ಈ ದಿನ ಸಂಪಾದಕೀಯ | ಪ್ರಶ್ನೆಗಳ ಮುಖಕ್ಕೆ ಕೋಮು ಹಣೆಪಟ್ಟಿ ತರವಲ್ಲ!

Date:

ಕಾಕ್ರೋಚ್‌ಗಳ ಗುರಿ ಒಂದೇ- ಪರೀಕ್ಷಾ ಅಕ್ರಮಗಳಿಗೆ ಉತ್ತರದಾಯಿತ್ವ ಮತ್ತು ಶಿಕ್ಷಣ ವ್ಯವಸ್ಥೆಯ ಸುಧಾರಣೆ. ಈ ಜೆನ್‌-ಜಿ ಪೀಳಿಗೆಯ ಸಂದೇಶವೂ ಸ್ಪಷ್ಟ- ನಮ್ಮನ್ನು ಧರ್ಮದ ಹೆಸರಿನಲ್ಲಿ ವಿಭಜಿಸಲು ಯತ್ನಿಸಬೇಡಿ; ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಿ…

ಪ್ರತಿ ಅಧಿಕಾರಕ್ಕೂ ಒಂದು ಕನ್ನಡಿಯ ಭಯ ಇರುತ್ತದೆ. ಕೆಲವು ಕನ್ನಡಿಗಳು ಮುಖವನ್ನು ತೋರಿಸಿದರೆ, ಇನ್ನು ಕೆಲವು ಇತಿಹಾಸವನ್ನು ತೆರೆದಿಡುತ್ತವೆ. ಆದರೆ, ವಿದ್ಯಾರ್ಥಿಗಳು ಹಿಡಿದಿರುವ ಕನ್ನಡಿ ಇನ್ನೂ ಅಪಾಯಕಾರಿ; ಅದು ಅಧಿಕಾರದ ಧಮ್ಮಸ್ಸನ್ನಲ್ಲ, ಅದರ ವೈಫಲ್ಯ ಮತ್ತು ಅಸಹಾಯಕತೆಯನ್ನು ಪ್ರತಿಫಲಿಸುತ್ತದೆ. ಅದಕ್ಕಾಗಿಯೇ ಪ್ರತಿ ಯುಗದಲ್ಲೂ ಅಧಿಕಾರವು ಮೊದಲು ಕನ್ನಡಿಯನ್ನು ಒಡೆಯಲು ಯತ್ನಿಸುತ್ತದೆ; ಸಾಧ್ಯವಾಗದಿದ್ದರೆ ಕನ್ನಡಿಯಲ್ಲಿ ಕಾಣುವ ಮುಖವನ್ನೇ ಅಪರಾಧಿಯನ್ನಾಗಿ ಮಾಡಲು ಮುಂದಾಗುತ್ತದೆ. ಈಗ ನಡೆಯುತ್ತಿರುವುದೂ ಅದೇ.

