರ್ಧ್ ಅಸಾಮಿ ಹೊಡ್ದಿಲ್ಲ ಏನಿಲ್ಲ… ಪಡೀನೇ ಅದಾ. ಅಲ್ಲೇ ಉಳ್ದಿಂದ್ ಒಂದೇಕ್ಕರ್ ಸೋಯಾ ಅದಾ ನಡಬರ್ಕ್ ತೊಗ್ರಿ ಅಕ್ಡಿ ಅವಾ…” ಅಂತ ಈರಪ್ಪ ಹೇಳ್ದಾ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಈ ಮೊಗಲಪ್ಪ್ ಧೋರಿಗ್ ಧಂದ್ಯಾ ಯಾನ್ ಇಲ್ಲಾ ನೋಡ್, ‘ಉಪ್ಪು ತರಲ್ಲಾ, ಸಪ್ಪಂದ್ ಉಂಬಲ್ಲಾ’ ಅಂಬ್ಹಾಂಗ್ ತನ್ ಮನಿಕಿಂತಾ ಊರ್ಮಂದಿ ಕುದಿನೇ ಭಾಳ್ ಮಾಡ್ತಾರ್. ಅದ್ಕೆ ಮನೀ, ಸಂಸಾರ ಎತ್ಯಾಕ್ ಹೋದುರ್ ಬಿ ಫಿಕರ್ ಇಲ್ಲ.  ಖರೇ ಮಂದಿ ಕುದಿನೇ ಭಾಳ್ ಮಾಡ್ತಾರ್. ಹಿನಾ ತನ್ ಮಕ್ಕುಳ್ ನಿಟ್ಟುಕ್ ಇದ್ದುರ್ ಏಟ್ ಹೇಳ್ತಿದ್ದುರೋ… ಊರ್ಮಂದಿ  ಮಕ್ಳಿಗ್ ಎಲ್ಲಾ ಏನಾರಾ ಒಂದ್ ವಂಕ್ ಹಚ್ಚಿ ಹೆಸುರ್ ಇಡ್ತಾರ್…” “ಏನ್ ಮಾಡ್ತಾರ್ ತಕೋರಿ… ಹಿರ್ಗೋಳ್ ಬಕ್ಕೊಳ್ ಘಳ್ಳಿ ಇಟ್ಟಾರಾ… ನಡೀತುದ್. ನಮ್ಹಾಂಗ್ ಬೇಗನಾ ಬಿಸ್ಲಾಗ್ ಹೋಗಿ ಧಂದ್ಯಾ ಮಾಡ್ದುರ್ ತಿಳಿತಿತ್, ಚಾವ್ಡಿ ಕಟ್ಟಿಮ್ಯಾಲ್ ಕುಂತಿ ಜೋರ್ ಜೋರ್ದಿಂದ್ ಆಯ್ತಾ ಹೇಳಾಕ್ ಎಲ್ಲಾರಿಗ್ ಬರ್ತುದ್…” ಅಂತ ಈರಪ್ಪ – ಮೊಗಲಪ್ಪ  ಮಾತಾಡ್ಕೊತಾ ನಿಂತಿಂದ್ ನೋಡಿ ಸಂಜೀಪರಿ ಹೊಲ್ದಿಂದ್ ಕೂಲಿ ಮುಗ್ಸಕೊಂಡಿ ಮನೀಗ್ ಬರಾ ಹೆಣ್ಮಕ್ಕುಳ್ ಮೊಗಲಪ್ಪುನ್ ಕಡಿ ನೋಡಿ, ಮಾರಿ ವಂಕ್ ಮಾಡಿ ಎಲ್ಲೋರ್ ಬೈಯ್ಕಾತಾ ಹೋದುರ್.

“ಓ ಹಂಗಾ! ಆ ಸೀಮಿ ಹೊಲ್ದ್ ಝಗ್ಡಾ ಹಿನಾ ಹಂಗೇ ಅದಾ ಏನ್, ನಿಮಪ್ಪ ಸತ್ತ್ ಬಿ ಏನಾರಾ ನಾಕ್ ವರ್ಷ್ ಆಯ್ತೊನೋ ಅಲಾ? ನಿಮ್ಮವ್ವಾಪ್ಪಾ ಪೈಲೇ ನಿಂಬಲೇ ಇದ್ದುರೇನೋ… ಆವಾಗ ಆ ಹೊಲಾ ಬಿ ನಿಂಗೇ ಬಿಟ್ಟಿದುರ್ ಅಲಾ… ಮತ್ ಈಗ ಯಾಕ್ ಹಂಚ್ಕಿ ಮಾಡ್ಕೊಂಡಿಲ್? ಸುಮ್ನೆ ಅಸ್ಲಿ ರ್ಯಾಗ್ಡಿ ಹೊಲಾ ಯಾದುರ್ ಲಪ್ಡಾದಾಗ ಪಡೀ ಇಕ್ಕಿರಿ. ಯಾರ್ದ್ ಅವ್ರಿಗ್ ಪಾಲಾ ಹಾಕಿ ಏಟ್ ಬರ್ತುದ್ ಅಟ್ ಹಂಚ್ಕೋರಲಾ…” ಅಂತ ಈರಪ್ಪುಗ್ ಸಾವ್ಕಾಸದಿಂದ ಇವಾಕಿ ಮಾತ್ ಹೇಳಾಕ್ ಚಾಲು ಮಾಡ್ದಾ.

“ಹ್ಹಾ ರೀ ಧೋರೀ… ಅದರಸಲೇಕ್ ತಿರ್ಗಾಲಾತಿದೇವ್ ಖರೇ. ಎಡ್ಡ ವರ್ಷ್ ಆಯ್ತ್ ಫೀಸ್ ಕಟ್ಟಿ ಹೊಲ ಅಳಿಲಕೇ ಹೊಂಟಿಲ್ಲ. ಎಲ್ಲ ಕಡೀ ಬರೀ ರೊಕ್ಕ-ರೊಕ್ಕ ಅಲಾತಾವ್, ಥೋಡೆರಾ ತಿಂಬ್ಸತನ್ಕಾ ಯಾವ್ದ್ ಧಂದ್ಯಾಬೀ ಆಗಾಲ್ ಹೋಗ್ಯಾವ್. ಅದ್ಕೆ ನಮ್ದ್ ಬಿ ಅದರಸಲೇಕೇ ಮಾಡಲ್ ಹೋಗ್ಯಾರ್. ನಮ್ಗ್ ಬಿ ಧಿನಾ ತಿರ್ಗಾಲಾಕ್ ಆಗ್ಲದ್ ಏನಿಲ್ಲ. ಏನಾರಾ ಹೆಚ್ಚಾ ಕಮ್ಮಿ ಕೊಟ್ಟಿ ಝಲ್ದಿ ಮಾಡ್ಕೋಬೇಕ್…” ಅಂತ ಈರಪ್ಪ ಗಡ್ಬಡದಾಗ ಅನ್ಕೊತಾ, ಥೈಲಿ ತಕೊಂಡ್ ಕಟ್ಟಿ ಇಲ್ದಿ ನಡ್ದಾ.

ಬೆಳಿಗ್ ಹೊಡ್ಯಾದ ಮದ್ದ್ ತರ್ಲಾಕ್ ಕ್ವಾಟಿ ಗಂಜಿಗ್ ಹೋಗಾರ್ ಅಂತ ನಡ್ದುರ್ ಮತಾ ಒಬ್ಬುರ್ ಎದುರಿಗ್ ಸಿಕ್ಕುರೇ ಈರಪ್ಪುಗ.

“ಎಲ್ಲಿಗೋ ಈರಪ್ಪ…! ಬೆಳಿ ಯಾನ್ರಾ ಛಂದಾವಾನಾ? ಮದ್ದ್ ಎಸಲಾ ಹೊಡ್ದಿ? ಖರೇ, ಈಗ ಸದ್ದಾ ಮಳಿ ಬೇಕ್ ನೋಡ್…” ಅಂತ ಘಾಳೆಪ್ಪ ವಟವಟ ಮಾತಾಡ್ಕೊತಾ ಎಲ್ಲಾ ಅವಾನೇ ಹೇಳ್ದಾ.

“ಹ್ಹೂ… ಮಳೀ ಬೇಕ್ರೀ… ಬಿಸ್ಲಿಗ್ ಎಲ್ಲಾ ಬೆಳಿ ಬಾಡ್ಲಾತಾವ್. ಖರೇ ಯಾರ್ ಕೈಯ್ದಾಗ್ ಅದಾ ಮಳಿ… ದ್ಯಾವರ್ ಕುಡವ್… ಬಾ ಅಂದಾಗ್ ಏನ್ ಬರಲ್ದ್, ಭ್ಯಾಡಾ ಅಂದಾಗ್ ನಿಂದರಲ್ದ್, ಎಲ್ಲ ದ್ಯಾವುರ್ ಆಟಾ. ಖಿಸ್ಮತ್ದಾಗ್ ಏಟ್ ಅದಾ ಅಟ್ ಬೆಳಿತುದ್… ಯಾರೇನ್ ಮಾಡ್ಲಾಕ್ ಆಯ್ತುದ್ ತಕೊರಿ…” ಅಂತ ಈರಪ್ಪ ಮ್ಯಾಲ್ ನೊಡ್ಕಾತಾ ಮಾರಿ ಸಣ್ಣುದ್ ಮಡ್ದಾ.

“ಅದಾರಾ ಖರೇ ಅದಾ ನೋಡ್ ಈರಪ್ಪ… ಎಲ್ಲ ಖಿಸ್ಮತೇ ಅನ್ಬೇಕ್. ದ್ಯಾವುರ್ ಕುಡ್ಲಕ್ ಕುಂತುನ್ ಅಂದುರ್ ಯಾರೇನ್ ಮಾಡ್ಲಾಕ್ ಆಗಲ್ದ್. ಮೊನ್ ಮೊನ್ನೆ ಟಮಾಟಾ ದೀಡ್ಸೇ… ದೋನ್ಸೇ ರೂಪಾಯ್ಗಿ ಕಿಲೋ ಆಗಿದುವ್. ಆಗ ನಾವ್ ಎಡ್ಡ ತಿಂಗುಳ್ ನಾವ್ ಟಮಾಟಾ ಉಂಬದೇ ಬಿಟ್ಟಿದೇವ್. ಆ ಮೋಸಂದಾಗ ಯಾರ್ ಟಮಾಟಾ ಹಚ್ಚಿದುರ್ ಅವ್ರು ಕರ್ಡೋಪತಿ ಆಗ್ಯಾರ್ ಅಂತ ಟಿವಿ, ಪೇಪರದಾಗ್ ನೋಡಿದೇವ್. ಹಂಗಾ… ಯಾ ಟೈಮ್ ಯಾಗ್ ಬರಲ್ಲಾ… ಈಗ ನೋಡ್ ಟಮಾಟಾ… ನಿನ್ ಅಂಗಡ್ಯಾಗ್ ಮತಾ ಇಪ್ಪತ್ತ್ ರೂಪಾಯ್ಗಿ ಕಿಲೋ ಕೊಟ್ಟಾರ್. ಮನ್ಸ್ಯಾಗ್ ಬಿ ಹಿಂಗೇ ನೋಡ್… ಯಾ ಟೈಮಿಗ್ ಕಿಮ್ಮತ್ ಬರ್ತುದ್, ಯಾಗ್ ಹೊಯ್ತುದ್ ಅಂತ ಖುನಾ ನೇ ಆಗಲ್ದ್. ಈ ಜಿಂದಗಿ ನಾಕ್ ದಿನಾ ಜಾತ್ರಿ ಇದ್ಹಾಂಗ್… ಖಿಸ್ಮತ್ ಖುಲಾಸ್ತು ಅಂದುರ್ ಮುಂದುಕ್ ಹೊಯ್ತಾನ್, ಇಲ್ಲಂದುರ್ ಎಂದ್ಬಿ ಮ್ಯಾಗೇ ಬರಲ್ಲ…” ಅಂತ ಕೈ ಮಾಡ್ಕೊತಾ ಜೋರ್ದಿಂದ್ ಹೇಳಾಕ್ ಶುರು ಮಾಡ್ದಾ.

“ಮತ್ ಈ ವರ್ಷ್ ನಮ್ ತಾಲೂಕಾ ಏನಾರಾ ಬರ್ಗಾಲ್ ಆಗಪ್ಲೇ ಅದಾ ನಾ…? ಏನ್ ಇಲ್ಲಂತಾ ಘಾಳೆಪಣ್ಣಾ…” 

“ಏನ್ ಮಾಡ್ತಾರೋ ಏನೋ ನೋಡ್ ಈರಪ್ಪ… ಬಿತ್ತಾ ಟೈಮಿಗ್ ಮಳಿ ಬರಲ್ದ್ ಸಲೇಕ್ ಹಿಂಚುಟ್ ಆಯ್ತ್. ಅದುರ್ ಬಾದ್ ಜರಾ ಮೊಳಕಿ ಮ್ಯಾಲ್ ಬರ್ತಿಕಿ ಎಂಟ್ ದಿನಾ ಜೊಯ್ ಅಂತ ಮಳಿ ಹತ್ತಿ ಅರ್ಧ್ ಬೆಳಿ ನೀರಾಗ್ ಹೋದುವ್. ಹಿನ್ ಅರ್ಧಬರ್ದಾ ಉಳ್ದಿಂದ್ ಬೆಳಿಗ್ ಈಗ ಮಳಿ ಇಲ್ದೆ ಒಣಗಲತಾವ್… ಏನ್ ಆದುರ್ ಬಿ ಒಕ್ಕಲಿಗ್ಯಾಂದೇ ಮಣ್ಪಾಲ್ ಅದಾ ನೋಡ್ರೀ… ಮಳಿ ಹೆಚ್ಚ್ ಬಿದ್ದುರ್ ಬಿ ಹೈರಾಣ್, ಕಮ್ಮಿ ಆದುರ್ ಬೀ ಕಠಿಣೇ… ಈ ಸರ್ಕಾರದೊರ್ ಒಕ್ಕಲಿಗ್ಯಾರಿಗ್ ಓಟ ಇದ್ದಾಗ್ ನುಣ್ಣುಗ್ ಮಾತಾಡ್ತಾರಾ. ಗೆದ್ದ ಮ್ಯಾಲ್ ನಮ್ ನೆಪ್ಪೇ ಮಾಡಾಲುರ್. ಬೆಳಿ ಹಾನಿ, ಇನ್ಸುರೆನ್ಸ್ ಅಂತೆಲ್ಲ ಯಾನೇನೋ ಕಟ್ಕೊಂಡಿ, ಎಲ್ಲಾರಾ ನಾಕ್ ಸಾವ್ರಾ ನೆವ್ದಿ ತೋರಿನ್ಹಾಂಗ್ ಮಾಡ್ತಾರ್. ಈ ನಾಕ್ ಸಾವ್ರಾದಾಗ ಏನ್ ಮಾಡ್ಬೇಕ್, ಯಾದುಕ್ ಆಯ್ತಾವ್…!” ಅಂತ ಘಾಳೆಪ್ಪ ಭಾಳ್ ಬ್ಯಾಜರಾಗಿ ಹೇಳಾತಿದಾ.

ಈರಪ್ಪುಗ್ ಹೋಗ್ಲಾಕ್ ತಡಾ ಆಗ್ಲಾತಿತ್ ಖರೇ. ಯಾರಾರಾ ಮಾತಾಡ್ಕೊತಾ ನಿಂತಾಗ ಹೋಗದ ಅದಾ ಅಂದುರ್ ಅವ್ರಿಗ್ ಖರಾಬ್ ಅನ್ಸತುದ್ ಅಂತ ಹಂಗೇ ಸಮಾಧಾನದಿಂದ ನಿಂತಿ, ಹಿನಾ ನಾಕ್ ಮಾತಾಡಿ ಹೋಗಾರ್ ಅಂತ…. “ಹ್ಹೂ ಘಾಳೆಣ್ಣಾ… ಬೇಗೂ ಹಗ್ಲು ಮೈ ಮುರ್ದಿ ಧಂದ್ಯಾ ಮಾಡಿ ಮಣ್ಪಾಲ್ ಆಗಾ ಒಕ್ಕಲಿಗಾ ಮಂದಿಗಿ ಏನ್ಬಿ ಫಾಯ್ದಾ ಇಲ್ದ್ಹಾಂಗ್ ಆಗ್ಯಾದ್. ಬೀಜ, ಗೊಬ್ಬುರ್, ಮದ್ದು, ಬಿತ್ಲಾಕ್, ಸದೀ, ರಾಶಿ ರುಪ್ಟಿ ಅಂತ ಬರೀ ಹೊಲ್ದ್ ಲಾಗೊಡಿನೇ ಭಾಳ್ ಆಗ್ಯಾದ್. ಈಟ್ ಖರ್ಚ್ ಮಾಡ್ದಾ ಮ್ಯಾಲ್ ಹಿಂಗ್ ಬರ್ಗಾಲ್ ಬಿಳ್ತುದ್. ಇಲ್ಲಾಂದುರ್ ಮಳಿ ಹತ್ತಿ ಅತ್ತೇ ಹೊಯ್ತುದ್. ಅಟೋ ಈಟೋ ಏನರಾ ನಾಕ್ ಚೀಲಾ ಆಗಿಂದ್ ಸೋಯಾ, ಹೆಸ್ರು ಉದ್ದಿನ ಮಾಲಿಗ್ ಅಡ್ತ್ಯಾಗ್ ಕಿಮ್ಮತ್ತಿಲ್ಲ. ಅವ್ರು ಬೇಡಿನೋಟುಕ್ ಕೊಟ್ಟಿ ಬರ್ಬೇಕ್. ಹಿಂಗಾದುರ್ ಒಕ್ಕಲಿಗ್ಯಾ ಮ್ಯಾಗ್ ಹ್ಯಾಂಗ್ ಬರ್ತಾನ್? ಮದ್ದಿನ್ ದುಕಾನದಾಗ ಉದ್ರಿ… ಅಡಾತಾನಾಗ ಉದ್ರಿ… ಎಲ್ಲಾ ಕಡೀ ಕುಡಾತನ್ಕಾ ಮನೀಗ್ ಯಾನ್ ಇರ್ತುದ್? ಎಲ್ಲರ ಕಾಲಾಗ್ ಒಕ್ಕಲಿಗ್ಯಾ ಜಿಂದಗಿ ಬರ್ಬಾದ್ ಅದಾ ನೋಡ್ರೀ…”

