ಮೈತ್ರಿ ಸರ್ಕಾರ ಉರುಳಿಸಲು ನೆರವಾಗಿದ್ದ ಸಂತೋಷ್‌ಗೆ ಜೆಡಿಎಸ್‌ ಟಿಕೆಟ್?

Date:

  • ಅರಸೀಕೆರೆ ವಿಧಾನಸಭೆ ಕ್ಷೇತ್ರದ ಎನ್ ಆರ್ ಸಂತೋಷ್ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆ
  • ಐವರು ಜೆಡಿಎಸ್‌ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ ಎಚ್‌ ಡಿ ಕುಮಾರಸ್ವಾಮಿ

ಕಡೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿದಂತೆಯೇ ಜೆಡಿಎಸ್ ಅರಸೀಕೆರೆ ಅಭ್ಯರ್ಥಿಯನ್ನೂ ಬದಲಿಸಲು ಚಿಂತನೆ ನಡೆಸಿದೆ. ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತರಾಗಿದ್ದ ಎನ್ ಆರ್ ಸಂತೋಷ್ ಅರಸೀಕೆರೆಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಕೈತಪ್ಪಿದ ಕಾರಣ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.

“ಜೆಡಿಎಸ್‌ ನಾಯಕ ಹೆಚ್ ಡಿ ರೇವಣ್ಣ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಎನ್ ಆರ್ ಸಂತೋಷ್ ಅವರೊಂದಿಗೆ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದಕ್ಕೂ ಮುನ್ನ ಎನ್ ಆರ್ ಸಂತೋಷ್ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರಿಗೆ ಕರೆ ಮಾಡಿ ಅರಸೀಕೆರೆ ಟಿಕೆಟ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ನಡುವೆ ಎನ್ ಆರ್ ಸಂತೋಷ್ ಬೆಂಬಲಿಗರು ಬೆಂಗಳೂರಿನಲ್ಲಿರುವ ದೇವೇಗೌಡ ನಿವಾಸಕ್ಕೆ ತೆರಳಿ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್‌ ಆರ್‌ ಸಂತೋಷ್‌ ಅವರನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳಲಾಗಿದೆ” ಎಂದು ಜೆಡಿಎಸ್‌ ಮೂಲಗಳಿಂದ ತಿಳಿದುಬಂದಿದೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕುರುಬ ಸಮುದಾಯದ ಬಾಣಾವರ ಅಶೋಕ್‌ಗೆ ಟಿಕೆಟ್ ಘೋಷಿಸಲಾಗಿತ್ತು. ಇದೀಗ ಘೋಷಿತ ಅಭ್ಯರ್ಥಿಯಾಗಿರುವ ಅಶೋಕ್​ ಅವರ ಮನವೊಲಿಸಿ ಎನ್‌ ಆರ್‌ ಸಂತೋಷ್​ಗೆ ಟಿಕೆಟ್​ ನೀಡುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಹಾಸನ | ಬಿಜೆಪಿ ಅಭ್ಯರ್ಥಿಯ ಬೃಹತ್‌ ರ‍್ಯಾಲಿ; ಖರ್ಚಿನ ಲೆಕ್ಕವಿದೆಯೇ ಎನ್ನುತ್ತಿದ್ದಾರೆ ಸ್ಥಳೀಯರು

