ಖಲಿಸ್ತಾನವೂ ಅಲ್ಲ, ಗಜವಾ-ಏ-ಹಿಂದ್‍ವೂ ಅಲ್ಲ ಹಾಗೂ ಹಿಂದೂ ರಾಷ್ಟ್ರವೂ ಅಲ್ಲ

Date:

ಸೈದ್ಧಾಂತಿಕ ನೆಲೆಯನ್ನು ಬಿಟ್ಟು ಒಂದು ವೇಳೆ ರಾಜಕೀಯ ನೆಲೆಯಲ್ಲಿ ನೋಡಿದರೆ ಈ ಮೂರೂ ಬೇಡಿಕೆಗಳ ಯಾವುದೇ ಹೋಲಿಕೆ ಸಾಧ್ಯವಿಲ್ಲ. ನಿಜ ಏನೆಂದರೆ ಭಾರತದಲ್ಲಿ ಗಜವಾ-ಏ-ಹಿಂದ್‍ದ ಕಲ್ಪನೆಗೆ ಯಾವುದೇ ನೆಲೆಯಿಲ್ಲ.

ಯಾರಿಗೆಲ್ಲ ಖಲಿಸ್ತಾನ್ ಬೇಕೋ, ಯಾರೆಲ್ಲ ಗಜವಾ-ಏ-ಹಿಂದ್‍ನ ಕನಸು ಕಾಣುತ್ತಾರೋ ಅಥವಾ ಯಾರು ಹಿಂದೂ ರಾಷ್ಟ್ರ ಮಾಡಲು ಬಯಸುತ್ತಾರೋ ಅವರಿಗೆ ಭಾರತದಲ್ಲಿ ಯಾವ ಜಾಗವೂ ಇಲ್ಲ. ಈ ಮೂರೂ ವಿಚಾರಧಾರೆಗಳು ಭಾರತದ ಸ್ವಧರ್ಮದ ವಿರುದ್ಧವಾಗಿವೆ. ಈ ದೇಶವು ಸ್ವಧರ್ಮದಲ್ಲಿ ನಂಬಿಕೆ ಇರಿಸುವ ಎಲ್ಲಾ ಜಾತಿ, ಜನಾಂಗ, ಶ್ರದ್ಧೆ, ಪಂಥ ಹಾಗೂ ಸಂಪ್ರದಾಯದ್ದಾಗಿದೆ ಎಂಬುದು ಭಾರತೀಯ ಗಣತಂತ್ರದ ಮೂಲ ಆಧಾರವಾಗಿದೆ. ಭಾರತ ದೇಶದಲ್ಲಿ ಹುಟ್ಟಿದ ಸಂಯೋಗ ಅಥವಾ ನಂಬಿಕೆಯ ಆಧಾರದ ಮೇಲೆ ಯಾರೂ ಮನೆಯೊಡೆಯ ಅಥವಾ ಯಾರೂ ಬಾಡಿಗೆದಾರರು ಆಗಲು ಸಾಧ್ಯವಿಲ್ಲ.

