ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಕೊಲೆಗಾರ, ‘ಮೋಶಾ’ ಸೂತ್ರದ ಬೊಂಬೆ ಗ್ಯಾನೇಶ್ ಕುಮಾರ್ ವಜಾಗೊಳ್ಳಬೇಕು!

Date:

ಮೋದಿ-ಅಮಿತ್ ಶಾರ 'ಅಧಿಕಾರದಾಹ'ಕ್ಕೆ ಇಡೀ ಚುನಾವಣಾ ಆಯೋಗವನ್ನೇ ಬಲಿಪಶು ಮಾಡಿ, ದೇಶದ 96 ಕೋಟಿ ಮತದಾರರ ಭವಿಷ್ಯವನ್ನು ಅಪಾಯಕ್ಕೆ ತಳ್ಳಿರುವ ಈ ಗ್ಯಾನೇಶ್ ಕುಮಾರ್‌ ಎಂಬ ಮಹಾಶಯ ಒಂದು ಕ್ಷಣವೂ ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಸಂಸತ್ತು ಮತ್ತು ನ್ಯಾಯಾಂಗ ತಕ್ಷಣವೇ ಮಧ್ಯಪ್ರವೇಶಿಸಿ ಈ ಪ್ರಜಾಪ್ರಭುತ್ವದ ಕೊಲೆಗಡುಕನನ್ನು ಹುದ್ದೆಯಿಂದ ವಜಾಗೊಳಿಸಬೇಕು. 

ಪ್ರಜಾಪ್ರಭುತ್ವದ ಅಡಿಪಾಯವೇ ‘ಅಪವಿತ್ರ’ಗೊಳ್ಳುತ್ತಿದೆ. ಸಂವಿಧಾನದ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕಿದ್ದ ಅತ್ಯುನ್ನತ ಸಂಸ್ಥೆಯಾದ ಚುನಾವಣಾ ಆಯೋಗ ಆಡಳಿತಾರೂಢರ ದಾಸನಾಗಿ ಮಾರ್ಪಟ್ಟಿದೆ. ಪ್ರಜೆಗಳ ಪವಿತ್ರ ಮತದಾನದ ಹಕ್ಕು ಹಗಲುದರೋಡೆಯಾಗುತ್ತಿದೆ. ದೇಶದ ಪ್ರಜೆಗಳ ಮತಾಧಿಕಾರ ದಮನವಾಗುತ್ತಿದೆ. ಚುನಾವಣಾ ವ್ಯವಸ್ಥೆಯು ಸವಾರ್ಧಿಕಾರಿ ಮನೋಭಾವವುಳ್ಳ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಗೆ ಸಿಕ್ಕು ನಲುಗುತ್ತಿದೆ. ಇದೆಲ್ಲೂ ಈಗ ಬಹಿರಂಗವಾಗಿದೆ.

- Advertisement -

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ರಿತಿಕಾ ಚೋಪ್ರಾ ನೇತೃತ್ವದ ತಂಡ ನಡೆಸಿದ ತನಿಖಾ ವರದಿ ಬಹಿರಂಗಪಡಿಸಿರುವ ಸತ್ಯಗಳು ಬರಿ ಆಘಾತಕಾರಿಯಷ್ಟೇ ಅಲ್ಲ, ಭಾರತೀಯ ರಾಜಕೀಯ ಇತಿಹಾಸದಲ್ಲೇ ನಡೆದ ಅತ್ಯಂತ ಅಸಹ್ಯ ಮತ್ತು ಕ್ರೂರ ಷಡ್ಯಂತ್ರ. ಪ್ರಜಾಪ್ರಭುತ್ವದ ಕಗ್ಗೊಲೆಯ ಕೃತ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ...

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅತ್ಯಂತ ಭೀಕರ ಮತ್ತು ಆಘಾತಕಾರಿ ಷಡ್ಯಂತ್ರವೊಂದು ದೇಶದಾದ್ಯಂತ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಗ್ಯಾನೇಶ್‌...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್:...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ₹5ಕ್ಕೆ ಉಪಹಾರ, ₹10ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟಿನ್ ಯೋಜನೆ ಜನಸಾಮಾನ್ಯರಿಗೆ ಬಹುದೊಡ್ಡ ಆಸರೆಯಾಗಿದೆ. ಆದರೆ...

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ;...

