ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ಅವರ ಊರು - ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ. ನೀನಾಸಂನಲ್ಲಿ ರಂಗಭೂಮಿ ತರಬೇತಿ ಆಗುತ್ತೆ. ನಂತರ, ಮೈಸೂರಿನ 'ಕಾವಾ' ಅಂದ್ರೆ, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಚಿತ್ರಕಲೆಯಲ್ಲಿ ಪದವಿ ಮುಗಿಸ್ತಾರೆ. ಅಲ್ಲಿಂದ ಸೀದಾ ಹೋಗಿದ್ದು ಕೊಲ್ಕತ್ತಾಗೆ. ಅಲ್ಲಿನ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡ್ತಾರೆ. ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ಬಳಿಕ, ಒಂದಷ್ಟು ಕಾಲ ಚಿತ್ರಕಲೆಯ ಶಿಕ್ಷಕಿಯಾಗಿ ಕೆಲಸ. ಇದೀಗ ಮಕ್ಕಳ ಪುಸ್ತಕಗಳ ಲೇಖಕಿ. ಹೀಗೆ, ಅವರೇ ಹೇಳುವಂತೆ ಅವರ ಬದುಕು ಎತ್ತಣದಿಂದ ಎತ್ತಣಕ್ಕೋ ಪಯಣ. ಮಕ್ಕಳಿರುವ ಮನೆಯಲ್ಲಿ ಇರಲೇಬೇಕು ಅನ್ನಿಸುವಂತಿರುವ ಇವರ ಪುಸ್ತಕಗಳು ಅತ್ಯಂತ ಆಕರ್ಷಕ. ಹಾಗಾಗಿಯೇ, ಪ್ರತೀ ಪುಸ್ತಕ ಹೊರಬಂದಾಗಲೂ ವನಿತಾ ಯಾಜಿ ಸುದ್ದಿಯಲ್ಲಿರ್ತಾರೆ. ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವ ಜೊತೆಗೆ, ಬಣ್ಣ ಮತ್ತು ಆಕೃತಿಗಳ ಮೂಲಕ ಮಕ್ಕಳ ಜಗತ್ತನ್ನು ಹಿಗ್ಗಿಸುವ ಮಹತ್ವದ ಕೆಲಸವನ್ನು ಇವರ ಪುಸ್ತಕಗಳು ಮಾಡುತ್ತಿವೆ. ಶಾಂತಿನಿಕೇತನದಲ್ಲಿ ಕಲಿತ ಕಲಾವಿದೆ ವನಿತಾ ಅವ್ರು ಮನಸ್ಸು ಮಾಡಿದ್ದಿದ್ದರೆ, ತಾವು ಕಂಡುಕೊಂಡ ವಸ್ತ್ರ ಚಿತ್ರಕಲೆ ಮೂಲಕ ಜಗತ್ತಿನಾದ್ಯಂತ ಹೆಸರು ಮಾಡಬಹುದಿತ್ತು. ಆದರೆ, ತಮ್ಮೊಳಗಿನ ಕಲಾವಿದೆಯನ್ನು ಮಕ್ಕಳ ಪುಸ್ತಕಕ್ಕೋಸ್ಕರ ಮೀಸಲಿಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಅಪರೂಪದ ಕಲಾವಿದೆಯ ಆಡಿಯೊ ಸಂದರ್ಶನ ಇಲ್ಲುಂಟು.
ಮಕ್ಕಳ ಪುಸ್ತಕಗಳ ಲೇಖಕಿ ವನಿತಾ ಯಾಜಿ ಸಂದರ್ಶನ | ‘ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಸಾಕಷ್ಟು ವಿಷಯಗಳು ಪೋಷಕರಿಗೆ ಅರ್ಥವಾಗೋಲ್ಲ!’
Date:
ಪೋಸ್ಟ್ ಹಂಚಿಕೊಳ್ಳಿ:
ತುಂಬಾ ಚೆನ್ನಾಗಿದೆ
ಪುಸ್ತಕ ತುಂಬಾ ಚೆನ್ನಾಗಿದೆ….
ಪುಸ್ತಕ ತುಂಬಾ ಚೆನ್ನಾಗಿದೆ…..
ನಿಮ್ಮ ಪ್ರಯತ್ನಕ್ಕೆ ಶುಭಾಶಯ…..
ಪುಸ್ತಕ ತುಂಬಾ ಚೆನ್ನಾಗಿದೆ. ..ನಿಮ್ಮ ಮೊದಲ ಪ್ರಯತ್ನಕ್ಕೆ ಶುಭಾಶಯಗಳು👍…
ತುಂಬಾ ಚೆನ್ನಾಗಿದೆ… All the best👍💯
ನಮ್ಮೂರ ಹುಡುಗಿ ವನಿತಾ. ಸೀದಾಸಾದಾ….ಎಷ್ಟೊಂದು ಸೂಕ್ಷ್ಮ! ಒಳ್ಳೆಯ ಕಲಾವಿದೆ. ಅವಳ ಕನಸುಗಳೆಲ್ಲ ಈಡೇರಲಿ
ಶುಭಾಶಯಗಳು