ತಮಿಳು ಚಿತ್ರರಂಗದ ‘ಮಾಸ್ಟರ್ ಸ್ಟೋರಿ ಟೆಲ್ಲರ್’, ಖ್ಯಾತ ನಟ-ನಿರ್ದೇಶಕ ಕೆ. ಭಾಗ್ಯರಾಜ್ ನಿಧನ

Date:

ತಮಿಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ಬರಹಗಾರ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ (73) ಅವರು ಶನಿವಾರ (ಜೂನ್ 27) ನಿಧನರಾಗಿದ್ದಾರೆ.
ತೀವ್ರ ಹೃದಯಾಘಾತಕ್ಕೊಳಗಾದ ಅವರನ್ನು ತಕ್ಷಣವೇ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ಪತ್ನಿ ಪೂರ್ಣಿಮಾ ಭಾಗ್ಯರಾಜ್ ಹಾಗೂ ಮಕ್ಕಳಾದ ನಟ ಶಾಂತನು ಮತ್ತು ಶರಣ್ಯಾ ಭಾಗ್ಯರಾಜ್ ಅವರನ್ನು ಅಗಲಿದ್ದಾರೆ.

- Advertisement -

ಚಿತ್ರಕಥೆ ರಚನೆಯಲ್ಲಿ ಭಾರಿ ಪರಿಣತಿ ಹೊಂದಿದ್ದ ಅವರು, ಭವಿಷ್ಯದ ನಿರ್ದೇಶಕರಿಗೆ ಮಾದರಿಯಾಗುವಂತಹ ಕಥೆ ಹೇಳುವ ನಿರೂಪಣಾ ಶೈಲಿಯನ್ನು ಪರಿಚಯಿಸಿದ್ದರು. ಅವರ ನಿರ್ದೇಶನ, ನಿರ್ಮಾಣ ಹಾಗೂ ನಟನೆಯ ‘ಮೌನ ಗೀತಂಗಳ್’, ‘ಅಂದ 7 ನಾಟ್ಕಳ್’ ಮತ್ತು ‘ಮುಂದಾನೈ ಮುಡಿಚ್ಚು’ ಮುಂತಾದ ಚಿತ್ರಗಳು ತಮ್ಮ ಕಥಾಹಂದರ ಹಾಗೂ ಪಾತ್ರ ಪೋಷಣೆಗಾಗಿ ಇಂದಿಗೂ ಅಧ್ಯಯನ ಯೋಗ್ಯವಾಗಿವೆ. ಕಮಲ್ ಹಾಸನ್ ಹಾಗೂ ರಜನಿಕಾಂತ್ ಅವರಂತಹ ಸೂಪರ್‌ಸ್ಟಾರ್‌ಗಳು ಮೆರೆಯುತ್ತಿದ್ದ ಕಾಲಘಟ್ಟದಲ್ಲಿ ತಮ್ಮ ವಿಭಿನ್ನ ಶೈಲಿಯ ಕಥೆಗಳ ಮೂಲಕ ಭಾಗ್ಯರಾಜ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ತಿರುಪ್ಪೂರು ಜಿಲ್ಲೆಯ ವೆಲ್ಲಕೋಯಿಲ್ ಮೂಲದವರಾದ ಭಾಗ್ಯರಾಜ್, ವಿ.ವಿ. ಬಾಲಗುರು ಅವರ ಬಳಿ ಸಹಾಯಕ ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಅಮ್ಮನ್ ಕ್ರಿಯೇಷನ್ಸ್‌ನ ನಿರ್ಮಾಪಕ ಎಸ್.ಎ. ರಾಜ್‌ಕಣ್ಣು ಅವರ ಮೂಲಕ ಹಿರಿಯ ನಿರ್ದೇಶಕ ಭಾರತಿರಾಜ ಅವರ ಪರಿಚಯವಾಯಿತು. ಭಾಗ್ಯರಾಜ್ ಅವರ ಕೈಬರಹ ಹಾಗೂ ಕಥೆ ಹೇಳುವ ಶೈಲಿಗೆ ಮಾರುಹೋದ ಭಾರತಿರಾಜ, ತಮ್ಮ ‘ಪುದಿಯ ವಾರ್ಪುಗಳ್’ ಚಿತ್ರದಲ್ಲಿ ಅವರಿಗೆ ಶಾಲಾ ಶಿಕ್ಷಕನ (ನಾಯಕ) ಅವಕಾಶ ನೀಡಿದರು. ಕಾಕತಾಳೀಯವೆಂಬಂತೆ ನಿರ್ದೇಶಕ ಭಾರತಿರಾಜ ಅವರು ಕೂಡ ಇದೇ ತಿಂಗಳ ಆರಂಭದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು.

“ಪ್ರತಿಯೊಂದು ದೃಶ್ಯದ ಹಿನ್ನೆಲೆ ಸಿದ್ಧಪಡಿಸುವಾಗಲೂ ಭಾಗ್ಯರಾಜ್ ಅವರನ್ನು ಅನುಸರಿಸಿ” ಎಂದು ಭಾರತಿರಾಜ ತಮ್ಮ ಸಹಾಯಕರಿಗೆ ಹೇಳುತ್ತಿದ್ದರು ಎಂದು ನಿರ್ದೇಶಕ ಇಳವರಸು ಸ್ಮರಿಸಿದ್ದಾರೆ. ಸಹಾಯಕ ನಿರ್ದೇಶಕರಾಗಿದ್ದ ದಿನಗಳಲ್ಲೇ ಭಾಗ್ಯರಾಜ್ ’16 ವಯದಿನಿಲೆ’ ಮತ್ತು ‘ಸಿಗಪ್ಪು ರೋಜಾಕ್ಕಳ್’ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ್ದರು. ಅಲ್ಲದೆ ‘ಭಾಗ್ಯ’ ಎಂಬ ಚಲನಚಿತ್ರ ಪತ್ರಿಕೆಯನ್ನೂ ನಡೆಸುತ್ತಿದ್ದ ಅವರು, ಕಮಲ್ ಹಾಸನ್ ಅಭಿನಯದ ‘ಒರು ಕೈದಿಯಿನ್ ಡೈರಿ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಮೊದಲ ಪತ್ನಿ ಪ್ರವೀಣಾ ಅವರ ನಿಧನದ ನಂತರ, ‘ಡಾರ್ಲಿಂಗ್, ಡಾರ್ಲಿಂಗ್, ಡಾರ್ಲಿಂಗ್’ ಚಿತ್ರದ ತಮ್ಮ ನಾಯಕಿ ಪೂರ್ಣಿಮಾ ಜಯರಾಮ್ ಅವರನ್ನು ವಿವಾಹವಾಗಿದ್ದರು.

ಸಾಂಪ್ರದಾಯಿಕ ನಾಯಕನ ಪರಿಕಲ್ಪನೆ ಬದಲಿಸಿದ ನಟ
ಚಿತ್ರರಂಗದ ಸಾಂಪ್ರದಾಯಿಕ ನಂಬಿಕೆಗಳನ್ನು ಬದಿಗೊತ್ತಿದ್ದ ಅವರು, ‘ಸುವರ್ ಇಲ್ಲಾದ ಚಿತ್ತಿರಂಗಳ್’, ‘ಒರು ಕೈ ಓಸೈ’ ಮತ್ತು ‘ತೂರಲ್ ನಿನ್ನು ಪೋಚ್ಚು’ ಎಂಬ ಭಿನ್ನ ಶೀರ್ಷಿಕೆಗಳನ್ನು ತಮ್ಮ ಆರಂಭಿಕ ಚಿತ್ರಗಳಿಗೆ ಇಟ್ಟಿದ್ದರು. ತಮಿಳು ಚಿತ್ರರಂಗದ ‘ಹೀರೋ’ ಎಂದರೆ ಕೇವಲ ದೈಹಿಕ ಬಲ ಹೊಂದಿರಬೇಕು ಎಂಬ ಗ್ರಹಿಕೆಯನ್ನು ಬದಲಾಯಿಸಿದ ಅವರು; ಬುದ್ಧಿವಂತಿಕೆ, ಹಾಸ್ಯ ಪ್ರಜ್ಞೆ ಮತ್ತು ಸಾಮಾನ್ಯ ಮನುಷ್ಯನ ದೌರ್ಬಲ್ಯಗಳನ್ನು ತೆರೆಯ ಮೇಲೆ ತಂದರು. ಆ ಕಾರಣದಿಂದ ಅವರನ್ನು ತಮಿಳು ಚಿತ್ರರಂಗದ ‘ಮಾಸ್ಟರ್ ಸ್ಟೋರಿ ಟೆಲ್ಲರ್’ ಎಂದು ಕರೆಯಲಾಗುತ್ತಿತ್ತು.

ಇದನ್ನು ಓದಿದ್ದೀರಾ? ‘ಸಚಿನ್ ವೃತ್ತಿಬದುಕನ್ನೇ ನುಂಗುವಂತಿತ್ತು ಆ ಗಾಯ’: ವೈಭವ್ ಸೂರ್ಯವಂಶಿಗೆ ಕಾದಿದೆಯಾ ಕಂಟಕ?

ಅವರ ‘ಇನ್ರು ಪೋಯ್ ನಾಳೈ ವಾ’ ಚಿತ್ರವು ಪ್ರೀತಿಗಾಗಿ ಅವಮಾನ ಸಹಿಸಿಕೊಂಡು ಓಡಾಡುವ ಮೂವರು ಯುವಕರ ಕಥೆಯಾಗಿದ್ದರೆ, ‘ಇದು ನಮ್ಮ ಆಳು’ ಚಿತ್ರವು ಕ್ಷೌರಿಕನ ಮಗ ಮತ್ತು ಬ್ರಾಹ್ಮಣ ಹುಡುಗಿಯ ನಡುವಿನ ಸೂಕ್ಷ್ಮ ಪ್ರೇಮಕಥೆಯ ಮೂಲಕ ಜಾತಿ ಪದ್ಧತಿಯನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿತ್ತು. ತಮಿಳುನಾಡಿನ ಕೊಂಗು ಶೈಲಿಯ ಭಾಷೆಯ ಮೇಲೆ ಅವರಿಗಿದ್ದ ಅಪಾರ ಹಿಡಿತ, ‘ಸುವರ್ ಇಲ್ಲಾದ ಚಿತ್ತಿರಂಗಳ್’ ಚಿತ್ರದಲ್ಲಿ ನಟ ಗೌಂಡಮಣಿ ಅವರ ಟೈಲರ್ ಪಾತ್ರದ ಮೂಲಕ ಅದ್ಭುತವಾಗಿ ಮೂಡಿಬಂದಿತ್ತು.

ಸಂಗೀತದ ಆಯ್ಕೆಯಲ್ಲೂ ಅವರ ನಡೆಗಳು ಕುತೂಹಲಕಾರಿಯಾಗಿದ್ದವು. ಗಂಗೈ ಅಮರನ್ ಅವರ ಸಂಗೀತವಿದ್ದ ‘ಸುವರ್ ಇಲ್ಲಾದ ಚಿತ್ತಿರಂಗಳ್’ ಮತ್ತು ‘ಮೌನ ಗೀತಂಗಳ್’ ಚಿತ್ರದ ‘ಕಾದಲ್ ವೈಭೋಗಮೇ’ ಮತ್ತು ‘ಮೂಕುತಿ ಪೂಮೇಲೆ’ ಹಾಡುಗಳು ಮ್ಯೂಸಿಕ್ ಮಾಂತ್ರಿಕ ಇಳಯರಾಜ ಅವರ ಶೈಲಿಯನ್ನೇ ಹೋಲುತ್ತಿದ್ದವು. ಇಳಯರಾಜ ಅವರ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ, ‘ಅಂದ 7 ನಾಟ್ಕಳ್’ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ಎಂ.ಎಸ್. ವಿಶ್ವನಾಥನ್ ಅವರನ್ನು ಆರಿಸಿಕೊಂಡು ಆ ಚಿತ್ರದ ಎಲ್ಲಾ ಹಾಡುಗಳೂ ಸೂಪರ್ ಹಿಟ್ ಆಗುವಂತೆ ಮಾಡಿದ್ದರು.

ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಕಟ್ಟಾ ಬೆಂಬಲಿಗರಾಗಿದ್ದ ಭಾಗ್ಯರಾಜ್, ತಮ್ಮ ಚಿತ್ರಗಳಲ್ಲಿ ಅವರ ಉಲ್ಲೇಖವಿರುವಂತೆ ನೋಡಿಕೊಳ್ಳುತ್ತಿದ್ದರು. ಸ್ವತಃ ‘ಎಂಜಿಆರ್ ಮಕ್ಕಳ್ ಮುನ್ನೇತ್ರ ಕಳಗಂ’ ಎಂಬ ರಾಜಕೀಯ ಪಕ್ಷ ಕಟ್ಟಿದರೂ ಅದು ಯಶಸ್ವಿಯಾಗಲಿಲ್ಲ. ತದನಂತರ ಎಐಎಡಿಎಂಕೆ ಸೇರಿದ ಅವರು, 2006ರಲ್ಲಿ ಡಿಎಂಕೆ ಸೇರ್ಪಡೆಯಾಗಿ ಪಕ್ಷದ ಪರ ಪ್ರಚಾರ ನಡೆಸಿದ್ದರು. ಆ ಬಳಿಕ ಅವರು ಆ ಪಕ್ಷದಿಂದಲೂ ಹೊರಬಂದಿದ್ದರು.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...