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು ಸಾವಯವ ಕೃಷಿಯ ಪವಾಡ" ಎಂದು ಚಂ.ಸು ಪಾಟೀಲ್ ಸಾವಯವ ಕೃಷಿಯ ಅನುಕೂಲಗಳನ್ನು ವಿಶ್ಲೇಷಿಸುತ್ತಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ತೀವ್ರ...

ಚುನಾವಣಾ ಆಯೋಗ ಎಂದರೆ ಅದೊಬ್ಬ ವ್ಯಕ್ತಿಯ ಸಾಮ್ರಾಜ್ಯವಲ್ಲ. ಸಂವಿಧಾನದ ಪ್ರಕಾರ ಆಯೋಗದಲ್ಲಿ ಮೂವರು ಆಯುಕ್ತರು ಸಮಾನ ಅಧಿಕಾರ ಹೊಂದಿದ್ದಾರೆ. ಆದರೆ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಸಂವಿಧಾನಬದ್ಧ ಹುದ್ದೆಯಲ್ಲಿ ಕೂತು, ಆಡಳಿತಾರೂಢ ಮೋದಿ-ಅಮಿತ್ ಶಾ ಜೋಡಿಯ ‘ಸೂತ್ರದ ಬೊಂಬೆ’ಯಂತೆ ವರ್ತಿಸುತ್ತಿದ್ದಾರೆ. ಅವರ ಸರ್ವಾಧಿಕಾರಿ ಧೋರಣೆ ಎಷ್ಟರಮಟ್ಟಿಗೆ ತಲುಪಿದೆಯೆಂದರೆ, ಆಯೋಗದ ಉಳಿದಿಬ್ಬರು ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಕಸದ ಬುಟ್ಟಿಗೆ ಎಸೆದು, ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಳೆದ 10 ತಿಂಗಳಲ್ಲಿ ಬರೋಬ್ಬರಿ 14 ಬಾರಿ ಲಿಖಿತವಾಗಿ ಆಕ್ಷೇಪ ಎತ್ತಿರುವ ಈ ಇಬ್ಬರು ಆಯುಕ್ತರು, “ನಮಗೆ ಮಾಹಿತಿಯನ್ನೇ ನೀಡದೆ ಕಾನೂನುಬಾಹಿರ ನಿರ್ಧಾರ ಕೈಗೊಳ್ಳಲಾಗುತ್ತಿದೆ, ವೋಟರ್ ಡೇಟಾಬೇಸ್ ದೆಹಲಿಯಲ್ಲಿ ಕೇಂದ್ರೀಕೃತವಾಗುತ್ತಿದೆ” ಎಂದು ಸಾರಿ ಹೇಳಿದ್ದಾರೆ. ತಮ್ಮದೇ ಸಹೋದ್ಯೋಗಿಗಳ ಆಕ್ಷೇಪಗಳಿಗೂ ಕಿವಿಕೊಡದ ಗ್ಯಾನೇಶ್ ಕುಮಾರ್, ಸಂವಿಧಾನಕ್ಕಿಂತ ತಾನೇ ದೊಡ್ಡವನೆಂದು ಬೀಗುತ್ತಿದ್ದಾರೆ!

ಗ್ಯಾನೇಶ್‌ ಕುಮಾರ್ ಎಸಗಿರುವ ಕೃತ್ಯಗಳು ಒಂದೆರಡಲ್ಲ; ಅವರು 10 ತಿಂಗಳಲ್ಲಿ 14 ಬಾರಿ ಆಯುಕ್ತರಾದ ಸಂಧು ಮತ್ತು ಜೋಶಿ ಅವರಿಂದ ಲಿಖಿತ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿದ್ದಾರೆ. ಮೋಶಾ ಅಣತಿಯಂತೆ ಏಕಪಕ್ಷೀಯವಾಗಿ ‘ವಿಶೇಷ ತೀವ್ರ ಪರಿಷ್ಕರಣೆ'(SIR)ಯನ್ನು ದೇಶದ ಮೇಲೆ ಹೇರಿ, 96 ಕೋಟಿ ಮತದಾರರಿಗೆ ತೊಂದರೆ ಕೊಟ್ಟಿದ್ದಾರೆ, 13 ಕೋಟಿ ಮತದಾರರ ಹೆಸರನ್ನು ಡಿಲೀಟ್‌ ಮಾಡಿದ್ದಾರೆ. ಈ 13 ಕೋಟಿ ಮತದಾರರಲ್ಲಿ ಹೆಚ್ಚಿನವರು ದಲಿತರು, ಬಡವರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ವಿರೋಧ ಪಕ್ಷಗಳ ಬೆಂಬಲಿಗರನ್ನೇ ಟಾರ್ಗೆಟ್ ಮಾಡಿ ಪಟ್ಟಿಯಿಂದ ತೆಗೆದುಹಾಕಿದ್ದಾರೆ.  

