ಪತ್ರಕರ್ತೆ ಅಂಜನಾ ಓಂ ಕಶ್ಯಪ್- ಖಾನ್ ಸರ್ ಮಾನನಷ್ಟ ಪ್ರಕರಣ: ಸಂಧಾನಕ್ಕೆ ದೆಹಲಿ ಹೈಕೋರ್ಟ್ ಆದೇಶ

Date:

ಪತ್ರಕರ್ತೆ ಅಂಜನಾ ಓಂ ಕಶ್ಯಪ್ ಮತ್ತು ಜನಪ್ರಿಯ ಶಿಕ್ಷಕ ಖಾನ್ ಸರ್ ನಡುವಿನ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ದೆಹಲಿ ಹೈಕೋರ್ಟ್ ಗುರುವಾರ ಉಭಯ ಕಕ್ಷಿದಾರರಿಗೆ ಸೂಚನೆ ನೀಡಿದೆ.

- Advertisement -

ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ನ್ಯಾಯಪೀಠವು, ಈ ಪ್ರಕರಣವನ್ನು ಸಂಧಾನಕ್ಕೆ ವಹಿಸಿದೆ. ಕಕ್ಷಿದಾರರ ಪರ ವಕೀಲರು ಗುರುವಾರ ಸಂಜೆ 4:30ಕ್ಕೆ ಮಧ್ಯವರ್ತಿಯ ಮುಂದೆ ಹಾಜರಾಗುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

ಉಭಯ ಕಕ್ಷಿದಾರರ ನಡುವಿನ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಸಾಧ್ಯತೆಗಳಿವೆ. ಕಕ್ಷಿದಾರರು ಹಿರಿಯ ಮಧ್ಯವರ್ತಿಯೊಬ್ಬರ ನೇತೃತ್ವದಲ್ಲಿ ಸಂಧಾನ ನಡೆಸಲು ಒಪ್ಪಿದ್ದಾರೆ ಎಂದು ಕೋರ್ಟ್‌ ತಿಳಿಸಿದೆ.

ಸಂಧಾನದ ಭಾಗವಾಗಿ, ಅಂಜನಾ ಓಂ ಕಶ್ಯಪ್ ಅವರ ಮಕ್ಕಳ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತಕ್ಷಣವೇ ತೆಗೆದುಹಾಕುವಂತೆ ಖಾನ್ ಸರ್ ಮತ್ತು ಇತರ ಶಿಕ್ಷಕರಿಗೆ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಂಜನಾ ಓಂ ಕಶ್ಯಪ್ ಅವರಿಗೂ ಸಹ, ಇನ್ನು ಮುಂದೆ ಶಿಕ್ಷಕರನ್ನು ಗುರಿಯಾಗಿಸದಂತೆ ನ್ಯಾಯಾಲಯ ತಾಕೀತು ಮಾಡಿದೆ.

“ನೀವು ಶಿಕ್ಷಣ ತಜ್ಞರು, ಯುವಕರಿಗೆ ಬೋಧಿಸುತ್ತೀರಿ. ಈ ಜವಾಬ್ದಾರಿಯನ್ನು ಮರೆಯಬೇಡಿ” ಎಂದು ನ್ಯಾಯಪೀಠವು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದೆ.

ಇದನ್ನೂ ಓದಿ: ಖಾನ್ ಸರ್‌ ಸೇರಿ ಹಲವರ ವಿರುದ್ಧ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಅಂಜನಾ ಓಂ ಕಶ್ಯಪ್!

ಕಳೆದ ಮೇ 29ರಂದು ‘ಆಜ್ ತಕ್’ ವಾಹಿನಿಯಲ್ಲಿ ಅಂಜನಾ ಓಂ ಕಶ್ಯಪ್ ಅವರು ಆನ್‌ಲೈನ್ ಟೀಚರ್‌ಗಳ ಕುರಿತು ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾಡಿದ್ದ ಟೀಕೆಗಳ ವಿರುದ್ಧ, ಖಾನ್ ಸರ್ ಸೇರಿದಂತೆ ಅಭಿನಯ್ ಶರ್ಮಾ, ಬಬಿತಾ ತ್ಯಾಗಿ, ಅರವಿಂದ್ ಭದೌರಿಯಾ ಮತ್ತು ಇತರರು ಸಾಮಾಜಿಕ ಜಾಲತಾಣಗಳಲ್ಲಿ ಕಶ್ಯಪ್ ಮತ್ತು ವಾಹಿನಿಯ ವಿರುದ್ಧ ತೀವ್ರ ಅಭಿಯಾನ ನಡೆಸಿದ್ದರು.

ಪತ್ರಕರ್ತೆಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಮತ್ತು ಅಂಜನಾ ಓಂ ಕಶ್ಯಪ್ ಅವರ ಮಗು ಓದುತ್ತಿರುವ ಶಾಲೆಯ ವಿವರಗಳನ್ನು ಖಾನ್ ಸರ್ ಬಹಿರಂಗಪಡಿಸಿರುವುದು ಕುಟುಂಬದ ಭದ್ರತೆಗೆ ಆತಂಕ ಉಂಟುಮಾಡಿದೆ ಎಂದು ಅಂಜನಾ ಓಂ ಕಶ್ಯಪ್ ಮತ್ತು ಟಿವಿ ಟುಡೇ ನೆಟ್‌ವರ್ಕ್ ಕೋರ್ಟ್‌ಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನ ಮೇರೆಗೆ ನ್ಯಾಯಾಲಯವು ಮಧ್ಯಂತರ ಆದೇಶ ನೀಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫಾರ್ಮ್-7 ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಿ: ಚುನಾವಣಾ ಆಯೋಗದ ಕಚೇರಿಯಲ್ಲಿ ಪಟ್ಟು ಕುಳಿತ ಸಿಎಂ

ರಾಜ್ಯದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿ,...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು? ವಿಮಾನದ ಕಾಕ್‌ಪಿಟ್‌ ಹೇಗಿರುತ್ತದೆ ಬಲ್ಲಿರಾ?

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ...

ಎಲ್ ನಿನೋ ತಾಪಮಾನ: ಹೊರಾಂಗಣ ಕಾರ್ಮಿಕರ ರಕ್ಷಣೆಗೆ ತುರ್ತು ಕ್ರಮಕ್ಕೆ ಸಂಘಟನೆಗಳ ಆಗ್ರಹ

ಎಲ್ ನಿನೋ ಹವಾಮಾನ ಬದಲಾವಣೆಯ ತೀವ್ರ ಪರಿಣಾಮಗಳಿಂದ ಹೊರಾಂಗಣ ಹಾಗೂ ದಿನಗೂಲಿ...