ಬೆಂಗಳೂರು | ವಿದ್ಯಾರ್ಥಿಗೆ ‘ಭಯೋತ್ಪಾದಕ’ನೆಂದು ನಿಂದನೆ; ಪ್ರಾಧ್ಯಾಪಕ ಡಾ. ಮುರಳೀಧರ್ ಅಮಾನತು

Date:

ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್ (PES) ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್‌ನಲ್ಲಿ, ತರಗತಿಯ ವೇಳೆ ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ಪದೇ ಪದೇ ‘ಭಯೋತ್ಪಾದಕ’ ಎಂದು ಪ್ರಾಧ್ಯಾಪಕ ಡಾ. ಮುರಳೀಧರ್ ನಿಂದಿಸಿದ್ದಾರೆ. ಅವರು ವಿದ್ಯಾರ್ಥಿಯನ್ನು ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ, ವಿಶ್ವವಿದ್ಯಾಲಯ ಆಡಳಿತವು ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.

- Advertisement -

ವರದಿಗಳ ಪ್ರಕಾರ, ಮಾರ್ಚ್ 27ರಂದು ತರಗತಿಯಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ ಅವರು ಅಫಾನ್ ಎಂಬ ವಿದ್ಯಾರ್ಥಿಯನ್ನು ಗುರಿಯಾಗಿಸಿಕೊಂಡು ಸುಮಾರು 13 ಬಾರಿ ‘ಭಯೋತ್ಪಾದಕ’ ಎಂದು ಕರೆದು ಅವಮಾನಿಸಿದ್ದಾರೆ. ಸುಮಾರು 60 ವಿದ್ಯಾರ್ಥಿಗಳ ಸಮ್ಮುಖದಲ್ಲೇ ಅಫಾನ್‌ನನ್ನು ಉದ್ದೇಶಿಸಿ, ‘ಇರಾನ್ ಯುದ್ಧಕ್ಕೆ ನಿಮ್ಮಂತವರೇ ಕಾರಣ, ನೀವು ನರಕಕ್ಕೆ ಹೋಗುತ್ತೀರಿ’ ಎಂಬಂತಹ ಪ್ರಚೋದನಾಕಾರಿ ಮತ್ತು ದ್ವೇಷಪೂರಿತ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಘಟನೆ ಬೆನ್ನಲ್ಲೇ, ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಅನ್ಯಾಯಕ್ಕೊಳಗಾದ ವಿದ್ಯಾರ್ಥಿಯ ಪರವಾಗಿ ಧ್ವನಿ ಎತ್ತಿದ ಇತರ ಕೆಲವು ವಿದ್ಯಾರ್ಥಿಗಳನ್ನು ಶಿಸ್ತು ಕ್ರಮದ ಹೆಸರಿನಲ್ಲಿ ಅಮಾನತುಗೊಳಿಸಲಾಗಿದೆ ಎಂದೂ ಆರೋಪಿಸಲಾಗಿದೆ. ಆದಾಗ್ಯೂ, ವಿಶ್ವವಿದ್ಯಾಲಯದಿಂದ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.

ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಆಡಳಿತ ಮಂಡಳಿಯು, ಪ್ರಾಧ್ಯಾಪಕ ಡಾ. ಮುರಳೀಧರ್ ದೇಶಪಾಂಡೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. “ವಿದ್ಯಾರ್ಥಿಯ ದೂರನ್ನು ಆಧರಿಸಿ ಸಮಗ್ರ ವಿಚಾರಣೆ ನಡೆಯುವವರೆಗೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಕುಲಪತಿಗಳ ಸಹಿಯಿರುವ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ಈ ಲೇಖನ ಓದಿದ್ದೀರಾ?: ‘ವಿಶ್ವಗುರು’ವಿನ ನಿಜ ಬಣ್ಣ ಬಯಲು ಮಾಡಿದ ಮಧು ಕಿಶ್ವರ್: ಸುದ್ದಿ ಮಾಡದ ಮಡಿಲ ಮಾಧ್ಯಮಗಳು

ಘಟನೆಯನ್ನು ಎಸ್‌ಐಒ ತೀವ್ರವಾಗಿ ಖಂಡಿಸಿದ್ದು, ಸಂಬಂಧಿತ ಪ್ರಾಧ್ಯಾಪಕನ ವಿರುದ್ಧ ಕೇವಲ ಅಮಾನತು ಕ್ರಮ ಸಾಲದು, ಕೂಡಲೇ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ. ಮತ್ತೊಂದೆಡೆ, ಎನ್‌ಎಸ್‌ಯುಐ ಸಂಘಟನೆ ಕೂಡ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿದೆ.

ಘಟನೆಯನ್ನು ಖಂಡಿಸಿಸಿರುವ ಎಸ್‌ಐಒ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹಯ್ಯನ್, “ಶೈಕ್ಷಣಿಕ ಕೇಂದ್ರಗಳು ಗೌರವ, ವಿಮರ್ಶಾತ್ಮಕ ಚಿಂತನೆ ಹಾಗೂ ಒಳಗೊಳ್ಳುವಿಕೆಯನ್ನು ಬೆಳೆಸುವ ತಾಣಗಳಾಗಬೇಕು. ಅಧಿಕಾರದಲ್ಲಿರುವ ವ್ಯಕ್ತಿಗಳೇ ಇಂತಹ ಖಂಡನೀಯ ಕೃತ್ಯಗಳಲ್ಲಿ ತೊಡಗಿದಾಗ, ಅದು ವೃತ್ತಿಪರ ನೈತಿಕತೆ ಮತ್ತು ಸಾಂಸ್ಥಿಕ ಜವಾಬ್ದಾರಿಯ ಗಂಭೀರ ಉಲ್ಲಂಘನೆಯಾಗುತ್ತದೆ. ಕ್ಯಾಂಪಸ್‌ಗಳನ್ನು ಕೋಮು ಆಧಾರದ ಮೇಲೆ ವಿಭಜಿಸಿ ಭಯ ಮತ್ತು ಬಹಿಷ್ಕಾರದ ವಾತಾವರಣವನ್ನು ನಿರ್ಮಿಸುತ್ತವೆ” ಎಂದು ಕಿಡಿಕಾರಿದ್ದಾರೆ.

“ಕರ್ನಾಟಕ ಸರ್ಕಾರವು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕ್ಯಾಂಪಸ್‌ಗಳಲ್ಲಿ ತಾರತಮ್ಯದ ವಿರುದ್ಧ ಬಲವಾದ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ನಾವು ಒತ್ತಾಯಿಸುತ್ತೇವೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಇಂತಹ ಕೃತ್ಯಗಳು ಮರುಕಳಿಸದಂತೆ ತಡೆಯಲು ಸಾಂಸ್ಥಿಕ ಹೊಣೆಗಾರಿಕೆ, ಸ್ಪಷ್ಟ ಕುಂದುಕೊರತೆ ನಿವಾರಣಾ ವ್ಯವಸ್ಥೆ ಮತ್ತು ಕಠಿಣ ಕಾನೂನು ಕ್ರಮಗಳ ಅಗತ್ಯವಿದೆ. ಒಗ್ಗಟ್ಟು ಮತ್ತು ಪರಸ್ಪರ ಗೌರವ ಅತ್ಯಗತ್ಯವಾಗಿರುವ ಈ ಸಮಯದಲ್ಲಿ, ಇಂತಹ ಘಟನೆಗಳು ನಮ್ಮ ಹಂಚಿಕೆಯ ಸಾಮಾಜಿಕ ರಚನೆಯ ಅಡಿಪಾಯಕ್ಕೆ ಪೆಟ್ಟು ನೀಡುತ್ತವೆ. ಇಸ್ಲಾಮೋಫೋಬಿಯಾ ವಿರುದ್ಧ ದೃಢವಾಗಿ ನಿಲ್ಲಲು ಮತ್ತು ನ್ಯಾಯ, ಘನತೆ ಹಾಗೂ ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ ಮಂಡಳಿಯ ಚಪ್ಪಾಳೆ

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ...

ತಮಗೆ ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ ಐಎಎಸ್ ಜಿಜಿ ಥಾಮ್ಸನ್

ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗ...

Bhalki Ground Report | ಮುಸ್ಲಿಮರ ಮತ ಹಕ್ಕಿಗೆ ಕನ್ನ: ಬಗೆದಷ್ಟು ಬಯಲಾಗ್ತಿದೆ ‘ಫಾರ್ಮ್-7’ರ ಸಂಚು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ.ಖಂಡ್ರೆ ಅವರು ಪ್ರತಿನಿಧಿಸುವ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ ʼನೀರೋʼ; ಭಾರತ ಉರಿಯುತ್ತಿರುವಾಗ ಭಜನೆ ಮಾಡಿದ ʼಮೋದಿʼ!

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ,...