‘ಇಸಿಐ-ನೆಟ್‌’ ಎಂಬ ಸಾಫ್ಟ್‌ವೇರ್ ಮೂಲಕ ದೆಹಲಿಯಿಂದಲೇ ಅರ್ಹ ಮತದಾರರ ಹೆಸರು ಸೇರ್ಪಡೆಗೂ ಅವಕಾಶ ಕೊಡದೆ, ಸ್ಥಳೀಯ ಇಆರ್‌ಒಗಳ ಅಧಿಕಾರಹರಣ ಮಾಡಿದ್ದಾರೆ. ಅರ್ಹ ಮತದಾರರ ಮತದ ಹಕ್ಕು ಕಸಿದುಕೊಂಡಿದ್ದಾರೆ. ಗೋವಾದಲ್ಲಿ ಅಧಿಕಾರಿಗಳು ಅರ್ಹರೆಂದು ಗುರುತಿಸಿದ್ದರೂ, 97 ಮತದಾರರನ್ನು ಮತಪಟ್ಟಿಗೆ ದೆಹಲಿಯ ‘ಇಸಿಐ-ನೆಟ್‌’ ಸಾಫ್ಟ್‌ವೇರ್ ಸೇರಿಸಲಿಲ್ಲ. ಆದರೆ, ಬಂಗಾಳದಲ್ಲಿ ದೆಹಲಿಯ ಆಯೋಗದ ಲಾಗಿನ್‌ನಿಂದಲೇ 27 ಲಕ್ಷ ಜನರ ವಿರುದ್ಧ ಒಂದೇ ಬಟನ್ ಕ್ಲಿಕ್‌ನಲ್ಲಿ ಲಕ್ಷಾಂತರ ಅಕ್ರಮ ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಕಲಬುರಗಿಯ ‘ಆಳಂದ’ ಕ್ಷೇತ್ರದಲ್ಲಿ 5,994 ಮತದಾರರ ವಿರುದ್ಧ ನಕಲಿ ಅರ್ಜಿಗಳನ್ನು ಸಲ್ಲಿಸಿದ ಅರ್ಜಿದಾರರಿಗೆ ಪ್ರತಿ ಅರ್ಜಿಗೆ 80 ರೂ.ಗಳಂತೆ ಬಿಜೆಪಿಗರು ಹಣ ನೀಡಿದ್ದರು ಎಂಬ ಸತ್ಯವನ್ನು ಎಸ್‌ಐಟಿ ಬಹಿರಂಗಪಡಿಸಿದೆ. ಆದಾಗ್ಯೂ, ಈ ‘ವೋಟ್ ಚೋರಿ’ ಪ್ರಕರಣದಲ್ಲಿ 18 ತಿಂಗಳಲ್ಲಿ 18 ಬಾರಿ ಪತ್ರ ಬರೆದರೂ IP ವಿವರ ನೀಡದೆ ಸಾಕ್ಷ್ಯ ಮುಚ್ಚಿಟ್ಟಿದ್ದಾರೆ. ಇದು ಅಕ್ಷರಶಃ ‘ಸೈಬರ್ ದರೋಡೆ’!

