ರಾಯಚೂರು | ಬಿರುಬಿಸಿಲು: ಕಚೇರಿ ಕೆಲಸಗಳ ಸಮಯ ಪರಿಷ್ಕರಣೆ ಉಪಯೋಗವಾಗುತ್ತಿದೆಯೇ?

Date:

ಸಾರ್ವಜನಿಕ ಸೇವೆಗಳ ಲಭ್ಯತೆ, ಜನರ ಅನುಕೂಲತೆ ಹಾಗೂ ವ್ಯವಸ್ಥೆಯಿಂದ ಸರಾಗ ಕಾರ್ಯಾಚರಣೆ ಎಲ್ಲವೂ ಸಮತೋಲನದಲ್ಲಿ ನಡೆದಾಗ ಮಾತ್ರ ಈ ನಿರ್ಧಾರ ನಿಜವಾದ ಅರ್ಥದಲ್ಲಿ ಫಲಕಾರಿಯಾಗುತ್ತದೆ. ಆದ್ದರಿಂದ, ಈ ಕ್ರಮವನ್ನು ನಿರಂತರವಾಗಿ ಪರಿಶೀಲಿಸಿ, ಜನರ ಅಭಿಪ್ರಾಯಗಳನ್ನು ಒಳಗೊಂಡು ಅಗತ್ಯ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವುದೇ ಉತ್ತಮ ಮಾರ್ಗವಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ಬಿಸಿಲು ದಿನೇ ದಿನೆ ತೀವ್ರವಾಗುತ್ತಿದ್ದು, ಪ್ರಮುಖವಾಗಿ ರಾಯಚೂರು ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ತಾಪಮಾನ ಗರಿಷ್ಠ ಮಟ್ಟ ತಲುಪುತ್ತಿದೆ. ಈ ಬಿರುಬಿಸಿಲು ಕಂಡುಬಂದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯ ಹಾಗೂ ಸರ್ಕಾರಿ ನೌಕರರ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ಕಚೇರಿ ಕೆಲಸಗಳ ಸಮಯವನ್ನು ಪರಿಷ್ಕರಿಸಿದೆ. ಆದರೆ, ಈ ಕ್ರಮವು ನಿಜಕ್ಕೂ ಜನರಿಗೆ ಉಪಯೋಗವಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

- Advertisement -

ಜಿಲ್ಲಾಡಳಿತದ ಹೊಸ ವೇಳಾಪಟ್ಟಿಯ ಪ್ರಕಾರ, ಕಚೇರಿಗಳು ಬೆಳಿಗ್ಗೆ ಬೇಗ ಆರಂಭವಾಗಿ ಮಧ್ಯಾಹ್ನದ ತೀವ್ರ ಬಿಸಿಲಿನ ಸಮಯವನ್ನು ತಪ್ಪಿಸುವಂತೆ ರೂಪಿಸಲಾಗಿದೆ. ಇದರಿಂದ ಸರ್ಕಾರಿ ನೌಕರರಿಗೆ ಬಿಸಿಲಿನ ತಾಪದಿಂದ ಸ್ವಲ್ಪ ಮಟ್ಟಿನ ರಕ್ಷಣೆ ದೊರೆಯುತ್ತಿದೆ. ಆದರೆ ಸಾರ್ವಜನಿಕರಿಗೆ ಕೆಲಸಗಳು ವಿಳಂಬವಾಗಿತ್ತಿದ್ದು, ಬೇಸರದ ಮುಖವಾಡವಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ವಿದ್ಯಾ ಪಾಟೀಲ್ ಮಾತನಾಡಿ, “ಲಿಂಗಸುಗೂರು, ಮಸ್ಕಿ, ಸಿಂಧನೂರು ತಾಲೂಕು ಸುತ್ತಮುತ್ತ ಹಳ್ಳಿಗಳಿಂದ ಜಿಲ್ಲೆಗೆ ಹೋಗಬೇಕಾದರೆ ಸುಮಾರು 100 ಕಿಲೋ ಮೀಟರ್ ಅಂತರವಿದೆ. ಬೆಳಗಿನ ಜಾವ ಬಸ್ ವ್ಯವಸ್ಥೆಯಿಲ್ಲ. ಆದರೂ ಹಾಗೆ ಹೀಗೆ ಬಸ್ ಬಂದಾಗ ತೆರಳಿದರೂ ಸುಮಾರು 3 ಗಂಟೆ ಪ್ರಯಾಣಿಸಿ ಬರುವಷ್ಟರಲ್ಲಿ ಮಧ್ಯಾಹ್ನ ಆಗಿರುತ್ತದೆ. ಕಚೇರಿಗಳು ಬಂದ್ ಆಗಿರುತ್ತವೆ. ಇದರಿಂದ ಹತ್ತಿರದಲ್ಲಿರುವವರಿಗೆ ಅನುಕೂಲವಾಗಬಹುದೇನೋ…. ಆದರೆ ದೂರದಿಂದ ಬರುವವರಿಗೆ ತುಂಬಾ ಅನಾನುಕೂಲವಾಗಿದೆ. ಹೀಗೆ ಎರಡು ತಿಂಗಳು ಸಮಸ್ಯೆ ಎದುರಿಸಬೇಕಾದ ದುಃಸ್ಥಿತಿ ಎದುರಾಗಿದೆ” ಎಂದು ಅಳಲು ತೋಡಿಕೊಂಡರು.

“ಸಮಯ ಬದಲಾವಣೆಯಿಂದ ಸಾರ್ವಜನಿಕರಿಗೆ ಹೆಚ್ಚಾಗಿ ತೊಂದರೆಯಾಗುತ್ತಿದೆ. ಸರ್ಕಾರಿ ಅಧಿಕಾರಿಗಳು ಮೊದಲೇ ಅಷ್ಟರಮಟ್ಟಿಗೆ ಕೆಲಸ ಮಾಡಿಕೊಡುತ್ತಾರೆ. ಇನ್ನು ಹೀಗಾಗಿರುವುದು ಅವರಿಗೆ ಇನ್ನೂ ಅನುಕೂಲ. ಸಾರ್ವಜನಿಕರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲ. ಜನ ಜಿಲ್ಲಾ ಕೇಂದ್ರಕ್ಕೆ, ಜಿಲ್ಲಾ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅಧಿಕಾರಿಗಳು ಸಭೆ ಮತ್ತು ಇನ್ನಿತರ ಫೀಲ್ಡ್‌ಗಳಿಗೆ ಹೋಗುವುದಿದ್ದರೆ ಮುಂಚಿತವಾಗಿ ನೊಟೀಸ್ ಹೊರಡಿಸುವಂತಹ ವ್ಯವಸ್ಥೆ ಮಾಡಬೇಕು. ಜನರಿಗೆ ವಿಷಯ ತಲುಪುವ ರೀತಿ ಮಾಡಿದರೆ, ಕೊನೆಪಕ್ಷ ಅವರು ಬಂದು ಕಾಯುವುದಾದರೂ ತಪ್ಪುತ್ತದೆ” ಎಂದು ತಿಳಿಸಿದರು.

ಕರ್ನಾಟಕ ಜನಶಕ್ತಿ ಜಿಲ್ಲಾ ಮುಖಂಡ ಮಾರೆಪ್ಪ ಹರವಿ ಮಾತನಾಡಿ, “ಸಮಯದ ಬದಲಾವಣೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಂದ ಬರುವ ಜನರು ಬೆಳಿಗ್ಗೆ ಬೇಗ ಕಚೇರಿಗಳಿಗೆ ತಲುಪುವುದು ಕಷ್ಟಕರವಾಗಿದೆ. ಹಳ್ಳಿಗಳಿಂದ ಬಸ್ ಸೌಲಭ್ಯಗಳು ಎಲ್ಲ ಸಮಯಕ್ಕೂ ಲಭ್ಯವಿಲ್ಲ. ಬೆಳಗಿನ ಜಾವದಲ್ಲಿ ಬರಲು ಆಟೋಗಳು ಸಿಗದ ಪರಿಸ್ಥಿತಿ. ಹಾಗಾಗಿ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಆಗುತ್ತಿಲ್ಲ. ಇನ್ನಿತರ ಹೊಸ ಸಮಯಕ್ಕೆ ಹೊಂದಿಕೊಳ್ಳಲು ಇನ್ನೊಂದು ರೀತಿ ಸಮಸ್ಯೆಯಾಗುತ್ತಿದೆ” ಎಂದು ಹೇಳಿದ್ದಾರೆ.

“ಕಚೇರಿ ಸಮಯ ಬದಲಾವಣೆಯಿಂದ ವ್ಯವಹಾರ ಚಟುವಟಿಕೆಗಳಲ್ಲಿ ವ್ಯತ್ಯಾಸ ಉಂಟಾಗಿದೆ. ಸಮಯ ಬದಲಾವಣೆಯಿಂದ ಸರ್ಕಾರಿ ಕಚೇರಿ ಕೆಲಸಗಳ ಸಮಯ ಕಡಿಮೆಯಾಗಿರುವುದರಿಂದ ಕೆಲವು ಸೇವೆಗಳು ವಿಳಂಬವಾಗುತ್ತಿವೆ. ಸುಮಾರು ವರ್ಷಗಳಿಂದ ಜನರ ಮಧ್ಯೆ ಸಂಘಟಕರಾಗಿ ಕೆಲಸ ಮಾಡುತ್ತಿದ್ದೇವೆ. ಬೇಸಿಗೆ ದಿನ ಹೊರೆತುಪಡಿಸಿ ಬೇರೆ ದಿನಗಳಲ್ಲಿಯೂ ಅಧಿಕಾರಿಗಳು ವಾರಗಟ್ಟಲೆ ಕೈಗೆ ಸಿಗುವುದಿಲ್ಲ. ಮೀಟಿಂಗ್ ಹೋಗಿದ್ದಾರೆ, ರಜೆ ಮೇಲೆ ಇದ್ದಾರೆ ಎನ್ನುವಂತಹ ಮಾತುಗಳನ್ನೇ ಕೇಳಿಕೊಂಡು ಬರಬೇಕು. ಈಗ ಸಮಯ ಬದಲಾವಣೆಯಿಂದ ಮತ್ತಷ್ಟು ಹದಗೆಟ್ಟಿದೆ. ಹಾಗಾಗಿ ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ” ಎಂದರು.

ಬಹುಜನ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶರಣಪ್ಪ ಬಲ್ಲಟಗಿ ಮಾತನಾಡಿ, “ಕಚೇರಿಗಳಲ್ಲಿ ಕೆಲಸದ ಅವಧಿ ಕಡಿಮೆಯಾಗಿರುವುದರಿಂದ ಇದು ಎರಡು ತಿಂಗಳ ರಜೆಯಂತಾಗಿದೆ. ಕಚೇರಿ ಬೆಳಿಗ್ಗೆ 8ಕ್ಕೆ ಆರಂಭವಾಗಬೇಕಾದರೂ ಹಲವಾರು ಅಧಿಕಾರಿಗಳು 10 ಗಂಟೆಯ ನಂತರವೇ ಬರುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಕೆಲಸಗಳು ಹಿನ್ನಡೆಯಾಗುತ್ತಿವೆ” ಎಂದು ಆರೋಪಿಸಿದರು.

“ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದರೂ ಕೂಡ, ಜನರು ಸಾಲಿನಲ್ಲಿ ನಿಂತು ಭೇಟಿಯಾಗುವುದಕ್ಕೆ ಸಾಕಷ್ಟು ಸಮಯ ಸಿಗುತ್ತಿಲ್ಲ. ಇನ್ನು ಕಚೇರಿ ಸಮಯ ಮುಗಿದ ಬಳಿಕ ನಾವುಗಳು ಮನೆಗೆ ಹೊರಡುವುದಕ್ಕೂ ಅನೂಕೂಲಕರ ಪರಿಸ್ಥಿತಿ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮಧ್ಯಾಹ್ನ 1ರ ವೇಳೆಗೆ ಬಿಸಿಲಿನ ತಾಪಮಾನ ತೀವ್ರವಾಗಿರುತ್ತದೆ. ಈ ವೇಳೆ ಅಧಿಕಾರಿಗಳು ಮನೆಗೆ ಹೋಗುವುದಕ್ಕಿಂತ ಕಚೇರಿಗಳಿಗೆ ಟಿಫಿನ್‌ಗಳನ್ನು ತೆಗೆದುಕೊಂಡು ಬರಬೇಕು, ಮಧ್ಯಾಹ್ನದ ಊಟವನ್ನು ಕಚೇರಿಯಲ್ಲೇ ಮಾಡಬೇಕು. ಸಂಜೆ 4ರ ನಂತರ ಬಿಸಿಲು ಕಡಿಮೆಯಾಗುವಾಗ ತೆರಳುವುದು ಉತ್ತಮ ಎಂದು ಸಲಹೆ ನೀಡಿದರು.

ಜಿಲ್ಲಾ ವೈದ್ಯಾಧಿಕಾರಿ ಸುರೇಂದ್ರ ಮಾತನಾಡಿ, “ತೀವ್ರ ಬಿಸಿಲಿನ ಸಮಯದಲ್ಲಿ ಹೊರಗಡೆ ಚಟುವಟಿಕೆ ಕಡಿಮೆ ಮಾಡುವುದು ಅವಶ್ಯಕ. ತುಂಬಾ ಬಿಸಿಲು ಇದ್ದಾಗ ಹೊರಗೆ ಹೋಗಬೇಡಿ, ರಸ್ತೆ ಕೆಲಸ, ಕೃಷಿ ಕಾರ್ಮಿಕರು ಬಿಸಿಲಲ್ಲಿ ಕೆಲಸ ಮಾಡುವವರು ಆರೋಗ್ಯದ ಮೇಲೆ ಹೆಚ್ಚು ಗಮನ ಕೊಡಬೇಕು. ಮಧ್ಯಾಹ್ನ ಹೊತ್ತು ಮಕ್ಕಳು, ವೃದ್ಧರು ಹೊರಗಡೆ ಹೋಗಬಾರದು” ಎಂದರು.

ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಫೀಲ್ಡ್‌ನಲ್ಲಿ ಕೆಲಸ ಮಾಡುವವರಿಗೆ ಆಶಾ ಕಾರ್ಯಕರ್ತೆಯರು, ಜೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಬಿಸಿಲಿನಲ್ಲಿ ಕೆಲಸ ಮಾಡುವ ವೇಳೆ ಪರಿತಪ್ಪಿಸುವಂತಾಗುತ್ತದೆ. ಕಚೇರಿಯಲ್ಲಿ ಕೂತು ಕೆಲಸ ಮಾಡುವ ಅಧಿಕಾರಿಗಳಿಗೆ ಸಮಯ ಬದಲಾವಣೆ, ಬಿಸಿಲಿನ ತಾಪಮಾನ ಹೆಚ್ಚು ಕಂಡುಬರಲ್ಲ” ಎಂದು ಹೇಳಿದರು.

“ಸಮಯ ಬದಲಾವಣೆಯಿಂದ ಹಳ್ಳಿ ಜನರಿಗೆ ತೊಂದರೆ ಉಂಟಾಗುತ್ತಿದೆ. ಎರಡು ತಿಂಗಳು ಕೂಡ ಜನರು ಬರಲು ಹಿಂದೇಟು ಹಾಕುತ್ತಾರೆ. ʼಕಚೇರಿಗಳಿಗೆ ಬರಲು ತಡವಾಗುತ್ತೆ, ಹೋದಾಗ ಕೆಲಸ ಆಗಲ್ಲʼ ಎಂದು ಅವರೇ ಊಹೆ ಮಾಡಿಕೊಳ್ಳುವುದನ್ನು ಬಿಡಬೇಕು” ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮಹೋತ್ರ ಮಾತನಾಡಿ, “ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಸಮಯ ಬದಲಾವಣೆ ಅವಶ್ಯಕ. ಪೌರ ಕಾರ್ಮಿಕರು ಬಿಸಿಲಲ್ಲಿ ಸೇವೆ ಸಲ್ಲಿಸಿ ಸುಸ್ತಾಗುತ್ತಾರೆ. ಸಾರ್ವಜನಿಕರಿಗೆ ತೊಂದರೆಯುಂಟಾಗಿರುವುದು ಗಮನಕ್ಕೆ ಬಂದರೆ ಅದನ್ನು ಬಗೆಹರಿಸಲಾಗುವುದು” ಎಂದು ತಿಳಿಸಿದರು.

ಇದನ್ನೂ ಓದಿದ್ದೀರಾ? ಬಿಸಿಲ ಬೇಗೆಗೆ ಮಾವು ಬೆಳೆ ನಾಶ, ಬೆಲೆ ಕುಸಿತ, ಬೆಳೆಗಾರರಿಗೆ ನೆರವಾಗುವುದೇ ಸರ್ಕಾರ?

ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತೀವ್ರತೆ ಸಾರ್ವಜನಿಕರ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿದೆ. ರಾಯಚೂರು ಜಿಲ್ಲೆಯಂತಹ ಪ್ರದೇಶಗಳಲ್ಲಿ ತಾಪಮಾನ ಗರಿಷ್ಠ ಮಟ್ಟ ತಲುಪುತ್ತಿರುವ ಸಂದರ್ಭದಲ್ಲಿ, ಜಿಲ್ಲಾಡಳಿತವು ಕಚೇರಿ ವೇಳಾಪಟ್ಟಿಯನ್ನು ಪರಿಷ್ಕರಿಸಿರುವುದು ಒಂದು ಸಮಂಜಸ ಹಾಗೂ ಅಗತ್ಯ ಕ್ರಮವೆಂದು ಕಾಣಿಸುತ್ತದೆ. ಇದು ಸರ್ಕಾರಿ ನೌಕರರ ಆರೋಗ್ಯವನ್ನು ಕಾಪಾಡುವುದರ ಜತೆಗೆ ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಪ್ರಯತ್ನವೂ ಆಗಿದೆ. ಆದರೆ ಈ ಕ್ರಮದ ಯಶಸ್ಸು ಜನಸಾಮಾನ್ಯರ ಅನುಭವದ ಮೇಲೆ ಅವಲಂಬಿತವಾಗಿದೆ.

ಸಾರ್ವಜನಿಕ ಸೇವೆಗಳ ಲಭ್ಯತೆ, ಜನರ ಅನುಕೂಲತೆ ಹಾಗೂ ವ್ಯವಸ್ಥೆಯಿಂದ ಸರಾಗ ಕಾರ್ಯಾಚರಣೆ ಎಲ್ಲವೂ ಸಮತೋಲನದಲ್ಲಿ ನಡೆದಾಗ ಮಾತ್ರ ಈ ನಿರ್ಧಾರ ನಿಜವಾದ ಅರ್ಥದಲ್ಲಿ ಫಲಕಾರಿಯಾಗುತ್ತದೆ. ಆದ್ದರಿಂದ, ಈ ಕ್ರಮವನ್ನು ನಿರಂತರವಾಗಿ ಪರಿಶೀಲಿಸಿ, ಜನರ ಅಭಿಪ್ರಾಯಗಳನ್ನು ಒಳಗೊಂಡು ಅಗತ್ಯ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವುದೇ ಉತ್ತಮ ಮಾರ್ಗವಾಗಿದೆ.

Rafi
ರಫಿ ಗುರುಗುಂಟ
+ posts

ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಪೋಸ್ಟ್ ಹಂಚಿಕೊಳ್ಳಿ:

ರಫಿ ಗುರುಗುಂಟ
ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧಾರ : ಸಿ.ಸೋಮಶೇಖರ್‌

ನಾಡಿನ ಹಿರಿಯ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿತೈಷಿಗಳ ಒತ್ತಾಯದ...

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...

ಬಾಗಲಕೋಟೆ | ಆಶಾ ಕಾರ್ಯಕರ್ತೆಯರಿಗೆ ರೂ.15000 ಮಾಸಿಕ ವೇತನ ನಿಗದಿಪಡಿಸಲು ಆಗ್ರಹ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ...