‘ಶತ್ರುಗಳ ಅಂತ್ಯ ಸನಿಹದಲ್ಲಿದೆ’; ಇಸ್ರೇಲ್‌ಗೆ ಹಿಜ್ಬುಲ್ಲಾ ಗುಡುಗು

Date:

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷವು ಮತ್ತಷ್ಟು ಉಲ್ಬಣಗೊಂಡಿದ್ದು, ರಾಜತಾಂತ್ರಿಕ ಮಾತುಕತೆಗಳ ಹಾದಿ ಕಿರಿದಾಗುತ್ತಿರುವ ಬೆನ್ನಲ್ಲೇ ಸೇನಾ ಕಾರ್ಯಾಚರಣೆಗಳು ಬಿರುಸುಗೊಂಡಿವೆ. ಈ ಮಧ್ಯೆ ಇಸ್ರೇಲ್‌ಗೆ ನೇರ ಹಾಗೂ ಕಠಿಣ ಎಚ್ಚರಿಕೆ ರವಾನಿಸಿರುವ ಹಿಜ್ಬುಲ್ಲಾ, ‘ಶತ್ರುಗಳ ದಿನಗಳು ಎಣಿಕೆಯಲ್ಲಿವೆ’ ಎಂದು ಗುಡುಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ವರದಿಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

- Advertisement -

ಹಿಜ್ಬುಲ್ಲಾದ ಪ್ರಧಾನ ಕಾರ್ಯದರ್ಶಿ ನೈಮ್ ಖಾಸಿಮ್, ತಮ್ಮ ಆಕ್ರಮಿತ ಭೂಮಿಯ ಒಂದು ಇಂಚು ಜಾಗದಲ್ಲಿಯೂ ಇಸ್ರೇಲ್ ಪಡೆಯನ್ನು ಉಳಿಯಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಬಿಕ್ಕಟ್ಟು ಶಮನಗೊಳ್ಳಬೇಕಾದರೆ ಇಸ್ರೇಲ್ ತನ್ನ ಜಲ, ನೆಲ ಹಾಗೂ ವಾಯು ಮಾರ್ಗದ ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಲೆಬನಾನ್‌ನಿಂದ ಸಂಪೂರ್ಣವಾಗಿ ಕಾಲ್ತೆಗೆಯಬೇಕು ಎಂಬುದು ಸೇರಿದಂತೆ ಐದು ಪ್ರಮುಖ ಷರತ್ತುಗಳನ್ನು ಅವರು ಮುಂದಿಟ್ಟಿದ್ದಾರೆ. ಮತ್ತೊಂದೆಡೆ, ಕದನ ವಿರಾಮ ಜಾರಿಯಲ್ಲಿದ್ದರೂ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಮೂವರು ಮಕ್ಕಳು ಸೇರಿ ನಾಲ್ವರು ಬಲಿಯಾಗಿದ್ದು, 51 ಮಂದಿ ಗಾಯಗೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಯುದ್ಧದ ಕಾರ್ಮೋಡದ ನಡುವೆಯೂ ರಾಜತಾಂತ್ರಿಕ ಚಟುವಟಿಕೆಗಳು ಗರಿಗೆದರಿವೆ. ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ಬಾಸ್ ಅರಗ್ಚಿ ಅವರು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಸುದೀರ್ಘ ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಮೆರಿಕ ಮತ್ತು ಇಸ್ರೇಲ್ ಕಾರ್ಯಾಚರಣೆಗಳ ಕುರಿತು ಗಂಭೀರ ಚರ್ಚೆ ನಡೆಸಿದ ಅವರು, ಇರಾನ್ ಮತ್ತು ರಷ್ಯಾ ನಡುವಿನ ‘ತಂತ್ರಗಾರಿಕೆಯ ಸಂಬಂಧ’ವನ್ನು ಶ್ಲಾಘಿಸಿದ್ದಾರೆ.

ಮತ್ತೊಂದೆಡೆ, ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗೆ ಪರೋಕ್ಷ ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನ ವೇದಿಕೆ ಸಿದ್ಧಪಡಿಸುತ್ತಿದ್ದು, ಇದೇ ಕಾರಣಕ್ಕಾಗಿ ಅಬ್ಬಾಸ್ ಅರಗ್ಚಿ ಅವರು ಕೇವಲ 48 ಗಂಟೆಗಳ ಅಂತರದಲ್ಲಿ ಬರೋಬ್ಬರಿ ಮೂರು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ

ಈ ಎಲ್ಲ ತ್ವರಿತ ಬೆಳವಣಿಗೆಗಳ ನಡುವೆ, ಹಾರ್ಮುಜ್ ಜಲಸಂಧಿಯನ್ನು ಮರು ತೆರೆಯುವ ಷರತ್ತಿನೊಂದಿಗೆ ಕದನ ವಿರಾಮಕ್ಕೆ ಮುಂದಾಗಿರುವ ಇರಾನ್‌ನ ಶಾಂತಿ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸುವ ಸಾಧ್ಯತೆ ದಟ್ಟವಾಗಿದೆ. ಇರಾನ್‌ನ ಪರಮಾಣು ಕಾರ್ಯಕ್ರಮದ ಮೇಲೆ ಯಾವುದೇ ನಿರ್ಬಂಧ ಹೇರದೆ, ಕೇವಲ ಜಲಸಂಧಿ ತೆರೆಯಲು ಒಪ್ಪಿದರೆ ಅಮೆರಿಕ ತನ್ನ ಮೇಲುಗೈ ಕಳೆದುಕೊಳ್ಳಲಿದೆ ಎಂಬುದು ಅಮೆರಿಕದ ಹಿರಿಯ ಅಧಿಕಾರಿಗಳ ಆತಂಕವಾಗಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ಗೆ ಶಾಂತಿ ಮಾತುಕತೆಗಾಗಿ ಅಮೆರಿಕದ ನಿಯೋಗ ಕಳುಹಿಸುವ ನಿರ್ಧಾರವನ್ನು ಟ್ರಂಪ್ ರದ್ದುಗೊಳಿಸಿದ್ದಾರೆ.

ಅತ್ತ ಅಮೆರಿಕ ಬಿಗಿಪಟ್ಟು ಹಿಡಿದಿದ್ದರೆ, ಇತ್ತ ಇರಾನ್‌ನ ಉಪಾಧ್ಯಕ್ಷ ಎಸ್ಮಾಯಿಲ್ ಸಘಬ್ ಎಸ್‌ಫಹಾನಿ ಅವರು ಶತ್ರು ಪಾಳಯಕ್ಕೆ ನೇರ ಬೆದರಿಕೆ ಹಾಕಿದ್ದಾರೆ. ‘ನಮ್ಮ ಒಂದು ತೈಲ ಬಾವಿಗೆ ಹಾನಿಯಾದರೆ, ಪ್ರತಿಯಾಗಿ ಶತ್ರು ರಾಷ್ಟ್ರಗಳ ನಾಲ್ಕು ತೈಲ ಬಾವಿಗಳನ್ನು ನಾಶಮಾಡುತ್ತೇವೆ. ನಮ್ಮ ಲೆಕ್ಕಾಚಾರವೇ ಬೇರೆ, ನಮ್ಮ ಒಂದು ತೈಲ ಬಾವಿ ಶತ್ರುಗಳ ನಾಲ್ಕು ತೈಲ ಬಾವಿಗಳಿಗೆ ಸಮ’ ಎಂದು ಎಚ್ಚರಿಸಿದ್ದಾರೆ.

ಇದರ ಬೆನ್ನಲ್ಲೇ, ಫೆಬ್ರವರಿ 28ರಂದು ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲೆ ನಡೆದಿದ್ದ ಭೀಕರ ದಾಳಿಯ ಅಧಿಕೃತ ಸಾವುನೋವಿನ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಮೃತರ ಒಟ್ಟು ಸಂಖ್ಯೆ 155ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 73 ಬಾಲಕರು, 47 ಬಾಲಕಿಯರು, 26 ಶಿಕ್ಷಕರು ಹಾಗೂ 7 ಪೋಷಕರು ಪ್ರಾಣ ಕಳೆದುಕೊಂಡಿರುವುದು ವರದಿಯಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2027ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ...

ಬೀದರ್‌ | ಶಿಕ್ಷಕರು ಬದುಕಿನ ಭವಿಷ್ಯ ರೂಪಿಸಿದ ಶಿಲ್ಪಿಗಳು: ಪತ್ರಕರ್ತ ಗೌರೀಶ ಅಕ್ಕಿ

ಶಿಕ್ಷಕರು ನಮಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಿ, ಬದುಕಿನ ಭವಿಷ್ಯವನ್ನು ರೂಪಿಸಿದ...

ವಿಜಯಪುರ | ಯುವಜನರು ಜವಾಬ್ದಾರಿಯುತ ನೀತಿ ನಿರೂಪಕರಾಗಲಿ: ಡಿಸಿ ಆನಂದ ಕೆ

ಯುವಜನರು ಸಂವಿಧಾನದ ಆಶಯಗಳು, ಸಂಸದೀಯ ಕಾರ್ಯಕಲಾಪಗಳು ಹಾಗೂ ಕಾನೂನು ರಚನೆಯ ಪ್ರಕ್ರಿಯೆಯ...