ಇನ್ನೂ ಮುಂದುವರೆದು, ಫಾರ್ಮ್‌-7 ಎಂಬ ಮಾರಕ ಅಸ್ತ್ರಗಳನ್ನು ಬಳಸಿಕೊಂಡು ಕೋಟ್ಯಂತರ ಅರ್ಹ ಮತದಾರರ ಹೆಸರುಗಳನ್ನು ಅಳಿಸಲು ಗ್ಯಾನೇಶ್‌ ಕುಮಾರ್ ಅವಕಾಶ ಮಾಡಿಕೊಟ್ಟಿದ್ದಾರೆ. ಪರಿಣಾಮವಾಗಿ, ಪಶ್ಚಿಮ ಬಂಗಾಳದಲ್ಲಿ 6 ಲಕ್ಷ, ಉತ್ತರ ಪ್ರದೇಶದಲ್ಲಿ 2.6 ಲಕ್ಷ, ಬಿಹಾರದಲ್ಲಿ 3 ಲಕ್ಷ, ಗುಜರಾತ್‌ನಲ್ಲಿ 1.8 ಲಕ್ಷ ಹಾಗೂ ಉತ್ತರಾಖಂಡದಲ್ಲಿ 95,000 ಮತದಾರರು ಮತದ ಹಕ್ಕು ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ 67,000 ಮತದಾರರ ವಿರುದ್ಧ ಫಾರ್ಮ್‌-7 ಸಲ್ಲಿಸಲಾಗಿದೆ. ಈ ಮತದಾರರು ತಮ್ಮ ಮತ ಉಳಿಸಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆಯುವಂತೆ ಮಾಡಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವ ಸುಮಾರು 48 ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರಕ್ಕಿಂತ ಫಾರ್ಮ್-7 ಮೂಲಕ ಡಿಲೀಟ್ ಮಾಡಲಾದ ಮತಗಳ ಸಂಖ್ಯೆಯೇ ಹೆಚ್ಚಾಗಿದೆ.

ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ದಿನಕ್ಕೆ ಒಬ್ಬ ಬಿಎಲ್‌ಎ ಗರಿಷ್ಠ 10 ಮತ್ತು ಇಡೀ ಪರಿಷ್ಕರಣೆ ಪ್ರಕ್ರೆಯೆಯಲ್ಲಿ ಕೇವಲ 30 ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆದರೆ, ಬಿಜೆಪಿ ಕಾರ್ಯಕರ್ತರು ನಕಲಿ ಸಹಿ, ನಕಲಿ ದಾಖಲೆ ಸೃಷ್ಟಿಸಿ ದಿನಕ್ಕೆ 400-500 ಅರ್ಜಿಗಳನ್ನು ರಾಶಿಯಾಗಿ ಸಲ್ಲಿಸಿದ್ದಾರೆ. ವಿಜಯಪುರದ ಬಬಲೇಶ್ವರ ಕ್ಷೇತ್ರದಲ್ಲಿ ಎಸ್‌ಐಆರ್‌ ನೋಟಿಸ್‌ಗಳ ಹಿಯರಿಂಗ್ ಮುಗಿಯುವ ಕೊನೆ 2 ದಿನಗಳಲ್ಲಿ ಕೇವಲ 7 ಜನರು 1,564 ಅರ್ಜಿಗಳನ್ನು (ಹೆಚ್ಚಾಗಿ ಮುಸ್ಲಿಂ ಮತದಾರರ ವಿರುದ್ಧ) ಸಲ್ಲಿಸಿದ್ದಾರೆ! ಅಂತೆಯೇ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಬೂತ್‌ ಮಟ್ಟದ ಬಿಜೆಪಿ ಅಧ್ಯಕ್ಷನ ಹೆಸರಿನಲ್ಲಿ ನಕಲಿ ಸಹಿ ಹಾಕಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?

ಜನಪ್ರತಿನಿಧಿ ಕಾಯ್ದೆಯ ಪ್ರಕಾರ, ನಿಯಮಗಳನ್ನು ಉಲ್ಲಂಘಿಸಿ ನಕಲಿ ಅರ್ಜಿಗಳನ್ನು ಸಲ್ಲಿಸಿದರೆ, ಒಬ್ಬರೇ ವ್ಯಕ್ತಿ ನೂರಾರು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಚುನಾವಣಾ ಆಯೋಗಕ್ಕೆ ಅವಕಾಶವಿದೆ. ಆದರೂ, ಗ್ಯಾನೇಶ್‌ ಕುಮಾರ್ ಯಾವುದೇ ಕ್ರಮ ಕೈಗೊಳ್ಳದೆ, ನಕಲಿ ಅರ್ಜಿಗಳನ್ನೇ ಪರಿಗಣಿಸಿ, ಮತದಾರರಿಗೆ ತೊಂದರೆ/ಕಿರುಕುಳ ನೀಡಿದ್ದಾರೆ. ನಕಲಿ ಅರ್ಜಿಗಳನ್ನು ಸಲ್ಲಿಸಿರುವ ಬಿಜೆಪಿ ಕಾರ್ಯಕರ್ತರ ರಕ್ಷಣೆಗೆ ನಿಂತಿದ್ದಾರೆ.

ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷದ ಐಟಿ ಸೆಲ್ ಅಲ್ಲ; ಅದು ಭಾರತೀಯರ ಸಂವಿಧಾನಬದ್ಧ ಹಕ್ಕಿನ ರಕ್ಷಕ. ತಮ್ಮ ಇಬ್ಬರು ಸಹೋದ್ಯೋಗಿಗಳ ವಿಶ್ವಾಸವನ್ನೇ ಕಳೆದುಕೊಂಡು, ನ್ಯಾಯಾಂಗದ ಕಟ್ಟಳೆಗಳನ್ನೇ ಗಾಳಿಗೆ ತೂರಿ, ದೇಶದ ಕೋಟ್ಯಂತರ ಪ್ರಜೆಗಳನ್ನು ‘ಮತಹೀನ’ರನ್ನಾಗಿ ಮಾಡಿ ದೇಶದ್ರೋಹ ಎಸಗಿರುವ ಗ್ಯಾನೇಶ್ ಕುಮಾರ್ ಅವರ ಮೇಲೆ ತಕ್ಷಣವೇ ತನಿಖೆಯಾಗಬೇಕು.

ಮೋದಿ-ಅಮಿತ್ ಶಾರ ‘ಅಧಿಕಾರದಾಹ’ಕ್ಕೆ ಇಡೀ ಚುನಾವಣಾ ಆಯೋಗವನ್ನೇ ಬಲಿಪಶು ಮಾಡಿ, ದೇಶದ 96 ಕೋಟಿ ಮತದಾರರ ಭವಿಷ್ಯವನ್ನು ಅಪಾಯಕ್ಕೆ ತಳ್ಳಿರುವ ಈ ಗ್ಯಾನೇಶ್ ಕುಮಾರ್‌ ಎಂಬ ಮಹಾಶಯ ಒಂದು ಕ್ಷಣವೂ ಆ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಸಂಸತ್ತು ಮತ್ತು ನ್ಯಾಯಾಂಗ ತಕ್ಷಣವೇ ಮಧ್ಯಪ್ರವೇಶಿಸಿ ಈ ಪ್ರಜಾಪ್ರಭುತ್ವದ ಕೊಲೆಗಡುಕನನ್ನು ಹುದ್ದೆಯಿಂದ ವಜಾಗೊಳಿಸಬೇಕು. ಗ್ಯಾನೇಶ್‌ ಕುಮಾರ್ ಮೇಲಿನ ಅಕ್ರಮಗಳ ತನಿಖೆಗೆ ಸ್ವತಂತ್ರ ನ್ಯಾಯಾಂಗ ಆಯೋಗ ರಚನೆಯಾಗಬೇಕು. ಇಲ್ಲವಾದಲ್ಲಿ, ಭಾರತೀಯ ಪ್ರಜೆಗಳು ಬೀದಿಗಿಳಿದು ಈ ‘ವೋಟ್ ಚೋರಿ’ ಸರ್ಕಾರದ ವಿರುದ್ಧ ದಂಗೆ ಏಳುವುದು ಅನಿವಾರ್ಯವಾಗಲಿದೆ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಯತ್ನಾಳ ಬೆಂಬಲಿಗರಿಂದ 18 ಸಾವಿರ ಆಕ್ಷೇಪಣೆ ಸಲ್ಲಿಕೆ: ನಿಷ್ಪಕ್ಷಪಾತ ತನಿಖೆಗೆ ಕಾಂಗ್ರೆಸ್ ಆಗ್ರಹ

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ...

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ; ರೈತ ಚಂ.ಸು ಪಾಟೀಲ್ ಸಾವಯವ ಸಾಧನೆ

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು...

EC ವಿವಾದ | ದಶಕಗಳ ವೈರತ್ವ ಮರೆತು ಒಂದಾದ TMC-CPIM

ಪಶ್ಚಿಮ ಬಂಗಾಳದಲ್ಲಿ ದಶಕಗಳಿಂದ ರಾಜಕೀಯ ಎದುರಾಳಿಗಳಾಗಿದ್ದ ತೃಣಮೂಲ ಕಾಂಗ್ರೆಸ್ (TMC) ನಾಯಕಿ...