ಜಿಬಿಎ ರಚನೆ ಬಳಿಕ ಮೊದಲ ಬಜೆಟ್‌ ಮಂಡನೆ : ಮುಖ್ಯಾಂಶಗಳೇನು?

Date:

ಜಿಬಿಎ ಕೇಂದ್ರ ಹಾಗೂ ಪೂರ್ವ ನಗರ ಪಾಲಿಕೆಯ ಮೊದಲ ಬಜೆಟ್‌ ಅನ್ನು ಮಂಡಿಸಿವೆ. ಕೇಂದ್ರ ಹಾಗೂ ರಾಜ್ಯದ ಅನದಾನಕ್ಕೆ ಅವಲಂಬನೆಗೊಳಗಾಗದೆ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕನಸನ್ನು ಕಂಡಿವೆ. ಸ್ವಂತ ಆದಾಯದಿಂದಲೇ ಸೌಕರ್ಯಗಳನ್ನು ವೃದ್ಧಿಸುವುದಕ್ಕೆ ಬಜೆಟ್‌ನಲ್ಲಿ ಒತ್ತು ನೀಡಿವೆ.

2026-27ನೇ ಸಾಲಿನಲ್ಲಿ ಆಯವ್ಯಯದ ಪ್ರಮುಖ ಅಂಶಗಳು

- Advertisement -

ಕಂದಾಯ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...
  • 2026-27ನೇ ಸಾಲಿಗೆ ರೂ.826.25 ಕೋಟಿ ಆಸ್ತಿ ತೆರಿಗೆಯನ್ನು ನಿರೀಕ್ಷಿಸಲಾಗಿದೆ
  • ಹಾಲಿ ಚಾಲ್ತಿಯಲ್ಲಿರುವ ಮ್ಯೂಟೇಷನ್ ಅರ್ಜಿಗಳಲ್ಲಿ ಶೇ 2% ರಷ್ಟು Stamp Duty ಯಿಂದ ರೂ. 40.00 ಕೋಟಿ ನಿರೀಕ್ಷಿಸಲಾಗಿದೆ.
  • 2026-27 ನೇ ಸಾಲಿನಲ್ಲಿ PSU ಗಳಿಂದ ಹಾಗೂ ಏಕನಿವೇಶನ (Single plot) ಅಡಿಯಲ್ಲಿ ಅಭಿವೃದ್ಧಿ ಶುಲ್ಕ (Improvement charge) ಗಳಿಂದ ಒಟ್ಟು ರೂ.97.15 ಕೋಟಿಗಳ ಮೊತ್ತ ನಿರೀಕ್ಷಿಸಲಾಗಿದೆ.  
  • ಬಿ-ರಿಜಿಸ್ಟರ್‌ನಲ್ಲಿ ದಾಖಲಾಗಿರುವ ಆಸ್ತಿಗಳನ್ನು ಎ-ಖಾತಾ ಆಸ್ತಿಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯಯಲ್ಲಿ 2026-27ನೇ ಸಾಲಿಗೆ ಅಂದಾಜು ರೂ. 680 ಕೋಟಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ.
  • ಬಾಕಿ ಆಸ್ತಿ ತೆರಿಗೆ ಮೇಲೆ ಬಡ್ಡಿ  ರೂ. 40.15 ಕೋಟಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ.
  • ಬೆಂಗಳೂರು ಉತ್ತರ ನಗರ ಪಾಲಿಕೆಗೆ 15ನೇ ಹಣಕಾಸು ಆಯೋಗದಿಂದ ರೂ.25.00 ಕೋಟಿಗಳ ಅನುದಾನ, 16ನೇ ಹಣಕಾಸು ಆಯೋಗದಿಂದ ರೂ. 128.29 ಮತ್ತು ವಿಶೇಷ ಮೂಲ ಸೌಕರ್ಯ ಅನುದಾನ ರೂ. 429.27 ಕೋಟಿಗಳನ್ನು ಅನುದಾನವನ್ನು ನಿರೀಕ್ಷಿಸಲಾಗಿದೆ.

ಜಾಹೀರಾತು

Advertisements
  • ಜಾಹೀರಾತು ಪರವಾನಿಗೆ ಮೊತ್ತ ಸುಮಾರು ರೂ. 1.25 ಕೋಟಿಗಳ ಪರವಾನಿಗೆ ಶುಲ್ಕ ಸಂಗ್ರಹಿಸುವ ನಿರೀಕ್ಷೆ ಇದೆ. 
  • ಈ ಹೊಸ ಜಾಹೀರಾತು ನಿಯಮಗಳ ಅನುಷ್ಠಾನದಿಂದಾಗಿ 2026-27 ನೇ ಸಾಲಿನಲ್ಲಿ ಸುಮಾರು ರೂ. 108 ಕೋಟಿಗಳ ಜಾಹೀರಾತು ಆದಾಯವನ್ನು ಸಂಗ್ರಹಿಸುವ ನಿರೀಕ್ಷೆ ಇದೆ.

ನಗರ ಯೋಜನೆ ಮತ್ತು ಟಿ.ಡಿ.ಆರ್

  • ಪಾಲಿಕೆಯ ಮೂಲಸೌಕರ್ಯ ಯೋಜನೆಗಳ ಸಮರ್ಪಕ ಅನುಷ್ಟಾನಕ್ಕಾಗಿ ಭೂ-ಸ್ವಾಧೀನ ಅತ್ಯವಶ್ಯಕವಾಗಿದ್ದು, ಯಾವುದೇ ಯೋಜನೆಗೆ ಸಕಾಲದಲ್ಲಿ ಭೂಮಿಯನ್ನು ಲಭ್ಯತೆಗೊಳಪಡಿಸುವ ನಿಟ್ಟಿನಲ್ಲಿ ಈ ಆರ್ಥಿಕ ವರ್ಷದಲ್ಲಿ ಭೂ-ಸ್ವಾಧೀನಕ್ಕೆ ರೂ.17.00 ಕೋಟಿಗಳನ್ನು ಮೀಸಲಿರಿಸಿದೆ.
  • ನಗರ ಯೋಜನೆ ವಿಭಾಗದಿಂದ 2026-27ನೇ ಸಾಲಿನಲ್ಲಿನ ಕಟ್ಟಡ ನಕ್ಷೆ ಮಂಜೂರಾತಿ, ಪ್ಲಿಂತ್‌/ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನಾನುಭವ ಪ್ರಮಾಣ ಪತ್ರ ನೀಡುವ ಸಂಬಂಧ ಶುಲ್ಕ, ಪ್ರೀಮಿಯಂ ಎಫ್.ಎ.ಆರ್‌ ಶುಲ್ಕ, ಏಕ ನಿವೇಶನ ನಕ್ಷೆ ಮಂಜೂರಾತಿಯಲ್ಲಿ ಉದ್ಯಾನವನ/ಬಯಲು ಜಾಗದ ಶೇ.5 ರಷ್ಟು ಶುಲ್ಕ ಹಾಗೂ ಇನ್ನಿತರೆ ಮೂಲಗಳಿಂದ ಅಂದಾಜು ರೂ 817.37 ಕೋಟಿಗಳ ಆದಾಯ ನಿರೀಕ್ಷಿಸಲಾಗಿದೆ.
  • 2026-27 ನೇ ಸಾಲಿನಲ್ಲಿ ಪಾಲಿಕೆಯ ವ್ಯಾಪ್ತಿಯ ಖಾಲಿ ನಿವೇಶನ ಸ್ವತ್ತುಗಳಿಗೆ single plot ಮುಖಾಂತರ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ರೂ.100.00 ಕೋಟಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ.
ಬಜೆಟ್‌

ಕಲ್ಯಾಣ  ಕಾರ್ಯಕ್ರಮಗಳು

  • 2026-27ನೇ ಸಾಲಿನ ಆಯವ್ಯಯದಲ್ಲಿ ಶೈಕ್ಷಣಿಕ ಕಾರ್ಯಕ್ರಮಕ್ಕಾಗಿ ಒಟ್ಟು ಮೊತ್ತ ರೂ. 8.94 ಕೋಟಿಗಳನ್ನು ಮೀಸಲಿರಿಸಲಾಗಿದೆ.
  • 2026-27ನೇ ಸಾಲಿನ ಇ-ಸಾರಥಿ ಯೋಜನೆಯಡಿ ರೂ. 4.08 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ
  • 2026-27 ನೇ ಸಾಲಿನ ಆಯವ್ಯಯದ ವಸತಿ ಯೋಜನೆಗೆ ರೂ.71.07 ಕೋಟಿಗಳನ್ನು ಮೀಸಲಿರಿಸಲಾಗಿದೆ.
  • 2026-27ನೇ ಸಾಲಿನ ಎಲ್ಲಾ ವರ್ಗದ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಒಟ್ಟು ರೂ. 11.12 ಕೋಟಿಗಳನ್ನು ಮೀಸಲಿರಿಸಿದೆ.
  • ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಹ ಉದ್ಯೋಗಸ್ಥ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಈ ವರ್ಷ ರೂ. 1.00 ಕೋಟಿಗಳನ್ನು ಕಾಯ್ದಿರಿಸಲಾಗಿದೆ.
  • ಪೌರ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಕ್ಕಾಗಿ ರೂ. 10.00 ಕೋಟಿ ಮೀಸಲಿರಿಸಲಾಗಿದೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ/ಹಿಂದುಳಿದ ಅಲ್ಪಸಂಖ್ಯಾತ ವರ್ಗದ ಫಲಾನುಭವಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸುವ ನಿಟ್ಟಿನಲ್ಲಿ ರೂ. 7.60 ಕೋಟಿಗಳನ್ನು ಮೀಸಲಿರಿಸಲಾಗಿದೆ. ಅಂದಾಜು 1200 ಫಲಾನುಭವಿಗಳಿಗೆ ನೀಡಲು ಉದ್ದೇಶಿಸಲಾಗಿದೆ.
  • 2026-27ನೇ ಸಾಲಿನ ಆಯವ್ಯಯದಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಿಸಲು ಒಟ್ಟು ರೂ. 1.28 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದ್ದು, ಸುಮಾರು 110 ಫಲಾನುಭವಿಗಳಿಗೆ ವಾಹನ ವಿತರಿಸಲು 1.58 ಕೋಟಿಗಳನ್ನು ಎಲೆಕ್ಟ್ರೀಕಲ್‌ ವೀಲ್‌ ಚೇರ್‌ ವಾಹನ ಖರೀದಿಸಿ ವಿತರಿಸಲು ಉದ್ದೇಶಿಸಲಾಗಿದೆ.
  • 2026-27ನೇ ಸಾಲಿನ ಆಯವ್ಯಯದಲ್ಲಿ ತೃತೀಯ ಲಿಂಗಿಗಳ ಸಮುದಾಯದ ಕಲ್ಯಾಣ ಕಾರ್ಯಕ್ರಮಕ್ಕೆ ರೂ. 73.00 ಲಕ್ಷಗಳನ್ನು ಮೀಸಲಿರಿಸಲಾಗಿದ್ದು, ತೃತೀಯ ಲಿಂಗಿಗಳ ಸಮುದಾಯದವರು ಸ್ವಾವಲಂಬಿಗಳಾಗಲು ಹಾಗೂ ಸ್ವಯಂ ಉದ್ಯೋಗಕ್ಕಾಗಿ ಒಂದು ಬಾರಿಗೆ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಗರಿಷ್ಠ ಮೊತ್ತ ರೂ. 50,000 ಗಳನ್ನು ಸಹಾಯಧನ ನೀಡಲು ಉದ್ದೇಶಿಸಲಾಗಿದೆ.
  • 2026-27 ನೇ ಸಾಲಿನ ಆಯವ್ಯಯದಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮಕ್ಕಾಗಿ ಒಟ್ಟು ರೂ. 1.27 ಕೋಟಿಗಳನ್ನು ಮೀಸಲಿರಿಸಿದ್ದು, ಹೊಲಿಗೆ ತರಬೇತಿ ಪಡೆದ ಸುಮಾರು 400 ಮಹಿಳೆಯರಿಗೆ ಜೀವನೋಪಾಯಕ್ಕಾಗಿ ಹೊಲಿಗೆ ಯಂತ್ರಗಳನ್ನು ನೀಡಲು ಮತ್ತು ಉದ್ಯೋಗ್ಯಸ್ತ ಮಹಿಳೆಯರಿಗೆ ಎಲೆಕ್ಟ್ರೀಕಲ್‌ ದ್ವಿಚಕ್ರ ವಾಹನ ವಿತರಿಸಲು ರೂ 50.00 ಲಕ್ಷಗಳನ್ನು ಮೀಸಲಿರಿಸಿದೆ. ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳಾ ಸ್ವಸಹಾಯ ಸಂಘದ ಆರ್ಥಿಕ ಸಬಲೀಕರಣಕ್ಕಾಗಿ ‘ಕೆಫೆ ಸಂಜೀವಿನಿ’ ಎಂಬ ಮಹಿಳೆಯರು ನಡೆಸುವ ಕ್ಯಾಂಟೀನ್‌ಗಳನ್ನು ಸ್ಥಾಪಿಸುವ ಮೂಲಕ ನಗರ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶದಿಂದ ‘ಅಕ್ಕ ಕೆಫೆ’ಯನ್ನು ಪ್ರಾರಂಭಿಸಲು ರೂ. 27.00 ಲಕ್ಷಗಳನ್ನು ಮೀಸಲಿರಿಸಲಾಗಿದೆ.
  • ಹಿರಿಯ ನಾಗರೀಕರ ಕಲ್ಯಾಣ ಕಾರ್ಯಕ್ರಮಕ್ಕಾಗಿ ರೂ.1.47 ಕೋಟಿಗಳನ್ನು ಮೀಸಲಿರಿಸಲಾಗಿದೆ.
  • 2026-27ನೇ ಸಾಲಿನ ಆಯವ್ಯಯದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳ ಕಲ್ಯಾಣ ಕಾರ್ಯಕ್ರಮದಡಿ ಮಾರಾಟ ವಲಯ ಸ್ಥಾಪಿಸಲು ಸದರಿ ಆಯವ್ಯಯದಲ್ಲಿ ಉದ್ದೇಶಿಸಲಾಗಿದ್ದು, ರೂ. 60 ಲಕ್ಷಗಳನ್ನು ಮೀಸಲಿರಿಸಲಾಗಿದೆ.
  • ಪಾಲಿಕೆಯ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನ ರೂ. 7.10 ಕೋಟಿಗಳನ್ನು ಮೀಸಲಿರಿಸಿದ್ದು, ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ, ವ್ಯಾಪಾರ ಚಟುವಟಿಕೆಗಳನ್ನು ಉತ್ತೇಜಿಸಲು ಬೀದಿ ಬದಿ ವ್ಯಾಪಾರಿಗಳಿಗೆ ರಿಕ್ತವಾಗಿ, ಸಾಮಾಜಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಬಗೆಯ  ಇ-ವೆಂಡಿಂಗ್ ಮಾರಾಟ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸುವುದು ಉದ್ದೇಶಿಸಲಾಗಿದೆ.
  • ನಿರಾಶ್ರಿತರ ರಾತ್ರಿ ತಂಗುದಾಣಗಳ ನಿರ್ವಹಣೆಗಾಗಿ 2026-27 ನೇ ಸಾಲಿನ ಆಯವ್ಯಯದಲ್ಲಿ ರೂ.1.10 ಕೋಟಿ ಅನುದಾನವನ್ನು ಮೀಸಲಿರಿಸಿದೆ.
  • ಸಾಮಾನ್ಯ ವರ್ಗದ ಕಲ್ಯಾಣ ಕಾರ್ಯಕ್ರಮಕ್ಕಾಗಿ ರೂ. 5.60 ಕೋಟಿ ಗಳನ್ನು ಮೀಸಲಿರಿಸಲಾಗಿದೆ.
  • ಪಾಲಿಕೆ ವ್ಯಾಪ್ತಿಯ ಅರ್ಹ ಸ್ವಯಂ-ಸೇವಾ ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಹಾಯಧನ ನೀಡಲು 2026-27 ನೇ ಸಾಲಿನ ಆಯವ್ಯಯದಲ್ಲಿ ರೂ.11.00 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
  • ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯಧನ ನೀಡಲು ರೂ. 1 ಕೋಟಿ ಗಳನ್ನು ಮೀಸಲಿರಿಸಲಾಗಿದೆ. ಕ್ರೀಡಾಪಟುಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಉದ್ದೇಶವಾಗಿರುತ್ತದೆ.
  • ಪೂಜ್ಯ ಮಹಾಪೌರರ ವಿವೇಚನೆಗೊಳಪಟ್ಟ ಅನುದಾನದಲ್ಲಿ ಪತ್ರಕರ್ತರು  ಮತ್ತು ಮಾಧ್ಯಮ ವರದಿಗಾರರಿಗೆ ವೈದ್ಯಕೀಯ ಪರಿಹಾರ ಸೌಲಭ್ಯ ನೀಡಲು ರೂ. 50 ಲಕ್ಷಗಳನ್ನು ಮೀಸಲಿರಿಸಲಾಗಿದೆ. 
  • ಸಣ್ಣ ಮತ್ತು  ಮಧ್ಯಮ ಪತ್ರಕರ್ತರು /ವರದಿಗಾರರಿಗೆ ಸಾಮೂಹಿಕ  ವಿಮಾ ಯೋಜನೆಗಾಗಿ ರೂ. 22 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
  • ಪೂಜ್ಯ ಮಹಾಪೌರರ ವಿವೇಚನೆಗೊಳಪಟ್ಟ ಅನುದಾನದಲ್ಲಿ ವೈದ್ಯಕೀಯ ಪರಿಹಾರ ಸೌಲಭ್ಯ ನೀಡಲು ರೂ. 2 ಕೋಟಿಗಳನ್ನು ಮೀಸಲಿರಿಸಲಾಗಿದೆ.

ಸಾರ್ವಜನಿಕ ಸಂಪರ್ಕ

  • ಪಾಲಿಕೆಯ ಎಲ್ಲಾ ಇಲಾಖೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲು Facebook, Instagram, ಮತ್ತು Youtube ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲಾಗುತ್ತಿದೆ.
  • ಪಾಲಿಕೆಯ ವ್ಯಾಪ್ತಿಯ ಪ್ರತಿಯೊಬ್ಬ ನಾಗರೀಕನ ಅಹವಾಲು ಸ್ವೀಕರಿಸಿ ತಕ್ಷಣವೇ ಪರಿಹಾರ ಒದಗಿಸುವ ಪರಿಕಲ್ಪನೆಯೊಂದಿಗೆ ಪೋನ್ ಇನ್ – solution on “ ಕಾರ್ಯಕ್ರಮವನ್ನು ಪ್ರತಿ ಶುಕ್ರವಾರ ಕೈಗೊಳ್ಳುತ್ತಿದೆ.

ನೈರ್ಮಲ್ಯೀಕರಣ

  • ಮಿಷನ್ ಕ್ಲೀನ್ ಏರ್‌ಪೋರ್ಟ್ ರೋಡ್ ಎಂಬ ಶೀರ್ಷಿಕೆಯೊಂದಿಗೆ ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಬಳ್ಳಾರಿ ರಸ್ತೆಯ ಸುಮಾರು 34 ಕಿಲೋಮೀಟರ್‌ಗಳ ರಸ್ತೆ ಇಕ್ಕೆಲಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ.
  • ಹೆಬ್ಬಾಳ ವಿಭಾಗದಲ್ಲಿ ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಿ ಪ್ರತಿ ಕೆಜಿ ಗೊಬ್ಬರಕ್ಕೆ ರೂ. 150/- ಗಳಂತೆ ನಿಗಧಿಪಡಿಸಿ ಒಟ್ಟು 300 ಕೆ.ಜಿ ಗೊಬ್ಬರವನ್ನು ಮಾರಾಟ ಮಾಡಲಾಗಿರುತ್ತದೆ.
  • ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವವರನ್ನು ಗುರುತಿಸಲು ಒಟ್ಟು 110 ಸಿಸಿಟಿವಿಗಳನ್ನು ಅಳವಡಿಸಲು ಸ್ಥಳ ನಿಗದಿಪಡಿಸಲಾಗಿದೆ.
  • ಪೌರಕಾರ್ಮಿಕರಿಗೆ ಸಂಬಂಧಿಸಿದಂತೆ ಹಬ್ಬದ ಮುಂಗಡ, 21 ದಿನದ ರಜಾ ಅವಧಿ, 15 ದಿನಗಳ ಗಳಿಕೆ ರಜಾ, ಡಿಎ ಬಾಕಿ ಮೊತ್ತ, ಖಾಯಂ ಪೌರಕಾರ್ಮಿಕರ ನಿವೃತ್ತಿ/ಮರಣದ ಸ್ವಯಂ ಚಾಲಿತ ವೇತನ ಬಡ್ತಿಗಾಗಿ ಒಟ್ಟು ರೂ.19.12 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ.
  • ಪಾಲಿಕೆ ವ್ಯಾಪ್ತಿಯಲ್ಲಿ ಡಿ.ಪಿ.ಎಸ್ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, 2026-27ನೇ ಸಾಲಿಗೆ ಅವರಿಗೆ ಒಟ್ಟು ರೂ.13.00 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ.
  • ಪೌರಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಸುರಕ್ಷತೆಗಾಗಿ ಕೈಗವಸು, ಪೊರಕೆ ಮತ್ತು ಇನ್ನಿತರ ಪರಿಕರಗಳನ್ನು ನೀಡಲು ಕ್ರಮವಹಿಸಲಾಗಿದೆ.
  • ಬೆಂಗಳೂರು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತಕ್ಕೆ ಆಡಳಿತಾತ್ಮಕ ವೆಚ್ಚಕ್ಕಾಗಿ 13.38 ಕೋಟಿ, ಘನತ್ಯಾಜ್ಯ ಸಂಗ್ರಹಣೆ-ಸಾಗಾಣಿಕೆ ಸ್ಥಾವರ ಮತ್ತು ಇತರೆ ನಿರ್ವಹಣೆಗಾಗಿ 129.57 ಕೋಟಿ ಹಾಗೂ ಬಂಡವಾಳ ಕಾಮಗಾರಿಗಳಿಗಾಗಿ 157.05 ಕೋಟಿಗಳ ಅನುದಾನವನ್ನು 2026-27ನೇ ನೀಡಲಾಗುತ್ತಿದೆ.
  • ಪಾಲಿಕೆಯ ಮುಖ್ಯರಸ್ತೆಗಳನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಸ್ವೀಪಿಂಗ್ ಯಂತ್ರಗಳ ಖರೀದಿಗೆ ಸಂಬಂಧಿಸಿದಂತೆ, ಒಟ್ಟು ರೂ.12.00 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ. ಪೌರಕಾರ್ಮಿಕರ ಸ್ವಚ್ಚತಾ ಕಾರ್ಯವನ್ನು ಸರಳೀಕರಣ ಹಾಗೂ ಉನ್ನತ್ತೀಕರಣಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಮಾನವ ಸಹಿತ ಕಸ ಗುಡಿಸುವ ಯಂತ್ರಗಳು/ಲಿಟ್ಟರ್ ಲಿಕ್ಕಿಂಗ್ ಯಂತ್ರಗಳ ಖರೀದಿಗೆ 5.00 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ.
  • ಪುಲಕೇಶಿನಗರ ವಿಭಾಗಕ್ಕೆ ಸಂಬಂಧಿಸಿದಂತೆ ಪ್ರಾಣಿ ತ್ಯಾಜ್ಯ ನಿರ್ವಹಣೆಗಾಗಿ 2026-27 ನೇ ಸಾಲಿನ ಒಟ್ಟು ರೂ 2.70 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ.
  • ಘನತ್ಯಾಜ್ಯ ಘಟಕ ಮತ್ತು ಯಂತ್ರಗಳ ರಿಪೇರಿ ಮತ್ತು ದುರಸ್ಥಿ ವೆಚ್ಚ ರೂ.10.00 ಲಕ್ಷಗಳನ್ನು ಮತ್ತು ಇತರೆ ನಿರ್ವಹಣೆಗಾಗಿ ರೂ.33.00 ಲಕ್ಷಗಳನ್ನು ಮೀಸಲಿಡಲಾಗಿದೆ.
  • ವಾರ್ಡ್‌ಗಳ ಮಸ್ಟರಿಂಗ್‌ಗೆ 2026-27 ನೇ ಸಾಲಿನ ಒಟ್ಟು ರೂ.94.50 ಲಕ್ಷ ಮೊತ್ತವನ್ನು ಮೀಸಲಿಡಲಾಗಿದೆ.
  • ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಬಂಧಿಸಿದಂತೆ 2026-27ನೇ ಸಾಲಿಗೆ ಒಟ್ಟು ರೂ.98.50 ಲಕ್ಷ ಮೊತ್ತವನ್ನು ಮೀಸಲಿಡಲಾಗಿದೆ.
  • ಪಾಲಿಕೆಯ ವ್ಯಾಪ್ತಿಯಲ್ಲಿನ ಕಸ ನಿರ್ವಹಣೆಗಾಗಿ 8 ಕಡೆಗಳಲ್ಲಿ Transfer Station ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿರುತ್ತದೆ.
  • ಮಹಿಳಾ ಪೌರ ಕಾರ್ಮಿಕರಿಗೆ ಆಟೋ ರಿಕ್ಷಾಚಾಲನೆ ಮಾಡಲು ತರಬೇತಿ ನೀಡಲು ಕ್ರಮ ವಹಿಸಲಾಗುವುದು.

ಅರಣ್ಯ

  • ಪಾಲಿಕೆ ವ್ಯಾಪ್ತಿಯ, ಮರಗಳ ಸಮಗ್ರ ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಮತ್ತು ನಗರದಾದ್ಯಂತ ಅರಣ್ಯ ಚಟುವಟಿಕೆಗಳನ್ನುನಿರ್ವಹಿಸಲು ಒಟ್ಟು ರೂ.1051.00 ಲಕ್ಷಗಳ ಅನುದಾನವನ್ನು ಮೀಸಲಿರಿಸಿದೆ.
  • ಅವಶ್ಯಕ ಮರಗಳ ಬೆಳವಣಿಗೆಗಾಗಿ ಈ ನಿಟ್ಟಿನಲ್ಲಿ ಗಣತಿ ಕಾಮಗಾರಿಗೆ ರೂ 30.00 ಲಕ್ಷಗಳ ಅನುದಾನ ಮೀಸಲಿರಿಸಿದೆ.
  • 2026-27ನೇ ಸಾಲಿನಲ್ಲಿ ಮರಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವ ಸಂಬಂಧ ಕಾಮಗಾರಿಗೆ   ರೂ. 500.00 ಲಕ್ಷಗಳ ಅನುದಾನವನ್ನು ಮೀಸಲಿರಿಸಿದೆ.
  • ಪರಿಸರ ಸಮತೋಲನವನ್ನು ಕಾಪಾಡಲು, ಹಸಿರು ಹೊದಿಕೆ ಹೆಚ್ಚಿಸಲು ಹಾಗೂ ಜಾಗತಿಕ ತಾಪಮಾನವನ್ನು ತಗ್ಗಿಸುವ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕಾಮಗಾರಿಗೆ ರೂ. 416.00 ಲಕ್ಷಗಳ ಅನುದಾನವನ್ನು ಮೀಸಲಿರಿಸಿದೆ.
  • ವನ್ಯ ಜೀವಿಗಳ ಸಂರಕ್ಷಣೆ ಮತ್ತು ಅವುಗಳನ್ನು ಸೂಕ್ತ ಆವಾಸ ಸ್ಥಾನಗಳಿಗೆ ಸ್ಥಳಾಂತರಿಸುವ ಕಾರ್ಯಕ್ಕೆ ರೂ 15.00 ಲಕ್ಷಗಳ ಅನುದಾನವನ್ನು ಮೀಸಲಿರಿಸಿದೆ.
  • ವನಮಹೋತ್ಸವದ ಕಾರ್ಯಕ್ರಮದ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಪರಿಸರ ಆಸಕ್ತರಿಗೆ ಜಾಗೃತಿ ಮತ್ತು ಆಸಕ್ತಿ ಮೂಡಿಸುವ ಕಾಮಗಾರಿಗೆ ರೂ 10.00 ಲಕ್ಷಗಳ ಅನುದಾನ ಮೀಸಲಿರಿಸಿದೆ.
  • ಸಸ್ಯಕ್ಷೇತ್ರಗಳಲ್ಲಿ ನೆಡುತೋಪು ಕಾಮಗಾರಿಗೆ ಉತ್ತಮವಾದ ಸಸಿಗಳನ್ನು ಬೆಳೆಸುವುದು ಹಾಗೂ ಸಾರ್ವಜನಿಕರಿಗೆ ಸಂಘ ಸಂಸ್ಥೆಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗಿಡಗಳನ್ನು ಬೆಳೆಸಲು ಉಚಿತವಾಗಿ ಸಸಿಗಳನ್ನು ವಿತರಿಸಲು 2026-27ನೇ ಸಾಲಿನಲ್ಲಿ ಗಿಡಗಳನ್ನು ಬೆಳೆಸಿ ಪೋಷಿಸುವ ಕಾಮಗಾರಿಗೆ ರೂ 80.00 ಲಕ್ಷಗಳ ಅನುದಾನ ಮೀಸಲಿರಿಸಿದೆ.

    ಇದನ್ನೂ ಓದಿ : ಬಾಗಲಕೋಟೆ ಬೈ ಎಲೆಕ್ಷನ್ |‌ ʼಬಿಮ್ಸ್‌ʼ ಮೂಲಕ ಮತಬ್ಯಾಂಕ್‌ ಗಟ್ಟಿಗೊಳಿಸಿಕೊಂಡ್ರಾ ಕೈ ನಾಯಕರು?

ತೋಟಗಾರಿಕೆ

  • ಬೆಂಗಳೂರು ಉತ್ತರನಗರ ಪಾಲಿಕೆಯಲ್ಲಿ ಸುಮಾರು 336ಕ್ಕೂ ಅಧಿಕ ಉದ್ಯಾನವನಗಳು ಹಾಗೂ 38 ರಸ್ತೆ ಮೀಡಿಯನ್‌ಗಳ ಉತ್ತಮ ನಿರ್ವಹಣೆಗಾಗಿ ಈ ಸಾಲಿನಲ್ಲಿ ರೂ.37.00 ಕೋಟಿಗಳ ಅನುದಾನವನ್ನು ಮೀಸಲಿರಿಸಿದೆ.
  • ಉದ್ಯಾನವನ ಅಭಿವೃದ್ಧಿ ಮತ್ತು ಉನ್ನತೀಕರಣಕ್ಕಾಗಿ ರೂ.25.00 ಕೋಟಿಗಳ ಅನುದಾನವನ್ನು ಮೀಸಲಿರಿಸಿದೆ.
  • ಉದ್ಯಾನವನಗಳಲ್ಲಿ ಅಂರ್ತಜಲ ಹೆಚ್ಚಿಸುವ ದೃಷ್ಟಿಯಿಂದ 2026-27ನೇ ಸಾಲಿಗೆ 200 ಇಂಗು ಗುಂಡಿಗಳನ್ನು ನಿರ್ಮಿಸುವ ಉದ್ದೇಶ  ಹೊಂದಿದೆ.
  • ಶಾಲಾ ವಲಯಗಳು, ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶಗಳು, ಮೆಟ್ರೋ ಮತ್ತು ಬಸ್ ಸಂಪರ್ಕ ಮತ್ತು ಸಾಧ್ಯವಾದಲ್ಲೆಲ್ಲಾ ಅವೆನ್ಯೂ ತೋಟದೊಂದಿಗೆ ಹಸಿರು ಕಾರಿಡಾರ್‌ಗಳ ನಿರ್ಮಾಣಕ್ಕೆ, ವಿಶೇಷ ಒತ್ತು ನೀಡಲಾಗುವುದು.
  • ಉದ್ಯಾನವನಗಳಲ್ಲಿ ಉದುರುವ ಎಲೆಗಳನ್ನು ಗೊಬ್ಬರವನ್ನಾಗಿ ಮಾರ್ಪಡಿಸಿ ಉದ್ಯಾನವನಗಳಲ್ಲಿರುವ ಮರಗಿಡಗಳಿಗೆ ಹಾಕಲು ಕ್ರಮವಹಿಸಲಾಗುವುದು.
  • ಉದ್ಯಾನವನಗಳಲ್ಲಿ ಮಕ್ಕಳ ಆಟದ ವ್ಯವಸ್ಥೆಗಾಗಿ ಪರಿಕರಗಳನ್ನು ಒದಗಿಸುವುದು ಹಾಗೂ ಸಾರ್ವಜನಿಕರಿಗೆ ವ್ಯಾಯಾಮಕ್ಕಾಗಿ ಪರಿಕರಗಳನ್ನು ಒದಗಿಸುವುದು ಮತ್ತು ನಡಿಗೆ ಪಥ ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ.
  • 60 ಉದ್ಯಾನವನಗಳಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಣೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ರೀತಿಯ ಉಪಯೋಗಕ್ಕಾಗಿ ಈ ಸಾಲಿನಲ್ಲಿ 50 ಉದ್ಯಾನವನಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಆರೋಗ್ಯ

  • ಸೊಳ್ಳೆ ನಿಯಂತ್ರಣ ಕಾರ್ಯಕ್ಕಾಗಿ 2026-27ನೇ ಸಾಲಿನಲ್ಲಿ ರೂ.8.86 ಕೋಟಿ ಮೀಸಲಿರಿಸಿದೆ.
  • ಸರ್ವಜ್ಞನಗರ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 100 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದ್ದು, ಸದರಿ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಕರ್ನಾಟಕ ಸರ್ಕಾರ ಇವರ ಸಮನ್ವಯದೊಂದಿಗೆ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಸಜ್ಜಿತ ಉಪಕರಣ, ಸಲಕರಣೆಗಳೊಂದಿಗೆ ಆಸ್ಪತ್ರೆಯನ್ನು  ಸಾರ್ವಜನಿಕರ ಸೇವೆಗೆ ನೀಡಲು ಕ್ರಮವಹಿಸಲಾಗುವುದು.
  • ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಉಚಿತ ಡಯಾಲಿಸಿಸ್ ಸೇವೆಗಳನ್ನು ಗಂಗಾನಗರ ಹೆರಿಗೆ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಇದೇ ರೀತಿ ಸಂಜಯನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲಸಂದ್ರ ಡಯಾಲಿಸಿಸ್ ಕೇಂದ್ರದಲ್ಲಿಯೂ ಸಹಾ ಹೊಸ ಯಂತ್ರಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಉಚಿತ ಡಯಾಲಿಸಿಸ್ ಸೇವೆಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗಾಗಿ ರೂ.50.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
  • ಬ್ರಾಂಡ್ ಬೆಂಗಳೂರು ಯೋಜನೆ ಅಡಿಯಲ್ಲಿ ಡಿ. ಜೆ ಹಳ್ಳಿ ಮತ್ತು ಮುನಿರೆಡ್ಡಿಪಾಳ್ಯ ಹೆರಿಗೆ ಆಸ್ಪತ್ರೆಗಳನ್ನು ಮೇರ್ಲ್ದಜೆಗೆರಿಸಲು ಈಗಾಗಲೇ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಅಗತ್ಯ ಕಟ್ಟಡ ಕಾಮಗಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಲಕರಣೆಗಳೊಂದಿಗೆ ಉನ್ನತೀಕರಣಗೊಳಿಸಲು ರೂ.35.00 ಕೋಟಿಗಳನ್ನು ನಿಗದಿಪಡಿಸಲಾಗಿದೆ.
  • ಇಂದಿರಾ ಕ್ಯಾಂಟೀನ್‌ಗಳಿಂದ ಆಹಾರ ಒದಗಿಸುವುದಕ್ಕೆ ರೂ11.15 ಕೋಟಿಗಳನ್ನು ಮೀಸಲಿರಿಸಿದೆ.

    ಇದನ್ನೂ ಓದಿ : UAPA | ಪೂರ್ವಗ್ರಹೀತ ವರದಿ – ಸತ್ತ ಸತ್ಯ: ಖುಲಾಸೆಯಾದರೂ ಅಳಿಯದ ‘ಭಯೋತ್ಪಾದಕ’ ಕಳಂಕ

ಆರೋಗ್ಯ ಇಲಾಖೆ (ಕ್ಲಿನಿಕಲ್ ವಿಭಾಗ)

  • ಬ್ರಾಂಡ್ ಬೆಂಗಳೂರು ಯೋಜನೆ ಅಡಿಯಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆರೋಗ್ಯ ಇಲಾಖೆಯ ಕ್ಲಿನಿಕಲ್ ವಿಭಾಗದಡಿಯಲ್ಲಿನ ಆಸ್ಪತ್ರೆಗಳನ್ನು ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್ಸ್ (IPHS) 2022 ರನ್ವಯ ಮೇಲ್ದರ್ಜೆಗೆ ಏರಿಸಲು ಉದ್ದೇಶಿಸಲಾಗಿದೆ. ಇದರಂತೆ ಎಂ.ಆರ್ ಪಾಳ್ಯ ಮತ್ತು ಡಿ.ಜೆ ಹಳ್ಳಿ ಹೆರಿಗೆ ಆಸ್ಪತ್ರೆಗಳನ್ನು 30 ಹಾಸಿಗೆ ಸಾಮರ್ಥ್ಯವುಳ್ಳ ಸಾಮುದಾಯ ಆರೋಗ್ಯ ಕೇಂದ್ರ (CHC) ಯಾಗಿ ಪರಿವರ್ತಿಸಲಾಗುವುದು.
  •  ಸದರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆ, ದಂತ ಚಿಕಿತ್ಸೆ, ಫಿಜಿಷಿಯನ್ ಪ್ರಸೂತಿ ತಜ್ಞರು, ಮಕ್ಕಳ ತಜ್ಞರು ಹಾಗೂ ತುರ್ತುಸೇವೆ ಹಾಗೂ ಆಂಬ್ಯುಲೆನ್ಸ್ ಸೇವೆಗಳನ್ನು ನೀಡಲಾಗುವುದು.
  • ಸಾರ್ವಜನಿಕ ಆರೋಗ್ಯ ವಿಭಾಗದಡಿಯಲ್ಲಿ ಬರುವ ನಮ್ಮ ಕ್ಲಿನಿಕ್, ನಗರ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅವಶ್ಯವಿರುವ ದುರಸ್ಥಿ ಕಾರ್ಯ, ಉಪಕರಣಗಳು, ಹಾಗೂ  ಹೊಸದಾಗಿ ಫಿಸಿಯೋಥೆರಪಿ ಸೆಂಟರ್‌ ಹಾಗೂ ಡೆಂಟಲ್ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುವುದು. ಸದರಿ ಕಾರ್ಯಕ್ಕಾಗಿ ಒಟ್ಟಾರೆ ಬೆಂಗಳೂರು ಉತ್ತರ ನಗರ ಪಾಲಿಕೆಗೆ ಒಟ್ಟು ರೂ.35.00 ಕೋಟಿಗಳನ್ನು ಮೀಸಲಿಡಲಾಗಿರುತ್ತದೆ.
  • ಗಂಗಾನಗರ  ಡಯಾಲಿಸಿಸ್ ಕೇಂದ್ರದ ಜೊತೆಗೆ, ಸಂಜಯನಗರ ಮತ್ತು ಮಲ್ಲಸಂದ್ರ ಡಯಾಲಿಸಿಸ್ ಕೇಂದ್ರಗಳಲ್ಲಿ ಉಚಿತ ಡಯಾಲಿಸಿಸ್ ಸೇವೆಗಳು ಪ್ರಾರಂಭಿಸಲಾಗಿದ್ದು, ಇದರಿಂದ ಅಗತ್ಯವಿರುವ ಮೂತ್ರಪಿಂಡ ಚಿಕಿತ್ಸಾ ಸೇವೆಗಳ ಲಭ್ಯತೆ ಹೆಚ್ಚಿಸಲಾಗಿದೆ.
  • ಸರ್ವಜ್ಞನಗರ, ಬ್ಯಾಟರಾಯನಪುರ ಮತ್ತು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಈ ಆಸ್ಪತ್ರೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಕಾರ್ಯಗತಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
  • ಸಾರ್ವಜನಿಕರು ವ್ಯಾಪಾರ ಪರವಾನಗಿ ಪಡೆಯುವಲ್ಲಿ ಆನ್‌ಲೈನ್ ವ್ಯವಸ್ಥೆಯ ಮೂಲಕ ಅರ್ಜಿದಾರರಿಗೆ ಶೀಘ್ರವಾಗಿ ಪರವಾನಗಿಗಳನ್ನು ನೀಡಲಾಗುತ್ತಿದೆ. ಜೊತೆಗೆ, ಅನಧಿಕೃತ ವಾಣಿಜ್ಯ ಸಂಸ್ಥೆಗಳನ್ನು ತಾಂತ್ರಿಕ ಏಕೀಕರಣದ ಮೂಲಕ ಪರವಾನಗಿ ವ್ಯವಸ್ಥೆಯೊಳಗೆ ತರಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪಶುಪಾಲನೆ

  • ಆಧುನಿಕ ಕಸಾಯಿಖಾನೆಯನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ರೂ.14.00 ಕೋಟಿಗಳ ಅನುದಾನವನ್ನು ಮೀಸಲಿರಿಸಲಾಗಿದೆ.
  • 2026–27 ನೇ ಸಾಲಿನಲ್ಲಿ 12000 ಬೀದಿ ನಾಯಿಗಳಿಗೆ ABC ಶಸ್ತ್ರಚಿಕಿತ್ಸೆ ನಡೆಸುವ ಸಂಬಂಧ ರೂ.3.00 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ.
  • ರೇಬೀಸ್ ರೋಗವು ಮಾನವರಿಗೆ ಸಹ ಅಪಾಯಕಾರಿಯಾಗಿರುವುದರಿಂದ, ಇದರ ಸಂಪೂರ್ಣ ನಿಯಂತ್ರಣಕ್ಕಾಗಿ Mass Dog Vaccination (MDV) ಕಾರ್ಯಕ್ರಮವನ್ನು ಮುಂದುವರಿಸಲಾಗುವುದು.
  • 2026–27 ನೇ ಸಾಲಿನಲ್ಲಿ ಸುಮಾರು 65000 ನಾಯಿಗಳಿಗೆ ರೇಬೀಸ್ ಹಾಗೂ ಸಂಯುಕ್ತ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ರೂ.5.00 ಕೋಟಿ ಅನುದಾನವನ್ನು ಮೀಸಲಿಡಲು ಉದ್ದೇಶಿಸಲಾಗಿದೆ.
  • ಪ್ರಾಣಿ ಕಲ್ಯಾಣ ಹಾಗೂ ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ನಾಗರೀಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಈ ಉದ್ದೇಶಕ್ಕಾಗಿ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಈ ಕಾರ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರೂ.50.00 ಲಕ್ಷ ಅನುದಾನವನ್ನು ಮೀಸಲಿರಿಸಲಾಗಿದೆ.
  • ಹೈಜಿನಿಕ್ ಸ್ಲಾಟರ್ ಲೈನ್, ಪಶು ವೈದ್ಯಕೀಯ ಪರಿಶೀಲನಾ ವ್ಯವಸ್ಥೆ. ತ್ಯಾಜ್ಯ ಸಂಸ್ಕರಣಾ ಘಟಕ, ಶೀತಲೀಕರಣ ವ್ಯವಸ್ಥೆ, ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆ ಈ ಯೋಜನೆಯ ಅಂದಾಜು ವೆಚ್ಚ ರೂ. 10.00 ಕೋಟಿ ಆಗಿದ್ದು, ಈ ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
  •  ಸುಮಾರು 500 ನಾಯಿಗಳಿಗೆ ಆಶ್ರಯ ವ್ಯವಸ್ಥೆ, ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಸೌಲಭ್ಯ, ಕ್ವಾರಂಟೈನ್ ವಾರ್ಡ್ ಆಹಾರ ಮತ್ತು ಆರೈಕೆ ವ್ಯವಸ್ಥೆ, ಈ ಯೋಜನೆಗಾಗಿ ರೂ. 3.80 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಪ್ರಾಣಿಗಳ ಚಿತಾಗಾರ ಸ್ಥಾಪನೆಗೆ ಸಂಬಂಧಿಸಿದಂತೆ ಕ್ರಮವಹಿಸಲಾಗುವುದು.
  •  ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ನಿರ್ವಹಣೆಯನ್ನು ಸುಗಮಗೊಳಿಸಲು ಹಾಗೂ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ರೂ.1.50 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ .

ಸಾರ್ವಜನಿಕ ಕಾಮಗಾರಿ

  • ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿ 5 ನಗರ ಪಾಲಿಕೆಗಳು ಸೃಜನೆಯಾದ ನಂತರ. ಬೆಂಗಳೂರು ಉತ್ತರ ನಗರ ಪಾಲಿಕೆಯ ಮರುವಿಂಗಡಣೆಯಲ್ಲಿ 72 ವಾರ್ಡ್‌ಗಳಿದ್ದು ಒಟ್ಟು 2545.65 ಕಿ. ಮೀ ಉದ್ದದ ವಾರ್ಡ್ ರಸ್ತೆಗಳು, 333.60 ಕಿ. ಮೀ ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳು, 74 ಆಟದ ಮೈದಾನಗಳು, 23 ಸಮುದಾಯ ಭವನಗಳು, 87 ಪಾಲಿಕೆ ಕಟ್ಟಡಗಳು ಮತ್ತು 26 ಸ್ಮಶಾನ/ರುದ್ರಭೂಮಿಗಳು, 92.91 ಕಿ.ಮೀ. ಉದ್ದದ ಪ್ರೈಮರಿ ನೀರುಗಾಲುವೆ ಮತ್ತು 82.59 ಕಿ. ಮೀ ಉದ್ದದ ಸೆಕೆಂಡರಿ ನೀರುಗಾಲುವೆಗಳು, 36 ಕೆರೆಗಳು, 336 ಉದ್ಯಾನವನಗಳು, 124591 ಬೀದಿ ದೀಪಗಳು ಇರುತ್ತವೆ. ಈ ಆಸ್ತಿಗಳ ನಿರ್ವಹಣೆ ಮತ್ತು ಹೊಸ ಆಸ್ತಿಗಳ ಸೃಜನೆಯೇ ನಮ್ಮ ಗುರಿಯಾಗಿದೆ.
  • ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಕಾಮಗಾರಿಗಳಿಗೆ ಸಂಬಂಧಿಸಿದಂತೆ 2026-27ನೇ ಸಾಲಿನಲ್ಲಿನ ಸಮುದಾಯ ಭವನ ಬಾಡಿಗೆ, ಕಟ್ಟಡಗಳ ಬಾಡಿಗೆ, ಓ.ಎಫ್.ಸಿ., ಅನುಮತಿ, ರಸ್ತೆ ಕತ್ತರಿಸುವಿಕೆ ಹಾಗೂ ಇತರೆ ಮೂಲಗಳಿಂದ   ರೂ. 32.00 ಕೋಟಿಗಳ ಆದಾಯವನ್ನು ನೀರಿಕ್ಷಿಸಲಾಗಿದೆ.
  • ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಸಂಬಂಧಿದಸಿದಂತೆ on street and Off-street parking ಯೋಜನೆಯ ಮುಖಾಂತರ ರೂ.6.00 ಕೋಟಿಗಳ ಅದಾಯವನ್ನು ನಿರೀಕ್ಷಿಸಲಾಗಿದೆ.
  • ಘನ ಸರ್ಕಾರದ ವತಿಯಿಂದ ವಿಶೇಷ ಮೂಲ ಸೌಕರ್ಯ ಯೋಜನೆಗಳು ಮಾನ್ಯ ಮುಖ್ಯ ಮಂತ್ರಿಗಳ ಮೂಲ ಸೌಲಭ್ಯ ಅಭಿವೃದ್ಧಿ ಯೋಜನೆಗಳು ಹಾಗೂ ಇತ್ಯಾದಿ ಯೋಜನೆಗಳಿಗೆ ಸಂಬಂಧಿಸಿದಂತೆ ರೂ. 935.56 ಕೋಟಿಗಳನ್ನು 2026-27ನೇ ಸಾಲಿನಲ್ಲಿ ಮೀಸಲಿರಿಸಲಾಗಿದೆ.
  • ಸುಸ್ತಿರ ರಸ್ತೆಗಳ ಅಭಿವೃದ್ಧಿಯಡಿ ಬೆಂಗಳೂರು ಉತ್ತರ ನಗರ ವಾಲಿಕೆ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ.248 ಕೋಟಿಗಳ ಮೊತ್ತದಲ್ಲಿ 197.90 ಕಿ.ಮೀ ಉದ್ದದ ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯಡಿ ರೂ.248.71 ಕೋಟಿಗಳ ಮೊತ್ತದಲ್ಲಿ 187.03 ಕಿ.ಮೀ ಉದ್ದದ ಮುಖ್ಯ ಮತ್ತು ಉಪ ಮುಖ್ಯರಸ್ತೆಗಳ ESROW Grants (Rs.694 ಕೋಟಿ ಕಾಮಗಾರಿ) ರೂ.176.50 ಕೋಟಿ ಮೊತ್ತದಲ್ಲಿ 118.29 ಕಿ.ಮೀ ಉದ್ಯದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್‌ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಕ್ರಮ ವಹಿಸಲಾಗಿದ್ದು ಅದರಂತೆ 2026-27ನೇ ಸಾಲಿನಲ್ಲಿ ಸದರಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ, ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಲಾಗುವುದು.
  • ಪಾಲಿಕೆಯ ಸೀಮಿತ ಆದಾಯ ಸಂಗ್ರಹಣೆಯಲ್ಲಿ 2026-27ನೆಯ ವರ್ಷದಲ್ಲಿ ಬೇಕಾಗಿರುವ ರಸ್ತೆ, ಚರಂಡಿ, ಪಾದಚಾರಿ ಮಾರ್ಗ ದುರಸ್ಥಿ ಹಾಗೂ ನಿರ್ವಹಣೆಯನ್ನು ಮಾಡಲಾಗುವುದು. ಇದಕ್ಕಾಗಿ ಪಾಲಿಕೆಯ 72 ವಾರ್ಡ್‌ಗಳಿಗೂ ಚರಂಡಿಗಳ ಹೂಳೆತ್ತುವಿಕೆಗೆ ತಲಾ ರೂ.20 ಲಕ್ಷಗಳು, ರಸ್ತೆ ಗುಂಡಿ ಮುಚ್ಚುವಿಕೆಗೆ ತಲಾ ರೂ.10 ಲಕ್ಷಗಳು, ಪಾದಚಾರಿ ಮಾರ್ಗ ದುರಸ್ಥಿ ಹಾಗೂ ನಿರ್ವಹಣೆಗೆ ರೂ.25.00 ಲಕ್ಷಗಳು, ಟ್ರಾಫಿಕ್ ಇಂಜಿನಿಯರಿಂಗ್ ಸಂಬಂಧಿತ ಕಾಮಗಾರಿ ದುರಸ್ತಿ ಹಾಗೂ ನಿರ್ವಹಣೆಗೆ ತಲಾ ರೂ. 20 ಲಕ್ಷಗಳು, ಒಟ್ಟಾರೆ ರೂ.75 ಲಕ್ಷಗಳನ್ನು ಪ್ರತಿ ವಾರ್ಡಿಗೆ ನಿಗಧಿಪಡಿಸಲಾಗಿರುತ್ತದೆ. ವಾರ್ಡ್‌ ಮಟ್ಟದ ರಸ್ತೆಗಳು, ಪ್ರಮುಖ ರಸ್ತೆಗಳ ದುರಸ್ಥಿ ಮತ್ತು ನಿರ್ವಹಣೆಗೆ ಹಾಗೂ ಪ್ರತಿ ವಾರ್ಡ್‌ಗೆ ರೂ. 1.50 ಕೋಟಿ ರೂಗಳ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಮೀಸಲಿರಿಸಿದ್ದು ಒಟ್ಟಾರೆ ಪ್ರತಿ ವಾರ್ಡ್‌ಗೆ ರೂ. 2.25 ಕೋಟಿಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
  • ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡಗೆ ರೂ.25.00 ಲಕ್ಷಗಳ ಅನುದಾನವನ್ನು ನಿಗದಿಪಡಿಸಲಾಗಿದ್ದು, ಒಟ್ಟು ರೂ.18.00 ಕೋಟಿಗಳ ಅನುದಾನದಲ್ಲಿ ಪಾದಚಾರಿ ಮಾರ್ಗ ರಿಪೇರಿ ಮತ್ತು ಪುನರ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದರಿಂದ ಸಾರ್ವಜನಿಕರು ಪಾದಚಾರಿ ಮಾರ್ಗವನ್ನು ಬಳಕೆ ಮಾಡುವುದನ್ನು ಉತ್ತೇಜನೆ ನೀಡುವುದರೊಂದಿಗೆ 1000 ಕಿ. ಮೀ ಸುಸ್ಸಜಿತ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕ ಬಳಕೆಗೆ ಅನುವು ಮಾಡಲಾಗುವುದು.
  •  ಪಾದಚಾರಿಗಳ ಅನುಕೂಲಕ್ಕಾಗಿ ನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗಗಳನ್ನು ರಸ್ತೆಗಳ ಜಂಕ್ಷನ್ ಗಳ ಅಭಿವೃದ್ಧಿಗಾಗಿ, ಸ್ಕೈವಾಕ್ ಗಳ ನಿರ್ಮಾಣ ಹಾಗೂ ಇತ್ಯಾಧಿಗಳ ನಿರ್ಮಾಣಕ್ಕಾಗಿ ರೂ. 50.00 ಕೋಟಿಗಳನ್ನು ಮೀಸಲಿರಿಸಲಾಗಿದೆ.
  • ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ರಾಜಕಾಲುವೆಗಳ ದುರಸ್ತಿ ಹಾಗೂ ನಿರ್ವಹಣೆಗಾಗಿ 2026-27ನೇ ಸಾಲಿನಲ್ಲಿ ರೂ. 10.00 ಕೋಟಿಗಳ ಅನುದಾನವನ್ನು ಮೀಸಲಿರಿಸಿದ್ದು ಮಳೆಗಾಲದಲ್ಲಿ ಸಂಭವಿಸುವ ಪ್ರವಾಹ ನಿಯಂತ್ರಣಕ್ಕಾಗಿ ವಾರ್ಷಿಕ ನಿರ್ವಹಣೆಯನ್ನು ಕೈಗೊಳ್ಳಲಾಗುವುದು.
  • ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿನ ಪ್ರವಾಹ ನಿಯಂತ್ರಣ ಕಾಮಗಾರಿಗಳಲ್ಲಿ ಒಟ್ಟು 53.42 ಕಿ.ಮೀ ದೂರದ ರಾಜಕಾಲುವೆಗಳ ಕಾಂಕ್ರಿಟ್ ತಡೆ ಗೋಡೆ (ಬಾಕ್ಸ್-ಮಾದರಿ ಹಾಗೂ ಯು ಮಾದರಿ) ನಿರ್ಮಾಣ ಕಾಮಗಾರಿಯನ್ನು ವಿಶ್ವಬ್ಯಾಂಕ್ ಮತ್ತು ಎನ್.ಡಿ.ಎಂ.ಎಫ್ ಅನುದಾನದಡಿಯಲ್ಲಿ ರೂ.532.52 ಕೋಟಿಗಳ ಮೊತ್ತದಲ್ಲಿ 2025-26ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗಿದ್ದು,          2026-27ನೇ ಸಾಲಿನಲ್ಲಿ, ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಇದರಿಂದಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯ ನಾಗರೀಕರಿಗೆ ಮುಂದಿನ ವರ್ಷಗಳಲ್ಲಿ ಯಾವುದೇ ರೀತಿಯ ಪ್ರವಾಹ ಉಂಟಾಗದಂತೆ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗುವುದು.
  • ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕತ್ತಲು ಮುಕ್ತ ಪ್ರದೇಶ ಹಾಗೂ ಸುರಕ್ಷಿತ ಬೆಂಗಳೂರಿಗಾಗಿ ಬೀದಿ ದೀಪ ಹಾಗೂ ಅದರ ಪರಿಕರಗಳಿಗೆ ಸಂಬಂಧಿಸಿದಂತೆ ದುರಸ್ತಿ ಮತ್ತು ನಿರ್ವಹಣೆಗಾಗಿ, ಹಾಗೂ ವಿದ್ಯುತ್ ಕಾಮಗಾರಿಗೆ ಸಂಬಂಧಿಸಿದಂತೆ ಕಟ್ಟಡಗಳು, ಆಟದ ಮೈದಾನಗಳು, ಉದ್ಯಾನವನಗಳು, ಸಮುದಾಯ ಭವನಗಳು, ವಿದ್ಯುತ್ ಚಿತಾಗರಗಳ ದುರಸ್ತಿ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ರೂ.9.40 ಕೋಟಿಗಳ ಅನುದಾನವನ್ನು ಮೀಸಲಿರಿಸಲಾಗಿರುತ್ತದೆ.
  • ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಲ್ಲಾ ವಾರ್ಡ್‌ಗಳಲ್ಲಿ ಸಾಂಪ್ರದಾಯಿಕ ಬೀದಿದೀಪಗಳನ್ನು ತೆರವುಗೊಳಿಸಿ, ಇಂಧನ ದಕ್ಷತೆಯ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸಿ, ವಿದ್ಯುತ್ ಉಳಿತಾಯ ಮಾಡುವ ಕ್ರಮಗಳನ್ನು ಅನುಷ್ಠಾನಗೊಳಿಸಲು                    2025-26ನೇ ಸಾಲಿನಲ್ಲಿ Public Private Partnership (PPP) ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 124142 ಸಂಖ್ಯೆಯ ಬೀದಿದೀಪಗಳಿದ್ದು. ಈಗಾಗಲೇ 49767 ಎಲ್.ಇ.ಡಿ ಬೀದಿದೀಪಗಳನ್ನು ಬದಲಾಯಿಸಿ ಶೇಕಡಾ 76.93% ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿದ್ದು ಉಳಿಕೆ ಶೇ. 23.07% ರಷ್ಟು ಕಾಮಗಾರಿಯನ್ನು 2026-27ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಇದರಿಂದಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿವೇಳೆ ಕತ್ತಲು ಮುಕ್ತ ಹಾಗೂ ಸುರಕ್ಷಿತ ಪ್ರದೇಶಗಳನ್ನು ನಿರ್ಮಾಣ ಮಾಡಲಾಗುವುದು.
  • ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರವಾರು ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 120.00 ಕೋಟಿಗಳ ಅನುದಾನವನ್ನು 2026-27ನೇ ಸಾಲಿನಲ್ಲಿ ಒದಗಿಸಲಾಗುತ್ತದೆ. ಇದರಿಂದಾಗಿ ವಿಧಾನಸಭಾ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಯನ್ನು ಪಡಿಸಲಾಗುವುದು.
  • ಪಾಲಿಕೆ ವ್ಯಾಪ್ತಿಯಲ್ಲಿ ಆರ್‌ಎಂಪಿ-2015ರನ್ವಯ ರಸ್ತೆ ಅಗಲೀಕರಣವನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 12 ರಸ್ತೆಗಳ 30.5 ಕಿ.ಮೀ ಉದ್ದದ ರಸ್ತೆಗಳನ್ನು ಅಗಲೀಕರಣಗೊಳಿಸಲು ಉದ್ದೇಶಿಸಿದ್ದು, ಈ ಪೈಕಿ, 8 ರಸ್ತೆಗಳ 22.5 ಕಿ.ಮೀ ಉದ್ದದ ರಸ್ತೆಗಳಾದ (ಟ್ಯಾನರಿ ರಸ್ತೆ, ನೇಹಾ ಪ್ರಕಾಶ್‌ ರಸ್ತೆ, ಕೆರೆಕೋಡಿ ರಸ್ತೆ, ಬಾಗಲೂರು ಮುಖ್ಯ ರಸ್ತೆ, ಕೋಗಿಲು-ಕಟ್ಟಿಗೆನಹಳ್ಳಿ ರಸ್ತೆ, ಕೋಗಿಲು-ಪಾಲನಹಳಿ ರಸ್ತೆ, ಜಕ್ಕೂರು ಡಬಲ್‌ ರಸ್ತೆ, ಜಕ್ಕೂರು ರೈಲ್ವೈ ಸಮನಾಂತರ ರಸ್ತೆ)  ರಸ್ತೆ ಅಗಲೀಕರಣನ್ನು ಬಿಬಿಎಂಪಿ ಅವಧಿಯಲ್ಲಿ ಪ್ರಾರಂಬಿಸಿದ್ದು ಈ ಆರ್ಥಿಕ ವರ್ಷದಲ್ಲಿ  ಸದರಿ ರಸ್ತೆಗಳನ್ನು  ಪೂರ್ಣಗೊಳಿಸಲಾಗುವುದು
  • ಹೊಸದಾಗಿ ಈ ಆರ್ಥಿಕ ವರ್ಷದಲ್ಲಿ 04 ರಸ್ತೆಗಳ ಉದ್ದ 7.95 ಕಿ.ಮೀ (ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್‌ ಕಾಲೇಜು ರಸ್ತೆ, ಸಂದಿಪ್‌ ಉನ್ನಿಕೃಷ್ಣನ್‌ ರಸ್ತೆ ಬಳಿಯ ಗ್ಯಾಸ್‌ಪೈಪ್‌ಲೈನ್‌ ರಸ್ತೆ, ದಾಸರಹಳ್ಳಿ ಮುಖ್ಯ ರಸ್ತೆ, ಹೆಣ್ಣುರು -ಬಾಗಲೂರು ರಸ್ತೆ) ರಸ್ತೆ ಅಗಲೀಕರಣಗೊಳಿಸಲು ಯೋಜಿಸಿದ್ದು, ಹೊಸದಾಗಿ  ರಸ್ತೆಗಳನ್ನು ಅಗಲೀಕರಣಗೊಳಿಸಲು ರೂ. 25.00 ಕೋಟಿಗಳ ಅನುದಾನವನ್ನು 2026-27ನೇ ಸಾಲಿನಲ್ಲಿ ಮೀಸಲಿರಿಸಿದ್ದು ಇದರಿಂದ ವಾಹನ ಸಂಚಾರ ಹಾಗೂ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಲಾಗುವುದು.

ಕೆರೆಗಳು

  • ಕೆರೆಗಳ ವಾರ್ಷಿಕ ನಿರ್ವಹಣೆಗಾಗಿ ರೂ. 8.00 ಕೋಟಿಗಳ ಅನುದಾನವನ್ನು ಕಾಯ್ದಿರಿಸಲಾಗಿದೆ ಕೆರೆಗಳ ಸಂರಕ್ಷಣೆಗಾಗಿ ಕೆರೆಗಳ ಪ್ರದೇಶವನ್ನು ಪ್ಲಾಸ್ಟಿಕ್‌ ಮುಕ್ತ ಪ್ರದೇಶವನ್ನಾಗಿ ಘೋಷಿಸಲಾಗುವುದು.
  • ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು 2026-27ನೇ ಸಾಲಿನಲ್ಲಿ ರೂ. 40.00 ಕೋಟಿಗಳ ಅನುದಾನವನ್ನು ಮೀಸಲಿರಿಸಲಾಗಿರುತ್ತದೆ.
  • ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಿಂಗಾಪುರ ಕೆರೆಯ ಸಮಗ್ರ ಅಭಿವೃದ್ಧಿ ಮತ್ತು ನಿರುಪಯುಕ್ತ ಕೆರೆಗಳಾದ ಬಾಣಸವಾಡಿ ಕೆರೆ, ಲಿಂಗರಾಜಪುರ ಕೆರೆ, ಬ್ಯಾಟಗುಂಟೆಪಾಳ್ಯ ಕೆರೆ ಮತ್ತು ರಾಮಚಂದ್ರಪುರ ಕೆರೆಗಳನ್ನು ಪುನರ್‌ಜೀವನಗೊಳಿಸಲು ವಿಸ್ತೃತವಾದ ಯೋಜನಾ ವರದಿಯನ್ನು ತಯಾರಿಸಲು ಮತ್ತು ಅದರಲ್ಲಿ ಆಯ್ದ ಕೆರೆಗಳನ್ನು ಅಭಿವೃದ್ಧಿಗೊಳಿಸಲು ಆಯವ್ಯಯದಲ್ಲಿ ಯೋಜಿಸಲಾಗಿರುತ್ತದೆ.  
  • ಹವಾಮಾನ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಹೊಸದಾಗಿ ಕಾಮಗಾರಿಗಳನ್ನು ಕೈಗೊಳ್ಳಲು ರೂ. 20.00 ಕೋಟಿಗಳ ಅನುದಾನವನ್ನು ಮೀಸಲಿರಿಸಲಾಗಿರುತ್ತದೆ.

ಶಿಕ್ಷಣ

  • 2026-27ನೇ ಸಾಲಿನಲ್ಲಿ ಶಾಲಾ/ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ನೋಟ್‌ ಬುಕ್‌, ಸಮವಸ್ತ್ರ, ಬ್ಯಾಗ್‌, ಶೂ-ಸಾಕ್ಸ್‌, ಸ್ವೇಟರ್‌ಗಳನ್ನು ವಿತರಿಸುವ ಸಲುವಾಗಿ 4 ಕೋಟಿ ರೂಗಳನ್ನು ಆಯವ್ಯಯದಲ್ಲಿ ಕಾಯ್ದಿರಿಸಲಾಗಿದೆ.
  • ವಿನಾಯಕನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಹೊಸದಾಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜನ್ನು 2026-27ನೇ ಸಾಲಿಗೆ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಲಾಗಿದ್ದು ಸದರಿ ಶಾಲಾ/ಕಾಲೇಜಿಗೆ ಅವಶ್ಯಕವಾಗಿ ಬೇಕಾಗಿರುವ ಪೀಠೋಪಕರಣಗಳಿಗೆ ರೂ.2 ಕೋಟಿ ಗಳನ್ನು ಆಯವ್ಯಯದಲ್ಲಿ ಕಾಯ್ದಿರಿಸಲಾಗಿದೆ.
  • 2026-27 ನೇ ಸಾಲಿನ ಆಯವ್ಯಯದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲಿ ಅತ್ಯುನ್ನತ  ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರೂ. 25,000/- ಗಳನ್ನು, ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರೂ.35,000/- ಗಳನ್ನು ಹಾಗೂ ಅಂತಿಮ ಪದವಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ. 50,000/-ಗಳನ್ನು ಪ್ರೋತ್ಸಾಹಧನವಾಗಿ ನೀಡಲು 50.00 ಲಕ್ಷಗಳನ್ನು ಕಾಯ್ದಿರಿಸಿದೆ.
  • ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅಂತರ್‌ ಶಾಲಾ/ಕಾಲೇಜುಗಳ ಕ್ರೀಡಾಕೂಟ ಸಾಂಸ್ಕೃತಿಕ ಸ್ಪರ್ಧೆ, ಮತ್ತು ಇತರೆ ಕಾರ್ಯಕ್ರಮಗಳಿಗಾಗಿ ರೂ.47 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
  • ಸ್ಮಾರ್ಟ್ ಶಿಕ್ಷಣದ ಯೋಜನೆಯಡಿಯಲ್ಲಿ ಪಾಲಿಕೆಯ ಶಾಲಾ/ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಆಧುನಿಕ ಮತ್ತು ಡಿಜಿಟಲ್ ತಂತ್ರಾಂಶದ ಯುಗದಲ್ಲಿ ವಿದ್ಯಾಭ್ಯಾಸದ ಕಲಿಕೆಯ ಹಿತದೃಷ್ಟಿಯಿಂದ ಶಾಲಾ/ಕಾಲೇಜುಗಳಿಗೆ ಅವಶ್ಯವಿರುವ ಸ್ಮಾರ್ಟ್ ಪ್ಯಾನೆಲ್ ಗಳನ್ನು ಅಳವಡಿಸಲು ರೂ 100.00 ಲಕ್ಷಗಳ ಅನುದಾನವನ್ನು ಮೀಸಲಿರಿಸಲಾಗಿದೆ.
  • ಉತ್ತರ ನಗರ ಪಾಲಿಕೆಯ ಎಲ್ಲಾ ಶಾಲಾ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಕ್ರೀಡೆ ಹಾಗೂ ಭೌದಿಕ ಬೆಳವಣಿಗೆಗೆ ಸಂಬಂಧಿಸಿದಪ್ರತಿಷ್ಠಿತ ಸಂಸ್ಥೆಗಳಿಂದ ತರಬೇತಿ ನೀಡುವುದರ ಜೊತೆಗೆ ಅಗತ್ಯ ಪರಿಕರಗಳ ಕಿಟ್‌ಗಳನ್ನು ಒದಗಿಸಲು ರೂ.50.00 ಲಕ್ಷಗಳ ಅನುದಾನವನ್ನು ಮೀಸಲಿರಿಸಲಾಗಿದೆ.
  • ಉತ್ತರ ನಗರ ಪಾಲಿಕೆಯ ವತಿಯಿಂದ ಹೊಸದಾಗಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ಶಾಲಾ/ ಕಾಲೇಜುಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲು ರೂ.50.00 ಲಕ್ಷಗಳ ಅನುದಾನವನ್ನು ಮೀಸಲಿರಿಸಲಾಗಿದೆ.
  • ಶಾಲಾ/ ಕಾಲೇಜುಗಳ ಗ್ರಂಥಾಲಯಗಳನ್ನು ಉನ್ನತೀಕರಿಸಲು ರೂ.50.00 ಲಕ್ಷಗಳ ಅನುದಾನವನ್ನು ಮೀಸಲಿರಿಸಲಾಗಿದೆ.
eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ ಸೇರಿ ಎಲ್ಲಾ ಉತ್ಸವಗಳಲ್ಲಿ ಆನೆಗಳ ಬಳಕೆ ನಿಷೇಧಿಸಿ, ರೋಬೋಟಿಕ್ ಆನೆ ಬಳಸಿ: ಅರಣ್ಯ ಸಚಿವರಿಗೆ ಮನವಿ

ನಾಡಹಬ್ಬ ಮೈಸೂರು ದಸರಾ ಮತ್ತು ಜಿಲ್ಲಾವಾರು ದಸರಾ ಆಚರಣೆಗಳು ಸೇರಿದಂತೆ ಯಾವುದೇ...

ಔರಾದ(ಬಿ) ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್ ಆಯ್ಕೆ

ಭಾರತೀಯ ಜನತಾ ಪಕ್ಷದ ಔರಾದ(ಬಿ) ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್...

ಆಂಧ್ರಪ್ರದೇಶ | ರಸ್ತೆ ಕಾಮಗಾರಿ ವೇಳೆ ಜೆಲಾಟಿನ್ ಸ್ಫೋಟ; ಶಾಲಾ ಶಿಕ್ಷಕಿ ಸೇರಿದಂತೆ ಹಲವರ ಸಾವು

ರಸ್ತೆ ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಜೆಲಾಟಿನ್ ಸ್ಟಿಕ್‌ಗಳು ಅನಿರೀಕ್ಷಿತವಾಗಿ ಸ್ಫೋಟಗೊಂಡು, ಶಾಲಾ ಶಿಕ್ಷಕಿಯೊಬ್ಬರು...

ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣ ಕಾರ್ಯ ವರ್ಷದೊಳಗೆ ಪೂರ್ಣ : ಸಚಿವ ಈಶ್ವರ ಖಂಡ್ರೆ

ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳನ್ನು ನೀಡಿದ ಬಸವಣ್ಣನವರು ಮನುಕುಲದ...