ನಿರೀಕ್ಷೆಗಿಂತ ಕಡಿಮೆ ಫಲಿತಾಂಶ; ಮರು ಪರೀಕ್ಷೆಗೆ ಸಜ್ಜಾದ 151 ಪಿಯುಸಿ ವಿದ್ಯಾರ್ಥಿಗಳು

Date:

  • ಮೇ 23ರಿಂದ ಪೂರಕ ಪರೀಕ್ಷೆ ಆರಂಭ
  • ಮರುಪರೀಕ್ಷೆಯ ನಿರ್ಧಾರ ಇರಲಿ ಎಚ್ಚರ

2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಗಳಿಸಿದ 151 ವಿದ್ಯಾರ್ಥಿಗಳು ತಮಗೆ ಬಂದಿರುವ ಅಂಕ ತೊರೆದು ಮರು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಮೇ 23ರಿಂದ ಆರಂಭವಾಗಲಿದೆ. 1.58 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಆದರೆ, ಇದರಲ್ಲಿ 151 ವಿದ್ಯಾರ್ಥಿಗಳು, ಉತ್ತೀರ್ಣರಾಗಿದ್ದರೂ ಸಹ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ.

ಫಲಿತಾಂಶದ ಬಗೆಗಿನ ಅಸಮಾಧಾನದಿಂದಾಗಿ 151 ವಿದ್ಯಾರ್ಥಿಗಳಲ್ಲಿ 12 ಮಂದಿ ಎಲ್ಲ ವಿಷಯಗಳ ಮರು ಪರೀಕ್ಷೆಗೆ ಸಿದ್ಧರಾಗಿದ್ದಾರೆ.

2021ರಲ್ಲಿ ಕೊರೊನಾದಿಂದ ಪರೀಕ್ಷೆ ತೆಗೆದುಕೊಂಡ ಎಲ್ಲರನ್ನೂ ಶಿಕ್ಷಣ ಇಲಾಖೆಯು ಸಂಪೂರ್ಣ ಉತ್ತೀರ್ಣರನ್ನಾಗಿ ಮಾಡಿತ್ತು. ಆದರೂ, 943 ವಿದ್ಯಾರ್ಥಿಗಳು ತಮಗೆ ಫಲಿತಾಂಶ ಸಮಾಧಾನ ತಂದಿಲ್ಲ ಎಂದು ಆಕ್ಷೇಪಿಸಿ ಈ ವರ್ಷ ಮರು ಪರೀಕ್ಷೆಗೆ ಮುಂದಾಗಿದ್ದರು. ಪರೀಕ್ಷೆಗೆ ಹಾಜರಾದವರಲ್ಲಿ 204 ವಿದ್ಯಾರ್ಥಿಗಳು ಅನುತ್ತೀರ್ಣರಾದರು. ಆನಂತರ ಹಳೇ ಫಲಿತಾಂಶವನ್ನೇ ನೀಡುವಂತೆ ಒತ್ತಾಯಿಸಿದ್ದರು. ಇಂತಹ ಘಟನೆಗಳು ಸಂಭವಿಸುವ ಕಾರಣ ವಿದ್ಯಾರ್ಥಿಗಳು ಎಚ್ಚರದಿಂದ ನಿರ್ಧಾರ ಕೈಗೊಳವುದು ಒಳಿತು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರಿನಲ್ಲಿ ಶತಮಾನದಿಂದಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2023ರ ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ ಮಾಡಿದ್ದು, ನಿರ್ಧಾರ ಶೇ.74.67ರಷ್ಟು ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಫಲಿತಾಂಶ ದಲ್ಲಿ ಶೇ.12.79ರಷ್ಟು ಹೆಚ್ಚಳವಾಗಿದೆ. 7.02 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದರು. 1.77 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರ ಸರ್ಕಾರದ ‘ರಗಳೆ’ | ವಿದ್ಯಾರ್ಥಿ ವೇತನಕ್ಕೆ ‘ಕಡ್ಡಾಯ ಬಯೋಮೆಟ್ರಿಕ್’ ಆದೇಶ; ವಿದ್ಯಾರ್ಥಿಗಳು ಸುಸ್ತು!

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದ ಲಕ್ಷಾಂತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಾಗೂ ಸಂಸ್ಥೆಗಳ...

ಶಿವಮೊಗ್ಗ | ಬಿಸಿಯೂಟದ ಜೊತೆ ಮೊಟ್ಟೆ ವಿತರಣೆ; ಆಗಸ್ಟ್‌ 18ರಂದು ಚಾಲನೆ

ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆಯನ್ನು ನೀಡಲಾಗುತ್ತದೆ....

ಅನಧಿಕೃತ ಶಾಲೆಗಳನ್ನು ಆ. 14ರೊಳಗಾಗಿ ಮುಚ್ಚವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಸೂಚನೆ

ಕರ್ನಾಟಕದಲ್ಲಿ ನೋಂದಣಿ ಆಗದೆ ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳನ್ನು ಆ. 14ರೊಳಗಾಗಿ ಮುಚ್ಚಿಸುವಂತೆ...

ಕರ್ನಾಟಕದ ಒಂದು ಸೇರಿ ದೇಶದ 20 ವಿವಿ ನಕಲಿ : ಯುಜಿಸಿ ಘೋಷಣೆ

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೇಶದ 20 ವಿಶ್ವವಿದ್ಯಾಲಯಗಳನ್ನು "ನಕಲಿ" ಎಂದು...