ಉಡುಪಿ | ಅಕ್ಕಿ ಬೆಲೆ ಏರಿಕೆ ಬೆನ್ನಲ್ಲೇ ಭತ್ತಕ್ಕೂ ಬೆಲೆ ಹೆಚ್ಚಳಕ್ಕೆ ರೈತರ ಆಗ್ರಹ

Date:

ರಾಜ್ಯದಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಭತ್ತಕ್ಕೂ ಸೂಕ್ತ ಬೆಲೆ ನಿಗದಿಪಡಿಸುವಂತೆ ರೈತರು ಆಗ್ರಹಿಸಿದ್ದಾರೆ. ಮಳೆ ಕೊರತೆಯಿಂದ ಭತ್ತದ ಬೆಳೆ ಪ್ರದೇಶ ಕುಸಿತಗೊಂಡಿದ್ದು, ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆಯಾಗಿಲ್ಲ. ಹೀಗಾಗಿ ಪ್ರಸ್ತುತ ಕ್ವಿಂಟಾಲ್‌ಗೆ ₹3,150ರಿಂದ ₹3,200ರ ವರೆಗೆ ಇರುವ ಭತ್ತದ ಖರೀದಿ ದರವನ್ನು ಕನಿಷ್ಠ ₹4 ಸಾವಿರಕ್ಕೆ ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

- Advertisement -

ಪ್ರಸ್ತುತ ಮಾರುಕಟ್ಟೆಯಲ್ಲಿ ಕುಚ್ಚಲಕ್ಕಿ ಕೆ.ಜಿ.ಗೆ ₹75ರಿಂದ ₹80 ಹಾಗೂ ಸೋನಾ ಮಸೂರಿ, ವಿಜಯ ಮಸೂರಿ ಸೇರಿದಂತೆ ಇತರ ಅಕ್ಕಿಗಳ ಬೆಲೆ ಕೆ.ಜಿ.ಗೆ ₹85ರಿಂದ ₹90ರ ವರೆಗೆ ತಲುಪಿದೆ. ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿಯೂ ಅಕ್ಕಿ ಬೆಲೆ ಹೆಚ್ಚಳವಾಗಿದೆ. ಕಳೆದ ವಾರ ಕ್ವಿಂಟಾಲ್‌ಗೆ ₹2,900ರಿಂದ ₹3 ಸಾವಿರ ಇದ್ದ ಭತ್ತದ ಖರೀದಿ ದರ ಇದೀಗ ₹3,150ರಿಂದ ₹3,200ಕ್ಕೆ ಏರಿಕೆಯಾಗಿದೆ. ಆದರೆ ಸರಕಾರದ ಬೆಂಬಲ ಬೆಲೆ ಸಾಮಾನ್ಯ ಭತ್ತಕ್ಕೆ ₹2,441 ಹಾಗೂ ಎ ಗ್ರೇಡ್‌ ಭತ್ತಕ್ಕೆ ₹2,461 ಮಾತ್ರ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೋಟು ನಿಷೇಧಕ್ಕೆ 10 ವರ್ಷ: ಮೋದಿ ಸರ್ಕಾರದ ಒಂದು...

ಒಂದು ದಶಕದ ಆರ್ಥಿಕ ಪರಿಣಾಮಗಳು, ಅಧಿಕೃತ ಅಂಕಿಅಂಶಗಳು ಮತ್ತು ತಜ್ಞರ ಸಂಶೋಧನೆಗಳ ಆಧಾರಿತ ಅಧ್ಯಯನ ಬರಹ. 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ...

150 ವರ್ಷ ಹಳೆಯ ಶಿವಮೊಗ್ಗ ತುಂಗಾ ಸೇತುವೆ ಮರುನಿರ್ಮಾಣಕ್ಕೆ...

ಮಲೆನಾಡಿನ ಹೆಬ್ಬಾಗಿಲು ಎಂದೇ ಗುರುತಿಸಿಕೊಂಡಿರುವ ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯ ತುಂಗಾ ಸೇತುವೆಗೆ ಕೊನೆಗೂ ಹೊಸ ರೂಪ ನೀಡುವ ಕಾಲ ಸನ್ನಿಹಿತವಾಗಿದೆ. ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸ ಹೊಂದಿರುವ ಹಳೆಯ ತುಂಗಾ...

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...

ಮಳೆ ಕೊರತೆಯ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಕೃಷಿ ತೀವ್ರವಾಗಿ ಕುಸಿದಿದೆ. ಹಿಂಗಾರು ಬೆಳೆಗೆ ನೀರಿನ ಲಭ್ಯತೆ ಇಲ್ಲದ ಕಾರಣ ಈ ಬಾರಿ ಒಂದೇ ಬೆಳೆ ಬೆಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಭತ್ತದ ಪ್ರಮುಖ ಉತ್ಪಾದನಾ ಪ್ರದೇಶಗಳಾದ ಕೊಪ್ಪಳ, ಸಿಂಧನೂರು, ಗಂಗಾವತಿ, ಬಳ್ಳಾರಿ ಹಾಗೂ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿಯೂ ಬರದ ಪರಿಣಾಮ ಇಳುವರಿ ಕುಸಿದಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಭತ್ತದ ಉತ್ಪಾದನೆ ಕಡಿಮೆಯಾಗಿದ್ದು, ಅಲ್ಲಿ ಕ್ವಿಂಟಾಲ್‌ಗೆ ₹3,800ರಿಂದ ₹4 ಸಾವಿರದವರೆಗೆ ಖರೀದಿ ನಡೆಯುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹2,300ರಿಂದ ₹2,800ರ ಆಸುಪಾಸಿನಲ್ಲಿ ದರವಿತ್ತು.

ಇದರೊಂದಿಗೆ ಕೃಷಿ ಯಂತ್ರೋಪಕರಣಗಳ ಇಂಧನ ವೆಚ್ಚ, ಕಟಾವು ವೆಚ್ಚ ಹಾಗೂ ಕೂಲಿ ದರ ಹೆಚ್ಚಳದಿಂದ ರೈತರ ಉತ್ಪಾದನಾ ವೆಚ್ಚವೂ ಏರಿಕೆಯಾಗಿದೆ. ಮಳೆಯಿಂದ ಕಟಾವು ಕಾರ್ಯ ವಿಳಂಬವಾಗುತ್ತಿದ್ದು, ಗದ್ದೆಯಲ್ಲಿ ಭತ್ತ ಉದುರಿ ನಷ್ಟವಾಗುತ್ತಿದೆ. ಕಾಡುಪ್ರಾಣಿಗಳು ಹಾಗೂ ನವಿಲುಗಳ ಉಪಟಳವೂ ರೈತರನ್ನು ಕಾಡುತ್ತಿದೆ. ಈ ಎಲ್ಲ ಕಾರಣಗಳಿಂದ ಭತ್ತಕ್ಕೆ ಸೂಕ್ತ ಬೆಲೆ ನೀಡಬೇಕು ಎಂದು ಅಮಾಸೆಬೈಲಿನ ರೈತ ಸತೀಶ್‌ ಹೆಗ್ಡೆ ಹಾಗೂ ಹೊಸಂಗಡಿಯ ರಾಜೇಂದ್ರ ಬೆಚ್ಚಳ್ಳಿ ಆಗ್ರಹಿಸಿದ್ದಾರೆ.

ಕರಾವಳಿಯಲ್ಲಿ ನಾಟಿ ಪ್ರದೇಶದಲ್ಲಿ ಭಾರಿ ಕುಸಿತ

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 65 ಸಾವಿರ ಹೆಕ್ಟೇರ್‌ ಭತ್ತದ ಕೃಷಿ ಪ್ರದೇಶವಿದ್ದು, ಈ ಬಾರಿ ಕೇವಲ 30ರಿಂದ 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಷ್ಟೇ ನಾಟಿ ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನಾಟಿಯಾಗಿದ್ದರೆ, ದಕ್ಷಿಣ ಕನ್ನಡದಲ್ಲಿ 13 ಸಾವಿರ ಹೆಕ್ಟೇರ್‌ ಪೈಕಿ 8ರಿಂದ 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ನಾಟಿ ಮಾಡಲಾಗಿದೆ.

ಪ್ರತಿವರ್ಷ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭತ್ತಕ್ಕೆ ಸುಮಾರು 1 ಸಾವಿರ ಟನ್‌ ಬೇಡಿಕೆಯಿದ್ದು, ಈ ಬಾರಿ ಉಡುಪಿಯಲ್ಲಿ 500 ಟನ್‌ ಹಾಗೂ ದಕ್ಷಿಣ ಕನ್ನಡದಲ್ಲಿ 200 ಟನ್‌ ಸೇರಿ ಒಟ್ಟು ಸುಮಾರು 700 ಟನ್‌ ಭತ್ತ ಮಾತ್ರ ಲಭ್ಯವಾಗುವ ನಿರೀಕ್ಷೆಯಿದೆ.

ಒಂದು ಹೆಕ್ಟೇರ್‌ ಭತ್ತದ ಕೃಷಿಗೆ ಸುಮಾರು ₹40 ಸಾವಿರದಿಂದ ₹50 ಸಾವಿರದವರೆಗೆ ವೆಚ್ಚವಾಗುತ್ತದೆ. ಕ್ವಿಂಟಾಲ್‌ಗೆ ₹3 ಸಾವಿರ ದರ ಸಿಕ್ಕರೂ ರೈತರ ಶ್ರಮ ಹಾಗೂ ಉತ್ಪಾದನಾ ವೆಚ್ಚವನ್ನು ಪರಿಗಣಿಸಿದಾಗ ನಿರೀಕ್ಷಿತ ಲಾಭ ದೊರೆಯುವುದಿಲ್ಲ. ಕ್ವಿಂಟಾಲ್‌ಗೆ ₹4 ಸಾವಿರ ದರ ನಿಗದಿಯಾದರೆ ಹೆಕ್ಟೇರ್‌ಗೆ ₹80 ಸಾವಿರದಿಂದ ₹90 ಸಾವಿರದವರೆಗೆ ಆದಾಯ ದೊರೆಯಬಹುದು ಎಂಬುದು ರೈತರ ಲೆಕ್ಕಾಚಾರ.

ಬೆಂಬಲ ಬೆಲೆ ಹೆಚ್ಚಿಸಲು ಸಾಧ್ಯವಿಲ್ಲ: ಕೃಷಿ ಇಲಾಖೆ

ಭತ್ತದ ಬೆಂಬಲ ಬೆಲೆಯನ್ನು ಮುಂಗಾರು ಆರಂಭದಲ್ಲಿಯೇ ಕೇಂದ್ರ ಸರಕಾರ ವೈಜ್ಞಾನಿಕ ಅಧ್ಯಯನ ನಡೆಸಿ ಘೋಷಿಸಿದೆ. ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‌ಗೆ ₹2,441 ಹಾಗೂ ಎ ಗ್ರೇಡ್‌ ಭತ್ತಕ್ಕೆ ₹2,461 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈಗ ಅದನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಉಡುಪಿ ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್‌ ನಾಯ್ಕ ತಿಳಿಸಿದ್ದಾರೆ.

ಒಣಗಿಸಿ ಮಾರಾಟ ಮಾಡುವಂತೆ ರೈತರಿಗೆ ಸಲಹೆ

ಈ ಬಾರಿ ಭತ್ತದ ಕೊರತೆ ಇರುವುದರಿಂದ ಅಕ್ಕಿಯ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಭತ್ತಕ್ಕೆ ಕ್ವಿಂಟಾಲ್‌ಗೆ ಕನಿಷ್ಠ ₹4 ಸಾವಿರ ಸಿಕ್ಕರೆ ಮಾತ್ರ ರೈತರಿಗೆ ಲಾಭದಾಯಕವಾಗಲಿದೆ. ರೈತರು ಭತ್ತವನ್ನು ಗದ್ದೆಯಿಂದಲೇ ತರಾತುರಿಯಲ್ಲಿ ಮಾರಾಟ ಮಾಡದೆ, ಸರಿಯಾಗಿ ಒಣಗಿಸಿ ಸಂಗ್ರಹಿಸಿಡಬೇಕು. ಐದರಿಂದ ಆರು ತಿಂಗಳ ಬಳಿಕ ಮಾರಾಟ ಮಾಡಿದರೆ ಉತ್ತಮ ಬೆಲೆ ಸಿಗುವ ಸಾಧ್ಯತೆಯಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಸಲಹೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಬಾಲಕರ ವಸತಿ ನಿಲಯ ಉದ್ಘಾಟನೆ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ...

ಚಿಕ್ಕಮಗಳೂರು | ಮಹಿಳೆ ಮಗನೊಂದಿಗೆ ನಾಪತ್ತೆ

ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಾರ್ಮಕ್ಕಿ ಗ್ರಾಮ ಮಹಿಳೆ ಹಾಗೂ ಮೂರು ವರ್ಷದ...

ದಾವಣಗೆರೆ | ವಿದ್ಯಾರ್ಥಿಗಳ, ಸಾರ್ವಜನಿಕರ ಅನುಕೂಲಕ್ಕೆ ನೂತನ ಕೆಎಸ್ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ

ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, ದಾವಣಗೆರೆ ನಗರ...

ಚಿಕ್ಕಮಗಳೂರು | ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು

ಚಿಕ್ಕಮಗಳೂರು ನಗರದ ಅಗ್ರಹಾರ ಸರ್ಕಲ್,  ಸ್ಪಲೆನ್ಸರ್ ರಸ್ತೆ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ...