ಹಾಸನ | ಕಾಡಾನೆಗಳ ದಾಂದಲೆ; ಅಪಾರ ಪ್ರಮಾಣದಲ್ಲಿ ಕಾಫಿ-ಮೆಣಸಿನ ಬೆಳೆ ಹಾನಿ

Date:

  • 17 ಕಾಡಾನೆಗಳ ಹಿಂಡು ದಾಳಿ – ಮರಿ ಆನೆಗಳ ಚಿನ್ನಾಟ
  • ಜಮ್ಮನಹಳ್ಳಿಯ ನಾಗರಾಜ್‌, ವಿಶ್ವನಾಥ್‌ ಅವರ ಕಾಫಿ ತೋಟಕ್ಕೆ ದಾಳಿ

ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ದಾಂದಲೆ ನಡೆಸಿದ್ದು, ಲಕ್ಷಾಂತರ ಮೌಲ್ಯದ ಕಾಫಿ-ಮೆಣಸಿನ ಬೆಳೆ ನಾಶವಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಜಮ್ಮನಹಳ್ಳಿಯ ನಾಗರಾಜ್‌ ಮತ್ತು ವಿಶ್ವನಾಥ್‌ ಎಂಬುವರ ಕಾಫಿ ತೋಟಕ್ಕೆ 17 ಕಾಡಾನೆಗಳ ಹಿಂಡು ಬುಧವಾರ ರಾತ್ರಿ ಲಗ್ಗೆ ಇಟ್ಟಿವೆ. ಮರಿ ಆನೆಗಳನ್ನು ಹೊಂದಿರುವ ಕಾಡಾನೆಗಳ ಗುಂಪು ಹೂವು ಬಿಟ್ಟಿರುವ ಕಾಫಿ ಗಿಡಗಳು, ಮೆಣಸಿನಬಳ್ಳಿ, ನೀರಿನ ಪೈಪ್‌ ಇತ್ಯಾದಿಗಳನ್ನು ನಾಶ ಮಾಡಿವೆ. ಕಾಫಿ ತೋಟಕ್ಕೆ ಸೋಲಾರ್‌ ಬೇಲಿ ಇಲ್ಲದ್ದರಿಂದ ಕಾಡಾನೆಗಳು ತೋಟಕ್ಕೆ ನುಗ್ಗಿವೆ ಎನ್ನಲಾಗಿದೆ.

ಕೆಲವು ವರ್ಷಗಳಿಂದ ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬಹುತೇಕರು ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಅನೇಕ ಕಡೆ ಹೊಲಗದ್ದೆಗಳು ಇಂದಿಗೂ ಪಾಳುಬಿದ್ದಿವೆ. ಒಂದು ವೇಳೆ ಧೈರ್ಯ ಮಾಡಿ ಬೆಳೆ ಬೆಳೆದರೂ ಫಸಲನ್ನು ರಕ್ಷಿಸಿಕೊಂಡು, ಕೈಗೆ ತೆಗೆದುಕೊಳ್ಳಲು ಹರಸಾಹಸಪಡಬೇಕಿದೆ.

ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕೋಳಿ ಸಾಂಬರ್‌ಗಾಗಿ ಜಗಳ; ಮಗನನ್ನೇ ಹತ್ಯೆಗೈದ ತಂದೆ

ಕಾಡಾನೆ ಹಾವಳಿಯಿಂದ ಉಂಟಾಗುವ ಬೆಳೆ ಹಾನಿಗೆ ಅರಣ್ಯ ಇಲಾಖೆಯಿಂದ ಸಿಗುವ ಪರಿಹಾರ ತೀರ ಕಡಿಮೆ. ಜೊತೆಗೆ ತ್ವರಿತವಾಗಿಯೂ ಸಿಗುವುದಿಲ್ಲ. ಹಾಗಾಗಿ ಮಲೆನಾಡು ಭಾಗದ ರೈತರು ಮತ್ತು ಬೆಳೆಗಾರರು ಕಾಡಾನೆ ಸಮಸ್ಯೆಯಿಂದಾಗಿ ಹೈರಾಣಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕನ್ನಡ ನಾಡು-ನುಡಿ ರಕ್ಷಣೆ ಎಲ್ಲರ ಹೊಣೆ : ಡಾ. ಎಸ್.ಎಸ್ ಮೈನಾಳೆ

ಕನ್ನಡ ಪುರಾತನ ಭಾಷೆಯಾಗಿದ್ದು, ದ್ರಾವಿಡ ಭಾಷೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕ್ರಿ.ಶ.450...

ರಾಯಚೂರು | ಸ್ಲಂ ನಿವಾಸಿಗಳ ನಿವೇಶನ ಅಭಿವೃದ್ಧಿಪಡಿಸಲು ಅಧಿಕಾರಿಗಳ ನಿರ್ಲಕ್ಷ್ಯ; ಜಿಲ್ಲಾಧಿಕಾರಿ ಕಿಡಿ

ಸ್ಲಂ ನಿವಾಸಿಗಳಿಗೆ ನಿವೇಶನಕ್ಕಾಗಿ ಭೂಮಿ ಮಂಜೂರು ಮಾಡಿದ್ದು, ಹಕ್ಕುಪತ್ರಗಳನ್ನು ವಿತರಣೆ ಮಾಡಿದೆ,...

ಜೀವ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಎರಡೇ ದಿನ ಬಾಕಿ

ಕೇಂದ್ರ ಸರ್ಕಾರ ಹಾಗೂ ನಾನಾ ರಾಜ್ಯಗಳಲ್ಲಿ ಉದ್ಯೋಗ ಮಾಡಿ ನಿವೃತ್ತಿ ಹೊಂದಿ...

ಹುಬ್ಬಳ್ಳಿ | ಕಸದ ರಾಶಿಯಿಂದ ಸೂಸುವ ದಟ್ಟ ಹೊಗೆ; ಜನರ ಪರದಾಟ

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ದಶಕಗಳಷ್ಟು ಹಳೆಯದಾದ ಕಸದ ರಾಶಿಗಳಿದ್ದು, ಸಾಕಷ್ಟು ಸಮಸ್ಯೆಗಳನ್ನು...