ಹಳ್ಳ ಹಿಡಿದ ʼಜೆಜೆಎಂʼ: ಬತ್ತಿದ ನೀರಿನ ಮೂಲಗಳು; ಕೈಕೊಟ್ಟ ಆರ್‌ಒ ಪ್ಲ್ಯಾಂಟ್‌ಗಳು!

Date:

ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲು ರಣ ರೂಪ ತಾಳುತ್ತಿದೆ. ಈಗಾಗಲೇ ರಾಜ್ಯದ ಹಲವೆಡೆ ಬಿಸಿಲಿನ ತಾಪಕ್ಕೆ ಜನ ಕಂಗೆಟ್ಟಿದ್ದಾರೆ. ಈ ಮಧ್ಯೆ ಉತ್ತರ ಕರ್ನಾಟಕದ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.  ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿನ ವಿಳಂಬ, ಅನುದಾನದ ಕೊರತೆ ಮತ್ತು ಕಳಪೆ ಕಾಮಗಾರಿಯಿಂದಾಗಿ ಶುದ್ಧ ಕುಡಿಯುವ ನೀರು ಇಂದಿಗೂ ಕನಸಾಗಿಯೇ ಉಳಿದಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಪ್ರಕಾರ, ರಾಜ್ಯದ ಒಟ್ಟು 19,652 RO (ಶುದ್ಧೀಕರಣ) ಘಟಕಗಳಲ್ಲಿ 3,382 ಘಟಕಗಳು ನಿಷ್ಕ್ರಿಯಗೊಂಡಿವೆ.

- Advertisement -

ಗ್ರಾಮ ಪಂಚಾಯತ್‌ಗಳಿಗೆ ಈ ಘಟಕಗಳ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅನಿವಾರ್ಯವಾಗಿ ಬಹುತೇಕ ಜನರು ಬೋರ್‌ವೆಲ್ ನೀರಿನ ಮೊರೆ ಹೋಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಜಲಾಶಯಗಳು ಬತ್ತಿ ಹೋದಾಗ ರೈತರು ಮತ್ತು ಸಾರ್ವಜನಿಕರು ಅನಿವಾರ್ಯವಾಗಿ ಅಂತರ್ಜಲವನ್ನು ಅವಲಂಬಿಸುತ್ತಾರೆ. ಆದರೆ, ಸಾವಿರಾರು ಅಡಿ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆದಂತೆಲ್ಲಾ ನೀರಿನಲ್ಲಿ ಹಾನಿಕಾರಕ ಖನಿಜಗಳ ಸಾಂದ್ರತೆ ಹೆಚ್ಚುತ್ತಿದೆ. ಫ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಹಲ್ಲುಗಳು ಕರೆಗಟ್ಟುವುದು, ಮೂಳೆಗಳು ಬಾಗುವುದು (Skeletal Fluorosis) ಮತ್ತು ಕೀಲು ನೋವಿನ ಸಮಸ್ಯೆ ಚಿಕ್ಕ ವಯಸ್ಸಿನಲ್ಲೇ ಕಾಡುತ್ತಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಆರ್ಸೆನಿಕ್ ಅಂಶ ಪತ್ತೆಯಾಗುತ್ತಿದ್ದು, ಇದು ದೀರ್ಘಕಾಲದಲ್ಲಿ ಕ್ಯಾನ್ಸರ್ ಮತ್ತು ಚರ್ಮರೋಗಗಳಿಗೆ ಕಾರಣವಾಗುತ್ತಿದೆ. ಉತ್ತರ ಕರ್ನಾಟಕದ ಶೇ. 40ರಷ್ಟು ಜನರು ಫ್ಲೋರೈಡ್ ಮತ್ತು ಆರ್ಸೆನಿಕ್ ಅಂಶವಿರುವ ಕಲುಷಿತ ನೀರನ್ನು ಕುಡಿಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

image 2026 04 25T131933.074

ಹಳ್ಳಿಗಳಿಗೆ ನೀರು ಪೂರೈಸುವ ಪೈಪ್‌ಲೈನ್‌ಗಳು ದಶಕಗಳಷ್ಟು ಹಳೆಯದಾಗಿದ್ದು, ಅನೇಕ ಕಡೆ ತುಕ್ಕು ಹಿಡಿದಿವೆ ಅಥವಾ ಒಡೆದು ಹೋಗಿವೆ ಎನ್ನಲಾಗುತ್ತಿದೆ. ಕುಡಿಯುವ ನೀರಿನ ಪೈಪ್‌ಗಳು ಚರಂಡಿ ಹಾದಿಯಲ್ಲೇ ಹಾದು ಹೋಗಿರುವುದರಿಂದ, ಪಂಪ್ ಸೆಟ್ ಆಫ್ ಮಾಡಿದಾಗ ಉಂಟಾಗುವ ವ್ಯಾಕ್ಯೂಮ್‌ನಿಂದಾಗಿ ಚರಂಡಿಯ ಕೊಳಕು ನೀರು ಪೈಪ್‌ಲೈನ್‌ ಸೇರುತ್ತಿದೆ.  ಹೀಗೆ ಕಲುಷಿತಗೊಂಡ ನೀರನ್ನು ನೇರವಾಗಿ ಸೇವಿಸುವುದರಿಂದ ಕಾಲರಾ, ಟೈಫಾಯ್ಡ್, ಗ್ಯಾಸ್ಟ್ರೋಎಂಟರೈಟಿಸ್‌ನಂತಹ ರೋಗಗಳು ಸಾಂಕ್ರಾಮಿಕವಾಗಿ ಹರಡುತ್ತಿವೆ. ಯಾದಗಿರಿಯ ಕೆಲವು ಹಳ್ಳಿಗಳಲ್ಲಿ ಇತ್ತೀಚೆಗೆ ಸಂಭವಿಸಿದ ಸಾವುಗಳಿಗೆ ಇದೇ ಕಾರಣವಿರಬಹುದು ಎಂಬ ಸಂಶಯವೂ ವ್ಯಕ್ತವಾಗುತ್ತಿದೆ.

ಸುರಪುರ ತಾಲೂಕಿನ ಚಿಕನಹಳ್ಳಿಯ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಬಸನಗೌಡ ಪೊಲೀಸ್‌ಪಾಟೀಲ್, “ನಮ್ಮ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಕಳೆದ ವರ್ಷ ಹಲವಾರು ಜನ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 60% ಜನರು 30 ವರ್ಷ ಹಳೆಯದಾದ, ತುಕ್ಕು ಹಿಡಿದ ಬೋರ್‌ವೆಲ್ ನೀರನ್ನೇ ಬಳಸುತ್ತಿದ್ದಾರೆ. ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ನೀರು ಕಲುಷಿತಗೊಂಡು ಜನರು ಆಸ್ಪತ್ರೆಗೆ ಸೇರುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿರುವುದಾಗಿ ʼDHʼ ವರದಿ ಮಾಡಿದೆ.

ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ಹೊಸತಲ್ಲ. ಪ್ರತಿ ವರ್ಷ ಬೇಸಿಗೆಯೂ ಇದೇ ಪಾಡು. ಸರ್ಕಾರಗಳು ಬಂದವು, ಹೋದವು. ಆದರೆ, ಯಾರೊಬ್ಬರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಲು ಮನಸ್ಸು ಮಾಡಲಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ʼಕಾಮಗಾರಿ ನಡೆಯುತ್ತಿದೆʼ, ʼಅನುದಾನ ಬಿಡುಗಡೆಗೆ ಸಿದ್ಧವಾಗಿದೆʼ, ʼಶೀಘ್ರ ಎಲ್ಲವೂ ಬಗೆಹರಿಯಲಿದೆʼ ಎನ್ನುತ್ತ ಭವಿಷ್ಯದ ಆಸೆ ತೋರಿಸಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಒಂದಿನವೂ ʼಸಮಸ್ಯೆ ಬಗೆಹರಿದಿದೆʼ ಎನ್ನುವುದಿಲ್ಲ ಎನ್ನುತ್ತಾರೆ ಸಾರ್ವಜನಿಕರು.

WhatsApp Image 2026 04 25 at 1.20.02 PM

ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಂಡೂ ಅವರು ತಿಳಿಸಿರುವಂತೆ, ಜಿಲ್ಲೆಯ 716 RO ಘಟಕಗಳಲ್ಲಿ 130 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಅವುಗಳಲ್ಲಿ 91 ಘಟಕಗಳ ದುರಸ್ತಿಗೆ ತಲಾ 50,000 ರೂ. ವ್ಯಯಿಸಲಾಗುತ್ತಿದೆ. ಕೆಕೆಆರ್‌ಡಿಬಿ ನಿಧಿಗಳು ಹಾಗೂ ಇತರೆ ಮೂಲಗಳಿಂದ ಹಂಚಿಕೆಯಾದ ಅನುದಾನಗಳಿಂದ ಈಗಾಗಲೇ ಹೊಸ ಆರ್‌ಒ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ 15-20 ದಿನಗಳಿಗೊಮ್ಮೆ ಸುಮಾರು 800 ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಕೆಲವೆಡೆ ಜೈವಿಕ ಮಾಲಿನ್ಯ ಕಂಡುಬಂದಿದ್ದು, ಅಂತಹ ಘಟಕಗಳನ್ನು ಮುಚ್ಚಲು ನಿರ್ದೇಶಿಸಲಾಗಿದೆ. ಈ ಎಲ್ಲಾ ಘಟಕಗಳನ್ನು ಗ್ರಾಮ ಪಂಚಾಯತಿ ನಿರ್ವಹಿಸಲಿದೆ.

ಇದನ್ನೂ ಓದಿ: ಮೀಡಿಯಾ ತೋರಿಸುತ್ತಿರುವುದೊಂದು, FIR ನಲ್ಲಿರುವುದು ಇನ್ನೊಂದು: ನಾಸಿಕ್‌ TCS ಕೇಸ್‌ನ ಅಸಲಿಯತ್ತೇನು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, RO ಘಟಕಗಳ ಸಮರ್ಪಕ ನಿರ್ವಹಣೆಗೆ ದೀರ್ಘಾವಧಿಯ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಸುಮಾರು 1800 ಹಳ್ಳಿಗಳು ಈಗಲೂ ಕಲುಷಿತ ನೀರನ್ನೇ ಕುಡಿಯಲು ಬಳಸುತ್ತಿವೆ. ಚಿತ್ರದುರ್ಗ, ಕೊಪ್ಪಳ, ಮಂಡ್ಯ, ರಾಯಚೂರು, ತುಮಕೂರು, ವಿಜಯಪುರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಗ್ರಾಮಗಳು ನೈಟ್ರೇಟ್‌, ಫ್ಲೋರೈಡ್‌ ಇತರೆ ರಾಸಾಯನಿಕಯುಕ್ತ ನೀರು ಬಳಕೆಯಾಗುತ್ತಿರುವುದು ವರದಿಯಾಗುತ್ತಲೇ ಇದೆ. ಇತ್ತ ಬಳ್ಳಾರಿ, ಕಲಬುರಗಿ, ಚಿಕ್ಕಮಗಳೂರು ಜಿಲ್ಲೆಗಳ ಗ್ರಾಮಗಳ ನೀರಿನ ಮೂಲಗಳಲ್ಲಿ ಬ್ಯಾಕ್ಟೀರಿಯಾ ಸಮಸ್ಯೆ ಇದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಕುಡಿಯಲು ನೀರೇ ಇಲ್ಲ.

ಚುನಾವಣೆಗಳ ಸಮಯದಲ್ಲಿ ರಾಜಕೀಯ ಪಕ್ಷಗಳು ತೋರುವ ಉತ್ಸಾಹವನ್ನು, ಜನರ ಸಮಸ್ಯೆ ಬಗೆಹರಿಸುವಲ್ಲಿ ಮತ್ತು ಅವರ ಆರೋಗ್ಯ ರಕ್ಷಿಸುವ ವಿಷಯದಲ್ಲೂ ತೋರಿಸಬೇಕಿದೆ. ಇಲ್ಲದಿದ್ದರೆ, ನೀರಿಲ್ಲದ ಹಳ್ಳಿಗಳಿಂದ ಜನ ಗುಳೆ ಹೋಗಿ, ಭವಿಷ್ಯದಲ್ಲಿ ಕೇವಲ ಅವಶೇಷಗಳು ಉಳಿಯುವ ಅಪಾಯವಿದೆ. ಸರ್ಕಾರದ ಇಚ್ಛಾಶಕ್ತಿ ಮತ್ತು ಆಡಳಿತದ ಚುರುಕುತನ ಈಗಿನ ತುರ್ತು ಅಗತ್ಯ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...

ಬಾಗಲಕೋಟೆ | ಆಶಾ ಕಾರ್ಯಕರ್ತೆಯರಿಗೆ ರೂ.15000 ಮಾಸಿಕ ವೇತನ ನಿಗದಿಪಡಿಸಲು ಆಗ್ರಹ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ...