ಪೊಲೀಸ್ ಭಾಷೆಯಲ್ಲಿ ದರ್ಶನ್ ವಿಚಾರಣೆ: ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ಆರೋಪಿ ನಟ?

Date:

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಆರೋಪಿ ನಟ ದರ್ಶನ್ ಹತ್ಯೆ ಮಾಡಿರುವುದನ್ನು ಸಾಬೀತು ಮಾಡಲು ಅನೇಕ ಸಾಕ್ಷಿಗಳು ಸಿಗುತ್ತಿವೆ ಮಾಧ್ಯಮಗಳು ವರದಿ ಮಾಡಿವೆ.

ಮೊದಲ ಐದು ದಿನದ ವಿಚಾರಣೆ ವೇಳೆ ದರ್ಶನ್ ಅವರು ಬಾಯಿ ಬಿಚ್ಚಿರಲಿಲ್ಲ ಎನ್ನಲಾಗಿದೆ. ಇತರರ ಹೇಳಿಕೆ ಇಟ್ಟುಕೊಂಡು ವಿಚಾರಣೆ ಮಾಡಲಾಗುತ್ತಿತ್ತು. ಈಗ ದರ್ಶನ್ ನಿಧಾನವಾಗಿ ಬಾಯಿ ಬಿಡುತ್ತಿದ್ದಾರೆ ಎನ್ನಲಾಗಿದೆ. ಪೊಲೀಸರ ಕಾಲಿಗೂ ಬಿದ್ದು, ಬೇಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಮೊದಲ ಐದು ದಿನದ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ತುಟಿ ಬಿಚ್ಚಿರಲಿಲ್ಲ. ಏನು ಕೇಳಿದರೂ ಗೊತ್ತಿಲ್ಲ, ನಾನು ಮಾಡಿಲ್ಲ ಎಂದು ಉತ್ತರಿಸುತ್ತಿದ್ದರು. ಪೊಲೀಸರಿಗೆ ದರ್ಶನ್ ಉಡಾಫೆಯಿಂದ ಉತ್ತರ ಕೊಡುತ್ತಿದ್ದರು. ಎರಡನೇ ಬಾರಿ ಕಸ್ಟಡಿಗೆ ಪಡೆದಾಗ ನಟ ದರ್ಶನ್ ಪೇಚಾಟ ಶುರುವಾಗಿದೆ. ಪೊಲೀಸ್ ಭಾಷೆಯಲ್ಲೇ ತನಿಖೆ ನಡೆಸಿದಾಗ ದರ್ಶನ್ ಮೆತ್ತಗಾಗಿ ‘ಸರ್ ನನ್ನ ಬಿಟ್ಟು ಬಿಡಿ’ ಎಂದು ಪೊಲೀಸರ ಕಾಲಿಗೆ ಬೀಳಲು ಹೋಗಿದ್ದಾರೆ ಎಂದು ವರದಿಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

ದರ್ಶನ್ ಸ್ಟಾರ್ ನಟ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರಿತ್ತು. ಈ ಕಾರಣಕ್ಕೆ ದರ್ಶನ್ ಅವರನ್ನು ಸರಳವಾಗಿ ಪ್ರಶ್ನೆ ಮಾಡುವ ಆಲೋಚನೆ ಪೊಲೀಸರಿಗೆ ಇತ್ತು. ಆದರೆ, ಇದಕ್ಕೆಲ್ಲ ಪೊಲೀಸರಿಗೆ ಸಿಕ್ಕಿದ್ದು ಉಡಾಫೆಯ ಉತ್ತರ. ಹೀಗಾಗಿ, ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಎರಡನೇ ಬಾರಿ ಕಸ್ಟಡಿಗೆ ಹೋದಾಗ ಪೊಲೀಸ್ ಭಾಷೆಯಲ್ಲಿ ಪ್ರಶ್ನೆ ಮಡಲಾಗಿದೆ. ಸರ್ ನನ್ನ ಬಿಟ್ಟು ಬಿಡಿ ಎಂದು ಪರಿಪರಿಯಾಗಿ ದರ್ಶನ್ ಕೇಳಿಕೊಂಡಿದ್ದಾರಂತೆ. ‘ಸರ್ ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ನನ್ನ ಬಿಟ್ಟು ಬಿಡಿ’ ಎಂದು ಅವರು ಕೇಳಿದ್ದಾರಂತೆ. ಪ್ರಶ್ನೆಗಳಿಗೆ ಉತ್ತರಿಸದೆ ತಪ್ಪಾಗಿದೆ ನನ್ನ ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದಿದಾರಂತೆ.

ಸ್ವತಃ ಕುಟುಂಬದವರೆ ದರ್ಶನ್ ನೋಡಲು ಬಂದಿಲ್ಲ

ದರ್ಶನ್ ಅವರು ಕುಟುಂಬದವರನ್ನು ತಮ್ಮಿಂದ ದೂರವೇ ಇಟ್ಟಿದ್ದರು. ಪತ್ನಿ ವಿಜಯಲಕ್ಷ್ಮಿ ಅವರನ್ನು ದೂರ ಇಟ್ಟಿದ್ದರು. ತಾಯಿ ಮೀನಾ ತುಗೂದೀಪ ಕೂಡ ದರ್ಶನ್ ಜೊತೆ ಇಲ್ಲ. ಹೀಗಾಗಿ ಅವರ್ಯಾರೂ ದರ್ಶನ್ ಅವರನ್ನು ನೋಡಲು ಬಂದಿಲ್ಲ. ಇನ್ನು ಆಪ್ತರು ಎನಿಸಿಕೊಂಡ ಕೆಲವರು ಕೂಡ ನಟನಿಂದ ದೂರವೇ ಇದ್ದಾರೆ. ಹೀಗಾಗಿ, ಅವರನ್ನು ನೋಡೋಕೆ ಯಾರೂ ಬಂದಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಇಡಿ ಸಮನ್ಸ್

ಸುಕೇಶ್ ಚಂದ್ರಶೇಖರ್ ಅವರ ಸುಮಾರು 200 ಕೋಟಿ ರೂಪಾಯಿ ಅಕ್ರಮ ಹಣ...

ಜೈಲೂಟ ಜೀರ್ಣವಾಗುತ್ತಿಲ್ಲ ಮನೆಯೂಟ, ಹಾಸಿಗೆ ಬೇಕೆಂದು ಹೈಕೋರ್ಟ್‌ಗೆ ದರ್ಶನ್ ಅರ್ಜಿ

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆತನ 17 ಮಂದಿ...

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 10 ಆರೋಪಿಗಳ ಬೆರಳಚ್ಚು ಹೊಂದಾಣಿಕೆ?

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮಾದರಿ, ಬಂಧಿತ ಆರೋಪಿಗಳ ಪೈಕಿ...

ಸತ್ಯ, ಶಾಂತಿಗೆ ಹೆಸರಾದ ದೇಶಕ್ಕೆ ಎಂಥ ಪ್ರಧಾನಿ, ನಾಚಿಕೆಗೇಡು; ಮೋದಿ ವಿರುದ್ಧ ನಟ ಕಿಶೋರ್ ಕಿಡಿ

ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಿಜೆಪಿ, ಆರ್‌ಎಸ್‌ಎಸ್‌ನ ಕೋಮುವಾದಿ, ಸರ್ವಾಧಿಕಾರಿ ಧೋರಣೆಗಳನ್ನು...