ಕಷ್ಟ ಪಟ್ಟಿದ್ದೀವಿ, ಕೂಲಿ ಕೊಡಿ ಎಂದು ನಮ್ಮ ನಾಯಕರನ್ನು ಕೇಳುತ್ತೇವೆ: ಡಿ ಕೆ ಸುರೇಶ್‌

Date:

ನಮ್ಮ ಅಣ್ಣ ಡಿ ಕೆ ಶಿವಕುಮಾರ್‌ ಅವರು ಸಂಕಷ್ಟದ ಸಮಯದಲ್ಲಿ ಪಕ್ಷಕ್ಕೆ ಬಲ ತಂದಿದ್ದಾರೆ. ಸತತ ಮೂರು ವರ್ಷಗಳ ಹೋರಾಟದ ಫಲವಾಗಿ ಇಂದು ಕಾಂಗ್ರೆಸ್‌ ಡಿಕೆಶಿ ಅವರ ಅಧ್ಯಕ್ಷತೆಯಲ್ಲಿ 135 ಸ್ಥಾನ ಪಡೆದಿದೆ. ಇದನ್ನೆಲ್ಲ ಹೈಕಮಾಂಡ್‌ ಗಮನಿಸಿ ಒಳ್ಳೆಯ ಫಲವನ್ನೇ ನೀಡಲಿದೆ ಎಂದು ಸಂಸದ ಡಿ ಕೆ ಸುರೇಶ್‌ ತಿಳಿಸಿದರು.

ಮುಖ್ಯಮಂತ್ರಿ ಆಯ್ಕೆ ವಿಚಾರ ಹೈಕಮಾಂಡ್‌ ಅಂಗಳದಲ್ಲಿದ್ದು, ದೆಹಲಿಗೆ ತೆರಳಿರುವ ಡಿ ಕೆ ಸುರೇಶ್‌ ಅವರು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

“ಡಿಕೆಶಿ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಬಯಕೆ ಕೂಡ ಹೌದು. ಸೋನಿಯಾ ಗಾಂಧಿ ಅವರಿಗೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟ ಮಾತಿನಂತೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಂದಿನ ತೀರ್ಮಾನ ಹೈಕಮಾಂಡ್‌ ನಾಯಕರು ಮಾಡುತ್ತಾರೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಧಿಕಾರ ಹಂಚಿಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಮಾಧ್ಯಮಗಳ ಸೃಷ್ಟಿ ಅದು. ಕಷ್ಟ ಪಟ್ಟವರಿಗೆ ಫಲ ಸಿಗಲಿದೆ ಎಂಬುದು ಡಿಕೆಶಿ ಅವರ ಆಶಯ. ಕಷ್ಟ ಪಟ್ಟಿದ್ದೀವಿ, ಕೂಲಿ ಕೊಡಿ ಎಂದು ನಾಯಕರನ್ನು ಕೇಳುತ್ತೇವೆ” ಎಂದು ಡಿ ಕೆ ಸುರೇಶ್‌ ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸೇತುವೆಗಳು ಕುಸಿಯುತ್ತಿರುವ ಇಂದಿನ ಕಾಲದಲ್ಲಿ ಸ್ನೇಹ ಕುಸಿಯದಂತೆ ಎಚ್ಚರಿಕೆ ವಹಿಸಿ : ಬರಗೂರು ರಾಮಚಂದ್ರಪ್ಪ

"ಕಟ್ಟಡಗಳು, ಸೇತುವೆಗಳು ಕುಸಿಯುತ್ತಿರುವ ಇಂದಿನ ಕಾಲದಲ್ಲಿ, ಮನುಷ್ಯ, ಮನುಷ್ಯರ ನಡುವಿನ ಸ್ನೇಹ...

ಮಂಗಳೂರು | ಮೀನು ರಫ್ತು ಕಂಪನಿಯಲ್ಲಿ ಭಾರೀ ಬೆಂಕಿ ಅವಘಡ; 10 ಕೋಟಿ ರೂ. ಮೌಲ್ಯದ ಸೊತ್ತು ನಷ್ಟ

rದಲ್ಲಿ ಕಾರ್ಯಾಚರಿಸುತ್ತಿದ್ದ ಮೀನು ರಫ್ತು ಘಟಕದ ಕಂಪನಿಯಲ್ಲಿ ಭಾನುವಾರ ಮಧ್ಯಾಹ್ನ ಭಾರೀ...

ಒಟ್ಟಾಗಿ ಕೆಲಸ ಮಾಡಿ, ‘ಸಹಕಾರಿ’ ಕಲ್ಪನೆಗೆ ಒತ್ತು ಕೊಡಿ: ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್

ಸಮಾಜದ ಸುಧಾರಣೆಗಾಗಿ 'ಒಟ್ಟಿಗೆ ಕೆಲಸ ಮಾಡಲು ಜನರು ಮತ್ತು ಸಮುದಾಯಗಳನ್ನು ಪ್ರೋತ್ಸಾಹಿಸುವ...