ಗೊಂದಲ ಗಲಭೆ ಇಲ್ಲದ ಚುನಾವಣೆ ನಡೆಯಲಿ: ಶೋಭಾ ಕರಂದ್ಲಾಜೆ

Date:

  • ಈ ಬಾರಿ ಚುನಾವಣೆ ಶಾಂತಿಯುತ ಮತದಾನದಿಂದ ಕೂಡಿರಲಿ ಶೋಭಾ ಕರಂದ್ಲಾಜೆ
  • ಜನತೆ ಡಬಲ್ ಎಂಜಿನ್ ಸರ್ಕಾರ ರಚನೆಗೆ ಮತ್ತೆ ಅವಕಾಶ ಮಾಡಿಕೊಡಲಿದ್ದಾರೆ

ಚುನಾವಣಾ ದಿನಾಂಕ ನಿಗದಿಪಡಿಸಿಕೊಂಡಿರುವ ರಾಜ್ಯ ವಿಧಾನಸಭಾ ಚುನಾವಣೆ ಗೊಂದಲ ಗಲಭೆ ಇಲ್ಲದೆ ನಡೆಯುವಂತಾಗಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಶಯ ವ್ಯಕ್ತಪಡಿಸಿದರು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಮರುಮತದಾನವಾಗದ ಚುನಾವಣೆ ನಡೆಯಲಿ ಎಂದರು.

ಒಂದೇ ಹಂತದಲ್ಲಿ ಚುನಾವಣೆ ನಡೆಯಬೇಕು ಎಂಬುವುದು ನಮ್ಮ ನಿರೀಕ್ಷೆಯಾಗಿತ್ತು. ಅದರಂತೆಯೇ ಚುನಾವಣೆ ನಡೆಯುತ್ತಿದೆ. ಶಾಂತಿಯುತ ಮತದಾನದಿಂದ ಕೂಡಿರಲಿ, ಈ ಬಾರಿ ಚುನಾವಣೆಯಲ್ಲಿ 9.17 ಲಕ್ಷ ಯುವಜನರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ ಎಂದರು.

ಒಟ್ಟಾರೆ ಮತದಾರ ಪಟ್ಟಿಗೆ ನೋಂದಣಿ ಮಾಡಿಸಲು ಏಪ್ರಿಲ್ 11ವರೆಗೆ ಅವಕಾಶ ನೀಡಲಾಗಿದೆ. ಇದು ಸ್ವಾಗತಾರ್ಹ ಎಂದು ಕೇಂದ್ರ ಸಚಿವೆ ತಿಳಿಸಿದರು.

80 ವರ್ಷಕ್ಕಿಂತ ಮೇಲ್ಪಟ್ಟ 12 ಲಕ್ಷಕ್ಕೂ ಹೆಚ್ಚು ಮತದಾರರು, ಸಾವಿರಾರು ದಿವ್ಯಾಂಗ ಮತದಾರರು ಮನೆಯಲ್ಲೇ ಕುಳಿತು ಮತದಾನ ಮಾಡಲು ಅವಕಾಶ ನೀಡಲಾಗಿದೆ.

ಚುನಾವಣಾ ಆಯೋಗದ ಈ ನಡೆ ಸ್ವಾಗತಾರ್ಹ. ತಂತ್ರಜ್ಞಾನಕ್ಕೆ ಒತ್ತುಕೊಟ್ಟ ಕಾರಣ ಇದು ಸಾಧ್ಯವಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಬೆಂಗಳೂರಿಗೆ ಒತ್ತು

ಬೆಂಗಳೂರಿನಲ್ಲಿ ಮತದಾನದ ಶೇಕಡಾವಾರು ಕಡಿಮೆ ಆಗುವ ಕುರಿತು ಆಯೋಗ ಆತಂಕ ವ್ಯಕ್ತಪಡಿಸಿದೆ. ಜತೆಗೆ ಈ ವಿಚಾರದ ಬಗ್ಗೆ ನಾಗರಿಕರು ಹೆಚ್ಚು ಒತ್ತು ಕೊಡಲು ಕೋರಿದೆ.

ಇದಕ್ಕಾಗಿ ನಗರದ ಮತದಾರರನ್ನು ಕರೆತರಲು ಮತ್ತು ಮನ ಒಲಿಸಲು ವಿಶೇಷ ಪ್ರಯತ್ನ ಅಗತ್ಯ. ಇದನ್ನು ಪಕ್ಷಾತೀತವಾಗಿ ಎಲ್ಲರೂ ಮಾಡುವಂತಾಗಬೇಕು ಎಂದು ಅವರು ನುಡಿದರು.

ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪುರುಷ ಮತದಾರರು ಬಹುತೇಕ ಸರಿಸಮವಾಗಿ ಮಹಿಳಾ ಮತದಾರರರಿದ್ದಾರೆ, ಕೆಲವೆಡೆ ಹೆಚ್ಚು ಮತದಾರರಿರುವುದೂ ಖುಷಿಯ ವಿಚಾರ ಎಂದು ಕೇಂದ್ರ ಸಚಿವೆ ಮೆಚ್ಚುಗೆ ವ್ಯಕ್ತಪಡಿಸಿದರು.

