ಸಿನೆಮಾ ರಂಗದಲ್ಲಿ ಲೈಂಗಿಕ ಕಿರುಕುಳ ದೂರು ಸಮಿತಿ ಆದೇಶ ತಾಸುಗಳಲ್ಲೇ ವಾಪಸು; ‘ಫೈರ್’ ಖಂಡನೆ

Date:

ಕನ್ನಡ ಸಿನೆಮಾ ರಂಗದ ಲೈಂಗಿಕ ಕಿರುಕುಳ ದೂರುಗಳ ಪರಿಶೀಲನಾ ಸಮಿತಿ (ಆಂತರಿಕ ದೂರುಗಳ ಸಮಿತಿ) ರಚನೆಯ ಆದೇಶವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಹೊರಡಿಸಿದ ಕೆಲವೇ ತಾಸುಗಳಲ್ಲಿ ವಾಪಸು ಪಡೆದಿದೆ. ಈ ವಾಪಸಾತಿಯನ್ನು ‘ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವ್ಯಾಲಿಟಿ’ (ಫೈರ್) ತೀವ್ರವಾಗಿ ಖಂಡಿಸಿದೆ. ಈ ಆದೇಶವನ್ನು ವಾಪಸು ಪಡೆಯಲು ಮಂಡಳಿಯಲ್ಲಿನ ಆಂತರಿಕ ವಿರೋಧ ಕಾರಣವೇ ವಿನಾ ಚುನಾವಣಾ ನೀತಿ ಸಂಹಿತೆ ಅಲ್ಲವೆಂದು ಆಪಾದಿಸಿದೆ.

- Advertisement -

ಆಂತರಿಕ ದೂರುಗಳ ಸಮಿತಿಯನ್ನು ಜಾರಿಗೆ ತರಲು ಬಯಸದಿರುವ ಈ ನಡೆಯು ಕಾನೂನಿನ ಕಡೆಗಣನೆ. ಅಷ್ಟೇ ಅಲ್ಲದೆ ಮಾನವಘನತೆಯ ಮೇಲಿನ ದಾಳಿಯನ್ನು (ಲೈಂಗಿಕ ಕಿರುಕುಳ) ಮುಂದುವರೆಸಲು ನೀಡಲಾಗುತ್ತಿರುವ ಅನುಮತಿ ಎಂದು ‘ಫೈರ್’ ಆರೋಪಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಮಂಡಳಿಯ ಚುನಾವಣೆಗಳು ಮುಗಿಯುವ ತನಕ (ಡಿ.15) ಕಾದು ನೋಡುತ್ತೇವೆ. ಆನಂತರವೂ ಆಂತರಿಕ ದೂರು ಸಮಿತಿ ರಚನೆಯಾಗದಿದ್ದರೆ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳುವುದಾಗಿ ‘ಫೈರ್’ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಇದೇ ತಿಂಗಳ 12ರಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆಗಳು ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಆದೇಶವನ್ನು ವಾಪಸು ಪಡೆಯಲಾಗಿದೆ ಎಂದು ವಾಣಿಜ್ಯ ಮಂಡಳಿ ಸಮಜಾಯಿಷಿ ನೀಡಿದೆ. ಸಮಿತಿ ರಚನೆಯ ಈ ಸಂಗತಿಯನ್ನು ಚುನಾವಣೆಯ ನಂತರ ಮರುಪರಿಶೀಲಿಸಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಎನ್.ಎಂ ಸುರೇಶ್ ತಿಳಿಸಿದ್ದಾರೆ.

ಆದರೆ, ತನ್ನ ಸದಸ್ಯರ ವಿರೋಧದ ಕಾರಣ ಮಂಡಳಿ ಈ ಆದೇಶವನ್ನು ವಾಪಸು ಪಡೆದಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಮಲೆಯಾಳಂ ಸಿನೆಮಾ ಉದ್ಯಮದಲ್ಲಿ ಲೈಂಗಿಕ ಕಿರುಕುಳ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯ ನಂತರ ಎದ್ದ ಬಿರುಗಾಳಿಯ ಸಂದರ್ಭದಲ್ಲಿ ಕನ್ನಡ ಸಿನೆಮಾ ರಂಗದಲ್ಲಿಯೂ ಅಂತಹ ಸಮಿತಿಯನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಯೋಗವೊಂದು ಆಗ್ರಹಪಡಿಸಿತ್ತು. ಈ ಒತ್ತಡದಲ್ಲಿ ಕೆ.ಎಫ್.ಸಿ.ಸಿ. ಕವಿತಾ ಲಂಕೇಶ್ ಸಮಿತಿಯನ್ನು ನೇಮಕ ಮಾಡಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಮತ ಡಿಲೀಟ್‌ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಆಧಾರ...

ಮಂಗಳೂರು ಎಂಆರ್‌ಪಿಎಲ್ ದುರಂತ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

ಮಂಗಳೂರಿನ ಎಂಆರ್‌‌ಪಿಎಲ್ (MRPL) ಕಾರ್ಖಾನೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ ಜೀವ ಕಳೆದುಕೊಂಡ...

‘ಎಫ್ಐಆರ್ ದಾಖಲಾಗುವವರೆಗೂ ಚುನಾವಣಾ ಆಯೋಗದ ಕಚೇರಿಯಿಂದ ಕದಲೋದೆ ಇಲ್ಲ’: ಪಟ್ಟು ಹಿಡಿದು ಕುಳಿತ ಸಿಎಂ

'ಎಫ್ಐಆರ್ ದಾಖಲಾಗುವವರೆಗೂ ಕದಲುವುದೇ ಇಲ್ಲ' ಎಂದು ಸ್ಪಷ್ಟವಾಗಿ ಹೇಳಿರುವ ಮುಖ್ಯಮಂತ್ರಿ ಡಿ.ಕೆ....