ಮುಖ್ಯಮಂತ್ರಿ ಯಾರು ಎಂಬ ವಿಚಾರದಲ್ಲಿ ಯಾವ ಗಂಟೂ ಇಲ್ಲ. ಕಗ್ಗಂಟೂ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ, ನೂರಕ್ಕೆ ನೂರರಷ್ಟು ವಿಶ್ವಾಸವಿದೆ ಎಂದು ತುಮಕೂರು ಜಿಲ್ಲೆಯ ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, “ಸಿದ್ದರಾಮಯ್ಯ ಖಂಡಿತಾ ಮುಖ್ಯಮಂತ್ರಿ ಆಗುತ್ತಾರೆ. ಪಕ್ಷದ ವರಿಷ್ಠರ ಒಲವು ಕೂಡ ಸಿದ್ದರಾಮಯ್ಯ ಪರವಾಗಿದೆ. ಡಿ.ಕೆ ಶಿವಕುಮಾರ್ ಕೂಡ ಸಹಕಾರ ನೀಡುತ್ತಾರೆ. ದೆಹಲಿಗೆ ಕರೆದಿರುವುದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನದ ಭಾಗವಾಗಿದೆ. ಮೇ 18ರಂದು ಪ್ರಮಾಣವಚನ ಸ್ವೀಕಾರವಾಗಬಹುದು” ಎಂದು ಹೇಳಿದ್ದಾರೆ.
“ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಕ್ಯಾಬಿನೆಟ್ ರಚಿಸಿ, ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿ, ಪಡಿತರರಿಗೆ 10 ಕೆಜಿ ಅಕ್ಕಿ ನೀಡುವ ಘೋಷಣೆ ಮಾಡಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
“ಸಚಿವ ಸಂಪುಟ ರಚನೆ ತಡವಾಗಬಹುದು. ನನಗೆ ಸಚಿವ ಸ್ಥಾನ ಬೇಕು. ಆದರೆ, ಸಹಕಾರ ಸಚಿವ ಸ್ಥಾನವೇ ಆಗಬೇಕು ಎಂದೇನು ಇಲ್ಲ” ಎಂದಿದ್ದಾರೆ.