2018ರಲ್ಲಿ ಬಿಜೆಪಿ 104 ಸೀಟುಗಳ ಜೊತೆ ಅತ್ಯಂತ ದೊಡ್ಡ ಪಕ್ಷವಾಗಿ ಜನಾಶೀರ್ವಾದ ಪಡೆದಿತ್ತು. ಆದರೆ, ಬಹುಮತ ಸಿಗಲಿಲ್ಲ. ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಸರಕಾರ ರಚಿಸಲಾಯಿತು.

ಆದರೆ ಮುಂದಿನ ಚುನಾವಣೆಯಲ್ಲಿ ಜನ ಇದಕ್ಕೆ ಆಸ್ಪದ ನೀಡದೆ ಬಿಜೆಪಿಗೆ ಪೂರ್ಣ ಬಹುಮತ ನೀಡಲಿದ್ದಾರೆ ಎಂದು ಶೋಭಾ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆ ಬಂದಾಗ ಗ್ಯಾರಂಟಿ ಕೊಡುವ ಪಕ್ಷಗಳು. ಚುನಾವಣೆಗಾಗಿ ಜಾತಿ, ಧರ್ಮದ ಹೆಸರು ಹೇಳಿ ಒಡೆದು ಆಳುವ ಕೆಲಸ ಮಾಡುತ್ತವೆ ಎಂದು ಶೋಭಾ ಆರೋಪಿಸಿದರು.

2013-18ರ ಕಾಲಾವಧಿಯಲ್ಲಿ ಕೂಡ ಕಾಂಗ್ರೆಸ್ ಆಡಳಿತವಿದ್ದಾಗ ಆ ಪಕ್ಷ ಇದನ್ನೇ ಮಾಡಿತ್ತು. ಸಿದ್ದರಾಮಯ್ಯರ ಸರಕಾರ ಸಮಾಜ, ಧರ್ಮವನ್ನು ಒಡೆಯುವ ದುಷ್ಕೃತ್ಯ ಮಾಡಿತ್ತು ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ?:ಈ ಬಾರಿಯ ಚುನಾವಣೆಗೆ ಹೊಸ ಇವಿಎಂ, ವಿವಿಪ್ಯಾಟ್ ಬಳಕೆ…

ಬಿಜೆಪಿ ಸರ್ವ ಜನಾಂಗವನ್ನು ಒಟ್ಟಿಗೆ ಒಯ್ಯುವ, ಯಾವುದೇ ಯೋಜನೆ ಇದ್ದರೂ ಎಲ್ಲ ಜನಾಂಗಗಳ ಕೊನೆ ವ್ಯಕ್ತಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಹೆಚ್ಚು ವೇಗವಾಗಿ ಅಭಿವೃದ್ಧಿ ಕಾರ್ಯ ಸಾಧ್ಯ ಎಂದು ಜನರು ಅಭಿಪ್ರಾಯ ಹೊಂದಿದ್ದಾರೆ.

ಕರ್ನಾಟಕದಲ್ಲಿ ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ಸರ್ಕಾರದ ಯೋಜನೆಗಳನ್ನು ನಾವು ನಿರಂತರವಾಗಿ ಜನರಿಗೆ ತಿಳಿಸುತ್ತಿದ್ದೆವು. ಚುನಾವಣೆ ಇಲ್ಲದ ಕಾಲದಲ್ಲೂ ನಾವು ಇದನ್ನು ಶಿಸ್ತಿನಿಂದ ಮಾಡಿದ್ದೇವೆ ಎಂದು ಅವರು ಹೇಳಿದರು.

ಹೀಗಾಗಿ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಜನತೆ ಡಬಲ್ ಎಂಜಿನ್ ಸರ್ಕಾರ ರಚನೆಗೆ ಮತ್ತೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪನಿಶ್ಮೆಂಟ್‌ಗೆ ಆಸ್ಪದ ಕೊಡಬೇಡಿ, ಒಳ್ಳೆ ಕೆಲಸ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಎಚ್ಚರಿಕೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ 'ಪನಿಶ್ಮೆಂಟ್ ಮಾಡೋದು ದೊಡ್ಡ...

ಕೇಂದ್ರದ ಯೋಜನೆ ರಾಜ್ಯದ ಜನರಿಗೆ ತಲುಪಿಸುವಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟ: ಬೊಮ್ಮಾಯಿ

'ಕೇಂದ್ರ ಸರ್ಕಾರಕ್ಕೆ 9 ವರ್ಷ, ನರೇಂದ್ರ ಮೋದಿ ಆಡಳಿತ ಮುಂದುವರೆಯಲಿʼ 'ಐದು ಗ್ಯಾರಂಟಿಗಳ...

ನೂತನ ಸಚಿವರಿಗೆ ಕೊಠಡಿ ಹಂಚಿಕೆ: ಇಲ್ಲಿದೆ ಪೂರ್ಣ ಮಾಹಿತಿ

ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ ಸಿಎಂ ಹೊಸ ಸಚಿವರಿಗೆ ಶಕ್ತಿ ಸೌಧದಲ್ಲಿ...

ಆರ್‌ಎಸ್‌ಎಸ್‌-ಬಜರಂಗದಳದ ದಲಿತರು, ಶೂದ್ರರನ್ನು ಸೆಳೆಯಬೇಕಿದೆ: ಸತೀಶ್‌ ಜಾರಕಿಹೊಳಿ

ಒಂದು ಸಂಘಟನೆ ನಿಷೇಧಿಸಿದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ ದಲಿತರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ...