ರಜನಿಕಾಂತ್ ‘ಡೆಡ್ಲಿ ಡಾಕ್ಟರ್’ ಸೀಕ್ರೆಟ್ ಔಟ್; ವದಂತಿಗಳಿಗೆ ಬ್ರೇಕ್ ಹಾಕಿದ ‘ಧರ್ಮನ್’ ನಿರ್ದೇಶಕ

Date:

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ 173ನೇ ಚಿತ್ರ ‘ಧರ್ಮನ್: ದಿ ಡೆಡ್ಲಿ ಡಾಕ್ಟರ್’ ಬಗ್ಗೆ ಸಾಕಷ್ಟು ವದಂತಿಗಳು ಹರಡುತ್ತಿದೆ. ಈ ಸಿನಿಮಾ ಪ್ರಸಿದ್ಧ ಹಾಲಿವುಡ್ ಸರಣಿ ‘ದಿ ಗುಡ್ ಡಾಕ್ಟರ್’ನ ರಿಮೇಕ್ ಎಂಬುದು ಇತ್ತೀಚಿನ ವದಂತಿ. ಈ ಗೊಂದಲಕ್ಕೆ ಚಿತ್ರದ ನಿರ್ದೇಶಕರು ಅಧಿಕೃತವಾಗಿ ತೆರೆ ಎಳೆದಿದ್ದಾರೆ.

- Advertisement -

ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಧರ್ಮನ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಪೋಸ್ಟರ್‌ನಲ್ಲಿ “ದಿ ಡೆಡ್ಲಿ ಡಾಕ್ಟರ್” ಎಂಬ ಅಡಿಬರಹ ಇದ್ದುದರಿಂದ, ರಜನಿಕಾಂತ್ ಈ ಚಿತ್ರದಲ್ಲಿ ವೈದ್ಯನ ಪಾತ್ರ ಮಾಡುತ್ತಿದ್ದಾರೆ ಎಂಬುದು ಖಚಿತವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

ಇದನ್ನೂ ಓದಿ: ಐಶ್ವರ್ಯಾ ರಜನಿಕಾಂತ್‌ ಮನೆಯಲ್ಲಿ ಚಿನ್ನಾಭರಣ ಕಳವು : ಕೆಲಸದವರ ಮೇಲೆ ಶಂಕೆ

ಇದಾದ ಬೆನ್ನಲ್ಲೇ, ಸಾಮಾಜಿಕ ಜಾಲತಾಣವಾದ ‘X’ (ಟ್ವಿಟರ್) ನಲ್ಲಿ ನೆಟ್ಟಿಗರೊಬ್ಬರು, “ಧರ್ಮನ್ ಚಿತ್ರವು ನೆಟ್‌ಫ್ಲಿಕ್ಸ್‌ನ ಪ್ರಸಿದ್ಧ ವೈದ್ಯಕೀಯ ಡ್ರಾಮಾ ಸರಣಿ ‘ದಿ ಗುಡ್ ಡಾಕ್ಟರ್’ನ ಅಧಿಕೃತ ರಿಮೇಕ್ ಆಗಿದ್ದು, ನಿರ್ಮಾಣ ಸಂಸ್ಥೆಯು ಇದರ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದೆ” ಎಂದು ಪೋಸ್ಟ್ ಮಾಡಿದ್ದರು. ಈ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು.

ಈ ವದಂತಿಗಳ ಕುರಿತು ಮೌನ ಮುರಿದಿರುವ ಚಿತ್ರದ ನಿರ್ದೇಶಕ ಅಶ್ವಥ್ ಮಾರಿಮುತ್ತು, ಆ ಪೋಸ್ಟ್ ಅನ್ನು ಮರುಟ್ವೀಟ್ (Quote-tweet) ಮಾಡುವ ಮೂಲಕ ನೇರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ವದಂತಿಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಅವರು, ಕೇವಲ “ಫೇಕ್ ನ್ಯೂಸ್! (ಸುಳ್ಳು ಸುದ್ದಿ!)” ಎಂದು ಬರೆದಿದ್ದಾರೆ. ಈ ಮೂಲಕ ಚಿತ್ರವು ಯಾವುದೇ ಸರಣಿಯ ರಿಮೇಕ್ ಅಲ್ಲ, ಇದು ಸಂಪೂರ್ಣ ಸ್ವತಂತ್ರ ಕಥೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

good doctor

‘5 ರೂಪಾಯಿ ವೈದ್ಯರ’ ಕಥೆಯೂ ಇದಲ್ಲ!

ಚಿತ್ರದ ಕಥೆಯ ಬಗ್ಗೆ ಹರಡಿದ್ದ ಮತ್ತೊಂದು ವದಂತಿಗೂ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ತಮಿಳುನಾಡಿನ ಪ್ರಸಿದ್ಧ “5 ರೂಪಾಯಿ ವೈದ್ಯರ” (ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು) ಜೀವನಾಧಾರಿತ ಕಥೆ ಇದಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಥ್, “ಇದು 5 ರೂಪಾಯಿ ವೈದ್ಯರ ಕಥೆಯಲ್ಲ. ವದಂತಿಗಳನ್ನು ನಂಬಬೇಡಿ. ಚಿತ್ರದಲ್ಲಿ ರಜನಿಕಾಂತ್ ಅವರು ಅತ್ಯಂತ ಸ್ಟೈಲಿಶ್ ಹಾಗೂ ಡೆಡ್ಲಿ ಆದ ‘ಧರ್ಮನ್’ ಎಂಬ ಸರ್ಜನ್ (ಶಸ್ತ್ರಚಿಕಿತ್ಸಕ) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಭರಪೂರ ಮನರಂಜನೆ ಹಾಗೂ ಆ್ಯಕ್ಷನ್ ಒಳಗೊಂಡ ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ” ಎಂದು ತಿಳಿಸಿದ್ದಾರೆ.

“ನನಗೆ ರಜಿನಿ ಸಾರ್ ಅವರ ‘ಪಡೆಯಪ್ಪ’ ಮತ್ತು ಕಮಲ್ ಸಾರ್ ಅವರ ‘ವೇಟ್ಟೈಯಾಡು ವಿಲೈಯಾಡು’ ಚಿತ್ರಗಳೆಂದರೆ ತುಂಬಾ ಇಷ್ಟ. ಈ ‘ಧರ್ಮನ್’ ಸಿನಿಮಾ ಆ ಎರಡೂ ಚಿತ್ರಗಳ ಮಿಶ್ರಣದಂತೆ ಇರಲಿದೆ. ಡಾ. ಧರ್ಮನ್ ಅವರ ಸ್ವಾಗ್‌ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲಿದೆ” ಎಂದು ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಉಳಗನಾಯಗನ್ ಕಮಲ್ ಹಾಸನ್ ಅವರ 40 ವರ್ಷಗಳ ಸ್ನೇಹದ ಸಂಕೇತವಾಗಿ ಈ ಚಿತ್ರ ಮೂಡಿಬರುತ್ತಿದ್ದು, ಕಮಲ್ ಹಾಸನ್ ಅವರೇ ಇದನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಅವರಿಗೆ ಜೋಡಿಯಾಗಿ ಹಿರಿಯ ನಟಿ ಸಿಮ್ರಾನ್ ಕಾಣಿಸಿಕೊಳ್ಳುತ್ತಿದ್ದು, ಪ್ರಮುಖ ಪಾತ್ರವೊಂದರಲ್ಲಿ ರಾಶಿ ಖನ್ನಾ ಹಾಗೂ ಹಾಸ್ಯ ನಟ ಯೋಗಿ ಬಾಬು ನಟಿಸುತ್ತಿದ್ದಾರೆ.

ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಒಟ್ಟು 8 ಹಾಡುಗಳು ಚಿತ್ರದಲ್ಲಿರಲಿವೆ ಎಂದು ನಿರ್ದೇಶಕರು ಖಚಿತಪಡಿಸಿದ್ದಾರೆ. ಸದ್ಯ ಚೆನ್ನೈನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ರಜನಿಕಾಂತ್ ಅವರ ಭರ್ಜರಿ ಇಂಟ್ರೊಡಕ್ಷನ್ ಸಾಂಗ್ ಹಾಗೂ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ತಮಿಳು ಚಿತ್ರರಂಗದ ಇಬ್ಬರು ದೈತ್ಯ ನಟರ ಸಿನಿಮಾ ಇದಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಗಗನಕ್ಕೇರಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗರಹೊಳೆ: ಜೇನುಕುರುಬ ಕುಟುಂಬಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ; ಸರ್ಕಾರದ ಕ್ರಮಕ್ಕೆ ಆದಿವಾಸಿಗಳ ಆಕ್ರೋಶ

ಕೊಡಗು ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ‘ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ’ದಲ್ಲಿ...

ಹಾವೇರಿ | ನ.14ರಂದು ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ

ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

ಕರ್ನಾಟಕದ ಜೈನ ಪರಂಪರೆಗೆ ಹಾವೇರಿಯ ಕೊಡುಗೆ ಅಪಾರ: ಡಾ. ಶಿವಯೋಗಿ ಆರ್ ಕೋರಿಶೆಟ್ಟರ್‌

ಕರ್ನಾಟಕದಲ್ಲಿ ಪ್ರತಿ ಐದು ಗ್ರಾಮಗಳಿಗೆ ಒಂದು ಜೈನಧರ್ಮಕ್ಕೆ ಸಂಬಂಧಿದ ಕುರುಹುಗಳು ದೊರೆಯುತ್ತವೆ....

ಸೌದಿ ಅರೇಬಿಯಾ: ವಿವಾಹೇತರ ಗರ್ಭಧಾರಣೆಗೆ ಕೀನ್ಯಾ ಮಹಿಳೆಗೆ 100 ಛಡಿಯೇಟಿನ ಶಿಕ್ಷೆ

ಸೌದಿ ಅರೇಬಿಯಾದಲ್ಲಿ ವಿವಾಹೇತರ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ ಕೀನ್ಯಾದ ಗೃಹ...