ಟಾಲಿವುಡ್‌ನಲ್ಲಿ 20 ವರ್ಷ ಪೂರೈಸಿದ ಅಲ್ಲು ಅರ್ಜುನ್‌

Date:

  • ಸದ್ಯ ‘ಪುಷ್ಪ-2’ ಚಿತ್ರದಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್‌
  • ‘ಗಂಗೋತ್ರಿ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿ ತೆರೆ ಪ್ರವೇಶ

ಸ್ಟಾರ್‌ ನಟ ಅಲ್ಲು ಅರ್ಜುನ್‌ ಮಾರ್ಚ್‌ 28ಕ್ಕೆ ತೆಲುಗು ಚಿತ್ರರಂಗವನ್ನು ಪ್ರವೇಶಿಸಿ 20 ವರ್ಷಗಳು ಸಂದಿವೆ. ಚಿತ್ರರಂಗದಲ್ಲಿ ಬರೋಬ್ಬರಿ ಎರಡು ದಶಕಗಳನ್ನು ಪೂರೈಸಿರುವ ನಟನಿಗೆ ಅಭಿಮಾನಿಗಳು ಮತ್ತು ಭಾರತೀಯ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಟಾಲಿವುಡ್‌ನಲ್ಲಿ ಎರಡು ದಶಕಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಅಲ್ಲು ಅರ್ಜುನ್‌ ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದು, “ಇಂದಿಗೆ ಚಿತ್ರರಂಗದಲ್ಲಿ 20 ವರ್ಷಗಳ ಪೂರೈಸಿದ್ದೇನೆ. ಈ ಸುದೀರ್ಘ ಪಯಣದಲ್ಲಿ ನನ್ನನ್ನು ಹರಸಿದ, ಪ್ರೀತಿ ತೋರಿದ ಚಿತ್ರರಂಗದ ಎಲ್ಲ ಆಪ್ತರಿಗೆ ನಾನು ಋಣಿ. ನಾನು ಇವತ್ತಿಗೆ ಏನೇ ಆಗಿದ್ದರೂ ಅದಕ್ಕೆ ನನ್ನ ಅಭಿಮಾನಿಗಳು ಮತ್ತು ಸಿನಿಮಾ ಪ್ರೇಮಿಗಳೇ ಕಾರಣ, ಅವರೆಲ್ಲರಿಗೂ ಕೃತಜ್ಞನಾಗಿರುತ್ತೇನೆ” ಎಂದಿದ್ದಾರೆ.

1985ರಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಮುಖ್ಯಭೂಮಿಕೆಯಲ್ಲಿ ತೆರೆಕಂಡ ʼವಿಜೇತʼ ಚಿತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದ ಅಲ್ಲು, 2003ರ ಮಾರ್ಚ್‌ 28ರಂದು ಕೆ ರಾಘವೇಂದ್ರ ನಿರ್ದೇಶನದಲ್ಲಿ ತೆರೆಕಂಡ ʼಗಂಗೋತ್ರಿʼ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಬೆಳ್ಳಿತೆರೆ ಪ್ರವೇಶಿಸಿದರು. ಚೊಚ್ಚಲ ಚಿತ್ರದಲ್ಲಿ ಅಲ್ಲುಗೆ ನಟಿ ಅದಿತಿ ಅಗರ್‌ವಾಲ್‌ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ʼಗಂಗೋತ್ರಿʼ ಬಳಿಕ ಅವರು ನಟಿಸಿದ ʼಆರ್ಯಾʼ, ʼಬನ್ನಿʼ, ʼಹ್ಯಾಪ್ಪಿʼ, ʼದೇಶಮುದುರುʼ ಚಿತ್ರಗಳು ಸೂಪರ್‌ ಹಿಟ್‌ ಆದವು. ನೋಡು ನೋಡುತ್ತಲೇ ಸ್ಟಾರ್‌ ನಟನಾಗಿ ಬೆಳೆದ ಅಲ್ಲು ಅರ್ಜುನ್‌ ಕಳೆದ 2 ದಶಕಗಳಲ್ಲಿ 21ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ʼಎವುಡುʼ, ʼರೇಸ್‌ ಗುರ್ರಂʼ, ʼಸರೈನೋಡುʼ, ಅಲಾ ʼವೈಕುಂಟಪುರಮ್ಲೋʼ ಸೇರಿದಂತೆ ಬಹುಪಾಲು ಚಿತ್ರಗಳು ಯಶಸ್ಸು ಕಂಡಿವೆ. 2021ರಲ್ಲಿ ತೆರೆಕಂಡಿದ್ದ ʼಪುಷ್ಪʼ ಸಿನಿಮಾ ಅವರಿಗೆ ಪ್ಯಾನ್‌ ಇಂಡಿಯಾ ಸ್ಟಾರ್‌ ಪಟ್ಟ ತಂದುಕೊಟ್ಟಿತ್ತು. ಸದ್ಯ ಅಲ್ಲು ʼಪುಷ್ಫ-2ʼ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೊದಲು ಹೊಡೆದು ನಂತರ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್: ವಿಡಿಯೋ ವೈರಲ್

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ...

ಬಿಗ್‌ಬಾಸ್ ಶೋನಲ್ಲಿ ಭೋವಿ ಜನಾಂಗಕ್ಕೆ ಅವಹೇಳನ ಆರೋಪ: ಸ್ಪರ್ಧಿ ತನಿಷಾ ವಿರುದ್ಧ ಎಫ್‌ಐಆರ್

ಇತ್ತೀಚೆಗಷ್ಟೇ ಕನ್ನಡದ 'ಬಿಗ್‌ಬಾಸ್ ರಿಯಾಲಿಟಿ ಶೋ'ನಲ್ಲಿ ಸ್ಪರ್ಧಾಳುವಾಗಿದ್ದ ವರ್ತೂರು ಸಂತೋಷ್ ಹುಲಿ...

ಚಿತ್ರಮಂದಿರದೊಳಗೆ ಪಟಾಕಿ ಸಿಡಿಸಿದ ಅಭಿಮಾನಿಗಳು: ಭಯಭೀತರಾಗಿ ಎದ್ದುಬಿದ್ದು ಓಡಿದ ಪ್ರೇಕ್ಷಕರು

ಮಹಾರಾಷ್ಟ್ರ ರಾಜ್ಯದ ಮಾಲೆಗಾಂವ್ ಪ್ರದೇಶದಲ್ಲಿನ ಮೋಹನ್‌ ಚಿತ್ರಮಂದಿರದಲ್ಲಿ ಟೈಗರ್ 3 ಸಿನಿಮಾ...

ಮಹಿಳೆಗೆ ನಾಯಿ ಕಚ್ಚಿದ್ದ ಪ್ರಕರಣ; ನಟ ದರ್ಶನ್‌ಗೆ ಪೊಲೀಸರ ನೋಟಿಸ್

ಮಹಿಳೆಯೊಬ್ಬರಿಗೆ ನಾಯಿ ಕಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಅವರಿಗೆ ರಾಜರಾಜೇಶ್ವರಿ...