ಡಾಲರ್‌ ಎದುರು 91ಕ್ಕೆ ಕುಸಿದ ರೂಪಾಯಿ: ಕಳೆದ 10 ವರ್ಷದಿಂದ 30 ರೂ. ಕುಸಿತ

Date:

ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿದರೆ ಡಾಲರ್‌ ರೂಪಾಯಿ ಆಗಿ ಪರಿವರ್ತನೆ ಆಗುತ್ತದೆ. ಆದರೆ ಟ್ರಂಪ್‌ ತೆರಿಗೆ ಸಮರ ಆರಂಭಿಸಿದ ಬಳಿಕ ನಿರಂತರವಾಗಿ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಜುಲೈನಿಂದ ಹಿಡಿದು ನವೆಂಬರ್‌ವರೆಗೆ ನಿರಂತರವಾಗಿ ಹಣವನ್ನು ಹಿಂದಕ್ಕೆ ತೆಗೆದಿದ್ದಾರೆ.

- Advertisement -

ಭಾರತೀಯ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಹೊಸ ದಾಖಲೆಯ ಮಟ್ಟಕ್ಕೆ ಕುಸಿದಿದ್ದು, ಇದೇ ಮೊದಲ ಬಾರಿಗೆ 91ರ ಗಡಿ ದಾಟಿದೆ. ರೂಪಾಯಿಯ ಈ ತೀವ್ರ ಕುಸಿತವು ಕೇವಲ ವಿದೇಶಿ ಹೂಡಿಕೆದಾರರನ್ನು ಮಾತ್ರವಲ್ಲದೆ, ದೇಶೀಯ ಹೂಡಿಕೆದಾರರನ್ನೂ ಆತಂಕಕ್ಕೆ ತಳ್ಳಿದೆ. ಮಾರುಕಟ್ಟೆಯಲ್ಲಿ ನಗದು ಲಭ್ಯತೆಯ (ಲಿಕ್ವಿಡಿಟಿ) ಕೊರತೆ ಮತ್ತು ಕರೆನ್ಸಿ ಮೌಲ್ಯದ ಅಸ್ಥಿರತೆಯು ಷೇರುಪೇಟೆಯ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...

100ರ ಗಡಿಯತ್ತ ರೂಪಾಯಿ?
‘ಸಿಸ್ಟಮ್ಯಾಟಿಕ್ಸ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್’ ವರದಿಯ ಪ್ರಕಾರ, ಈ ವರ್ಷ ರೂಪಾಯಿ ಮೌಲ್ಯದಲ್ಲಿ ಶೇ. 6.6ರಷ್ಟು ಇಳಿಕೆಯಾಗಿದೆ. 2012ರಿಂದ ಇಲ್ಲಿಯವರೆಗೆ ರೂಪಾಯಿ ತನ್ನ ಮೌಲ್ಯದಲ್ಲಿ ಸುಮಾರು ಶೇ. 90ರಷ್ಟು ಕಳೆದುಕೊಂಡಿದೆ. ಜಾಗತಿಕ ಮಾರುಕಟ್ಟೆಯ ಸಂರಕ್ಷಣಾ ನೀತಿಗಳು ಮತ್ತು ಆರ್‌ಬಿಐ ಬಳಿಯಿರುವ ವಿದೇಶಿ ವಿನಿಮಯದ ಮಿತಿಗಳು ರೂಪಾಯಿಯನ್ನು ಮತ್ತಷ್ಟು ದುರ್ಬಲಗೊಳಿಸುತ್ತಿವೆ.

“ಮುಂದಿನ 12 ರಿಂದ 24 ತಿಂಗಳುಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 100ರ ಗಡಿ ಮುಟ್ಟುವ ಸಾಧ್ಯತೆ ಇದೆ,” ಎಂದು ವರದಿ ಎಚ್ಚರಿಸಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಷೇರು ಮಾರುಕಟ್ಟೆಯಿಂದ ಬರುವ ಆದಾಯ ಸಾಧಾರಣವಾಗಿರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸನ್ನಿವೇಶದಲ್ಲಿ ಹೂಡಿಕೆದಾರರು ರಕ್ಷಣಾತ್ಮಕ ವಲಯಗಳತ್ತ ಮುಖ ಮಾಡುವುದು ಸೂಕ್ತ ಎಂದೂ ತಿಳಿಸಿದ್ದಾರೆ.

ಯಾವ ವಲಯಕ್ಕೆ ಲಾಭ?

ರೂಪಾಯಿ ಅಪಮೌಲ್ಯದಿಂದಾಗಿ ರಫ್ತು ಆಧಾರಿತ ವಲಯಗಳಾದ ಮಾಹಿತಿ ತಂತ್ರಜ್ಞಾನ (ಐಟಿ), ಫಾರ್ಮಾಸ್ಯುಟಿಕಲ್ಸ್, ಆಟೋಮೊಬೈಲ್ ಮತ್ತು ಮೆಟಲ್ ವಲಯಗಳು ಲಾಭ ಪಡೆಯಲಿವೆ.

ಯಾವ ವಲಯಕ್ಕೆ ನಷ್ಟ?

ಬ್ಯಾಂಕುಗಳು, ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯು), ತೈಲ ಮತ್ತು ಅನಿಲ, ಹಾಗೂ ಇಂಧನ ಮತ್ತು ಮೂಲಸೌಕರ್ಯ ವಲಯಗಳು ಭಾರಿ ಒತ್ತಡವನ್ನು ಎದುರಿಸಲಿವೆ. ಇವು ಹೆಚ್ಚಾಗಿ ಆಮದನ್ನೇ ಅವಲಂಬಿಸಿರುವುದರಿಂದ ಆಮದು ವೆಚ್ಚ ಹೆಚ್ಚಾಗಲಿದೆ. ದೇಶ ಪ್ರವಾಸ, ಶಿಕ್ಷಣ ವೈದದ್ಯಕೀಯ ಸೇವೆ ಬಯಸುವ ಭಾರತೀಯರಿಗೆ ದರ ಏರಿಕೆಯಿಂದ ತೊಂದರೆಯಾಗಲಿದೆ.

ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳೇನು?

ರೂಪಾಯಿ ಏಷ್ಯಾದ ಅತ್ಯಂತ ಸ್ಥಿರ ಕರೆನ್ಸಿ ಎಂದು ಪರಿಗಣಿಸಲ್ಪಟ್ಟಿದ್ದರೂ, ಇತ್ತೀಚಿನ ವಿದ್ಯಮಾನಗಳು ಅದನ್ನು ದುರ್ಬಲಗೊಳಿಸಿವೆ. 2008ರಲ್ಲಿ ಜಿಡಿಪಿಯ ಶೇ. 8.8ರಷ್ಟಿದ್ದ ಒಟ್ಟು ಬಂಡವಾಳ ಹರಿವು, 2025ರ ಆರ್ಥಿಕ ವರ್ಷದಲ್ಲಿ ಶೇ. 0.4ಕ್ಕೆ ಕುಸಿದಿದೆ. ಎಫ್‌ಡಿಐ ಪ್ರಮಾಣ ಸಾರ್ವಕಾಲಿಕ ಕನಿಷ್ಠ ಮಟ್ಟವಾದ ಶೇ. 0.02ಕ್ಕೆ ತಲುಪಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಸಿಗದ ಯುವಕರ ಹತಾಶೆ

ಟ್ರಂಪ್‌ ಸುಂಕ ಸಮರ:
ಟ್ರಂಪ್‌ ಅಧಿಕಾರಕ್ಕೆ ಏರಿದ ಬಳಿಕ ಕರೆನ್ಸಿ ಕುಸಿತ ಹೆಚ್ಚಾಗಿದೆ. ರಷ್ಯದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ ಟ್ರಂಪ್‌ ಭಾರತದ ಕೆಲ ವಸ್ತುಗಳ ಮೇಲೆ ಶೇ 50 ರಷ್ಟು ಸುಂಕ ವಿಧಿಸಿದ್ದಾರೆ. ಈ ನಿರ್ಧಾರದಿಂದ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ. ಭಾರತದಿಂದ ಅಮೆರಿಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳು ರಫ್ತಾದರೆ ಅಲ್ಲಿಂದ ಕಡಿಮೆ ಪ್ರಮಾಣದಲ್ಲಿ ವಸ್ತುಗಳು ಆಮದಾಗುತ್ತಿದೆ. ಭಾರತದ ಜೊತೆ ವ್ಯಾಪಾರ ಕೊರತೆ ಇರುವ ಕಾರಣ ಟ್ರಂಪ್‌ ಈಗ ಸುಂಕ ಏರಿಸಿದ್ದಾರೆ. ಇದರಿಂದ ವ್ಯಾಪಾರದಲ್ಲಿ ಅನಿಶ್ಚಿತತೆ ಎದ್ದಿದೆ.

ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿದರೆ ಡಾಲರ್‌ ರೂಪಾಯಿ ಆಗಿ ಪರಿವರ್ತನೆ ಆಗುತ್ತದೆ. ಆದರೆ ಟ್ರಂಪ್‌ ತೆರಿಗೆ ಸಮರ ಆರಂಭಿಸಿದ ಬಳಿಕ ನಿರಂತರವಾಗಿ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಜುಲೈನಿಂದ ಹಿಡಿದು ನವೆಂಬರ್‌ವರೆಗೆ ನಿರಂತರವಾಗಿ ಹಣವನ್ನು ಹಿಂದಕ್ಕೆ ತೆಗೆದಿದ್ದಾರೆ. ಹಣವನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಈಗಿನಿಂದ ಆರಂಭವಾಗಿದಲ್ಲ. 2021 ರಿಂದಲೇ ಆರಂಭವಾಗಿತ್ತು. 2024 ರಲ್ಲಿ 3.04 ಲಕ್ಷ ಕೋಟಿ ಕೋಟಿ ರೂ. ಹಣವನ್ನು ಹಿಂದಕ್ಕೆ ಪಡೆದರೆ ಈ ವರ್ಷ 2.80 ಲಕ್ಷ ಕೋಟಿ ರೂ. ಹಣವನ್ನು ಹಿಂದಕ್ಕೆ ಪಡೆದಿದ್ದಾರೆ. ಅಮೆರಿಕದ ಡಾಲರ್‌ ಬಲಗೊಂಡಿದೆ ಜೊತೆಗೆ ಕೋವಿಡ್‌ ನಂತರ ಮತ್ತೆ ಚೀನಾದ ಆರ್ಥಿಕತೆ ಉತ್ತಮವಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಚೀನಾದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

1 ಡಾಲರ್‌ – ಯಾವ ವರ್ಷ ಎಷ್ಟು ರೂಪಾಯಿ?
1975 – 8.39 ರೂ.
1990 -17.01 ರೂ.
2000 – 44.31 ರೂ.
2012 – 53.06 ರೂ.
2014 – 60.75 ರೂ.
2018 – 70.64 ರೂ.
2024 – 83.28 ರೂ.
2025 ಜನವರಿ – 85.56 ರೂ.
2025 ಡಿಸೆಂಬರ್‌ – 90.15 ರೂ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಡಿ ಅಧಿಕಾರಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಪ್ರಕರಣ: ಪ್ರತಿಕ್ರಿಯಿಸಲು ವಿಳಂಬ ಮಾಡಿದ ಸಿಎಂ ಸೊರೇನ್‌ಗೆ ಜಾರ್ಖಂಡ್ ಹೈಕೋರ್ಟ್ ದಂಡ

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ...

ಪತ್ರಕರ್ತರು, ನಾಗರಿಕರ ವಿರುದ್ಧ ವಿಶೇಷಾಧಿಕಾರ ಅಸ್ತ್ರ ಬೇಡ: ಸುಪ್ರೀಂಗೆ CPIM ನಾಯಕಿ ಸುಭಾಷಿಣಿ ಅಲಿ ಮನವಿ

ಶಾಸಕಾಂಗವನ್ನು ಟೀಕಿಸಿದ ಮಾತ್ರಕ್ಕೆ ಸಂಸತ್ ಸದಸ್ಯರಲ್ಲದ ನಾಗರಿಕರು ಅಥವಾ ಪತ್ರಕರ್ತರ ವಿರುದ್ಧ...

3,000 ಮದರಸಾಗಳ ನಿರ್ವಹಣೆ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಹೈಕೋರ್ಟ್‌ ಸೂಚನೆ

ರಾಜಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 3,000 ಮದರಸಾಗಳ ಪರಿಣಾಮಕಾರಿ ನಿರ್ವಹಣೆ, ಮೇಲ್ವಿಚಾರಣೆ ಹಾಗೂ...