ದಿವಾಳಿ ಘೋಷಣೆ: ‘ವಾಸ್ತವ ಬೇರೆ ಇದೆ, ಕಾನೂನು ಹೋರಾಟ ನಡೆಸುತ್ತೇನೆ’ – ನಸೀರ್ ಅಹ್ಮದ್

Date:

ಬೆಂಗಳೂರಿನಲ್ಲಿರುವ ಮೆಸರ್ಸ್ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್‌ನ ಬಾಕಿ ಸಾಲವನ್ನು ಮರುಪಾವತಿಸಲು ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ನಸೀರ್ ಅಹ್ಮದ್ ಅವರನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)ಯ ಬೆಂಗಳೂರು ಪೀಠ ‘ದಿವಾಳಿ’ ಎಂದು ಘೋಷಿಸಿದೆ. ಆದರೆ “ವಾಸ್ತವವೇ ಬೇರೆ ಇದೆ. ಈ ವಿಚಾರದಲ್ಲಿ ನಾನು ಕಾನೂನು ಹೋರಾಟ ನಡೆಸುತ್ತೇನೆ” ಎಂದು ನಸೀರ್ ಅಹ್ಮದ್ ಅವರು ಹೇಳಿದ್ದಾರೆ.

- Advertisement -

ಸುನಿಲ್ ಕುಮಾರ್ ಅಗರ್ವಾಲ್ (ನ್ಯಾಯಾಂಗ ಸದಸ್ಯ) ಮತ್ತು ರಾಧಾಕೃಷ್ಣ ಶ್ರೀಪಾದ (ತಾಂತ್ರಿಕ ಸದಸ್ಯ) ಅವರನ್ನೊಳಗೊಂಡ NCLTಯ ಬೆಂಗಳೂರು ಪೀಠವು ಜೂನ್ 8ರಂದು IBC-2016ರ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶವನ್ನು ಹೊರಡಿಸಿದೆ. ನಸೀರ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕಂಪನಿಯ ಹಿಂದಿನ ನಿರ್ದೇಶಕರಾಗಿ ಸಾಲಕ್ಕೆ ವೈಯಕ್ತಿಕ ನಾಮಿನಿಗಳಾಗಿದ್ದ ಅವರ ಪತ್ನಿ ನುಝತ್ ಆಯಿಷಾ ನಸೀರ್ ಮತ್ತು ಮಗ ಅವೈಜ್ ಅಹ್ಮದ್ ಅವರನ್ನೂ NCLT ‘ದಿವಾಳಿ’ ಎಂದು ಘೋಷಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಇದನ್ನು ಓದಿದ್ದೀರಾ? ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್‌ ವಿರುದ್ಧ ಕ್ರಮಕ್ಕೆ ಮುಸ್ಲಿಂ ಧಾರ್ಮಿಕ ಮುಖಂಡರ ಖಂಡನೆ- ಕೆಪಿಸಿಸಿ ಅಧ್ಯಕ್ಷರಿಗೆ ಪ್ರಶ್ನೆಗಳ ಸುರಿಮಳೆ

ಹಾಗೆಯೇ ನಸೀರ್ ₹1,454 ಕೋಟಿ ಬಾಕಿ ಸಾಲವನ್ನು ಮರುಪಾವತಿಸಲು ವಿಫಲರಾಗಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ನಸೀರ್ ‘ದಿವಾಳಿ’ ಎಂದು ಘೋಷಿಸಲಾಗಿರುವ ಕಾರಣ ಐಬಿಸಿಯ ಸೆಕ್ಷನ್ 140 ಮತ್ತು ಸಂವಿಧಾನದ ಆರ್ಟಿಕಲ್ 191(1)(ಸಿ) ಅಡಿಯಲ್ಲಿ ಅವರು ಎಂಎಲ್‌ಸಿ ಹುದ್ದೆಯಿಂದ ಅನರ್ಹರಾಗುತ್ತಾರೆ ಎಂದೂ ವರದಿಯಾಗಿತ್ತು.

