ಸಮುದಾಯಕ್ಕೆ ರಕ್ಷಣೆಯಾಗದ ಲಿಂಗತ್ವ ಅಲ್ಪಸಂಖ್ಯಾತ ಕಾಯ್ದೆ ನಗ್ನ ಕಾನೂನು: ಅಕ್ಕೈ ಪದ್ಮಶಾಲಿ

Date:

ಲಿಂಗತ್ವ ಅಲ್ಪಸಂಖ್ಯಾತ ಕಾಯ್ದೆ ತಿದ್ದುಪಡಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಕಾಯ್ದೆಯಾಗದ ಹೊರತು ಇದು ನಗ್ನ ಕಾನೂನು ಎಂದು ಘೋಷಿಸುವ ಮೂಲಕ ಅಕ್ಕೈ ಪದ್ಮಶಾಲಿ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

- Advertisement -

ಇತ್ತೀಚೆಗಷ್ಟೇ ಸಂಸತ್ತಿನ ಉಭಯ ಸದನಗಳಲ್ಲಿ ಅನಿರೀಕ್ಷಿತ ಮಸೂದೆಯೊಂದು ಮಂಡನೆಯಾಗಿದ್ದು ಅದು ಕಾಯ್ದೆಯಾಗಿ ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಸಮುದಾಯದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಹಾಗೂ ಸಕಲ ಮೂಲಭೂತ ನಾಗರಿಕ ಹಾಗೂ ಸಾಂವಿಧಾನಿಕ ಹಕ್ಕನ್ನು ಪಡೆಯುವಲ್ಲಿ ತೀರ ದೂರ ಉಳಿದಂತಾಗಿದೆ. ಕರ್ನಾಟಕ ಜನಪರ ಚಳವಳಿಯ ಮುಖ್ಯಸ್ಥರು ಈ ಕಾಯ್ದೆಯ ವಿರುದ್ಧ ಹಾಗೂ ಲಿಂಗತ್ವ ಅಲ್ಪಸಂಖ್ಯಾತರನ್ನು ಅಪರಾಧೀಕರಣಗೊಳಿಸುವ ವ್ಯವಸ್ಥೆಯ ವಿರುದ್ಧವಾಗಿ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಇದನ್ನು ಓದಿದ್ದೀರಾ? ಲಿಂಗತ್ವ ಅಲ್ಪಸಂಖ್ಯಾತರ ಅಸ್ಮಿತೆಯನ್ನೇ ಅಳಿಸುವ ಮಸೂದೆ: ಆತ್ಮಗೌರವಕ್ಕೆ ಕೊಡಲಿಪೆಟ್ಟು

ಸಮುದಾಯದ ಸ್ವಗೌರವ, ಆತ್ಮವಿಶ್ವಾಸ, ಘನತೆಗೆ ವಿರುದ್ಧವಾಗಿರುವ ಈ ಕಾಯ್ದೆಯನ್ನು ತಿರಸ್ಕರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ನೆರೆದಿದ್ದ ಎಲ್ಲಾ ಹೋರಾಟಗಾರರು ಧ್ವನಿಗೂಡಿಸಿದ್ದರು.

Advertisements

ವೈದ್ಯಕೀಯ ಮಂಡಳಿಯ ಮುಂದೆ ನಗ್ನವಾಗುವ, ಮ್ಯಾಜಿಸ್ಟ್ರೇಟ್ ಮುಂದೆ ಪ್ರಸ್ತಾಪ ಗೊಳ್ಳುವ, ಸ್ವಲಿಂಗತ್ವ ನಿರ್ಧಾರಣೆ ಮಾಡುವ ಹಕ್ಕನ್ನು ಕಸಿದುಕೊಂಡಿರುವ ಹಾಗೂ ಪ್ರಜಾತಂತ್ರಕ್ಕೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ನಡೆಯನ್ನು, ಸಮುದಾಯದೊಂದಿಗೆ ಸಮಾಲೋಚಿಸದೆ ತಮಗೆ ಮನಬಂದಂತೆ ಪ್ರಸ್ತಾಪಿಸಿರುವ ಅಂಶಗಳನ್ನು ತುರ್ತಾಗಿ ಹಿಂಪಡೆಯಬೇಕೆಂದು ಆಗ್ರಹಿಸಿದರು.

akkai1

“ಈ ಕಾಯ್ದೆಯನ್ನು ಹಿಂಪಡೆಯದಿದ್ದರೆ ಭಾರತದ ನ್ಯಾಯಾಂಗದ ಮುಂದೆ ತಮ್ಮ ಹಕ್ಕಿಗಾಗಿ ಅಂಗಲಾಚಲಾಗುವುದು. ಅಪರಾಧಿಗಳು ನಿರಪರಾಧಿಗಳು ಮರು ಅಪರಾಧಿಗಳು ನಿರಪರಾಧಿಗಳು ಮತ್ತು ಅಪರಾಧಿಕರಣ ಗೊಳಿಸಿರುವ ಈ ವ್ಯವಸ್ಥೆಯ ವಿರುದ್ಧ ಮುಲಾಜಿ ಇಲ್ಲದೆ, ಸಮಾಜದೊಂದಿಗೆ ನಿರಂತರ ಹೋರಾಟ ಮಾಡುವುದು, ಸಾಮಾಜಿಕ ಬಹಿಷ್ಕಾರ ಹಾಗು ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಟ ನಡೆಸಲಾಗುವುದು” ಎಂದು ಅಕ್ಕೈ ಪದ್ಮಶಾಲಿ ಎಚ್ಚರಿಕೆ ನೀಡಿದರು.

