ಎಚ್‌ಎಂಟಿ ಭೂ ಮಂಜೂರಾತಿ ಸಂಪೂರ್ಣ ಕಾನೂನುಬದ್ಧ; ಎಚ್.ಡಿ. ಕುಮಾರಸ್ವಾಮಿ

Date:

ಬೆಂಗಳೂರಿನ ಎಚ್‌ಎಂಟಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಡಿರುವ ಆರೋಪಗಳಿಗೆ ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 1960ರ ದಶಕದ ಮೂಲ ದಾಖಲೆಗಳನ್ನು ಬಿಡುಗಡೆ ಮಾಡಿರುವ ಅವರು, ಎಚ್‌ಎಂಟಿ ಭೂ ಮಂಜೂರಾತಿಯು ಸಂಪೂರ್ಣ ಕಾನೂನುಬದ್ಧವಾಗಿ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕೇವಲ ರಾಜಕೀಯ ದುರುದ್ದೇಶದಿಂದ ರಾಜ್ಯ ಸರ್ಕಾರವು ಸಂಸ್ಥೆಯ ಪುನಶ್ಚೇತನ ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಎಂಟಿ ವಾಚ್ ಕಾರ್ಖಾನೆ ಹಾಗೂ ಟೌನ್‌ಶಿಪ್ ನಿರ್ಮಾಣಕ್ಕಾಗಿ ಅರಣ್ಯ ಭೂಮಿಯನ್ನು ನೀಡುವ ಪ್ರಕ್ರಿಯೆ ಕಾನೂನು ಚೌಕಟ್ಟಿನಲ್ಲೇ ನಡೆದಿದೆ. ಅಕ್ಟೋಬರ್ 21, 1960ರಂದು ಎಚ್‌ಎಂಟಿ 260 ಎಕರೆ ಭೂಮಿಗೆ ಮನವಿ ಮಾಡಿದಾಗ, ಅಂದಿನ ಅರಣ್ಯ ಸಂರಕ್ಷಣಾಧಿಕಾರಿಗಳು ಪರಿಶೀಲನೆ ನಡೆಸಿ 283 ಎಕರೆ ಭೂಮಿ ಲಭ್ಯವಿದ್ದು, ಅದನ್ನು ಷರತ್ತುಬದ್ಧವಾಗಿ ಮಂಜೂರು ಮಾಡಲು ಅಭ್ಯಂತರವಿಲ್ಲ (NOC) ಎಂದು ವರದಿ ನೀಡಿದ್ದರು. ಅಲ್ಲದೆ, ಈ ಮಂಜೂರಾದ ಭೂಮಿಗಾಗಿ ಎಚ್‌ಎಂಟಿ ನಿಗದಿತ ಹಣವನ್ನೂ ಸರ್ಕಾರಕ್ಕೆ ಪಾವತಿಸಿದೆ ಎಂಬುದನ್ನು ಅವರು ದಾಖಲೆಗಳ ಸಮೇತ ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಎಚ್‌ಎಂಟಿ ಕಾರ್ಖಾನೆಗೆ ಆರ್ಥಿಕ ಕಾಯಕಲ್ಪ ನೀಡಲು ತಾವು ಕೇಂದ್ರ ಸಚಿವರಾದ ಬಳಿಕ ಪ್ರಧಾನಮಂತ್ರಿ ಹಾಗೂ ಹಣಕಾಸು ಸಚಿವರೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದರೆ, ರಾಜ್ಯ ಸರ್ಕಾರ ಅನಗತ್ಯ ವಿವಾದ ಸೃಷ್ಟಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. 160 ಎಕರೆ ಭೂಮಿ ಯಾರ ಪಾಲಾಗಿದೆ? ಅಲ್ಲಿ ಖಾಸಗಿಯವರು ಅಪಾರ್ಟ್‌ಮೆಂಟ್ ಕಟ್ಟಿದ್ದರೆ ಅದಕ್ಕೆ ಯಾರು ಹೊಣೆ? ನೀವೇ ಖುದ್ದಾಗಿ ತನಿಖೆ ನಡೆಸಿ ನೋಟಿಸ್ ನೀಡಿ” ಎಂದು ಸವಾಲೆಸೆದರು.

ವಿವಾದಿತ 444 ಎಕರೆ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನವನ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ಬಗ್ಗೆ ಮಾತನಾಡಿದ ಅವರು, “ಅರಮನೆ ಮೈದಾನದಲ್ಲಿ ಉದ್ಯಾನವನ ನಿರ್ಮಿಸುತ್ತೇವೆ ಎಂದು ಹೇಳಿ, ಇದೀಗ ಅಲ್ಲಿ ಉದ್ದಕ್ಕೂ ಕಲ್ಯಾಣ ಮಂಟಪಗಳನ್ನು ಕಟ್ಟಲು ಅನುಮತಿ ನೀಡಿದ್ದೀರಿ. ಎಚ್‌ಎಂಟಿ ಜಾಗದಲ್ಲೂ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಅದೇ ರೀತಿ ಕಲ್ಯಾಣ ಮಂಟಪಗಳನ್ನು ಕಟ್ಟಲು ಹೊರಟಿದ್ದೀರಾ?” ಎಂದು ಪ್ರಶ್ನಿಸಿದರು.

“ಕೇವಲ ಎಚ್‌ಎಂಟಿ ಭೂಮಿಯ ಬಗ್ಗೆ ಮಾತ್ರ ಮಾತನಾಡುವ ಅರಣ್ಯ ಸಚಿವರು, ಬೇರೆ ಕಡೆ ಆಗಿರುವ ಬೃಹತ್ ಅರಣ್ಯ ಒತ್ತುವರಿಗಳ ಬಗ್ಗೆ ಏಕೆ ಮೌನ ವಹಿಸಿದ್ದಾರೆ. ಜಕ್ಕೂರು ಪ್ಲಾಂಟೇಶನ್‌ನಲ್ಲಿರುವ 300ಕ್ಕೂ ಹೆಚ್ಚು ಎಕರೆಗಳಲ್ಲಿ 170 ಎಕರೆಯಷ್ಟು ಜಾಗದಲ್ಲಿ ಅಕ್ರಮವಾಗಿ ಮನೆಗಳು ನಿರ್ಮಾಣವಾಗಿವೆ. ಕಾಡುಗೋಡಿ ಪ್ಲಾಂಟೇಶನ್ ಒತ್ತುವರಿಗೆ ಸಂಬಂಧಿಸಿದ ಕಾನ್ಕಾರ್ಡ್ ಕಂಪನಿ ವಿವಾದ ಇನ್ನೂ ನ್ಯಾಯಾಲಯದಲ್ಲಿದೆ. ಇವುಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಈಗ ಏಕಾಏಕಿ ಎಚ್‌ಎಂಟಿ ಮೇಲೆ ಏಕೆ ಮುಗಿಬಿದ್ದಿದೆ” ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಹೆಚ್‌ಎಂಟಿ ಪಕ್ಕದಲ್ಲೇ ಏರ್ ಫೋರ್ಸ್ ಇದೆ, ಅದಕ್ಕೆಲ್ಲಾ ನಮ್ಮ ಬಳಿ ದಾಖಲೆ ಇದೆ. ಹೆಚ್‌ಎಂಟಿ ಭೂಮಿಯನ್ನು ಮುಟ್ಟಲು ಆಗುವುದಿಲ್ಲ, ಕೋರ್ಟ್ ತಡೆ ನೀಡಿದೆ. ಈಶ್ವರ್ ಖಂಡ್ರೆ ಅವರು ಅರಣ್ಯ ಸಚಿವರಾಗಿ ಎರಡು ವರ್ಷದಿಂದ ಎಲ್ಲೆಲ್ಲಿ ಭೂಮಿ ಉಳಿಸಿದ್ದಾರೆ? ಕೇವಲ ಹೆಚ್‌ಎಂಟಿ ಮತ್ತು ಕುದುರೆಮುಖ ಬಗ್ಗೆಯೂ ಯಾಕೆ ಮಾತನಾಡುತ್ತಿದ್ದಾರೆ? ಬೇರೆಯವರಿಗೆ ಕೊಟ್ಟ ಜಮೀನನ್ನು ವಾಪಸ್ ಪಡೆಯುವ ಕೆಲಸವನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದ 14-18 ತಿಂಗಳ ಅವಧಿಯಲ್ಲಿ ಎಚ್‌ಎಂಟಿ ವ್ಯಾಪ್ತಿಯಲ್ಲಿ ಯಾವುದೇ ಜಾಗದ ನೋಂದಣಿ ಆಗಬಾರದು ಎಂದು ಖುದ್ದಾಗಿ ಆದೇಶ ನೀಡಿ ತಡೆಹಿಡಿದಿದ್ದಾಗಿ ನೆನಪಿಸಿದರು. ಇಸ್ರೋ ನಂತಹ ಕೇಂದ್ರದ ಮಹತ್ವದ ಸಂಸ್ಥೆಗಳಿಗೆ ಭೂಮಿಯನ್ನು ನೀಡಿದ್ದರೆ ಅದು ದೇಶದ ಅಭಿವೃದ್ಧಿಗೆ ಮತ್ತು ಸೇವೆಗೆ ನೀಡಿದ ದೊಡ್ಡ ಕೊಡುಗೆಯಾಗುತ್ತದೆ ಹೊರತು ಅಕ್ರಮವಾಗುವುದಿಲ್ಲ ಎಂದು ಎಚ್‌ ಡಿಕೆ ಇದೀ ಸಂದರ್ಭದಲ್ಲಿ ತಿಳಿಸಿದರು.

ಬೆಂಗಳೂರು ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ. ನೀಡುತ್ತೇವೆ ಎಂಬ ಸರ್ಕಾರದ ಘೋಷಣೆ ಬಗ್ಗೆ ಮಾತನಾಡಿದ ಎಚ್‌ಡಿಕೆ, ಸರ್ಕಾರದಲ್ಲಿ ಹಣ ಎಲ್ಲಿದೆ? ಯಾರ ತಲೆ ಮೇಲೆ ಸಾಲ ಹೊರಿಸುತ್ತೀರಿ? ಜನರ ಮೇಲೆ ಸಾಲದ ಹೊರೆ ಹಾಕಿ ಬೆಂಗಳೂರು ಉದ್ದಾರ ಮಾಡುತ್ತೀರಾ? ಎಂದು ಪ್ರಶ್ನಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್‌ಘಾಟ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಮೌನ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು...

ಬಾಗಲಕೋಟೆ | ಪ್ರಜಾಪ್ರಭುತ್ವದ ಕರಾಳ ದಿನ: ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಸಂಕಲ್ಪದೊಂದಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ...

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...