ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ಕಾವೇರಿ ನೀರು: ಪ್ರಾಧಿಕಾರದ ನಿರ್ಧಾರ ಖಂಡಿಸಿದ ಕರವೇ

Date:

ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಾಡಿರುವ ಶಿಫಾರಸು ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕೈಗೊಂಡಿರುವ ನಿರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ. ರಾಜ್ಯ ಸರ್ಕಾರ ಈ ಆದೇಶಕ್ಕೆ ಮಣಿಯದೆ, ರೈತರ ಹಿತ ಕಾಯಲು ಕೂಡಲೇ ಕಾನೂನು ಹೋರಾಟಕ್ಕೆ ಮುಂದಾಗಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ.

- Advertisement -

CWRC ಸೂಚನೆಯಂತೆ 15 ದಿನಗಳ ಕಾಲ ನೀರು ಹರಿಸಿದರೆ ಒಟ್ಟು 15.6 ಟಿಎಂಸಿ ನೀರು ತಮಿಳುನಾಡಿನ ಪಾಲಾಗಲಿದೆ. ಸದ್ಯ ಜಲಾಶಯಗಳಲ್ಲಿ ನೀರಿದೆ ಎಂಬ ಒಂದೇ ಕಾರಣಕ್ಕೆ ಇಷ್ಟು ದೊಡ್ಡ ಪ್ರಮಾಣದ ನೀರನ್ನು ಹರಿಸಿದರೆ, ಮುಂದಿನ ದಿನಗಳಲ್ಲಿ ಮಳೆ ಕೈಕೊಟ್ಟಾಗ ರಾಜ್ಯದ ಜನ-ಜಾನುವಾರುಗಳ ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ವಾಸ್ತವ ಪರಿಸ್ಥಿತಿಯನ್ನು ಅರಿಯದೆ ಇಂತಹ ನಿರ್ಧಾರ ಕೈಗೊಂಡಿರುವುದು ಕನ್ನಡಿಗರಿಗೆ ಬಗೆದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

GMPL ಘಟಕದಿಂದ ಪರಿಸರಕ್ಕೆ ಕುತ್ತು: ಜನವಸತಿ ಪ್ರದೇಶದಲ್ಲಿ ವಿಷ...

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಬಜ್ಪೆ ಶಾಂತಿಗುಡ್ಡೆ ಪರಿಸರದ ಜನರು ಕೆಲವು ದಿನಗಳಿಂದ ಆತಂಕದಿಂದಲೇ ಬದುಕನ್ನು ಸಾಗಿಸುವಂತಾಗಿದೆ. ತಮ್ಮ ಪರಿಸರ ವಿಶೇಷ ಆರ್ಥಿಕ ವಲಯವಾಗಿದ್ದರೂ, ಪರಿಸರದ ಮನೆಗಳ ಅಂಗಳ, ಬಾವಿಗಳ ನೀರಿಗೂ...

ತಮಿಳುನಾಡಿನ ರೈತರ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ, ಸಂಕಷ್ಟದ ವರ್ಷಗಳಲ್ಲಿ ಲಭ್ಯವಿರುವ ನೀರನ್ನು ನ್ಯಾಯಯುತವಾಗಿ ಹಂಚಿಕೆ ಮಾಡಬೇಕೆ ವಿನಃ, ನಮ್ಮ ರೈತರನ್ನು ಬಲಿಕೊಟ್ಟು ತಮಿಳುನಾಡಿನ ಬೇಡಿಕೆ ಪೂರೈಸುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಇಲಾಖೆ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು. ಕಾವೇರಿ ಕೊಳ್ಳದ ರೈತರು, ನೀರಾವರಿ ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು. ನ್ಯಾಯಾಲಯದಲ್ಲಿ ರಾಜ್ಯದ ವಾಸ್ತವ ಸ್ಥಿತಿಯನ್ನು ಸಮರ್ಥವಾಗಿ ಮಂಡಿಸಿ ನ್ಯಾಯಾಂಗ ಪರಿಹಾರ ಪಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಕೇವಲ ಕಾನೂನು ಹೋರಾಟದ ಮಾತುಗಳನ್ನು ಆಡದೆ, ಯಾವುದೇ ಒತ್ತಡಕ್ಕೂ ಮಣಿಯದೆ ಧೈರ್ಯದಿಂದ ರೈತರ ಪರ ನಿಲ್ಲಬೇಕು. ಕಾವೇರಿ ನೀರಿನ ವಿಚಾರದಲ್ಲಿ ಕರವೇ ಸದಾ ರಾಜ್ಯದ ರೈತರ ಬೆನ್ನಿಗೆ ನಿಲ್ಲಲಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ದೃಢ ನಿರ್ಧಾರ ಕೈಗೊಳ್ಳದಿದ್ದರೆ, ರೈತರೊಂದಿಗೆ ಕೈಜೋಡಿಸಿ ಪ್ರಜಾಸತ್ತಾತ್ಮಕ ಮತ್ತು ಕಾನೂನುಬದ್ಧ ಹೋರಾಟ ನಡೆಸಲಾಗುವುದು ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಗರಹೊಳೆ: ಜೇನುಕುರುಬ ಕುಟುಂಬಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ; ಸರ್ಕಾರದ ಕ್ರಮಕ್ಕೆ ಆದಿವಾಸಿಗಳ ಆಕ್ರೋಶ

ಕೊಡಗು ಮತ್ತು ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ‘ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ’ದಲ್ಲಿ...

ಹಾವೇರಿ | ನ.14ರಂದು ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ

ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ...

ಕರ್ನಾಟಕದ ಜೈನ ಪರಂಪರೆಗೆ ಹಾವೇರಿಯ ಕೊಡುಗೆ ಅಪಾರ: ಡಾ. ಶಿವಯೋಗಿ ಆರ್ ಕೋರಿಶೆಟ್ಟರ್‌

ಕರ್ನಾಟಕದಲ್ಲಿ ಪ್ರತಿ ಐದು ಗ್ರಾಮಗಳಿಗೆ ಒಂದು ಜೈನಧರ್ಮಕ್ಕೆ ಸಂಬಂಧಿದ ಕುರುಹುಗಳು ದೊರೆಯುತ್ತವೆ....

ಸೌದಿ ಅರೇಬಿಯಾ: ವಿವಾಹೇತರ ಗರ್ಭಧಾರಣೆಗೆ ಕೀನ್ಯಾ ಮಹಿಳೆಗೆ 100 ಛಡಿಯೇಟಿನ ಶಿಕ್ಷೆ

ಸೌದಿ ಅರೇಬಿಯಾದಲ್ಲಿ ವಿವಾಹೇತರ ಸಂಬಂಧದಿಂದ ಮಗುವಿಗೆ ಜನ್ಮ ನೀಡಿದ ಕೀನ್ಯಾದ ಗೃಹ...