ಇದನ್ನು ಓದಿದ್ದೀರಾ? ತೀವ್ರ ವಿರೋಧದ ನಡುವೆಯೂ ಲಿಂಗತ್ವ ಅಲ್ಪಸಂಖ್ಯಾತರ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

“ಲೈಂಗಿಕ ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯತೆಯನ್ನು ಸರ್ವ ಪಕ್ಷಗಳು ಕೈಗೊಳ್ಳಬೇಕಾದ ತುರ್ತು ನಿರ್ಣಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿರುತ್ತದೆ” ಎಂದು ಅಭಿಪ್ರಾಯಿಸಿದರು.

ಒಕ್ಕೂಟ, ಅಂತರ್ಲಿಂಗಿ ಅಸೋಸಿಯೇಷನ್ ನಿನ್ನೆ ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ 2026ರ ಕಾಯ್ದೆಯ ವಿರುದ್ಧವಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಹಸ್ರ ನಾಗರಿಕ ಚಳವಳಿಗಳು ಹೋರಾಟಗಾರರು ಸಾಹಿತಿಗಳು ಮಾನವ ಹಕ್ಕುಗಳ ಬೆಂಬಲಿಗರು ಧಾರ್ಮಿಕ ಅಲ್ಪಸಂಖ್ಯಾತರು ದಲಿತ ಹೋರಾಟದ ಮುಖಂಡರು ಹಾಗೂ ನಟಿ ರಮ್ಯಾ ಹಾಗೂ ನಟ ಚೇತನ್ ಕುಮಾರ್ ಮತ್ತು ಅವರ ಪತ್ನಿ ಮೇಘ ಅವರು ಈ ಸಭೆಗೆ ಸಾಕ್ಷಿಯಾಗಿ ಈ ಕಾಯ್ದೆಯ ವಿರುದ್ಧ ಒಕ್ಕೊರಳಿನ ಧ್ವನಿಯಿಂದ ವಿರೋಧಿಸಿದರು.

ಕರ್ನಾಟಕ ರಾಜ್ಯ ಲಿಂಗತ್ವಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷರು ಪ್ರಕಾಶಿ, ಕರ್ನಾಟಕ ಅಂತರ್ಲಿಂಗಿ ಅಸೋಸಿಯೇಷನ್ ಅಧ್ಯಕ್ಷರು ಅಬೇದ ಬೇಗಮ್, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರು ಸುನಂದಮ್ಮ, ಹಿರಿಯ ಸ್ತ್ರೀವಾದಿ ಮಧುಭೂಷಣ್ ಹಾಗೂ ಶಕುನ್, ಡಾ. ಡೊಮಿನಿಕ್ ಡಿ, ಹಿರಿಯ ಸುಪ್ರೀಂ ಕೋರ್ಟ್ ವಕೀಲೆ ಜಯನ ಕೊಠಾರಿ, ಹಿರಿಯ ಸಾಕ್ಷಾ ಚಿತ್ರ ಟಿ. ಜಯಶ್ರೀ ಅರವಿಂದ್ ನಾರಾಯಣ್, ಲೇಖಕಿ ಮಮತಾ ಸಾಗರ್, ಸಮುದಾಯದ ಪ್ರತಿನಿಧಿಗಳಾದ ಮೋನಿಕಾ, ರೂಮಿಹರೀಶ್ ಸೌಮ್ಯ, ಕ್ರಿಸ್ಟಿರಾಜ್, ವಿಹಾನ್ ಮೊದಲಾದವರು ಹಾಜರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...

ಧಾರವಾಡ | ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಒಗ್ಗೂಡಿದ ಪ್ರಗತಿಪರ ಧ್ವನಿಗಳು

ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೌಹಾರ್ದತೆಯ ರಕ್ಷಣೆಗಾಗಿ ಧಾರವಾಡದಲ್ಲಿ...

ರೈತನ ಭೂಹಕ್ಕಿಗೆ ‘ಪೋಡಿ’ ಅಡ್ಡಿ: ಆನ್‌ಲೈನ್ ಸೇವೆಯಿದ್ದರೂ ಮುಗಿಯದ ಅಲೆದಾಟ!

ರೈತನಿಗೆ ಭೂಮಿಯೇ ಬದುಕು. ಆ ಭೂಮಿಯ ಗಡಿ ಎಲ್ಲಿ? ಎಷ್ಟು ವಿಸ್ತೀರ್ಣ?...