ಪರವಾನಗಿ ಭೂ ಮಾಪಕರ ಖಾಯಂ ಅಸಾಧ್ಯ, ಅವರ ಸಹಾಯಕ್ಕೆ ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ

Date:

ಪರವಾನಗಿ ಭೂ ಮಾಪಕರನ್ನು ಖಾಯಂಗೊಳಿಸುವುದು ಅಸಾಧ್ಯ. ಆದರೆ, ಅವರ ಮೇಲೆ ಸರ್ಕಾರಕ್ಕೆ ಸಹಾನುಭೂತಿ ಇದ್ದು, ಅವರ ಕಲ್ಯಾಣಕ್ಕೆ ಹಾಗೂ ಘನತೆಯ ಜೀವನಕ್ಕೆ ಉದಾರ ಮನಸ್ಸಿನಿಂದ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

- Advertisement -

ಮಂಗಳವಾರ ವಿಧಾನ ಪರಿಷತ್ನಲ್ಲಿ ಸದಸ್ಯರಾದ ಶಿವಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಪರವಾನಗಿ ಭೂ ಮಾಪಕರನ್ನು ಖಾಲಿ ಹುದ್ದೆಗಳನ್ನು ತುಂಬಿಸುವುದಕ್ಕಾಗಿ ಸರ್ಕಾರ ನೇಮಕ ಮಾಡಿಲ್ಲ. ಬದಲಾಗಿ ಗುತ್ತಿಗೆ ಆಧಾರದಲ್ಲಿ ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಸರ್ವೇ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಇಲ್ಲದ ಮೇಲೆ ಗುತ್ತಿಗೆ ನೌಕರರನ್ನು ಖಾಯಂ ಮಾಡುವುದು ಹೇಗೆ” ಎಂದು ಮರು ಪ್ರಶ್ನೆ ಹಾಕಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

“ಅಸಲಿಗೆ ಇಲಾಖೆಯಲ್ಲಿ 750 ಸರ್ಕಾರಿ ಹುದ್ದೆ ಖಾಲಿ ಇದೆ. ಆದರೆ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಏಕೆಂದರೆ ನಾವು ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಮುಂದಾದರೆ ತುಂಬಾ ಪ್ರಚಲಿತದಲ್ಲಿರುವ ಉಮಾದೇವಿ ಪ್ರಕರಣ ಎದುರಾಗುತ್ತದೆ. ಈ ಪ್ರಕರಣದಲ್ಲಿ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಅವಕಾಶ ಇಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಅಡ್ಡ ಬರುತ್ತದೆ. ಇದಲ್ಲದೆ, ಈ ಹಿಂದೆ ಪರವಾನಗಿ ಭೂ ಮಾಪಕರು ತಮ್ಮನ್ನು ಖಾಯಂಗೊಳಿಸುವಂತೆ ಕೆಐಟಿ ಯಲ್ಲಿ ಅರ್ಜಿ ಹಾಕಿದ್ದರು. ವಾದ-ವಿವಾದ ಆಲಿಸಿದ ಕೆಐಟಿ ಸಹ ಖಾಯಂಗೊಳಿಸಲು ಬರೋದಿಲ್ಲ ಎಂದು ಆ ಮನವಿಯನ್ನೇ ತಿರಸ್ಕಾರ ಮಾಡಿದೆ. ಹೀಗಾಗಿ ಪರವಾನಗಿ ಭೂ ಮಾಪಕರನ್ನು ಖಾಯಂ ನೌಕರರಾಗಿ ನೇಮಕ ಮಾಡುವುದು ಕಾನೂನಿನ ಅಡಿಯಲ್ಲಿ ಅಸಾಧ್ಯ” ಎಂದು ವಿವರಿಸಿದರು.

“ಪರವಾನಗಿ ಭೂ ಮಾಪಕರ ಜೀವನಕ್ಕೂ ಅನುಕೂಲ ಮಾಡಿಕೊಡಬೇಕು ಎಂಬ ಸಹಾನುಭೂತಿ ಸರ್ಕಾರಕ್ಕೆ ಇದೆ. ಇದೇ ಕಾರಣಕ್ಕೆ ಅವರಿಗೆ ದರ್ಖಾಸ್ತು ಪೋಡಿ ಮಾಡಲು ಅನುಕೂಲ ಮಾಡಿಕೊಟ್ಟಿದ್ದೇವೆ. ಈ ಹಿಂದೆ ಸರ್ವೇ ಮಾಡಿದರೆ ಸರ್ವೇ ಶುಲ್ಕವನ್ನು ರೈತರು ಪಾವತಿಸುತ್ತಿದ್ದರು. ಆದರೆ, ದರ್ಖಾಸ್ತು ಪೋಡಿ ವಿಚಾರದಲ್ಲಿ ನಾವೇ ರೈತರ ಮನೆ ಬಾಗಿಲಿಗೆ ಹೋಗಿ ಸರ್ವೇ ಕೆಲಸ ಮುಗಿಸಿ ಪೋಡಿ ಮಾಡಿಕೊಡುತ್ತಿರುವ ಕಾರಣ ಅವರಿಂದ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಮಾಡಿಕೊಡುತ್ತಿದ್ದೇವೆ. ಹೀಗಾಗಿ ಸರ್ಕಾರವೇ ಪರವಾನಗಿ ನೌಕರರಿಗೆ ಆ ಶುಲ್ಕವನ್ನು ನೀಡುತ್ತಿದೆ. ಕೆರೆ ಅಳತೆ ಮಾಡಿದ್ರೂ ಸಹ ಖಾಸಗಿ ಸರ್ವೇಯರ್ಗಳ ಸಂಭಾವನೆಗೆ ಸಮಾಂತರವಾಗಿ ಗೌರವ ಧನ ನೀಡುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

Advertisements

“ಸರ್ಕಾರಿ ಕೆಲಸ ಮಾಡಿದ್ರೆ ಪರವಾನಗಿ ನೌಕರರಿಗೂ ಸಂಭಾವನೆ ಸಿಗಬೇಕು ಎಂದು ನಿರ್ಧಾರ ಮಾಡಿದ್ದು ಸಹ ನಾವೆ. ಮೊದಲು ಇದಕ್ಕೆ ಪ್ರಾವಿಷನ್ ಇರಲಿಲ್ಲ, ಅವರು ತಮ್ಮ ಕೆಲಸವನ್ನು ಉಚಿತವಾಗಿ ಮಾಡಬೇಕಿತ್ತು. ಆದರೆ, ನಾನು ಕಳೆದ ಏಪ್ರಿಲ್ನಲ್ಲಿ ಲೆಕ್ಕಹಾಕಿ ಉತ್ತಮವಾಗಿ ಕೆಲಸ ಮಾಡಿದವರಿಗೆ ಒಂದು ಲಕ್ಷದ ವರೆಗೆ ಹಣ ನೀಡಿದ್ದೇನೆ” ಎಂದು ತಿಳಿಸಿದರು.

ಬಾಂದ್ ಜವಾನರ ಬಗ್ಗೆಯೂ ಗಮನ ಸೆಳೆದ ಸಚಿವರು, “ಬಾಂದ್ ಜವಾನರೆಂದರೆ ಹಿಂದನ ಕಾಲದಲ್ಲಿ ಸರ್ವೇಯರ್ ಹಿಂದೆ ಸರ್ವೇ ಸಾಮಗ್ರಿಗಳನ್ನು ಎತ್ತಿಕೊಂಡು ಓಡಾಡುವವರು. ಇದು ಒಪ್ಪುವಂತಹ ಘನತೆಯ ಕೆಲಸ ಅಲ್ಲ. ಕಾಲ ಬದಲಾದಂತೆ ಎಲ್ಲರೂ ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು. ಯಾರೂ ಯಾರಿಗೂ ಜವಾನರಾಗಿ ಬದುಕಬಾರದು. ಆ ಕೆಲಸದ ಹೆಸರೇ ಜವಾನ ಅಂತ, ಇಲ್ಲಿ ಯಾರೂ ಜವಾನರಾಗಿ ಬ್ಯಾಗು ಹೊತ್ಕೋಂಡು ಬಾಗಿಲು ಕಾಯೋ ಜವಾನತನ ಸರಿಯಲ್ಲ. ಹೀಗಾಗಿಯೇ ನಾವು ಇಂದು ಎಲ್ಲಾ ಸರ್ವೇಯರ್ಗಳಿಗೆ ಆಧುನಿಕ ತಂತ್ರಜ್ಞಾನ ನಿರ್ಮಿತ ರೋವರ್ ನೀಡುತ್ತಿದ್ದೇವೆ. ಇದು ಡಿಜಿಟಲ್ ಸರ್ವೇ ಯಂತ್ರೋಪಕರಣವಾಗಿದ್ದು, ಸರ್ವೇ ಕೆಲಸ ಮಾಡುವವರಿಗೂ ಘನತೆ ನೀಡಿದೆ” ಎಂದು ಸಂತಸ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತದಾರರ ಹೆಸರು ಅಳಿಸಲು ಫಾರಂ-7 ದುರ್ಬಳಕೆ; ತನಿಖೆಗೆ ಜಾಗೃತ ಕರ್ನಾಟಕ ಆಗ್ರಹ

ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

45 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಷಡ್ಯಂತ್ರ; ಮುಖ್ಯ ಚುನಾವಣಾಧಿಕಾರಿಗೆ ಸಿಎಂ ದೂರು

ರಾಜ್ಯದಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಸುಮಾರು 45...

SIR: ‘ನಮ್ಮ ಸಂವಿಧಾನ-ನಮ್ಮ ಹೋರಾಟ-ನಮ್ಮ ಹಕ್ಕು; ನಾವು ಹೋರಾಟಕ್ಕೆ ಸಿದ್ಧ’- ಪ್ರಕಾಶ್ ರಾಜ್

“SIR ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯುತ್ತಿದೆಯೇ? ಖಂಡಿತ ಇಲ್ಲ. ದಾಖಲೆಗಳ ಹೆಸರಿನಲ್ಲಿ ದೇಶದ...