- Advertisement -

ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಳೆದೊಂದು ತಿಂಗಳಿನಿಂದ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿ-ಯುವಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾಕ್ರೋಚ್‌ಗಳ ಪ್ರತಿಭಟನೆ ಕಂಡು ದಿಲ್ಲಿ ದರ್ಬಾರು ನಡೆಸುತ್ತಿರುವ ಮೋದಿ-ಶಾ ಜೋಡಿಗೆ ನಡುಕ ಹುಟ್ಟಿದೆ. ಈ ಜೆನ್‌-ಜಿಗಳ- ಯುವಜನರ ಹೋರಾಟವನ್ನು ಹತ್ತಿಕ್ಕಲು ಹವಣಿಸುತ್ತಿದೆ. ಲಾಠಿಚಾರ್ಜ್‌-ಆಶ್ರುವಾಯು, ಮೊಳೆಗಳುಳ್ಳ ದೊಣ್ಣೆ, ಪೆಲೆಟ್‌ಗಳಿಂದ ದಾಳಿ ನಡೆಸಿದೆ. ಆದರೆ, ಕಾಕ್ರೋಚ್‌ಗಳು ಮಣಿದಿಲ್ಲ. ಹೋರಾಟ ಮುಂದುವರೆಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಬಲಪ್ರಯೋಗದಿಂದ ಒಡೆಯಲಾಗದ ಹೋರಾಟವನ್ನು ಕೋಮುದ್ವೇಷದಿಂದ ಒಡೆಯಲು ಬಿಜೆಪಿ ತನ್ನ ಹಳೆಯ ಹಳಸಲು ತಂತ್ರವನ್ನು ಅನುಸರಿಸಿದೆ. ಅದರ ಆರಂಭ ಚಿಕ್ಕಮಗಳೂರಿನಲ್ಲಾಗಿದೆ. ವಿಧಾನ ಪರಿಷತ್‌ನ ಸದಸ್ಯ, ಬಿಜೆಪಿ ಮುಖ ಸಿ.ಟಿ ರವಿ ಅವರು, “ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ. ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ. ವಿದ್ಯಾರ್ಥಿಗಳ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ” ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ವಿದ್ಯಾರ್ಥಿ-ಯುವಜನರ ಹೋರಾಟಕ್ಕೆ ಕೋಮು ಬಣ್ಣ ಬಳಿಯಲು ಯತ್ನಿಸಿದ್ದಾರೆ.

ಇದೊಂದು ಅತ್ಯಂತ ವಿಚಿತ್ರ ಪ್ರಸಂಗ; ವೇದಿಕೆಯ ಮೇಲೆ ವಿದ್ಯಾರ್ಥಿಗಳು ಶಿಕ್ಷಣ, ಪರೀಕ್ಷಾ ಅಕ್ರಮ ಹಾಗೂ ತಮ್ಮ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದರೆ, ವೇದಿಕೆಯ ಕೆಳಗೆ ರಾಜಕೀಯ ಮುಖಗಳು ಧರ್ಮ, ಜಾತಿ ಹಾಗೂ ಗುರುತುಗಳ ಬಗ್ಗೆ ಮಾತನಾಡಲು ಆರಂಭಿಸುತ್ತವೆ. ಅಂತೆಯೇ, ಒಂದು ಬದಿಯಲ್ಲಿ ಪ್ರಶ್ನೆಗಳು ನಿಂತಿದ್ದರೆ, ಇನ್ನೊಂದು ಬದಿಯಲ್ಲಿ ಸುಳ್ಳು ನಿರೂಪಣೆ, ಧ್ರುವೀಕರಣ ರಾರಾಜಿಸುತ್ತದೆ.

ಇತಿಹಾಸವೂ ಇಂತಹ ‘ರಂಗಸ್ಥಿತಿ’ಯನ್ನು ಹಲವು ಸಂದರ್ಭಗಳಲ್ಲಿ ಕಂಡಿದೆ. ಸಾಮ್ರಾಜ್ಯಗಳು ಎಂದಿಗೂ ಪ್ರಶ್ನೆಗಳಿಗೆ ಹೆದರಿವೆ. ಉತ್ತರಿಸಲಾಗದೆ, ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ದಾರಿಯನ್ನು ಅಧಿಕಾರವು ಹುಡುಕುತ್ತದೆ. ಪ್ರಶ್ನೆ ಕೇಳುವವರನ್ನು ‘ಪರಕೀಯ’, ‘ದೇಶದ್ರೋಹಿ’, ‘ಶತ್ರು ಪಾಳಯದವರು’ ‘ಖಲಿಸ್ತಾನಿ’ಗಳು ಎಂಬ ಕಪೋಲಕಲ್ಪಿತ ದ್ವೇಷಾಸೂಯೆಗಳನ್ನು ಹೆಣೆದು, ಪಸರಿಸುತ್ತದೆ.