“ಯಾನಿಲ್ಲ… ಮುಂದಿನ್ ವರ್ಷ ಸೀಮಿ ಹೊಲಾ ಹಚ್ಕೊಂಡಿ ಯಾರಿಗಾರಾ ಲಾವ್ಣಿ ಕುಡ್ತಾ. ಮಡ್ಡಿಗ್ ಎಡ್ಡ ಎಕ್ಕರ್ ಅದಾ. ಅದೇನೋ ಸೋಲಾರದೋರ್ ಕೇಳಾತಾರ್ ಅಂತ ಅವ್ರಿಗೆ ಕುಡಬೇಕಂತ್ ಅಲಾತಿದಾ. ಖರೇ ಹಿನಾ ನಾಕ್ ಸಾವ್ರಾ ಹೆಚ್ಚಿಗ್ ಬರ್ತಾವ್ ಏನೊಂತ್ ಕಾಯ್ಲಾತಿದಾ…”

“…ಉಳ್ದಿಂದ್ ಒಂದೆಕ್ಕರ್ ಹಂಗೇ ನಾವೇ ಮನ್ಯೋರ್ ನೋಡ್ತೇವ್. ಸುಮ್ನೆ ಹೊಲ್ದಾಗ್ ಮಾಡಾದ್ ಬಿ ಆಗಾಲ್ ಹೋಗ್ಯಾದ್. ಮಾಡ್ದುರ್ ಬಿ ಪಡ್ತಲೇ ಇಲ್ಲ. ಮಾಡಿ-ಮಾಡಿ ಸಾಕ್ ಆಗ್ಲಾದುತ್. ಎಡ್ಡ ಪಾರ್ಗೋಳ್ ಓದ್ಲಾತಾವ್ ಅವ್ರೇನ್ ಹೊಲ್ದಾಗ್ ಮಾಡಲುರ್ ಏನಿಲ್ಲ, ಹ್ಯಾಂಗ್ ಬಿ ಸಿಟಿ ಸೇರ್ಕೊತಾವ್. ಪೋರಿ ಒಬಕಿಂದಾ ಈ ವರ್ಷ ಮದೀ ಮಾಡ್ಬೇಕ್ ಅಲಾತಿದಾ. ಸಾಕ್ ಭಾಳ್ ಕಿಟಿಕಿಟಿ ಮಾಡ್ಕೊಂಬಾದ್. ಹ್ಯಾಂಗ್ ಬಿ ಸಿದ್ರಾಮಯ್ಯ ಎಲ್ಲಾ ಫ್ರೀ ಕುಡ್ಲಾತಾರ್… ಖರ್ಚ್ ಬಿ ಕಮ್ಮ್ ಆಗ್ಯಾದ್… ಹೋಗಿನೋಟ್ ಉಂಡಿ ಇರಷ್ಟ್ ದಿನಾ ಛಂದ್ ಇರಾರಿ…” ಅಂತ ಯಾವ್ ಬಿ ಗಾಡಿ ಸಿಗಲ್ದುಕ್ ಈರಪ್ಪ ನಡ್ಕೊತಾನೇ ಹೋದಾ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

4 COMMENTS

  1. ನಮ್ಮ ಬೀದರ ಭಾಷೆಯಲ್ಲಿ ಬರೆದ ನಿಮ್ಮ (ಔರಾದ ಸೀಮೆಯ) ಬರಹಗಳು ಓದುತ್ತಾ ಹೋದಂತೆ ತುಂಬಾ ಖುಷಿಕೊಡುತ್ತದೆ ಅಣ್ಣ..

    ಸುಪರ್..👌7676

    • ಥ್ಯಾಂಕ್ಯೂ. ನಿಮ್ಮ ಪ್ರತಿಕ್ರಿಯೆಯನ್ನು ಲೇಖಕರಿಗೆ ತಲುಪಿಸಲಾಗಿದೆ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ಕೊಟ್ಟಿದ್ದಕ್ಕೆ ನನ್ನಿ. ಇನ್ನಷ್ಟು ಪ್ರತಿಕ್ರಿಯೆಗಳ ನಿರೀಕ್ಷೆಯಲ್ಲಿ…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...