ಪ್ರಾಣಿಗಳಿಗೂ ಘನತೆಯಿಂದ ಬದುಕುವ ಹಕ್ಕಿದೆ: ಕ್ರೌರ್ಯ ಮೆರೆದಿದ್ದ ಮಾಲೀಕನಿಗೆ 9 ನಾಯಿಗಳನ್ನು ಮರಳಿಸಲು ಹೈಕೋರ್ಟ್‌ ನಕಾರ

Date:

ಪ್ರಾಣಿ ಸಂಕುಲದ ರಕ್ಷಣೆ ಮಾಡುವುದು ಕೇವಲ ದಯೆ ಅಥವಾ ದಾನದ ಕಾರ್ಯವಲ್ಲ, ಬದಲಿಗೆ ಅದು ನಮ್ಮ ಸಾಂವಿಧಾನಿಕ ನೈತಿಕತೆಯ ದೃಢೀಕರಣವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಕೇಳಿದೆ. ತನ್ನ ಮಾಲೀಕನ ವಶದಲ್ಲಿದ್ದಾಗ ಕ್ರೌರ್ಯಕ್ಕೆ ಒಳಗಾಗಿದ್ದ 9 ಸಾಕು ನಾಯಿಗಳನ್ನು ಆತನಿಗೆ ಮರಳಿಸುವ ಆದೇಶವನ್ನು ರದ್ದುಗೊಳಿಸಿದೆ. ನಾಯಿಗಳ ಸಲಹುವ ಹೊಣೆಯನ್ನು ಎನ್‌ಜಿಒಗಳಿಗೆ ಹಸ್ತಾಂತರಿಸಿದೆ.

- Advertisement -

ಬೆಂಗಳೂರಿನ ನಾಗಸಂದ್ರ ನಿವಾಸಿ ಕೆ.ಇ ರಮೇಶ್ ಎಂಬಾತ ತಾನು ಸಾಕಿದ್ದ ನಾಯಿಗಳ ಮೇಲೆ ನಿರಂತರವಾಗಿ ಕ್ರೌರ್ಯ ನಡೆಸುತ್ತಿದ್ದ. ಆತನ ಕ್ರೌರ್ಯವನ್ನು ಗಮನಿಸಿದ್ದ ನೆರೆಹೊರೆಯವರ ದೂರಿನ ಮೇರೆಗೆ ‘PETA ಇಂಡಿಯಾ’ ಸಂಘಟನೆಯು 2026ರ ಫೆಬ್ರವರಿಯಲ್ಲಿ ರಮೇಶ್‌ ವಿರುದ್ಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿತ್ತು. ದೂರಿನಲ್ಲಿ, ರಮೇಶ್‌ ತನ್ನ ಮನೆಯಲ್ಲಿರುವ ನಾಯಿಗಳನ್ನು ಪದೇ-ಪದೇ ಹೊಡೆಯುವುದು, ಲೈಂಗಿಕ ಕಿರುಕುಳ ನೀಡುವುದು ಸೇರಿದಂತೆ ನಾನಾ ರೀತಿಯಲ್ಲಿ ಹಿಂಸಿಸುತ್ತಿದ್ದಾನೆ ಎಂದು ಆರೋಪಿಸಿತ್ತು. ಆರೋಪಗಳಿಗೆ ಪೂರಕವಾದ ವಿಡಿಯೋ ಮತ್ತು ಫೋಟೋಗಳನ್ನೂ ಒದಗಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

PETA ಇಂಡಿಯಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಫೆಬ್ರವರಿ 18ರಂದು ಎಫ್‌ಐಆರ್ ದಾಖಲಿಸಿದ್ದರು. ನಾಯಿಗಳನ್ನು ರಮೇಶ್‌ ಮನೆಯಿಂದ ರಕ್ಷಿಸಿದ್ದರು. ಬಳಿಕ, PETA ಮತ್ತು Compassion Unlimited Plus Action (CUPA) ಸೇರಿದಂತೆ ಇತರ ಪ್ರಾಣಿ ಕಲ್ಯಾಣ ಸಂಘಟನೆಗಳು ನಾಯಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅವುಗಳಿಗೆ ಸುರಕ್ಷಿತ ಪುನರ್ವಸತಿ ನೀಡಿದ್ದವು. ಮಾಲೀಕನು ಆರಂಭದಲ್ಲಿ ನಾಯಿಗಳನ್ನು ತ್ಯಜಿಸಿದ್ದರೂ, ನಂತರ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ತಾತ್ಕಾಲಿಕ ವಶಕ್ಕೆ ಅರ್ಜಿ ಸಲ್ಲಿಸಿದ್ದರು.

ಆತನ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಬೆಂಗಳೂರಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್, ನಾಯಿಗಳನ್ನು ಮಾಲೀಕರನ ಸುಪರ್ದಿಗೆ ಹಿಂದಿರುಗಿಸುವಂತೆ ಏಪ್ರಿಲ್ 25ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ PETA ಸಂಘಟನೆಯು ಹೈಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ಮ್ಯಾಜಿಸ್ಟ್ರೇಟ್ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

“ಪ್ರಾಣಿಗಳನ್ನು ಕೇವಲ ಮಾನವರ ಆಸ್ತಿ ಎಂದು ಪರಿಗಣಿಸಬಾರದು. ಅವು ಸಂವೇದನಾಶೀಲ ಜೀವಿಗಳಾಗಿವೆ. ಅವುಗಳಿಗೆ ಘನತೆ, ಕರುಣೆ ಮತ್ತು ಕ್ರೌರ್ಯದಿಂದ ರಕ್ಷಣೆ ಪಡೆಯುವ ಹಕ್ಕಿದೆ. ನಾಗರಿಕ ಸಮಾಜವನ್ನು ಕೇವಲ ಮನುಷ್ಯ ತನ್ನ ಸಹ ಮಾನವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರಿಂದ ಮಾತ್ರವಲ್ಲ, ತನ್ನ ಪರಿಸರದಲ್ಲಿ ವಾಸಿಸುವ ಮಾತನಾಡಲಾಗದ ಜೀವಿಗಳಿಗೆ ಕರುಣೆ ಮತ್ತು ನ್ಯಾಯವನ್ನು ಹೇಗೆ ವಿಸ್ತರಿಸುತ್ತದೆ ಎಂಬುದರಿಂದಲೂ ನೋಡಲಾಗುತ್ತದೆ” ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಈ ಲೇಖನ ಓದಿದ್ದೀರಾ?: ವಿದ್ಯುತ್‌ ಖಾಸಗೀಕರಣ: ಉಚಿತ ಯೋಜನೆಗಳ ಅಂತ್ಯಕ್ಕೆ ನಾಂದಿ

“ಪ್ರಾಣಿಗಳ ಮೇಲಿನ ಪ್ರತಿಯೊಂದು ಕ್ರೌರ್ಯದ ಕೃತ್ಯವು ಕೇವಲ ಒಂದು ಸಂವೇದನಾಶೀಲ ಜೀವಿಗೆ ಗಾಯ ಮಾಡುವುದಲ್ಲ, ಬದಲಿಗೆ ಸಾಮೂಹಿಕ ಮಾನವ ಅಂತಃಕರಣಕ್ಕೆ ಕಳಂಕ ಉಂಟುಮಾಡುತ್ತದೆ. ಪ್ರಾಣಿಗಳು ಮಾನವರಂತೆ ಮಾತನಾಡಲು ಸಾಧ್ಯವಿಲ್ಲದಿದ್ದರೂ ಅವು ನೋವು ಮತ್ತು ಕಷ್ಟ ಅನುಭವಿಸುತ್ತವೆ. ಪ್ರಾಣಿ ಜೀವನದ ರಕ್ಷಣೆಯು ಕೇವಲ ದಯೆ ಅಥವಾ ದಾನದ ಕಾರ್ಯವಲ್ಲ. ಅದು ನಮ್ಮ ಸಾಂವಿಧಾನಿಕ ನೈತಿಕತೆಯೂ ಆಗಿದೆ” ಎಂದು ಕೋರ್ಟ್‌ ಹೇಳಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಆದೇಶವನ್ನು ಅಸಂಬದ್ಧ ಮತ್ತು ಅತ್ಯಂತ ಆಶ್ಚರ್ಯಕರ ಎಂದು ವರ್ಣಿಸಿದ ಹೈಕೋರ್ಟ್, “ಲೈಂಗಿಕ ಕಿರುಕುಳದ ಆರೋಪದ ತನಿಖೆ ಇನ್ನೂ ನಡೆಯುತ್ತಿರುವಾಗ ನಾಯಿಗಳನ್ನು ಆರೋಪಿತನಿಗೆ ಹಿಂದಿರುಗಿಸುವುದು ಸಂಪೂರ್ಣವಾಗಿ ಅಸಾಧ್ಯ” ಎಂದು ಕೋರ್ಟ್‌ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು |ರಾಜ್ಯದಲ್ಲಿ ಪ್ರಸ್ತುತ 9,೦೦೦ಕ್ಕೂ ಹೆಚ್ಚು ಪೋಕ್ಸೋ ಪ್ರಕರಣ

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ನ್ಯಾ....

ಚಿಕ್ಕಮಗಳೂರು | ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ನ್ಯಾ. ಹೆಚ್. ಶಶಿಧರ್ ಶೆಟ್ಟಿ

ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ, ಇಲಾಖೆಗಳು ಅಥವಾ ಸರ್ಕಾರೇತರ ಸಂಸ್ಥೆಗಳ...

ಪಿಎಂ ಮೋದಿ, ಯುವತಿಯ ಡೀಪ್‌ಫೇಕ್ ಫೋಟೋ: ಸಿಜೆಪಿ ನಾಯಕರು, ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಯುವತಿಯೊಬ್ಬಳ ಮುಖವನ್ನು ಕೃತಕ ಬುದ್ಧಿಮತ್ತೆ (AI)...