ಮಗಳ ಚಿತ್ರಕ್ಕಾಗಿ ಮೊಹಿದ್ದೀನ್‌ ಭಾಯ್‌ ಆದ ರಜನಿಕಾಂತ್‌

Date:

ನಿರೀಕ್ಷೆ ಹೆಚ್ಚಿಸಿದ ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಚಿತ್ರ

ತಲೈವಾ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ

ಸೂಪರ್‌ ಸ್ಟಾರ್‌ ರಜನಿಕಾಂತ್‌ ಸದ್ಯ ಮೊಹಿದ್ದೀನ್‌ ಭಾಯ್‌ ಆಗಿ ಸಿನಿ ರಸಿಕರ ಗಮನ ಸೆಳೆಯುತ್ತಿದ್ದಾರೆ. ತಮಿಳಿನ ಬಹುನಿರೀಕ್ಷಿತ ʼಲಾಲ್‌ ಸಲಾಂʼ ಚಿತ್ರದಲ್ಲಿ ರಜನಿಕಾಂತ್‌ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದು, ಸೋಮವಾರ ಅವರ ಪಾತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ʼಲಾಲ್‌ ಸಲಾಂʼ ಚಿತ್ರವನ್ನು ರಜನಿಕಾಂತ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ನಿರ್ದೇಶಿಸುತ್ತಿದ್ದಾರೆ. ಹೀಗಾಗಿ ಈ ಚಿತ್ರದಲ್ಲಿ ತಲೈವಾ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ರಜನಿಕಾಂತ್‌ ಅವರ ವಿಶೇಷ ಪಾತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ ಮೊಹಿದ್ದೀನ್‌ ಭಾಯ್‌ ಅನ್ನು ಪರಿಚಯಿಸಿದೆ. ಈ ಮೂಲಕ ರಜನಿಕಾಂತ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಕೂಡ ಖಚಿತ ಪಡಿಸಿದೆ.

ಫಸ್ಟ್‌ ಲುಕ್‌ ಪೋಸ್ಟರ್‌ ನೋಡಿದ ಅಭಿಮಾನಿಗಳು ರಜನಿಕಾಂತ್‌ ಅವರ ಹೊಸ ಅವತಾರವನ್ನು ಮೆಚ್ಚಿಕೊಂಡಿದ್ದು, ಮೊಹಿದ್ದೀನ್‌ ಭಾಯ್‌ ಅವರನ್ನು ತೆರೆ ಮೇಲೆ ನೋಡಲು ಕಾತುರರಾಗಿದ್ದೇವೆ ಎಂದಿದ್ದಾರೆ.

ಕ್ರಿಕೆಟ್‌ ಆಟಗಾರರ ಬದುಕಿನ ಸುತ್ತ ಮೂಡಿ ಬರುತ್ತಿರುವ ʼಲಾಲ್‌ ಸಲಾಂʼ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಜೀವಿತಾ ರಾಜಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ತಮಿಳಿನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆ ʼಲೈಕಾ ಪ್ರೊಡಕ್ಷನ್ಸ್‌ʼ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದರ್ಶನ್ ಪ್ರಕರಣ | ಆರೋಪಿ ನಟನಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ...

ದೇಶಕ್ಕೆ ನೀಟ್ ಅಗತ್ಯವಿಲ್ಲ, ಅದನ್ನು ರದ್ದುಗೊಳಿಸುವುದೊಂದೇ ಪರಿಹಾರ: ತಮಿಳು ನಟ ವಿಜಯ್

ನೀಟ್ ವಿರುದ್ಧದ ನಿರ್ಣಯವನ್ನು ಸ್ವಾಗತಿಸುವ ಮೂಲಕ ನಿರ್ಣಯಕ್ಕೆ ಬೆಂಬಲ ಸೂಚಿಸಿದ ತಮಿಳು...

ತನ್ನನ್ನು ತಾನು ಅತ್ಯಂತ ಕೊಳಕು ನಟ ಎಂದು ಕರೆದುಕೊಂಡ ನವಾಜುದ್ದೀನ್ ಸಿದ್ದಿಕಿ

ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಅವರು ತನ್ನನ್ನು ತಾನು ಕೊಳಕು ನಟ...

ಬಿಜೆಪಿ ಶಾಸಕನಿಂದ ಬೆದರಿಕೆ: ಹೈದರಾಬಾದ್‌ನಲ್ಲಿ ಕಾರ್ಯಕ್ರಮ ರದ್ದುಗೊಳಿಸಿದ ಹಾಸ್ಯ ಕಲಾವಿದ

ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ನಿಂದ ಬೆದರಿಕೆ ಸ್ವೀಕರಿಸಿದ ನಂತರ ಹಾಸ್ಯ...