ಮೋದಿ ಆಡಳಿತದಲ್ಲಿ ಭಾರತವು ಇಂತಹದ್ದೇ ಹಲವು ಸಂದರ್ಭಗಳನ್ನು ಎದುರಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಅದನ್ನು ರಾಷ್ಟ್ರಭಕ್ತಿ ವಿರುದ್ಧದ ಚಳವಳಿ ಎಂದು ಬಣ್ಣಿಸಲಾಯಿತು. ರೈತರ ಹೋರಾಟದ ಸಂದರ್ಭದಲ್ಲಿ ವಿದೇಶಿ ಶಕ್ತಿಗಳು ಹಾಗೂ ‘ಖಾಲಿಸ್ತಾನಿ’ಗಳೆಂಬ ಸುಳ್ಳುಗಳನ್ನು ಹೆಣೆದು ಚರ್ಚೆಗಳನ್ನು ಮುನ್ನೆಲೆಗೆ ತರಲಾಯಿತು. ಕುಸ್ತಿ ಫೆಡರೇಷನ್‌ನ ಅಧ್ಯಕ್ಷನಾಗಿದ್ದ ಬ್ರಿಜ್ ಭೂಷಣ್ ಸಿಂಗ್‌ ವಿರುದ್ಧದ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ವೇಳೆ, ಪ್ರತಿಭಟನೆಯ ಹಿಂದೆ ಯಾರಿದ್ದಾರೆ, ಇದು ಸರ್ಕಾರದ ವಿರುದ್ಧದ ಷಡ್ಯಂತ್ರ ಎಂಬ ನಿರೂಪಣೆಯನ್ನು ಹೆಣೆಯಲಾಯಿತು. ಇದೆಲ್ಲವೂ ಹೋರಾಟಗಳನ್ನು ಹತ್ತಿಕ್ಕುವ ಮತ್ತು ಸಾರ್ವಜನಿಕ ಗಮನವನ್ನು ಬೇರೆಡೆಗೆ ತಿರುಗಿಸುವ ರಾಜಕೀಯ ಕುತಂತ್ರವೇ ಆಗಿತ್ತು. ಈಗ, ಕಾಕ್ರೋಚ್‌ಗಳ ವಿರುದ್ಧವೂ ಇದೇ ಕುತಂತ್ರಗಳು ನಡೆಯುತ್ತಿದೆ.

ಆದರೆ, ಈಗ ಕಾಲ ಬದಲಾಗಿದೆ. ‘ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ, ಅದು ಸತ್ಯವಾಗಿಬಿಡುವ, ಜನರು ಅದನ್ನೇ ನಂಬಿಬಿಡುವ’ ಕಾಲ ಮುಗಿದಿದೆ. ಇಂದಿನ ಯುವಪೀಳಿಗೆಯು ವಿಶಾಲವಾದ ಮಾಹಿತಿ ಮೂಲಗಳನ್ನು ಹೊಂದಿದೆ. ಒಂದೇ ಸುಳ್ಳನ್ನು ಸಾವಿರ ಬಾರಿಯಲ್ಲ, ಲಕ್ಷ ಬಾರಿ, ನಾನಾ ರೀತಿಯಲ್ಲಿ ಹೇಳಿದರೂ, ಸಾವಿರ ಮೂಲಗಳಿಂದ ಹರಡಿದರೂ, ಸತ್ಯವನ್ನು ಕಂಡುಕೊಳ್ಳುವ ದಾರಿಗಳು ಸಾಕಷ್ಟಿವೆ. ಕ್ಷಣಾರ್ಧದಲ್ಲಿ ಸತ್ಯವನ್ನು ಶೋಧಿಸುವ ಕಾಲ ನಮ್ಮೆದುರಿಗಿದೆ.

ಇಂದಿನ ‘ಜೆನ್-ಜಿ’ ಪೀಳಿಗೆಯ ರಾಜಕೀಯ ಮತ್ತು ಸಾಂಸ್ಥಿಕ ಅರಿವು ಕೇವಲ ರಾಜಕೀಯ ಭಾಷಣಗಳಿಂದ ಅಥವಾ ಮಾಧ್ಯಮಗಳಲ್ಲಿ ಪ್ರಸಾರವಾಗುವ ಹಳಸಲು ಸುದ್ದಿಗಳಿಂದ ರೂಪುಗೊಳ್ಳುವುದಿಲ್ಲ. ಅದು ಡೇಟಾ, ಸಾರ್ವಜನಿಕ ದಾಖಲೆಗಳು, ನ್ಯಾಯಾಲಯದ ಆದೇಶಗಳು, ನೆಲಮಟ್ಟದ ವೀಡಿಯೊಗಳು, ಸ್ವತಂತ್ರ ಪತ್ರಿಕೋದ್ಯಮ ಹಾಗೂ ಜಾಗತಿಕ ಅನುಭವಗಳ ನಡುವೆ ರೂಪುಗೊಳ್ಳುತ್ತದೆ. ಈ ಪೀಳಿಗೆಯನ್ನು ಕೇವಲ ಒಂದು ಧಾರ್ಮಿಕ ಅಥವಾ ಭಾವನಾತ್ಮಕ ಘೋಷಣೆಯಿಂದ ವಿಭಜಿಸುವುದು ಹಿಂದಿನ ಪೀಳಿಗೆಗಳನ್ನು ವಿಭಜಿಸಿದಷ್ಟೇ ಸುಲಭವಲ್ಲ.

ಅವರಿಗೆ ಧರ್ಮದ ವಿರುದ್ಧ ದ್ವೇಷವಿಲ್ಲ, ಆದರೆ ಧರ್ಮದ ಹೆಸರಿನಲ್ಲಿ ತಮ್ಮ ಪ್ರಶ್ನೆಗಳನ್ನು ಮೌನಗೊಳಿಸುವ ರಾಜಕೀಯದ ಬಗ್ಗೆ ತೀವ್ರ ಅರಿವಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ನಷ್ಟ ಅನುಭವಿಸುವ ಅಭ್ಯರ್ಥಿಗೆ ಯಾವುದೇ ಧರ್ಮವಿರುವುದಿಲ್ಲ. ನಿರುದ್ಯೋಗ ಮತ್ತು ಅವಕಾಶಗಳ ಅಭಾವಕ್ಕೆ ಜಾತಿ ಇರುವುದಿಲ್ಲ. ಶಿಕ್ಷಣ ವ್ಯವಸ್ಥೆಯ ಅಸಮಾನತೆ ಹಾಗೂ ಆಡಳಿತಾತ್ಮಕ ವೈಫಲ್ಯಕ್ಕೆ ಮತಪಂಥವಿರುವುದಿಲ್ಲ ಎಂಬ ಜ್ಞಾನ ಈ ಪೀಳಿಗೆಗಿದೆ.

ಈ ಲೇಖನ ಓದಿದ್ದೀರಾ?: ಆಗ ‘ಜಿರಳೆ’ ಎಂಬ ಚುಚ್ಚುಮಾತು, ಈಗ ಸಮಯವಿಲ್ಲವೆಂಬ ನಿರ್ಲಕ್ಷ್ಯ: ಪ್ರತಿಭಟನೆಯ ಬೆಂಕಿಗೆ ತುಪ್ಪ ಸುರಿದರೆ…

ವಿದ್ಯಾರ್ಥಿ ಯಾವ ಪ್ರಾರ್ಥನಾ ಮಂದಿರಕ್ಕೆ ಹೋಗುತ್ತಾನೆ ಎಂಬುದಕ್ಕಿಂತ, ಅವನು ಯಾವ ತರಗತಿಯಲ್ಲಿ ಕುಳಿತುಕೊಳ್ಳುತ್ತಾನೆ, ಎಂತಹ ಪರೀಕ್ಷೆಯನ್ನು ಬರೆಯುತ್ತಾನೆ ಹಾಗೂ ಯಾವ ಉದ್ಯೋಗಕ್ಕಾಗಿ ಕಾಯುತ್ತಾನೆ ಎಂಬುದೇ ಅವನ ಜೀವನ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಅರಿವು ಜೆನ್‌-ಜಿಗಳಿಗಿದೆ.

ಹೀಗಿರುವಾಗ, ಬಿಜೆಪಿಯ ‘ನೀನು ಯಾರು? ನಿನ್ನ ಧರ್ಮ ಯಾವುದು?’ ಎಂಬ ಕೋಮುದ್ವೇಷದ ತಂತ್ರಗಳು ಫಲಿಸುವುದಿಲ್ಲ. ಇಲ್ಲಿ, ‘ನಿನಗೆ ನಿನ್ನ ಹಕ್ಕುಗಳು ಸಿಗುತ್ತಿವೆಯೇ’ ಎಂಬುದೇ ಯುವ ಪೀಳಿಗೆಯನ್ನು ತಟ್ಟಿ ಹೇಳುತ್ತದೆ.

ಇತಿಹಾಸದಲ್ಲಿಯೂ ವಿದ್ಯಾರ್ಥಿಗಳ ಧ್ವನಿಯನ್ನು ಲಾಠಿಯಿಂದ ಮೌನಗೊಳಿಸಲು ಯತ್ನಿಸಿದ, ಅವರನ್ನು ದೇಶದ್ರೋಹಿಗಳೆಂದು ಬಣ್ಣಿಸಿದ ಸರ್ಕಾರಗಳು ಬಂದು ಹೋಗಿವೆ. ಆದರೆ, ವಿದ್ಯಾರ್ಥಿಗಳ ದನಿ ಅಚ್ಚಳಿಯದೆ ಉಳಿದಿದೆ. ಯಶಸ್ಸು ಕಂಡಿದೆ.  

ಆದ್ದರಿಂದ, ಮೋದಿ ಅವರ ತಂತ್ರ-ಕುತಂತ್ರಗಳ ಮೂದಲಿಕೆಯ ಕೋಮು ಭಾಷಣಗಳು ಯುವ ಪೀಳಿಗೆಯನ್ನು ಅಲುಗಾಡಿಸುವುದಿಲ್ಲ. ಈಗೇನಿದ್ದರೂ, ಪ್ರಶ್ನೆ ಕೇಳುವ ಯುವಜನರನ್ನು ಮತ್ತು ನಾಗರಿಕರನ್ನು ಸರ್ಕಾರ ಹೇಗೆ ಗೌರವಿಸುತ್ತದೆ ಎಂಬುದಷ್ಟೇ ಮುಖ್ಯ.

ಜಂತರ್ ಮಂತರ್‌ನಲ್ಲಿ ನಿಂತಿರುವ ವಿದ್ಯಾರ್ಥಿಗಳು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಸೇರಿದಂತೆ ನಾನಾ ಧರ್ಮಗಳಿಗೆ ಸೇರಿದವರೇ ಆಗಿದ್ದರೂ, ಅವರೆಲ್ಲರ ಬೇಡಿಕೆ-ಗುರಿ ಒಂದೇ- ಪರೀಕ್ಷಾ ಅಕ್ರಮಗಳಿಗೆ ಉತ್ತರದಾಯಿತ್ವ ಮತ್ತು ಶಿಕ್ಷಣ ವ್ಯವಸ್ಥೆಯ ಸುಧಾರಣೆ. ಅದಾಗದ ಹೊರತು, ಕೋಮು ಪ್ರಚೋದನೆಗಳು, ಕೋಮುದ್ವೇಷ ಭಾಷಣಗಳು, ಖಲಿಸ್ತಾನಿ, ಪಾಕಿಸ್ತಾನಿ, ಬಾಂಗ್ಲಾದೇಶಿ ಎಂಬ ಸುಳ್ಳು ಆರೋಪಗಳು ಈ ಕಾಕ್ರೋಚ್‌ಗಳನ್ನು ಬಗ್ಗಿಸಲಾರವು. ಈ ಪೀಳಿಗೆಯ ಸಂದೇಶ ಸ್ಪಷ್ಟವಾಗಿದೆ: “ನಮ್ಮನ್ನು ಧರ್ಮದ ಹೆಸರಿನಲ್ಲಿ ವಿಭಜಿಸಲು ಯತ್ನಿಸಬೇಡಿ; ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಿ… ಅಷ್ಟೇ.”

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ಬೀದರ್‌ | 125 ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ : ಸಚಿವ ಈಶ್ವರ ಖಂಡ್ರೆ

ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ...