ವಿನಾಯಕ ಬಾಳಿಗಾ ಹತ್ಯೆಗೂ ಮುನ್ನ ‘ರಥ ಕಾಣಿಕೆ’ ಯ 24 ಲಕ್ಷ ರೂ. ಕೊಂಡೊಯ್ದಿದ್ದ ಆರೋಪಿ ನರೇಶ್ ಶೆಣೈ: ಕೋರ್ಟ್ ದಾಖಲೆಯಲ್ಲಿ ಬಹಿರಂಗ

Date:

ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಹತ್ಯೆ ನಡೆಯುವುದಕ್ಕೂ ಮುನ್ನ ಪ್ರಮುಖ ಆರೋಪಿ ನರೇಶ್ ಶೆಣೈ ದೇವಸ್ಥಾನದ ₹24 ಲಕ್ಷ ‘ರಥ ಕಾಣಿಕೆ’ ಹಣವನ್ನು ತಮ್ಮ ಮನೆಗೆ ಕೊಂಡೊಯ್ದಿದ್ದರು ಎಂಬ ಅಂಶ ನ್ಯಾಯಾಲಯದ ದಾಖಲೆಗಳಿಂದ ಬಹಿರಂಗವಾಗಿದೆ ಎಂದು ‘ಬಿಎಲ್‌ಆರ್ ಪೋಸ್ಟ್’ (blrpost.com) ವರದಿ ಮಾಡಿದೆ.

​2016ರ ಫೆಬ್ರವರಿಯಲ್ಲಿ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ರಥೋತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಕಾಶಿ ಮಠದ ಭಕ್ತರು ಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಗೆ ಸಮರ್ಪಿಸಲು ನೀಡಿದ್ದ ‘ರಥ ಕಾಣಿಕೆ’ಯ ಒಟ್ಟು ₹24 ಲಕ್ಷ ಮೊತ್ತವನ್ನು ನರೇಶ್ ಶೆಣೈ ತಮ್ಮ ಬೆಂಬಲಿಗರೊಂದಿಗೆ ಇನ್ನೋವಾ ಕಾರಿನಲ್ಲಿ ನೇರವಾಗಿ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದರು ಎಂದು 2017ರ ಮಾರ್ಚ್ 21ರ ನ್ಯಾಯಾಲಯದ ದಾಖಲೆಗಳು ಉಲ್ಲೇಖಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

​ದೇವಸ್ಥಾನದ ಕಾಣಿಕೆ ಹಣವನ್ನು ಈ ರೀತಿ ನಿರ್ವಹಿಸಿದ್ದನ್ನು ವಿನಾಯಕ ಬಾಳಿಗಾ ತೀವ್ರವಾಗಿ ಆಕ್ಷೇಪಿಸಿದ್ದರು. ಹಣವು ಸ್ವಾಮೀಜಿಯವರಿಗೆ ಸೇರಬೇಕಾಗಿದ್ದರೂ ಸಹ, ಅದಕ್ಕೊಂದು ನಿರ್ದಿಷ್ಟ ಹಣಕಾಸು ನಿಯಮಾವಳಿ ಇದೆ ಎಂದು ಅವರು ವಾದಿಸಿದ್ದರು. ನಿಯಮದ ಪ್ರಕಾರ, ಸಂಗ್ರಹವಾದ ಮೊತ್ತವನ್ನು ಮೊದಲು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು, ನಂತರ ಆ ಖಾತೆಯಿಂದಲೇ ಸ್ವಾಮೀಜಿಯವರಿಗೆ ಚೆಕ್ ರೂಪದಲ್ಲಿ ಹಣ ವರ್ಗಾಯಿಸಬೇಕು ಎಂದು ಬಾಳಿಗಾ ಕಟ್ಟುನಿಟ್ಟಾಗಿ ಆಗ್ರಹಿಸಿದ್ದರು.

​ದೇವಸ್ಥಾನದ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಬಾಳಿಗಾ ಎತ್ತಿದ್ದ ಈ ವಿವಾದವೇ ಅವರ ಕೊಲೆಗೆ ಪ್ರಮುಖ ಕಾರಣಗಳಲ್ಲಿ (ಮೋಟಿವ್) ಒಂದಾಗಿದೆ ಎಂದು ನ್ಯಾಯಾಲಯದ ದಾಖಲೆಗಳಲ್ಲಿ ದಾಖಲಿಸಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ, 2016ರ ಮಾರ್ಚ್ 21ರಂದು ಕೊಡಿಯಾಲಬೈಲ್‌ನಲ್ಲಿರುವ ತಮ್ಮ ನಿವಾಸದ ಮುಂಭಾಗದಲ್ಲೇ ಬಾಳಿಗಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

​ಈ ರಥ ಕಾಣಿಕೆ ವಿವಾದಕ್ಕೂ ಮುನ್ನವೇ ಬಾಳಿಗಾ ಅವರು ದೇವಸ್ಥಾನದ ಆರ್ಥಿಕ ಲೆಕ್ಕಪತ್ರಗಳ ಮರು ಲೆಕ್ಕಪರಿಶೋಧನೆಗೆ (ರೀ-ಆಡಿಟ್) ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಮರು ಲೆಕ್ಕಪರಿಶೋಧನೆಗೆ ಆದೇಶಿಸಿ, 2016ರ ಏಪ್ರಿಲ್‌ನಲ್ಲಿ ಆಡಿಟ್ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ನಿಗದಿತ ಲೆಕ್ಕಪರಿಶೋಧನೆ ಆರಂಭವಾಗಲು ಕೆಲವೇ ವಾರಗಳಿರುವಾಗ ಬಾಳಿಗಾ ಅವರ ಹತ್ಯೆ ನಡೆದಿತ್ತು.

​ಈ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಪ್ರಮುಖ ಆರೋಪಿಗಳಾದ ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್, ವಿನೀತ್ ಪೂಜಾರಿ, ನಿಶಿತ್ ದೇವಾಡಿಗ, ಶೈಲೇಶ್ ಮತ್ತು ಮಂಜುನಾಥ್ ಶೆಣೈ ಎಂಬ ಏಳು ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಸದ್ಯ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಚಾರಣೆ ವೇಳೆ ಹೊರಬಂದಿರುವ ಈ ದಾಖಲೆಗಳು ಬಾಳಿಗಾ ಅವರು ದೇವಸ್ಥಾನದ ಆಡಳಿತದಲ್ಲಿ ಉತ್ತರದಾಯಿತ್ವ ತರಲು ನಡೆಸಿದ ಹೋರಾಟವನ್ನು ಎತ್ತಿಹಿಡಿದಿವೆ.

ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ಜಾಮೀನು ಸಿಕ್ಕಿ ಮಂಗಳೂರು ಜೈಲಿನಿಂದ ಹೊರಬಂದಾಗ, ಸಂಘ ಪರಿವಾರದ ಮುಖಂಡ ಚಕ್ರವರ್ತಿ ಸೂಲಿಬೆಲೆ ಆತನಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡಿದ್ದರು. ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿಯೊಬ್ಬನಿಗೆ ಜೈಲಿನಿಂದ ಹೊರಬರುವಾಗ ಹಾರ ಹಾಕಿ, ಸನ್ಮಾನಿಸುವ ಮೂಲಕ ಸ್ವಾಗತಿಸಿದ ಈ ನಡೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಂತಕನೊಬ್ಬನನ್ನು ಹೀಗೆ ವಿಜೃಂಭಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು.

ಬಾಳಿಗಾ ಅವರ ತಂದೆ -ತಾಯಿ ಮಗನ ಸಾವಿನ ನೋವಿನಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರು ಸಹೋದರಿಯರು ಈಗಲೂ ಅಣ್ಣ ಕೊಲೆ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಕಾನೂನು ಹೋರಾಟ ಮುನ್ನಡೆಸುತ್ತಿದ್ದಾರೆ. ಮಂಗಳೂರಿನ ಸಾಮಾಜಿಕ ಹೋರಾಟಗಾರರಾದ ನರೇಂದ್ರ ನಾಯಕ್‌, ಮುನೀರ್‌ ಕಾಟಿಪಳ್ಳ ಸಹಿತ ಅನೇಕ ಪ್ರಗತಿಪರರು ಪ್ರತಿ ವರ್ಷ ಬಾಳಿಗಾ ಅವರ ಕೊಲೆಯಾದ ದಿನದಂದು ಹಂತಕರಿಗೆ ಶಿಕ್ಷೆಯಾಗಬೇಕು, ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸುವ ಮೂಲಕ ಪ್ರಕರಣವನ್ನು ಜನ ಮಾನಸದಲ್ಲಿ ಹಸಿರಾಗಿರುವಂತೆ ಮಾಡಿದ್ದಾರೆ.

image 176
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...