ಈ ವಿಚಾರದ ಕುರಿತು ಈದಿನ.ಕಾಮ್‌ ನೇರವಾಗಿ ಮಾಜಿ ಸಚಿವರಾದ ನಸೀರ್‌ ಅಹ್ಮದ್ ಅವರನ್ನು ಸಂಪರ್ಕಿಸಿದ್ದು “ನಾನು ಸ್ಕಾಟ್ಸ್‌ ಗಾರ್ಮೆಂಟ್‌ ಕಂಪೆನಿಯನ್ನು ನಡೆಸುತ್ತಿದ್ದದ್ದು ಮತ್ತು ಅದು ನಷ್ಟಕ್ಕೆ ಗುರಿಯಾದದ್ದು ನಿಜ. ಆದರೆ, ಈ ಬೆಳವಣಿಗೆಗಳು ನನಗೆ ಬೇಸರವನ್ನುಂಟು ಮಾಡಿದೆ. 16,000 ಕಾರ್ಮಿಕರಿಗೆ, ಅದರಲ್ಲೂ ಮಹಿಳೆಯರಿಗೆ ಉದ್ಯೋಗ ಕೊಟ್ಟ ಸಂತೃಪ್ತಿ ನನಗಿತ್ತು. ನನ್ನ ಕಂಪೆನಿಗೆ ಅತ್ಯುತ್ಕೃಷ್ಟ ಕಂಪೆನಿ ಎಂಬ ಹೆಸರೂ ಇತ್ತು. ಉದ್ದಿಮೆಯಲ್ಲಾದ ವ್ಯತ್ಯಾಸದಿಂದ ನಷ್ಟಕ್ಕೆ ಗುರಿಯಾಯಿತು. ಆಗ ಎಸ್‌ಬಿಐ ಟ್ರಸ್ಟಿಗೆ ನಿಯಮಾನುಸಾರ ಪರ್ಸನಲ್‌ ಗ್ಯಾರಂಟಿಯನ್ನು ನೀಡಲಾಯಿತು. ಆ ಗ್ಯಾರಂಟಿಯನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಪರಿಹರಿಸುವುದು ಸರಿಯಾದ ವಿಧಾನ ಎಂಬುದು ನಮ್ಮ ವಾದವಾಗಿತ್ತು. ಆದರೆ, ಅದನ್ನು ಸಂಬಂಧಪಟ್ಟ ಪ್ರಾಧಿಕಾರವು ಒಪ್ಪಿಲ್ಲ. ಲಿಕ್ವಿಡೇಷನ್‌ ನಂತರ ಆ ಸಂಪನ್ಮೂಲವೆಲ್ಲವೂ ಬ್ಯಾಂಕಿಗೇ ಸೇರಿತು” ಎಂದು ಹೇಳಿದ್ದಾರೆ.

ನಸೀರ್ ₹1,454 ಕೋಟಿ ಸಾಲ ಬಾಕಿ ಹೊಂದಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ್ದು, “ಈಗ ಬಂದಿರುವ ವರದಿಗಳಲ್ಲಿ ಸಾವಿರಾರು ಕೋಟಿ ರೂ.ಗಳ ಸಂಖ್ಯೆಯನ್ನು ನಮೂದಿಸಿರುವುದು ನೋಡಿ, ನಾನೇ ಹೌಹಾರಿದೆ. ಅದೆಲ್ಲವೂ ಅಂಕೆ-ಸಂಖ್ಯೆಗಳ ಲೆಕ್ಕಾಚಾರ ಅಷ್ಟೇ. ಆ ಪ್ರಮಾಣದ ಸಾಲವನ್ನು ಪಡೆಯಲು ನನ್ನಂಥವನಿಗೆ ಸಾಧ್ಯವೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ನನ್ನ ರಾಜಕೀಯ ಜೀವನದುದ್ದಕ್ಕೂ ಹಣಕಾಸಿನ ವಿಚಾರದಲ್ಲಿ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ. ಆಸ್ತಿ, ಹಣ ಮಾಡುವುದರ ಹಿಂದೆ ಹೋಗಿಲ್ಲ. ಅಧಿಕಾರದ ಕೇಂದ್ರಕ್ಕೆ ಹತ್ತಿರದಲ್ಲಿದ್ದಾಗಲೂ ಜನರು, ಸಮುದಾಯ, ಪಕ್ಷ, ಸರ್ಕಾರದ ಹಿತವನ್ನಷ್ಟೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.

“ಈ ಆದೇಶದ ವಿರುದ್ಧ ಕಾನೂನು ಪ್ರಕಾರ ಮೇಲ್ಮನವಿ ಸಲ್ಲಿಸಲಿದ್ದೇನೆ. ನಾನು ಇದುವರೆಗೆ ಮಾಡಿರುವ ಕೆಲಸ ಮತ್ತು ಕಾನೂನಿನ ಬಲದಿಂದ ಗೆದ್ದು ಬರುವ ವಿಶ್ವಾಸವಿದೆ” ಎಂದು ನಸೀರ್‌ ಅಹ್ಮದ್ ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...

ವಿಜಯಪುರ | ಅಂತಿಮ ಮತದಾರರ ಪಟ್ಟಿ ಪ್ರಕಟ: ನಾಗಠಾಣದಲ್ಲಿ ಅತಿ ಹೆಚ್ಚು ಮತದಾರರು

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು...

ಆಸ್ಕರ್‌ 2027 | ಇವೇ, ರೇಸ್‌ನಲ್ಲಿರುವ 9 ಬಹುನಿರೀಕ್ಷಿತ ಸಿನಿಮಾಗಳು!

2027ರ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ರೇಸ್‌ಗೆ ಈಗಿನಿಂದಲೇ ಕೌಂಟ್‌ಡೌನ್ ಆರಂಭವಾಗಿದೆ....