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು, ಶನಿವಾರ ಮತ್ತೆ ಐವರು ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದು, ಚಿತ್ರದುರ್ಗಕ್ಕೆ ವಿಧಾನ ಪರಿಷತ್‌ನ ಮಾಜಿ ಸದಸ್ಯ ರಘು ಆಚಾರ್, ಮಡಿಕೇರಿಗೆ ಎನ್.ಎಂ.ಮುತ್ತಪ್ಪ, ಮೂಡಬಿದಿರೆಗೆ ಅಮರಶ್ರೀ, ವರುಣಾ ಕ್ಷೇತ್ರಕ್ಕೆ ಮಾಜಿ ಶಾಸಕ ಡಾ.ಭಾರತಿ ಶಂಕರ್, ಬಾಗಲಕೋಟೆ ಕ್ಷೇತ್ರಕ್ಕೆ ದೇವರಾಜ್ ಪಾಟೀಲ್ ಹಾಗೂ ಯಾದಗಿರಿ ಕ್ಷೇತ್ರಕ್ಕೆ ಮಾಜಿ ಸಚಿವ ಎ.ಬಿ ಮಾಲಕರೆಡ್ಡಿ ಅವರು ಜೆಡಿಎಸ್ ಅಭ್ಯರ್ಥಿಗಳು ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಿಸಿದರು.

ಎನ್ ಆರ್ ಸಂತೋಷ್, ದೇವರಾಜ್ ಪಾಟೀಲ್  ಸೇರ್ಪಡೆ

ಇದೇ ಸಂದರ್ಭದಲ್ಲಿ ಅರಸೀಕೆರೆ ವಿಧಾನಸಭೆ ಕ್ಷೇತ್ರದ ಎನ್ ಆರ್ ಸಂತೋಷ್ ಅವರು ಬಿಜೆಪಿ ತೊರೆದು ಜೆಡಿಎಸ್ ಪಕ್ಷವನ್ನು ಸೇರಿದರು. ಹಾಗೆಯೇ, ಬಾಗಲಕೋಟೆಯ ದೇವರಾಜ್ ಪಾಟೀಲ್ ಅವರು ಕಾಂಗ್ರೆಸ್ ತೊರೆದು ಪಕ್ಷಕ್ಕೆ ಸೇರಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಲಿ: ನಿರಂಜನಾರಾಧ್ಯ ವಿ ಪಿ

ಪಠ್ಯಪುಸ್ತಕ, ಶಿಕ್ಷಣ ಕ್ಷೇತ್ರ ಸಂವಿಧಾನಕ್ಕೆ ಬದ್ಧವಾಗಿರಲಿ ಶಿಕ್ಷಕರ ನೇಮಕ ವೇಗಗತಿಯಲ್ಲಿ ಆರಂಭವಾಗಲಿ ಶಾಲಾ ಶಿಕ್ಷಣವನ್ನು...

ನಾನು ಪದವಿ ಆಕಾಂಕ್ಷಿಯಲ್ಲ; ಕೊಟ್ಟರೆ ಜವಾಬ್ದಾರಿ ನಿಭಾಯಿಸುವೆ: ಶೆಟ್ಟರ್

ಪಕ್ಷ ಕೊಡುವ ಜವಾಬ್ದಾರಿ ನಿಭಾಯಿಸುವೆ ಎಂದ ಮಾಜಿ ಸಿಎಂ ಶೆಟ್ಟರ್ ಸೋತರೂ ಜಗದೀಶ್...

ಕಾಂಗ್ರೆಸ್‌ ಸರ್ಕಾರದ ಸಂಭಾವ್ಯ ಸಚಿವರ ಪಟ್ಟಿ

ಆಕಾಂಕ್ಷಿಗಳ ಪಟ್ಟಿ ಜೊತೆ ದೆಹಲಿಗೆ ತೆರಳಿದ ಎಸ್ಡಿಕೆ ಜೋಡಿ ಶನಿವಾರ ಪೂರ್ಣ ಪ್ರಮಾಣದ...

ಶನಿವಾರ ಸಿದ್ದರಾಮಯ್ಯ ಪ್ರಮಾಣವಚನ; ಸಚಿವ ಸಂಪುಟ ರಚನೆಗೆ ಸಿಎಂ-ಡಿಸಿಎಂ ಕಸರತ್ತು

ನಾಲ್ಕೈದು ದಿನಗಳ ಹಗ್ಗಜಗ್ಗಾಟದ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ...