ಪ್ರತಿ ನಿತ್ಯ ಮದ್ಯ ಸೇವಿಸಿ ಬಂದು ತಾಯಿಯೊಂದಿಗೆ ಜಗಳ ಮಾಡುತ್ತಿದ್ದ ಸ್ವಂತ ಅಣ್ಣನನ್ನೇ ತಮ್ಮ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಲಿಂಗಸಗೂರಿನ ಬಸವಸಾಗರ ವೃತ್ತದಲ್ಲಿ ನಡೆದಿದೆ.
ಬಸವರಾಜ ವಾಸುದೇವ(32)ಕೊಲೆಯಾದ ವ್ಯಕ್ತಿ, ಶ್ರೀಧರ (27) ಆರೋಪಿಯಾಗಿದ್ದು, ಆತನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
ಬಸವರಾಜ ನಿತ್ಯೂ ಕುಡಿದು ಬಂದು ಮನೆಯಲ್ಲಿ ತಾಯಿ ಜತೆಗೆ ಜಗಳ ಮಾಡುತ್ತಿದ್ದ, ಅಣ್ಣನ ವರ್ತನೆಯಿಂದ ತಮ್ಮ ಬೇಸತ್ತು ಹೋಗಿದ್ದ, ಶನಿವಾರ ಎಂದಿನಂತೆ ಕುಡಿದ ಮತ್ತಿನಲ್ಲಿ ಮತ್ತೆ ತಾಯಿಯೊಂದಿಗೆ ಜಗಳ ತೆಗೆದಿದ್ದ, ಇದರಿಂದ ಬೇಸತ್ತ ತಮ್ಮ ಶ್ರೀಧರ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ಬಳಿಕ ಫ್ಯಾನ್‌ಗೆ ನೇತಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬೀದರ್ | ಸಾಹಿತ್ಯ, ಸಂಗೀತದಿಂದ ಮನಸ್ಸಿಗೆ ನೆಮ್ಮದಿ : ಬಸವರಾಜ ಧನ್ನೂರ
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದರು, ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಶ್ರೀಧರ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.




