ನಗರದ ಐ.ಜಿ ರಸ್ತೆಯಲ್ಲಿ ಗಸ್ತಿನಲ್ಲಿರುವಾಗ ಮಧುವನ ಲೇ ಔಟ್ ನ ಪಾರ್ಕ್ ಹತ್ತಿರ ಯಾರೋ ಒಬ್ಬ ವ್ಯಕ್ತಿ ಕುಳಿತು ಗಾಂಜಾ ಸೇವನೆ ಮಾಡುತ್ತಿರುತ್ತಾರೆಂದು ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿ ಎ.ಎಸ್.ಐ ಸುಬ್ರಮಣಿ ರವರೊಂದಿಗೆ ಮಾಹಿತಿ ಬಂದ ಸ್ಥಳವಾದ ಮಧುವನ ಲೇ ಹೌಟ್ ಹತ್ತಿರ ಸಮಯ 10-45 ಗಂಟೆಗೆ ಹೋಗಿ ದೂರದಲ್ಲಿ ಮರೆಮಾಚಿ ನಿಂತು ನೋಡಲಾಗಿ ಒಬ್ಬ ಹುಡುಗನು ಪಾರ್ಕ್ ನಲ್ಲಿ ಕುಳಿತು ಏನ್ನನೋ ಸೇವನೆ ಮಾಡುತ್ತಾ ಹೊಗೆ ಬಿಡುತ್ತಿದ್ದನು ಗಮನಿಸಿ ವ್ಯಕ್ತಿಯನ್ನು ಹಿಡಿಯಲಾಗಿದೆ.
ದಾಳಿ ಮಾಡಿ ಆತನನ್ನು ಸಿಬ್ಬಂದಿಗಳು ಹಿಡಿದುಕೊಂಡು ನನ್ನ ಮುಂದೆ ಹಾಜರುಪಡಿಸಿದ್ದು, ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ದರ್ಶನ್/ ಪವನ್ ಬಿನ್ ಮಂಜುನಾಥ, 22 ವರ್ಷ,ಆದಿ ಕರ್ನಾಟಕ ಜಾತಿ, ವಾಸ ಅಯ್ಯಪ್ಪ ನಗರ, ಪೂಜಾ ಟಾಕೀಸ್ ಹತ್ತಿರ, ಚಿಕ್ಕಮಗಳೂರು ನಗರ, ಈತನ ಬಾಯಿಂದ ಗಾಂಜಾ ಸೇವನೆ ಮಾಡಿದಂತೆ ಸಂಶಯ ಬಂದಿದ್ದರಿಂದ ಈತನನ್ನು ವೈದ್ಯರ ಮುಂದೆ ಹಾಜರುಪಡಿಸಿ ಗಾಂಜಾ ಸೇವನೆ ಬಗ್ಗೆ ಪರೀಕ್ಷಿಸಿದಾಗ ದೃಢ ಪಟ್ಟಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅರಣ್ಯ ಸಿಬ್ಬಂದಿಗೆ ಹಲ್ಲೆ, ಕೊಲೆ ಬೆದರಿಕೆ
ಯುವಕ ದರ್ಶನ್ @ ಪವನ್ (22 ) ಎಂಬಾತ ,ಆದಿ ಕರ್ನಾಟಕ ವರ್ಗಕ್ಕೆ ಸೇರಿದವರಾಗಿದ್ದಾನೆ , ಅಯ್ಯಪ್ಪ ನಗರ, ಪೂಜಾ ಟಾಕೀಸ್ ಹತ್ತಿರ, ಚಿಕ್ಕಮಗಳೂರು ನಗರದಲ್ಲಿ ವಾಸವಾಗಿದ್ದಾನೆ. ಈ ಕುರಿತು ಯುವಕನ ವಿರುದ್ಧ ಕಲಂ 27(b) ಎನ್.ಡಿ.ಪಿ.ಎಸ್ ಅಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.