ಕೇವಲ ವಿಚಾರದ ಆಧಾರದ ಮೇಲೆ ನೋಡಿದರೆ ಈ ಮೂರು ವಿಚಾರಗಳು ಒಂದೇ ತೆರನಾಗಿವೆ. ಮೂರೂ ಸಾಂಸ್ಥಿಕ ಧರ್ಮ ಮತ್ತು ಸರಕಾರವನ್ನು ಜೋಡಿಸಿ ನೋಡುತ್ತವೆ ಹಾಗೂ ಇದು ಅತ್ಯಂತ ಅಪಾಯಕಾರಿಯಾದ ವಿಚಾರವಾಗಿದೆ. ಈ ಮೂರೂ ದೇಶದಲ್ಲಿ ಒಂದು ಸಾಂಸ್ಥಿಕ ಧರ್ಮ (ಸಿಖ್, ಇಸ್ಲಾಂ ಅಥವಾ ಹಿಂದೂ)ದ ಅನುಯಾಯಿಗಳದ್ದೇ ದೇಶದಲ್ಲಿ ಎಲ್ಲಾ ನಡೆಯಬೇಕು ಎಂದು ಬಯಸುತ್ತಾರೆ. ಅದು ಅನ್ಯಾಯ ಮಾತ್ರವಲ್ಲ, ಅಸಾಧ್ಯವೂ ಆಗಿದೆ. ಇಂದಿನ ಯುಗದಲ್ಲಿ ಭಾರತದಂತಹ ದೇಶದಲ್ಲಿ, ಅಥವಾ ದೇಶದ ಯಾವುದೇ ಪ್ರದೇಶದಲ್ಲಿ, ಯಾವುದೇ ಸಂಪ್ರದಾಯದ ಪ್ರಾಬಲ್ಯ ಸ್ಥಾಪಿಸುವ ಪ್ರಯತ್ನ ದೇಶದಲ್ಲಿ ಆಂತರಿಕ ಯುದ್ಧಕ್ಕೆ ಆಹ್ವಾನ ನೀಡಿದಂತಾಗುವುದು, ಅದರಲ್ಲಿ ಎಲ್ಲರ ಪಾಲಿಗೆ ಕೇವಲ ವಿನಾಶವೇ ದೊರಕುವುದು. ಮೂರೂ ವಿಚಾರಗಳು ತಮ್ಮ ವಿಚಾರವನ್ನು ಸಮರ್ಥಿಸಲು ಧರ್ಮ ಗ್ರಂಥಗಳ ಆಸರೆ ಪಡೆದುಕೊಳ್ಳುತ್ತವೆ, ಆದರೆ ಗುರು ಗ್ರಂಥ ಸಾಹಬ್, ಕುರಾನ್ ಶರೀಕ್ ಅಥವಾ ಹದೀಸ್ ಅಥವಾ ಹಿಂದೂ ಧರ್ಮ ಗ್ರಂಥಗಳಲ್ಲಿ ಇಂತಹ ಯಾವ ನಿರ್ದೇಶನವೂ ಕಾಣಿಸುವುದಿಲ್ಲ. ಮೂರೂ ವಿಚಾರಗಳು ಭಾರತೀಯ ಸಂವಿಧಾನದ ಮೂಲ ಭಾವನೆಯ ವಿರುದ್ಧವಾಗಿವೆ.

ಈ ನಿಟ್ಟಿನಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನೀಡಿದ ಈ ಹೇಳಿಕೆ ಅತ್ಯಂತ ಸೂಕ್ತವಾಗಿದೆ; ‘ಹಿಂದೂ ರಾಷ್ಟ್ರದ ಮಾತುಗಳನ್ನು ಆಡುವುದರಿಂದ ಖಲಿಸ್ತಾನದ ಬೇಡಿಕೆಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ.’ ಒಂದು ವೇಳೆ ದೇಶದ ಸರ್ವೋಚ್ಚ ಸ್ಥಾನಗಳಲ್ಲಿ ಆಸೀನರಾದ ಜನರು ಹಿಂದೂ ರಾಷ್ಟ್ರದ ಮಾತುಗಳನ್ನು ಆಡಬಹುದಾದರೆ ಇದರಿಂದ ಇನ್ನೊಂದು ಸಾಂಸ್ಥಿಕ ಧರ್ಮ ಆಧಾರಿತ ಒಂದು ಸಂಪ್ರದಾಯದ ಪ್ರಾಬಲ್ಯದ ಮಾತುಗಳನ್ನು ಆಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಒಂದು ವೇಳೆ ಕೆಲವು ಜನರು ಬಹುಮತದ ಆಧಾರದ ಮೇಲೆ ಹಿಂದೂ ರಾಷ್ಟ್ರದ ವಕಾಲತ್ತು ಮಾಡಿದರೆ ಇತರ ಜನರು ಬೇರಾವುದೋ ಒಂದು ಪ್ರದೇಶದಲ್ಲಿ ಸಿಕ್ಖರ ಪ್ರಾಬಲ್ಯ ಇರಬೇಕೆಂದು ವಕಾಲತ್ತು ಹೂಡುತ್ತಾರೆ. ಮತ್ತೊಬ್ಬರು ಮತ್ತೊಂದಾವುದೋ ಪ್ರದೇಶ ಅಥವಾ ಇಡೀ ದೇಶದಲ್ಲಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಅಥವಾ ಇನ್ನೊಂದಾವುದೋ ಮತದ ಅಧಿಪತ್ಯ ಸಾಧಿಸುವ ದಾವೆ ಹೂಡುತ್ತಾರೆ.

ಇದಕ್ಕೆ ಉತ್ತರವಾಗಿ ಖಲಿಸ್ತಾನದಿಂದ ದೇಶದ ವಿಭಜನೆಯಾಗುವುದು, ಹಿಂದೂ ರಾಷ್ಟ್ರ ದೇಶದ ವಿಭಜನೆ ಮಾಡುವುದಿಲ್ಲ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಯಾವುದೇ ದೇಶದ ಶಕ್ತಿಶಾಲಿ ಅಥವಾ ಬಹುಸಂಖ್ಯಾತವಾದ ವರ್ಗವು ದೇಶದ ವಿಭಜನೆಯ ವಿಚಾರಕ್ಕೆ ರಾಷ್ಟ್ರವಾದದ ಮುಖವಾಡ ಹಾಕಿರುತ್ತದೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಸೋಲಿನ ಭಯದಿಂದ ಸಿನಿಮಾ ತಾರೆಯರ ಹಿಂದೆ ಬಿದ್ದಿದೆಯೇ ಬಿಜೆಪಿ?

ಪಶ್ಚಿಮ ಪಾಕಿಸ್ತಾನದ ಪಂಜಾಬಿ ಸಮಯದಾಯದ ಮೂಲಕ ಉರ್ದು ಹೇರುವ ಪ್ರಯತ್ನವೇ ಪಾಕಿಸ್ತಾನದ ವಿಭಜನೆ ಮಾಡಿತು. ಶ್ರೀಲಂಕಾದಲ್ಲಿ ಬಹುಸಂಖ್ಯಾತ ಸಿಂಹಳಿ ಸಮಾಜದ ಮೂಲಕ ಅಲ್ಪಸಂಖ್ಯಾತ ತಮಿಳು ಮತ್ತು ಹಿಂದೂ ಜನರ ಮೇಲೆ ತಮ್ಮ ಪ್ರಾಬಲ್ಯ ಸ್ಥಾಪಿಸುವ ಪ್ರಯತ್ನವೇ ಅಲ್ಲಿ ಪ್ರತ್ಯೇಕತೆಗೆ ಅಡಿಪಾಯ ಹಾಕಿತು. ಇದೇ ರೀತಿಯಲ್ಲಿ ಇಂದು ಭಾರತದಲ್ಲಿ ಹಿಂದೂ ರಾಷ್ಟ್ರದ ಆಗ್ರಹವು ದೇಶವನ್ನು ಮುರಿಯುವ ವಿಚಾರವಾಗಿದೆ.

ಸೈದ್ಧಾಂತಿಕ ನೆಲೆಯನ್ನು ಬಿಟ್ಟು ಒಂದು ವೇಳೆ ರಾಜಕೀಯ ನೆಲೆಯಲ್ಲಿ ನೋಡಿದರೆ ಈ ಮೂರೂ ಬೇಡಿಕೆಗಳ ಯಾವುದೇ ಹೋಲಿಕೆ ಸಾಧ್ಯವಿಲ್ಲ. ನಿಜ ಏನೆಂದರೆ ಭಾರತದಲ್ಲಿ ಗಜವಾ-ಏ-ಹಿಂದ್‍ದ ಕಲ್ಪನೆಗೆ ಯಾವುದೇ ನೆಲೆಯಿಲ್ಲ. ಭಾರತದ ಮೇಲೆ ಇಸ್ಲಾಂ ವಶಪಡಿಸಿಕೊಳ್ಳುವ ಕಲ್ಪನೆ ನೂರಾರು ವರ್ಷಗಳ ಹಿಂದೆ ಯಾವುದೋ ವಿದೇಶಿ ಆಕ್ರಮಣಕಾರಿಯ ಮನಸ್ಸಿನಲ್ಲಿ ಖಂಡಿತವಾಗಿಯೂ ಇದ್ದಿರಬಹುದು, ಆದರೆ ಕಾಲಕ್ರಮೇಣ ಇಂತಹ ಎಲ್ಲ ಕಲ್ಪನೆಗಳು ಈ ದೇಶದ ಮಣ್ಣಿನಲ್ಲಿ ಲೀನವಾದವು. ಭಾರತದ ಒಬ್ಬ ಸರಾಸರಿ ಮುಸಲ್ಮಾನನು ಈ ಪದವನ್ನೇ ಕೇಳಿರಲಿಕ್ಕಿಲ್ಲ, ಇದರ ಕನಸು ಕಾಣುವುದಂತೂ ದೂರದ ಮಾತು. ದೇಶದಲ್ಲಿ ಈ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವ ಯಾವುದೇ ರಾಜಕೀಯ ದಳ, ಆಂದೋಲನ ಅಥವಾ ಗುಪ್ತ ಸಂಘಟನೆಯೂ ಇಲ್ಲ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತರಹದ ಮುಸ್ಲಿಂ ಸಾಂಪ್ರದಾಯಿಕ ಸಂಘಟನೆಗಳು ಅಥವಾ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರೂ ಗಜವಾ-ಏ-ಹಿಂದ್‍ದ ಹೆಸರನ್ನೂ ಉಚ್ಛರಿಸುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಿಂದ ನಡೆಸಲಾಗುತ್ತಿದ್ದ ಅಲ್ ಖೈದಾದ ಒಂದು ವೆಬ್‍ಸೈಟ್ ಈ ವಿಚಾರವನ್ನು ಜನಪ್ರಿಯಗೊಳಿಸುವ ಪ್ರಯತ್ನ ಮಾಡುತ್ತಿದೆ. ಆದರೆ ತನ್ನೆಲ್ಲ ಪ್ರಯತ್ನಗಳ ಹೊರತಾಗಿಯೂ ಭಾರತದಲ್ಲಿ ಅದಕ್ಕೆ ಯಾವುದೇ ಸಫಲತೆ ಸಿಕ್ಕಿಲ್ಲ. ಒಂದು ವೇಳೆ ಯಾವುದೇ ಒಬ್ಬ ವ್ಯಕ್ತಿ ಈ ಸಿದ್ಧಾಂತವನ್ನು ಜನಪ್ರಿಯಗೊಳಿಸಿದ್ದಾನೆ ಎಂದರೆ ಅದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅವರು 2022ರ ಚುನಾವಣೆಗೆ ಮುನ್ನ ತನ್ನ ಭಾಷಣದಲ್ಲಿ ಈ ಅಪಾಯವನ್ನು ಉಲ್ಲೇಖಿಸಿದರು. ಆದರೆ ಅದಕ್ಕೆ ಯಾವುದೇ ಪ್ರಮಾಣಗಳನ್ನು ನೀಡಲಿಲ್ಲ. ಒಂದು ವೇಳೆ ನೀವು ಗಜವಾ-ಏ-ಹಿಂದ್ ಗೂಗಲ್ ಮಾಡಿದರೆ, ಇದರ ಉಲ್ಲೇಖ ಕೇವಲ ಆರ್‌ಎಸ್‍ಎಸ್‍ಗೆ ಸಂಬಂಧಿತ ಲಿಂಕ್‍ಗಳಲ್ಲಿ ಕಾಣಿಸಿಕೊಳ್ಳುತ್ತದೆಯೇ ಹೊರತು ಯಾವುದೇ ಭಾರತೀಯ ಮುಸ್ಲಿಂ ವ್ಯಕ್ತಿ ಅಥವಾ ಸಂಘಟನೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಖಲಿಸ್ತಾನದ ವಿಚಾರದ ಕೆಲವೇ ಕೆಲವು ಸಮರ್ಥಕರು ದೀರ್ಘ ಕಾಲದಿಂದ ಇದ್ದಾರೆ ಹಾಗೂ ಇತ್ತೀಚಿಗೆ ವಾರಿಸ್ ಏ ಪಂಜಾಬ್‍ನ ಹೆಸರಿನಲ್ಲಿ ಅಮೃತಪಾಲ್ ಸಿಂಗ್ ಮೂಲಕ ಈ ಬೇಡಿಕೆಯನ್ನು ಮತ್ತೊಮ್ಮೆ ಎತ್ತಲಾಗಿದೆ. ನಿಜ ಏನೆಂದರೆ, ಪಂಜಾಬ್‍ನ ಬಹುಸಂಖ್ಯಾತ ಸಿಖ್ ಜನಸಮೂಹವು ಖಲಿಸ್ತಾನದ ವಿಚಾರಕ್ಕೆ ಎಂದೂ ಸಮರ್ಥನೆ ಮಾಡಿಕೊಂಡಿಲ್ಲ. ನಿಜ ಏನೆಂದರೆ, ಪಂಜಾಬಿನ ಜನರು ಪಂಜಾಬಿನ ಮೇಲೆ ದೆಹಲಿ ದರ್ಬಾರಿನ ದಾದಾಗಿರಿ ಇಷ್ಟಪಡುವುದಿಲ್ಲ, ಅವರು ಪಂಜಾಬಿನ ಅಸ್ಮಿತೆಗೆ ಗೌರವ ನೀಡುವ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಿಸುವ ಒಂದು ಫೆಡರಲ್ ಭಾರತವನ್ನು ನೋಡಲು ಬಯಸುತ್ತಾರೆ. ಆದರೆ ಅವರು ಖಲಿಸ್ತಾನದಂತಹ ಪ್ರಯೋಗಗಳಿಂದ ಬೇಸತ್ತಿದ್ದಾರೆ. ಪಂಜಾಬಿನ ಗೊತ್ತಿದ್ದವರು ಹೇಳುವುದೇನೆಂದರೆ, ಅಮೃತಪಾಲ್‍ನಂತಹ ಪ್ರತ್ಯೇಕತವಾದಿಗಳ ಮೇಳೆ ಕ್ರಮ ಕೈಗೊಳ್ಳುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ. ಈಗ ಅವರ ಹಿಂಬಾಲಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.

ಆದರೆ ಇಂತಹ ಯಾವುದೇ ಕ್ರಮವನ್ನು ಹಿಂದೂ ರಾಷ್ಟ್ರದ ಮಾತುಗಳನ್ನು ಆಡುವವರ ಮೇಲೆ ಕೈಗೊಳ್ಳಲಾಗುವುದೇ? ಗಜವಾ-ಏ-ಹಿಂದ್‍ನ ಮಾತಂತೂ ಯಾರೂ ಆಡುವುದಿಲ್ಲ, ಖಾಲಿಸ್ತಾನದ ಮಾತುಗಳನ್ನು ಮೆತ್ತಗೆ ಅಲ್ಲೊಮ್ಮೆ ಇಲ್ಲೊಮ್ಮೆ ಆಡಲಾಗುತ್ತದೆ. ಆದರೆ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಬಹಿರಂಗವಾಗಿ ಘೋಷಣೆ ಮಾಡಲಾಗುತ್ತದೆ, ಅಲ್ಪಸಂಖ್ಯಾತರ ಮಾರಣಹೋಮ ಮಾಡುವ ಬೆದರಿಕೆಗಳನ್ನು ಹಾಕಲಾಗುತ್ತದೆ, ಸಮ್ಮೇಳನಗಳನ್ನು ಮಾಡಿ ಹಿಂದೂ ರಾಷ್ಟ್ರ ಮಾಡುವ ಪ್ರತಿಜ್ಞೆ ಮಾಡಲಾಗುತ್ತದೆ. ಹಾಗೂ ಪೊಲೀಸ್ ವ್ಯವಸ್ಥೆ ಇದನ್ನು ಕುಂತಲ್ಲೇ ಕುಳಿತು ನೋಡುತ್ತದೆ. ಇದಷ್ಟೇ ಅಲ್ಲ, ದೇಶದ ಸರ್ವೋನ್ನತ ಪದಗಳಲ್ಲಿ ಆಸೀನರಾದ ಜನರು ಈ ವಿಚಾರಕ್ಕೆ ತಮ್ಮ ಆಶೀರ್ವಾದ ನೀಡುತ್ತಾರೆ. ಈಗ ನೀವೇ ಯೋಚಿಸಿ, ದೇಶಕ್ಕೆ ನಿಜವಾದ ಅಪಾಯ ಖಲಿಸ್ತಾನದ ವಿಚಾರದಿಂದ ಇದೆಯೇ, ಗಜವಾ-ಏ-ಹಿಂದ್‍ದಿಂದ ಇದೆಯಾ ಅಥವಾ ಹಿಂದೂ ರಾಷ್ಟ್ರದಿಂದ ಇದೆಯಾ? ಹಿಂದೂ ರಾಷ್ಟ್ರದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಖಲಿಸ್ತಾನಿಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆಯೇ ಹಾಗೂ ಗಜವಾ-ಏ-ಹಿಂದ್‍ನಂತಹ ಅಸ್ತಿತ್ವದಲ್ಲೇ ಇರದ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆಯೇ? ಭಾರತದಲ್ಲಿ ನಂಬಿಕೆ ಇರಿಸಿರುವ ಪ್ರತಿಯೊಬ್ಬ ವ್ಯಕ್ತಿಯೂ ಈ ಪ್ರಶ್ನೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್ ನರಮೇಧವನ್ನು ಖಂಡಿಸುವ ಪ್ರತಿಭಟನೆಗೆ ಅನುಮತಿ ನಿರಾಕರಣೆಗೆ ಕಾರಣವೇನು?

ಈಗ ರಂಗಶಂಕರದಲ್ಲಿ ಕವನವಾಚನ, ನಾಟಕವನ್ನು ನಡೆಸುವುದಕ್ಕೂ ಅನುಮತಿ ನಿರಾಕರಿಸಲಾಗಿದೆ. ಒಂದೆಡೆ ಕಾಂಗ್ರೆಸ್...

ಜಾತಿ ಗಣತಿ | ವರದಿ ಅನುಷ್ಠಾನದ ಮೂಲಕ ಈ ನೆಲದ ಹೆಣ್ಣುಮಕ್ಕಳ ಸಂಕಟ ಕೊನೆಗೊಳ್ಳಲಿ

ಜಾತಿಯ ಕಾರಣದಿಂದಲೇ ಬದುಕುವ ಹಕ್ಕುಗಳಿಂದ ನಿರಾಕರಣೆಗೊಂಡು ಹಸಿವು, ಅನಕ್ಷರತೆ, ನಿರುದ್ಯೋಗಗಳಡಿಯಲ್ಲಿ, ಅತ್ಯಂತ...

ಕಡ್ಲೇಪುರಿಯಂತೆ ಸೇಲ್ ಆಗುವ ಪ್ರಶಸ್ತಿ ಪುರಸ್ಕಾರಗಳು ಮತ್ತು ಸಾಂಸ್ಕೃತಿಕ ರಾಜಕಾರಣ

ಬಹುಪಾಲು ಖಾಸಗಿ ಪ್ರತಿಷ್ಠಾನ, ಸಂಘ ಸಂಸ್ಥೆಗಳು ನೀಡುವ ಪುಸ್ತಕ ಬಹುಮಾನ, ಪ್ರಶಸ್ತಿ,...

ಎಲ್ಲಾ ಜಾತಿ ವರ್ಗಗಳಿಗೂ ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಗಣತಿ ವರದಿ ಜಾರಿಯಾಗಬೇಕು

ಚರಿತ್ರೆಯಲ್ಲಿ ನಡೆದು ಹೋಗಿರುವ ಅನ್ಯಾಯಗಳನ್ನು ಕಾಂತರಾಜ ಸಮಿತಿ ನಡೆಸಿರುವ ಜಾತಿ ಗಣತಿ...