ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಂಪುಟ ವಿಸ್ತರಣೆಯ ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆ ಅಂತಿಮಗೊಂಡಿದೆ. ಮುಖ್ಯಮಂತ್ರಿ ಕಚೇರಿಗೆ ಖಾತೆ ಹಂಚಿಕೆಯ ಪಟ್ಟಿ ತಲುಪಿದ್ದು, ಸಚಿವರಿಗೆ ಯಾವೆಲ್ಲ ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ ಎಂಬುದು ಇದೀಗ ಬಹಿರಂಗವಾಗಿದೆ.
ಸಂಪುಟ ವಿಸ್ತರಣೆಯ ಬಳಿಕ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಒಟ್ಟು 33 ಸಚಿವರಿದ್ದಾರೆ. ನೂತನ ಸಚಿವರಿಗೆ ಪ್ರಮುಖ ಇಲಾಖೆಗಳ ಹೊಣೆಗಾರಿಕೆ ನೀಡಲಾಗಿದ್ದು, ಖಾತೆಗಳ ವಿವರ ಹೀಗಿದೆ:
- ಚಲುವರಾಯಸ್ವಾಮಿ – ಕೃಷಿ ಇಲಾಖೆ
- ಬಾಲಕೃಷ್ಣ – ಸಣ್ಣ ನೀರಾವರಿ ಇಲಾಖೆ
- ಕೆ ಎನ್ ರಾಜಣ್ಣ/ಮುನಿಯಪ್ಪ – ಸಮಾಜ ಕಲ್ಯಾಣ ಇಲಾಖೆ
- ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
- ಬಸವಂತಪ್ಪ – ಬಂದರು ಮತ್ತು ಮೀನುಗಾರಿಕೆ ಇಲಾಖೆ
- ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ ಇಲಾಖೆ
- ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
- ಜಮೀರ್ ಅಹಮದ್ ಖಾನ್ – ವಸತಿ ಇಲಾಖೆ
- ಯು.ಟಿ. ಖಾದರ್ – ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್
- ಲಕ್ಷ್ಮಣ ಸವದಿ – ಸಹಕಾರ ಇಲಾಖೆ
- ಅಜಯ್ ಸಿಂಗ್ – ಅರಣ್ಯ ಇಲಾಖೆ
- ಎಸ್ ಎಸ್ ಮಲ್ಲಿಕಾರ್ಜುನ – ಗಣಿ ಮತ್ತು ಭೂವಿಜ್ಞಾನ ಇಲಾಖೆ
- ರಿಜ್ವಾನ್ – ಆಹಾರ ಇಲಾಖೆ
- ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
- ಪುಟ್ಟರಂಗಶೆಟ್ಟಿ – ಪಶುಸಂಗೋಪನೆ ಇಲಾಖೆ
- ಶಿವಲಿಂಗೇಗೌಡ – ಅಬಕಾರಿ ಇಲಾಖೆ
ಖಾತೆ ಹಂಚಿಕೆ ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ ನೂತನ ಸಚಿವರು ತಮ್ಮ ತಮ್ಮ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡು ಆಡಳಿತ ಕಾರ್ಯಕ್ಕೆ ಮುಂದಾಗಲಿದ್ದಾರೆ.




