‘ಅರಿವು ವಿದ್ಯಾಭ್ಯಾಸ ಸಾಲ ಯೋಜನೆ’ಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

Date:

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪ್ರೊಫೆಶನಲ್ ಕೋರ್ಸ್‌ನ ವಿದ್ಯಾರ್ಥಿಗಳಿಂದ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯ ಅಡಿಯಲ್ಲಿ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (CET/NEET) ಮುಖಾಂತರ ಎಂ.ಬಿ.ಬಿ.ಎಸ್/ ಬಿ.ಡಿ.ಎಸ್/ಬಿ ಆಯುಷ್/ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್/ಬ್ಯಾಚುಲರ್ ಆಫ್ ಇಂಜಿನಿಯರಿಂಗ್/ಬ್ಯಾಚುಲರ್ ಆಫ್ ಟೆಕ್ನಾಲಜಿ ಕೋರ್ಸ್‌ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ ಎಂದು ಕೆಎಂಡಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜೂನ್ 21ರಿಂದ ಅವಕಾಶ ಕಲ್ಪಿಸಲಾಗಿದ್ದು, ಜುಲೈ 7, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಂದು ನಿಗಮವು ತಿಳಿಸಿದೆ.

ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಹಾಗೂ ಪಾರ್ಸಿ ಸಮುದಾಯದ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸಬಹುದು.

ಅರ್ಹತೆ

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್ ಕೋರ್ಸ್‌ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 5,00,000/- ವನ್ನು ನೀಡಲಾಗುತ್ತದೆ.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ./ನೀಟ್) ಮುಖಾಂತರ ಆಯ್ಕೆಯಾದ ಬಿ. ಡಿ. ಎಸ್, ಎಂ.ಡಿ.ಎಸ್ ಕೋರ್ಸುಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 1,00,000 ವರೆಗೆ ಮತ್ತು ಬಿ.ಆಯುಷ್ ಮತ್ತು ಎಂ.ಆಯುಷ್ ಕೋರ್ಸ್‌ಗಳಿಗೆ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ. 50,000ಗಳವರೆಗೆ ಸಾಲದ ನೆರವು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ./ನೀಟ್) ಮುಖಾಂತರ ಆಯ್ಕೆಯಾದ ಬ್ಯಾಚುಲರ್ ಆಫ್ ಆರ್ಕಿಟೆಕ್ಟ್‌/ಇಂಜಿನಿಯರಿಂಗ್/ಟೆಕ್ನಾಲಜಿ (ಬಿ.ಇ./ಬಿ.ಟೆಕ್), ಎಂ.ಟೆಕ್, ಎಂ.ಇ. ಬಿ.ಆರ್ಕ್. ಎಂ.ಆರ್ಕ್ ವ್ಯಾಸಾಂಗ ಮಾಡುತ್ತಿರುವ, ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜು ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 50,000 ನೆರವು.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (CET/NEET) ಮುಖಾಂತರ ಎಂ ಬಿ ಎ, ಎಂ ಸಿ ಎ, ಎಲ್ ಎಲ್ ಬಿ ಕೋರ್ಸ್‌ಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಠ ರೂ.50,000/-ಗಳನ್ನು ಸಾಲವಾಗಿ ನೀಡಲಾಗುತ್ತದೆ.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಮುಖಾಂತರ ಆಯ್ಕೆಯಾದ B.Sc. in Horticulture, Agriculture, Dairy Technology, Forestry, Veterinary, Animal science, Food Technology, Bio Technology, Fisheries, Sericulture, Home/community Sciences, Food Nutrition and Dietetics, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳ ವರೆಗೆ ಸಾಲ.
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಮುಖಾಂತರ ಆಯ್ಕೆಯಾದ B.Pharma, M.Pharma, Pharma.D,and D.Pharma, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳವರೆಗೆ ಸಾಲ.
  • ಎಲ್ಲ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು.. ವಿದ್ಯಾರ್ಥಿಯು ಪಡೆದ ಸಾಲವನ್ನು ಕೋರ್ಸ್ ಮುಗಿದ 1 ವರ್ಷದ ನಂತರ 48 ತಿಂಗಳ ಅವಧಿಯಲ್ಲಿ 2% ಬಡ್ಡಿ ದರದೊಂದಿಗೆ ಮರುಪಾವತಿ ಮಾಡಬೇಕು.

ಇರಬೇಕಾದ ದಾಖಲೆಗಳು:

  1. ಬೊನಾಫೈಡ್/ಅಧ್ಯಯನ ಪ್ರಮಾಣಪತ್ರ
  2. ಕಾಲೇಜು ಶುಲ್ಕದ ವಿವರ
  3. ಹಿಂದಿನ ವರ್ಷ ಪಾಸಾದ ಅಂಕಪಟ್ಟಿ
  4. ಕಾಲೇಜು ಬ್ಯಾಂಕ್ ವಿವರಗಳು
  5. ಭದ್ರತಾ ಠೇವಣಿ (ಸಾಲದ ಮೊತ್ತದ 12%) ಪಾವತಿ ಮಾಡಿದ ರಶೀದಿ
  6. KEA ದಾಖಲಾತಿ ಆದೇಶ ಪ್ರತಿ
  7. ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ

ಆನ್‌ಲೈನ್ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಕೆಎಂಡಿಸಿಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Website ಲಿಂಕ್: https://kmdconline.karnataka.gov.in/Portal/home

kmdc

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಒತ್ತಾಯಿಸಿದ ಶಿಕ್ಷಕರಿಗೆ ನೋಟಿಸ್!

ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಹೊತ್ತಿನಲ್ಲಿಯೂ ಕೆಲವೇ ಕೆಲವು ಸರ್ಕಾರಿ ಶಾಲೆಗಳು ಶಿಕ್ಷಕರ...

ಆರ್‌ಟಿಇ ಪ್ರವೇಶಾತಿ ಪಟ್ಟಿ ಪ್ರಕಟಿಸದ ಶಿಕ್ಷಣ ಇಲಾಖೆ; ಚಾತಕ ಪಕ್ಷಿಯಂತೆ ಕಾಯುತ್ತಿರುವ ಪೋಷಕರ ಕಳವಳ

ಕಡ್ಡಾಯ ಮತ್ತು ಉಚಿತ ಶಿಕ್ಷಣ(ಆರ್‌ಟಿಇ) ಕಾಯ್ದೆಯಡಿ ಶಾಲೆಗಳ ಆಯ್ಕೆಗೆ ಅರ್ಜಿ ಸಲ್ಲಿಸಿ...

ದಾವಣಗೆರೆ | ನರಸೀಪುರ ಸರ್ಕಾರಿ ಶಾಲೆಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಶಾಲೆ ಮುಚ್ಚದಂತೆ ಕ್ರಮವಹಿಸಿ; ಎಐಡಿಎಸ್‌ಓ

ಮೂಲಸೌಲಭ್ಯ ಕೊರತೆಯಿಂದ ಮುಚ್ಚುವ ಆತಂಕ ಎದುರಿಸುತ್ತಿರುವ ದಾವಣಗೆರೆ ಉತ್ತರ ಶಿಕ್ಷಣ ವಲಯದ...

Download Eedina App Android / iOS

X